ಆರೋಗ್ಯ ಸಚಿವ ಬಿ. ಶ್ರೀರಾಮುಲು ತಾಯಿ ಹೊನ್ನೂರಮ್ಮ ನಿಧನ

ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದ ಹೊನ್ನೂರಮ್ಮ ಬಳ್ಳಾರಿಯ ಮನೆಯಲ್ಲಿ ವಾಸವಾಗಿದ್ದರು. ಈಗ ವಯೋಸಹಜ ಕಾರಣದಿಂದ ಆರೋಗ್ಯದಲ್ಲಿ‌ ಮತ್ತೆ ಏರುಪೇರು ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆರೋಗ್ಯ ಸಚಿವ ಶ್ರೀರಾಮುಲು

ಆರೋಗ್ಯ ಸಚಿವ ಶ್ರೀರಾಮುಲು

 • Share this:
  ಬೆಂಗಳೂರು (ಆಗಸ್ಟ್​ 21): ಆರೋಗ್ಯ ಸಚಿವ ಶ್ರೀರಾಮುಲು ತಾಯಿ ಹೊನ್ನೂರಮ್ಮ ಅವರು ಗುರುವಾರ ರಾತ್ರಿ 11:50 ಕ್ಕೆ ವಿಧಿವಶರಾಗಿದ್ದಾರೆ. ಅವರಿಗೆ 95 ವರ್ಷ ಆಗಿತ್ತು. ಹೊನ್ನೂರಮ್ಮ ಇತ್ತೀಚಿಗೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ಅವರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರಗೆ ದಾಖಲು ಮಾಡಲಾಗಿತ್ತು. ವಯಸ್ಸು ನೂರು ಸಮೀಪಿಸಿದ್ದರೂ  ಅವರು ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿದ್ದರು. ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದ ಹೊನ್ನೂರಮ್ಮ ಬಳ್ಳಾರಿಯ ಮನೆಯಲ್ಲಿ ವಾಸವಾಗಿದ್ದರು. ಈಗ ವಯೋಸಹಜ ಕಾರಣದಿಂದ ಆರೋಗ್ಯದಲ್ಲಿ‌ ಮತ್ತೆ ಏರುಪೇರು ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11:50 ಕ್ಕೆ ನಿಧನರಾಗಿದ್ದಾರೆ. ಇಂದು ಮುಂಜಾನೆ 5:30ಕ್ಕೆ  ಬಳ್ಳಾರಿಯಲ್ಲೇ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

  ಶ್ರೀರಾಮುಲುರವ ತಾಯಿ ನಿಧನಕ್ಕೆ ಹಲವು ಸಚಿವರು ಸಂತಾಪ ಸೂಚಿಸಿದ್ದಾರೆ.  ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್​ ಸೇರಿ ಸಾಕಷ್ಟು ಗಣ್ಯರು ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಹಾರೈಸಿದ್ದಾರೆ.

  ಶ್ರೀರಾಮುಲು ಕೂಡ ಇತ್ತೀಚೆಗೆ ಕೊರೋನಾ ವೈರಸ್​ಗೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಕ್ವಾರಂಟೈನ್​ ಆಗಿದ್ದರು. ಚಿಕಿತ್ಸೆ ಪಡೆದು ಕೊರೋನಾದಿಂದ ಗುಣಮುಖರಾಗಿದ್ದರು. ಕೊರೋನಾ ವೈರಸ್​ ರಾಜ್ಯದಲ್ಲಿ ಕಾಲಿಟ್ಟಾಗಿನಿಂದಲೂ ಶ್ರೀರಾಮುಲು ನಿರಂತರವಾಗಿ ಸೇವೆ ನೀಡುತ್ತಿದ್ದಾರೆ.
  Published by:Rajesh Duggumane
  First published: