ಭಾರತಕ್ಕೆ (India) ಕೊರೊನಾ (Coronavirus) ಭೀತಿ ಎದುರಾಗಿದೆ. ರಾಜ್ಯ, ಕೇಂದ್ರ ಸರ್ಕಾರಗಳು ಕೂಡಾ ಟಫ್ ರೂಲ್ಸ್ ಮಾಡಿವೆ. ಸಾಧ್ಯವಾದಷ್ಟು ಮಾಸ್ಕ್ (Face Mask) ಧರಿಸಿ ಎನ್ನುತ್ತಿವೆ. ಇತ್ತ ಬೆಂಗಳೂರಿನಲ್ಲಿ(Bengaluru) ಆರೋಗ್ಯ ಇಲಾಖೆ (Health Department) ಅಧಿಕಾರಿಗಳ ಮಹತ್ವದ ಸಭೆ ನಡೆಸಿದ್ದು, ಆರೋಗ್ಯ ಸಚಿವ ಡಾ.ಕೆ ಸುಧಾಕರ್ (Health Minister Dr.K Sudhakar) ನೇತೃತ್ವ ವಹಿಸಿಕೊಂಡಿದ್ದರು. ವಿಕಾಸ ಸೌಧದಲ್ಲಿ (Vikasa Soudha) ವರ್ಚ್ಯುವಲ್ ಮೂಲಕ ನಡೆದ ಮೀಟಿಂಗ್ನಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ (Mansukh Mandaviya) ಜೊತೆ ಚರ್ಚಿಸಿದ್ದಾರೆ. ಸಭೆಯಲ್ಲಿ ಕೊರೊನಾ ತಡೆ ಹೇಗೆ? ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂದು ಚರ್ಚೆ ಮಾಡಲಾಗಿದೆ.
ನಿರ್ಲಕ್ಷ್ಯ ಬೇಡ, ಆಸ್ಪತ್ರೆಗಳನ್ನ ಸನ್ನದ್ಧಗೊಳಿಸಿ
ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ಸುಧಾಕರ್, ಡಿಸೆಂಬರ್ 27 ರಂದು ಆಸ್ಫತ್ರೆಗಳಲ್ಲಿ ಮಾಕ್ ಡ್ರಿಲ್ ಮಾಡಲು ಕೇಂದ್ರ ಸೂಚನೆ ನೀಡಿದೆ. ಕೋವಿಡ್ ನಿಯಂತ್ರಣಕ್ಕೆ ಎಲ್ಲವೂ ಸರಿಯಾಗಿ ಇದೆಯಾ ಅಂತಾ ನೋಡಿಕೊಳ್ಳೋಕೆ ಮಾಕ್ ಡ್ರಿಲ್ ಮಾಡಲಿದ್ದೇವೆ.
BF7 ಒಬ್ಬರಿಂದ 17 ಜನಕ್ಕೆ ಸ್ಪ್ರೆಡ್ ಆಗುವ ವೈರಸ್
ನಮ್ಮಲ್ಲಿ ಇನ್ನು 10 ಲಕ್ಷ ಬೂಸ್ಟರ್ ಡೋಸ್ ಲಭ್ಯವಿದೆ. ತುರ್ತು ಕೋವಿಡ್ ನಿರ್ವಹಣೆಗೆ ಸಭೆ ಮಾಡಿದ್ದಾರೆ. ಇಡೀ ವಿಶ್ವದ ಸ್ಥಿತಿಗತಿ ಬಗ್ಗೆ ಸಭೆಯಲ್ಲಿ ಮಾಹಿತಿ ಕೊಟ್ಟಿದೆ. ಸೋಂಕಿತರ ಪ್ರಮಾಣದ ವಿವರ ಕೇಂದ್ರ ಅರೋಗ್ಯ ಇಲಾಖೆ ನೀಡಿದೆ.
ಇದನ್ನೂ ಓದಿ: Covid 19 Updates: ಆಸ್ಪತ್ರೆಗಳಲ್ಲಿ ಸರತಿ ಸಾಲು, ಸ್ಮಶಾನಗಳಲ್ಲೂ ಕ್ಯೂ: ಚೀನಾದಲ್ಲಿ ಕೊರೊನಾ ರೌದ್ರಾವತಾರ!
BF7 ಒಬ್ಬರಿಂದ 17 ಜನಕ್ಕೆ ಸ್ಪ್ರೆಡ್ ಆಗುವ ವೈರಸ್. ಪ್ರತಿನಿತ್ಯ ವಿಶ್ವದಲ್ಲಿ 50 ಲಕ್ಷ ಕೇಸ್ ದಾಖಲಾಗುತ್ತಿದೆ. ನಮ್ಮ ದೇಶದಲ್ಲಿ ಶೇ.0.03 ಯಷ್ಟು ಆಕ್ಟೀವ್ ಪ್ರಕರಣಗಳು ಇದೆ. ವಿದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಸೋಂಕು ನಿಯಂತ್ರಣದಲ್ಲಿದೆ. ಅಮೆರಿಕ ಸಂಸ್ಥೆ ವರದಿ ಪ್ರಕಾರ 10 ಲಕ್ಷ ಜನರ ಸಾವು ಆಗುವ ಸಾಧ್ಯತೆ ಇದೆ. ಇದೇ ಕಾರಣ ಚೀನಾದಲ್ಲಿರುವ ಲಸಿಕೆ ಇರಬಹುದು. ಲಸಿಕೆ ತೆಗೆದುಕೊಳ್ಳುವುದರಲ್ಲಿ ನಮ್ಮಷ್ಟು ಚೀನಾ ಯಶಸ್ಸು ಕಂಡಿಲ್ಲ.
Took part in the VC chaired by Union Health Min Sri @mansukhmandviya Ji with all state health ministers regarding Covid-19 management.
States were briefed about the prevailing global situation and specific directions were given on stepping up surveillance and preparedness.
1/4 pic.twitter.com/LPADb3B1bM
— Dr Sudhakar K (@mla_sudhakar) December 23, 2022
ಇಂದಿನ ಸಭೆಯಲ್ಲಿ ನಮ್ಮ ರಾಜ್ಯವನ್ನೇ ಮೊದಲಿಗೆ ಚರ್ಚೆಗೆ ತೆಗೆದುಕೊಂಡರು. ನಮ್ಮಲ್ಲಿರುವ ಆಕ್ಸಿಜನ್ ಪ್ಲಾಂಟ್ಸ್ ಆಡಿಟ್ ಆಗಬೇಕಿದೆ. ಕೆಲಸ ನಿರ್ವಹಣೆ ಆಗಬೇಕು ಅಂತ ನಿನ್ನೆ ಆದೇಶ ನೀಡಿದ್ದಾಗಿ ಸಭೆಯಲ್ಲಿ ಮಾಹಿತಿ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಆರೋಪ ಕುರಿತಂತೆ ತಿರುಗೇಟು ನೀಡಿದ ಸಚಿವರು, ಇಡೀ ಜಗತ್ತಿಗೆ ಕೋವಿಡ್ ಆವರಿಸಿದೆ. ಹೆಚ್ಡಿ ಕುಮಾರಸ್ವಾಮಿ, ರಾಹುಲ್ ಗಾಂಧಿಗೆ ಪ್ರತ್ಯೇಕವಾಗಿ ಕೋವಿಡ್ ಬರೋದಿಲ್ಲ. ಈಗಾಗಲೇ ಮಾಧ್ಯಮದಲ್ಲಿ ಕೋವಿಡ್ ಕುರಿತು ವಿಶ್ಲೇಷಣೆ ಮಾಡಲಾಗುತ್ತಿದೆ. ಹೆಚ್ಡಿಕೆ, ರಾಹುಲ್ ಗಾಂಧಿಗೆ ಕೋವಿಡ್ ಪ್ರತ್ಯೇಕವಾಗಿ ಕೊರೊನಾ ಬಂದರೆ ಆಗ ಯೋಜನೆ ಮಾಡುತ್ತೇನೆ. ಈಗ ಪ್ರಪಂಚಕ್ಕೆ ಕೋವಿಡ್ ಬಂದಿದೆ. ಈಗ ಜನರ ಪ್ರಾಣ ಉಳಿಸುವುದು ನಮ್ಮ ಆದ್ಯತೆ ಎಂದರು.
ಇದನ್ನೂ ಓದಿ: Covid School Guidelines: ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಮಾಸ್ಕ್ ಕಡ್ಡಾಯ, ರುಪ್ಸಾ ಮಹತ್ವದ ನಿರ್ಧಾರ
ಮಾಸ್ಕ್ ಬಳಸಿದಾಗ ವೈರಸ್ನಿಂದ ನಾವು ನಮ್ಮನ್ನು ರಕ್ಷಿಸಿಕೊಳ್ಳಬಹುದು
ಉಳಿದಂತೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಸ್ಪಷ್ಟನೆ ನೀಡಿದ ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್, ನಮ್ಮ ಹತ್ತಿರ ಕೋವ್ಯಾಕ್ಸಿನ್ ಲಸಿಕೆ ಇದೆ, ಕೋವಿಶೀಲ್ಡ್ ಇಲ್ಲ. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ನಿನ್ನೆ ರಾಜ್ಯ ಮಟ್ಟದ ಸಮಿತಿ ಸಭೆ ಮಾಡಿ ನಿರ್ಧಾರ ತೆಗೆದುಕೊಂಡಿದೆ. ನಾವು ಕೂಡ ಸರ್ಕಾರದ ಆದೇಶವನ್ನ ಪಾಲನೆ ಮಾಡುವ ಅರಿವು ಮೂಡಿಸುತ್ತೇವೆ. ಮಾಸ್ಕ್ ಆರೋಗ್ಯಕ್ಕಾಗಿ ಹಾಕಿಕೊಳ್ಳುವುದು ಒಳ್ಳೆಯದು. ಅದನ್ನ ಬಳಸಬೇಕು, ಮಾಸ್ಕ್ ಬಳಸಿದಾಗ ವೈರಸ್ನಿಂದ ನಾವು ನಮ್ಮನ್ನು ಕಾಪಾಡಿಕೊಳ್ಳಬಹುದು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ