ಲಾಠಿಚಾರ್ಚ್ ಮಾಡಿಸೋದು ದೊಡ್ಡ ವಿಚಾರವಲ್ಲ, ಆದರೆ CM Bommai ಮುತ್ಸದ್ದಿತನ ಮೆರೆದರು: ಸಚಿವ ಸುಧಾಕರ್

ಸರ್ಕಾರದ ಕೋವಿಡ್​ ನಿಯಮ ಉಲ್ಲಂಘಿಸಿ ಪಾದಯಾತ್ರೆ ನಡೆಸಿದವರ ವಿರುದ್ಧ ಕೇಸ್ ದಾಖಲಾಗಿದೆ, ನೋಟೀಸ್ ಕೊಟ್ಡಿದ್ದೀವಿ. ಬಂಧಿಸೋದು, ಲಾಠಿಜಾರ್ಜ್ ಮಾಡಿಸೋದು ದೊಡ್ಡ ವಿಷಯವಲ್ಲ. ನಮ್ಮ ಮುಖ್ಯಮಂತ್ರಿ ಇದರಲ್ಲಿ ಗೆದ್ದಿದ್ದಾರೆ. ಇದು ರಾಜ್ಯದ ಜಯ ಎಂದೇಳುತ್ತೇನೆ .

ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಆರೋಗ್ಯ ಸಚಿವ ಡಾ.ಕೆ.ಸುಧಾಕರ್

  • Share this:
ಬೆಂಗಳೂರು: ಹೈಕೋರ್ಟ್​ ತರಾಟೆ, ಸರ್ಕಾರದಿಂದ ಆದೇಶ ಬಳಿಕ ಮೇಕೆದಾಟು ಪಾದಯಾತ್ರೆಯನ್ನು(Mekedatu Padayatra) ಕಾಂಗ್ರೆಸ್​ (Congress) ಮೊಟಕುಗೊಳಿಸಿದೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) , ಎಲ್ಲರ ಗೌರವಕ್ಕೆ ತಲೆಬಾಗಿ ಈ ಪಾದಯಾತ್ರೆ ಕೈ‌ ಬಿಟ್ಟಿದ್ದೇವೆ. ನೀರಿಗಾಗಿ ನಡಿಗೆ ಪಾದಯಾತ್ರೆ ಯಶಸ್ವಿಯಾಗಿ ಮಾಡಿದ್ದೇವೆ.. ಕೊರೋನಾ ಕಡಿಮೆ ಆದ ನಂತರ ಪಾದಯಾತ್ರೆ ಮತ್ತೆ ಮಾಡ್ತೀವಿ ಎಂದರು. ಆರೋಗ್ಯ ತಪಾಸಣೆ ಮಾಡಿಸಿಕೊಳ್ತೀರಾ ಎಂಬ ಪ್ರಶ್ನೆಗೆ, ಇದೊಂದು ಸೋಂಕಿತ ಸರ್ಕಾರ. ಸಿಎಂ ಸೇರಿ ಸಚಿವರಿಗೆ ಕೊರೋನಾ ಬಂದಿದೆ ಎಂದು ಹಾರಿಕೆಯ ಉತ್ತರ ಕೊಟ್ಟರು. ನಮಗೆ ಹಠ ಮುಖ್ಯ ಇಲ್ಲ, ರಾಜ್ಯದ ಜನರ ಆರೋಗ್ಯ ಮುಖ್ಯ. ಅದಕ್ಕಾಗಿ ಈ ಹೋರಾಟವನ್ನು ಕೈ ಬಿಟ್ಟಿದ್ದೇವೆ. ಆರೋಗ್ಯ ಸಚಿವ ನನಗೆ ಫ್ರೆಂಡ್ ಇರಬಹುದು, ಆದರೆ ಅವನೇ ನನಗೆ ಕೊರೋನಾ ಸೋಂಕಿತನನ್ನು ಕಳುಹಿಸಿದ್ದ ಎಂದು ಕೆ.ಸುಧಾಕರ್​ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಮುಖ್ಯಮಂತ್ರಿ ಮುತ್ಸದ್ದಿತನ ರಾಜಕಾರಣ ಮಾಡಿದ್ದಾರೆ

ಮೇಕೆದಾಟು ಪಾದಯಾತ್ರೆ ಮೊಟಕುಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಡಾ.ಸುಧಾಕರ್, ಸ್ಥಗಿತಗೊಳಿಸಿರುವುದು ಸಂತಸದ ವಿಚಾರ. ಇಂಥ ಹೊತ್ತಿನಲ್ಲಿ ಪಾದಯಾತ್ರೆ ಅಗತ್ಯವಿರಲಿಲ್ಲ. ನಾವು ಪಾದಯಾತ್ರೆ ವಿರೋಧಿಸಿಲ್ಲ, ಸಮಯ ಸರಿಯಿಲ್ಲ ಅಷ್ಟೇ. ಕೊರೊನಾ ಕಡಿಮೆ ಆದ ಮೇಲೆ ಪಾದಯಾತ್ರೆ ಮಾಡಿ ಎಂದೇಳಿದ್ದೆವು, ಆದ್ರೆ ಹಠ ಮಾಡಿ ಪಾದಯಾತ್ರೆ ಮಾಡಿದ್ರು. ಈ ವಿಚಾರದಲ್ಲಿ ಮುಖ್ಯಮಂತ್ರಿ ಮುತ್ಸದ್ದಿತನ ರಾಜಕಾರಣ ಮಾಡಿದ್ದಾರೆ. ರಾಜ್ಯದಲ್ಲಿ ಶಾಂತಿ ನೆಲಸುವಂತೆ, ಅಶಾಂತಿ ಸೃಷ್ಟಿಯಾಗದಂತೆ ನೋಡಿಕೊಂಡಿದ್ದಾರೆ. ಪೊಲೀಸರು ಒತ್ತಡದಲ್ಲಿ ಸಂಯಮದಿಂದ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಅಭಿನಂದನೆ ತಿಳಿಸುತ್ತೇನೆ ಎಂದರು.

ಇದನ್ನೂ ಓದಿ: Congress Padayatra: ಮತ್ತೆ ರಾಮನಗರದಿಂದಲೇ ಪಾದಯಾತ್ರೆ ಶುರು, ಯಾರೂ ಉತ್ಸಾಹ ಕಳೆದುಕೊಳ್ಳಬೇಡಿ ಎಂದ ಸಿದ್ದರಾಮಯ್ಯ

ಲಾಠಿಜಾರ್ಜ್ ಮಾಡಿಸೋದು ದೊಡ್ಡ ವಿಷಯವಲ್ಲ

ಸರ್ಕಾರದ ಕೋವಿಡ್​ ನಿಯಮ ಉಲ್ಲಂಘಿಸಿ ಪಾದಯಾತ್ರೆ ನಡೆಸಿದವರ ವಿರುದ್ಧ ಕೇಸ್ ದಾಖಲಾಗಿದೆ, ನೋಟೀಸ್ ಕೊಟ್ಡಿದ್ದೀವಿ. ಬಂಧಿಸೋದು, ಲಾಠಿಜಾರ್ಜ್ ಮಾಡಿಸೋದು ದೊಡ್ಡ ವಿಷಯವಲ್ಲ. ನಮ್ಮ ಮುಖ್ಯಮಂತ್ರಿ ಇದರಲ್ಲಿ ಗೆದ್ದಿದ್ದಾರೆ. ಇದು ರಾಜ್ಯದ ಜಯ ಎಂದೇಳುತ್ತೇನೆ . ಕಾಂಗ್ರೆಸ್ ಪಾದಯಾತ್ರೆ ಹಿಂದಕ್ಕೆ ತೆಗೆದುಕೊಂಡಿದ್ದು ಒಳ್ಳೆಯ ನಿರ್ಧಾರ. ಪಾದಯಾತ್ರೆಯಲ್ಲಿ ಬಂದ ಎಷ್ಟು ಜನರಿಗೆ ಕೊರೊನಾ ಬಂದಿದೆ ಇಂದು ಚೆಕ್ ಮಾಡಬೇಕು. ನಾನು, ಸಿಎಂ ಸಹ ಪಾದಯಾತ್ರೆ ಮಾಡ್ಬೇಡಿ ಎಂದು ಮನವಿ ಮಾಡಿದ್ವಿ, ಆದ್ರೆ ಅವ್ರು ಪಾದಯಾತ್ರೆ ಮಾಡಿದ್ರು ಎಂದು ಬೇಸರ ವ್ಯಕ್ತಪಡಿಸಿದರು.

ಡಿಕೆಶಿಗೆ ಸಚಿವ ಸುಧಾಕರ್ ತಿರುಗೇಟು

ಬಿಜೆಪಿ ಸರ್ಕಾರ ನೀರಾವರಿ ಯೋಜನೆ ಹಣ ಬಿಡುಗಡೆ ಮಾಡಿದೆ. ಆದರೂ ಯಾಕೆ ಪ್ರತಿಭಟನೆ ಮಾಡಿದ್ರು ಗೊತ್ತಿಲ್ಲ. ರಾಜ್ಯದ ಶಾಂತಿ ಕದಡುವ ಕೆಲಸವನ್ನು ಕಾಂಗ್ರೆಸ್​​ನ ಕೆಲ ನಾಯಕರು ಮಾಡಿದ್ದಾರೆ ಎಂದು ಆರೋಪಿಸಿದರು. ಖರ್ಗೆ, ಮೊಯಿಲ್ ನಾವು ಪಾಸಿಟಿವ್ ಮಾಡಿಸಿದವಾ? ಏರ್‌ಪೋರ್ಟ್ ಬಂದವರಿಗೆಲ್ಲ ನಾವು ಪಾಸಿಟಿವ್ ಮಾಡಿಸಿದಿವಾ ಎಂದು ಪ್ರಶ್ನಿಸುವ ಮೂಲಕ ಡಿಕೆಶಿಗೆ ಸಚಿವ ಸುಧಾಕರ್ ತಿರುಗೇಟು ನೀಡಿದರು.

ಇದನ್ನೂ ಓದಿ: Congress Padayatra: ಸದ್ಯಕ್ಕೆ ಪಾದಯಾತ್ರೆ ಕೈ ಬಿಡೋಣ: ಕೊರೋನಾ ಕಡಿಮೆ ಆದ್ಮೇಲೆ ಇಲ್ಲಿಂದಲೇ ಶುರು ಮಾಡೋಣ ಎಂದ ಸಿದ್ದು!

ಮೇಕೆದಾಟು ಯಾರೂ ಬೇಡ ಎಂದು ಹೇಳಿಲ್ಲ

ಸಚಿವ ಅಶ್ವತ್ಥ ನಾರಾಯಣ ಮಾತನಾಡಿ, ಕಾಂಗ್ರೆಸ್ ಪಕ್ಷ ಮೇಕೆದಾಟು ಪಾದಯಾತ್ರೆ ಕೈಬಿಟ್ಟಿರುವುದು ಸೂಕ್ತ ನಿರ್ಣಯ. ತಮ್ಮ ತಪ್ಪಿನ ಅರಿವು ಅವರಿಗಾಗಿದೆ, ಕುಡಿಯುವ ನೀರಿನ ಯೋಜನೆ ಎಲ್ಲರಿಗೂ ಬೇಕಾಗಿದೆ. ಕನ್ನಡ ನೆಲ, ಜಲ ಬಂದಾಗ ಎಲ್ಲರೂ ಒಂದಾಗಬೇಕು. ಆಡಳಿತ, ಪ್ರತಿಪಕ್ಷ ಎಲ್ಲರೂ ಸೇರಬೇಕು. ದುರುದ್ದೇಶದಿಂದ ಪಾದಯಾತ್ರೆ ಮಾಡಲು ಕಾಂಗ್ರೆಸ್ ಮುಂದಾಯಿತು. ಮೇಕೆದಾಟು ಯಾರೂ ಬೇಡ ಎಂದು ಹೇಳಿಲ್ಲ. ಸರ್ಕಾರ ಅನುಮತಿ ನೀಡದಿದ್ದರೂ ಪಾದಯಾತ್ರೆ ಮಾಡಿದ್ದಾರೆ. ನಾವು ಪ್ರತಿಪಕ್ಷವನ್ನು ವಿಶ್ವಾಸ ತೆಗೆದುಕೊಳ್ಳುವ ಕೆಲಸ ಮಾಡಿದ್ದೀವಿ. ಆದರೆ ನಮ್ಮ ಮನವಿಗೆ ಪುರಸ್ಕಾರ ಕೊಡಲಿಲ್ಲ, ಈಗ ಹಿಂದೆ ತೆಗೆದುಕೊಂಡಿದ್ದಾರೆ ಎಂದರು.
Published by:Kavya V
First published: