ಬೆಳಗಾವಿ: ಕೊರೊನಾ (Covid-19) ನಿಯಂತ್ರಣಕ್ಕೆ ಕರ್ನಾಟಕದಲ್ಲಿ (Karnataka) ಮಾರ್ಗಸೂಚಿ ರಚನೆ ಮಾಡಲಾಗುತ್ತದೆ. ಆದರೆ ಈ ಬಗ್ಗೆ ಆತಂಕ ಮಾಡುವುದು ಬೇಡ. ಇಂದಿನ ಸಭೆಯಲ್ಲಿ ಚರ್ಚೆ ನಡೆಸಿದ್ದು, ಹಲವು ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಳ್ಳಲು ನಿರ್ಧಾರ ಮಾಡಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ (Health Minister Dr.K Sudhakar) ತಿಳಿಸಿದ್ದಾರೆ. ಸಿಎಂ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವರು, ಎಎಲ್ಐ, ಸಾರಿ ಲಕ್ಷಣಗಳು ಇರುವವರಿಗೆ ಕಡ್ಡಾಯವಾಗಿ ಕೊರೊನಾ ಟೆಸ್ಟ್ (Coronavirus Test) ಕಡ್ಡಾಯ ಮಾಡುವ ನಿರ್ಧಾರ ಮಾಡಲಾಗಿದೆ. ವಿಶೇಷ ಎಂದರೇ, ಒಳಾಂಗಣದಲ್ಲಿ ಜನರು ಮಾಸ್ಕ್ (Face Mask) ಧರಿಸುವುದು ಕಡ್ಡಾಯ ಮಾಡಲು ಸಲಹೆ ನೀಡಿದ್ದೇವೆ. ವಿದೇಶಿ ಪ್ರಯಾಣಿಕರ ಬಗ್ಗೆ ಹೆಚ್ಚು ಗಮನ ಹರಿಸಿದ್ದು, ಎಷ್ಟು ಪ್ರಮಾಣದಲ್ಲಿ ಕೊರೊನಾ ಟೆಸ್ಟ್ ಮಾಡ್ಬೇಕು ಅಂತ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಒಳಾಂಗಣದಲ್ಲಿ ಮಾಸ್ಕ್ ಧರಿಸಲು ಸಲಹೆ
ರಾಜ್ಯದಲ್ಲಿ ಈಗಾಗಲೇ ಅಳವಡಿಸಿರುವ ಅಕ್ಸಿಜನ್ ಪ್ಲಾಂಟ್ಗಳನ್ನು ಸರಿಯಾದ ರೀತಿಯಲ್ಲಿ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಕ್ಸಿಜನ್ ಬಗ್ಗೆ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಿದ್ದೇವೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಕೆಲವು ಬೆಡ್ಗಳನ್ನು ಕೊರೊನಾಗೆ ಮೀಸಲು ಮಾಡಲು ಸೂಚನೆ ನೀಡಲಾಗಿದೆ. ಉಳಿದಂತೆ ಖಾಸಗಿ ಆಸ್ಪತ್ರೆಗಳಿಗೂ ಈ ಬಗ್ಗೆ ಮಾಹಿತಿ ಹಂಚಿಕೊಂಡು ಕ್ರಮವಹಿಸಲು ಸೂಚನೆ ನೀಡುತ್ತೇವೆ ಎಂದರು.
ಮೂರನೇ ಡೋಸ್ ಲಸಿಕೆಗೆ ವಿಶೇಷ ಒತ್ತು. ಕೊರೊನಾ ಎರಡನೇ ಅಲೆ ಬಳಿಕ ಕೊರೊನಾ ಕಡಿಮೆಯಾಗಿದ್ದ ಕಾರಣ ಬೂಸ್ಟರ್ ಡೋಸ್ ಕಡಿಮೆ ತೆಗೆದುಕೊಂಡಿದ್ದಾರೆ. ಆದ್ದರಿಂದ ವಿಶೇಷ ಗಮನಹರಿಸಿ ಮೂರನೇ ಡೋಸ್ ನೀಡಲು ವ್ಯಾಕ್ಸಿನೇಷನ್ ಕ್ಯಾಂಪ್ ಮಾಡಲು ಸೂಚನೆ, ಶೇ.100 ಸಾಧನೆ ಮಾಡಲು ಸಿಎಂ ಹೇಳಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಕೊರೊನಾ ಲಸಿಕೆ ಪೂರೈಕೆ ಮಾಡಲು ಕ್ರಮಕೈಗೊಳ್ಳುವ ಬಗ್ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಒಳಾಂಗಣದಲ್ಲಿ ಜನರು ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲು ಸಲಹೆ ನೀಡಿದ್ದೇವೆ. ವಿದೇಶಿ ಪ್ರಯಾಣಿಕರ ಬಗ್ಗೆ ಹೆಚ್ಚು ಗಮನ ಹರಿಸಿದ್ದು, ಎಷ್ಟು ಪ್ರಮಾಣದಲ್ಲಿ ಕೊರೊನಾ ಟೆಸ್ಟ್ ಮಾಡ್ಬೇಕು ಅಂತ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಮಾಡಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: BMTC Electric Bus: ಬಿಎಂಟಿಸಿಯಿಂದ ರಸ್ತೆಗಿಳಿಯಲಿವೆ 921 ಹೊಸ ಎಲೆಕ್ಟ್ರಿಕ್ ಬಸ್
ಅಂತೆ ಕಂತೆಗಳಿಗೆ ತಲೆಕೆಡಿಸಿಕೊಳ್ಳುವುದು ಬೇಡ
ಹೊಸ ವರ್ಷದ ಆಚರಣೆ ಹತ್ತಿರ ಬರುತ್ತಿರುವುದನ್ನು ಕೂಡ ಗಮನದಲ್ಲಿ ಇಟ್ಟುಕೊಂಡಿದ್ದೇವೆ. ಹೊಸ ವರ್ಷದ ಆಚರಣೆಗಳು ಹೊರಾಂಗಣದಲ್ಲಿ ಹೆಚ್ಚು ನಡೆಯುವ ಕಾರಣ ಹೆಚ್ಚಿನ ಆತಂಕಪಡುವ ಅಗತ್ಯವಿಲ್ಲ, ಏಕೆಂದರೆ ಪರಿಸ್ಥಿತಿ ಇಲ್ಲಿಯವರೆಗೂ ಹೋಗಿಲ್ಲ. ಆದರೆ ಒಳಾಂಗಣದಲ್ಲಿ ಮಾಸ್ಕ್ ಧರಿಸುವ ಬಗ್ಗೆ ಸಲಹೆ ನೀಡಿದ್ದೇವೆ. ಎಸಿ ಇರುವ ಸಭಾಂಗಣಗಳು, ಸಿನಿಮಾ ಥಿಯೇಟರ್ಗಳು ಸೇರಿದಂತೆ ಇತರೇ ಸಭೆ, ಸಮಾರಂಭಗಳು ಒಳಾಂಗಣದಲ್ಲಿ ನಡೆಯುವ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಉತ್ತಮ. ಕೋವಿಡ್ ಎದುರಿಸಲು ಸರ್ಕಾರ ಸರ್ವ ಸಿದ್ಧತೆ ಮಾಡಿಕೊಳ್ಳಲಾಗುವುದು.
ಮೂರನೇ ಡೋಸ್ ಲಸಿಕೆಗೆ ಹೆಚ್ಚು ಒತ್ತು ಕೊಡಲಾಗುವುದು. ಕೋವಿಡ್ ಕಡಿಮೆಯಾಗಿದ್ದ ಕಾರಣ ಜನರು ಬೂಸ್ಟರ್ ಡೋಸ್ ಪಡೆದಿಲ್ಲ. ಇದುವರೆಗೂ ಶೇಕಡಾ 20ರಷ್ಟು ಮಾತ್ರ ಸಾಧನೆಯಾಗಿದೆ. ಜಾಗೃತಿ ಮೂಡಿಸುವ ಮೂಲಕ ಮೂರನೇ ಡೋಸ್ ಕೊಡಲಾಗುವುದು, ಇದರಲ್ಲಿ ಶೇಕಡಾ 100ರಷ್ಟು ಸಾಧನೆ ಆಗಬೇಕು.
ನಮ್ಮ ಸರ್ಕಾರ ಕೊರೊನಾದ ಸರ್ವರೋಗಕ್ಕೂ ಸಿದ್ದರಾಗಿದ್ದೇವೆ. ನಾನು ಜನರಲ್ಲಿ ಮನವಿ ಮಾಡುತ್ತೇನೆ, ಎಲ್ಲರೂ 3ನೇ ಡೋಸ್ ಪಡೆಯಿರಿ, ಯಾವುದೇ ಅಂತೆ ಕಂತೆಗಳಿಗೆ ತಲೆಕೆಡಿಸಿಕೊಳ್ಳುವುದು ಬೇಡ. ಲಸಿಕೆ ಮೂಲಕ ನಾವು ನಮ್ಮನ್ನ ರಕ್ಷಣೆ ಮಾಡಿಕೊಳ್ಳಬೇಕು, ಯಾವುದೇ ಸೈಡ್ ಎಫೆಕ್ಟ್ ಇಲ್ಲ. ಕೋವಿಡ್ ತಳಿ PF7 ಯಾವುದೇ ಕ್ಷಣದಲ್ಲಿ ನಮ್ಮರಾಜ್ಯಕ್ಕೆ ಕಾಲಿಡಬಹುದು ಎಚ್ಚರಿಕೆ ವಹಿಸಬೇಕಿದೆ. ಜನರು ಸರ್ಕಾರದ ಜೊತೆ ಸಹಕರಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದರು.
ಡಿಕೆ ಶಿವಕುಮಾರ್ ಟೀಕೆಗೆ ಸುಧಾಕರ್ ಟಾಂಗ್
ಇಂದು ಸಂಜೆ ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಆ ನಂತರದಲ್ಲಿ ಹೊಸ ವರ್ಷದ ಆಚರಣೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಂಜೆಯೊಳಗೆ ಸರ್ಕಾರದ ನಿರ್ಧಾರ ತಿಳಿಸುತ್ತೇವೆ ಎಂದರು.
ಇದೇ ವೇಳೆ ಭಾರತ್ ಜೋಡೋ ನಿಲ್ಲಿಸಲು ಕೋವಿಡ್ ನಾಟಕ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿ, ಕಳೆದ 100 ದಿನಗಳಿಂದ ಕಾಂಗ್ರೆಸ್ ಯಾತ್ರೆ ನಡೆಯುತ್ತಿದೆ. ಈ ಅವಧಿಯಲ್ಲಿ ನಾವು ಕೋವಿಡ್ ಬಗ್ಗೆ ಮಾತನಾಡಲಿಲ್ಲ. ಚೀನಾದಲ್ಲಿ ನಾವೇ ಈಗ ಕೋವಿಡ್ ಜಾಸ್ತಿ ಮಾಡಿದ್ದೇವಾ? ಅಮೆರಿಕದಲ್ಲಿ ನಾವು ಕೋವಿಡ್ ಜಾಸ್ತಿ ಮಾಡಿದ್ದೀವಾ? ಸಾಮಾಜದ ತಿಳಿವಳಿಕೆ ಇರಬೇಕು ಎಂದು ಟಾಂಗ್ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ