ಬೆಂಗಳೂರು(ಜ.08): ಇಂದು 263 ಸ್ಥಳಗಳಲ್ಲಿ ಡ್ರೈ ರನ್ ಪ್ರಾರಂಭ ಆಗಲಿದೆ. ಇದಕ್ಕಾಗಿ ಆರೋಗ್ಯ ಇಲಾಖೆಯಿಂದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾನು ಒಂದು ಖಾಸಗಿ ಆಸ್ಪತ್ರೆ ಮತ್ತು ಚಿಕ್ಕಬಳ್ಳಾಪುರದಲ್ಲಿ ಒಂದು ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಡುತ್ತೇನೆ. ಯಾವುದೇ ಲೋಪದೋಷವಿಲ್ಲದೇ, ತಾಂತ್ರಿಕ ಸಮಸ್ಯೆ ಇಲ್ಲದಂತೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇವತ್ತಿನಿಂದ ಜಾಹೀರಾತು ನೀಡಲಾಗ್ತಿದೆ. ಯಾರಾದರೂ ಕೋವಿಡ್ ವಾರಿಯರ್ಸ್‌ಗಳು ದಾಖಲು ಮಾಡಿಲ್ಲ ಅಂದ್ರೆ ರಿಜಿಸ್ಟರ್ ಮಾಡಿಸಿಕೊಳ್ಳಬಹುದು ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಲಸಿಕೆಗೂ ಮಾಧ್ಯಮ ಕ್ಷೇತ್ರದಿಂದ ಇಷ್ಟೊಂದು ಒತ್ತಡ ಇರಲಿಲ್ಲ. ಕ್ಲಿನಿಕಲ್ ಟ್ರಯಲ್ ಸೇರಿದಂತೆ ಲಸಿಕೆಗೆ ಮೂರು ಹಂತದ ಪರಿಶೀಲನೆ ನಡೆಸಬೇಕಾಗುತ್ತದೆ. ವಿಜ್ಞಾನಿಗಳು, ಸಂಶೋಧಕರ ಮೇಲೆ ನಂಬಿಕೆ ಇಡೋಣ. ಆದಷ್ಟು ಬೇಗ ಲಸಿಕೆ ಎಲ್ಲರಿಗೂ ಲಭ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೊಡ್ಡಬಳ್ಳಾಪುರ; ವೀಲ್ಹಿಂಗ್ ಹುಚ್ಚಾಟಕ್ಕೆ ಇಬ್ಬರು ಯುವಕರ ದಾರುಣ ಸಾವು
ಇನ್ನು, ಆಸ್ಟರ್ ಆಸ್ಪತ್ರೆಗೆ ಭೇಟಿ ಬಳಿಕ ಮಾತನಾಡಿದ ಡಾ.ಕೆ ಸುಧಾಕರ್, ನಾಳೆ ಕೇಂದ್ರ ಸರ್ಕಾರದಿಂದ 13 ಲಕ್ಷದ 90 ಸಾವಿರ(13,90,000) ಲಸಿಕೆ ಕರ್ನಾಟಕಕ್ಕೆ ಬರಲಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ಧನ್ಯವಾದಗಳನ್ನ ತಿಳಿಸುತ್ತೇನೆ. ನಾವು 263 ಕೇಂದ್ರಗಳಲ್ಲಿ ಡ್ರೈ ರನ್ ಮಾಡ್ತಿದ್ದೇವೆ. ಖಾಸಗಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಹೇಗಿದೆ ಎಂದು ನೋಡಿ ಬಳಿಕ ಡ್ರೈ ರನ್ ಮಾಡ್ತಿದ್ದೇವೆ. ವೈಜ್ಞಾನಿಕವಾಗಿ ತುಂಬಾ ಚೆನ್ನಾಗಿ, ಅಚ್ಚುಕಟ್ಟಾಗಿ ಮಾಡಿದ್ದಾರೆ. ನಾನು ಇದೀಗ ಚಿಕ್ಕಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲೂ ಪರಿಶೀಲನೆ ನಡೆಸುತ್ತೇನೆ ಎಂದರು.
ಇದೇ ವೇಳೆ, ಹಕ್ಕಿಜ್ವರದ ಕುರಿತಾಗಿ ಪ್ರತಿಕ್ರಿಯೆ ನೀಡಿದ ಸುಧಾಕರ್, ಹಕ್ಕಿಜ್ವರ ಕುರಿತಾಗಿ ಗಡಿ ಜಿಲ್ಲೆಗಳಲ್ಲಿ ಮಾರ್ಗಸೂಚಿ ಕೊಟ್ಟಿದ್ದೇವೆ. ಕಟ್ಟೆಚ್ಚರ ವಹಿಸಲು ಮುನ್ಸೂಚನೆ ಕೊಟ್ಟಿದ್ದೇವೆ. ಯಾವುದೇ ಪಕ್ಷಿ ಸತ್ತರೆ ಕೈಯಿಂದ ಮುಟ್ಟಬಾರದು. ಗ್ಲೌಸ್, ಪಿಪಿಇ ಕಿಟ್ ಹಾಕಿ ಮುಟ್ಟಬೇಕು. ಕೋಳಿ ಫಾರ್ಮ್ ನಲ್ಲಿ ಸ್ಯಾನಿಟೈಸರ್ ಮಾಡಬೇಕು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ