ಆನ್‌ಲೈನ್ ತರಗತಿಗಳಿಂದಾಗಿ ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆ..ಹೊಸ ಅಧ್ಯಯನದಲ್ಲಿ ಆತಂಕಕಾರಿ ಅಂಶ ಬಯಲು

ಆನ್‌ಲೈನ್ ತರಗತಿಗಳಿಂದಾಗಿ ಶೇಕಡಾ 55ರಷ್ಟು ವಿದ್ಯಾರ್ಥಿಗಳು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಅಧ್ಯಯನದ ಫಲಿತಾಂಶಗಳಿಂದ ತಿಳಿದುಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ಕೋವಿಡ್ ಕಾರಣದಿಂದಾಗಿ ಶಾಲೆಗಳು ಬಂದ್‌ ಆಗಿವೆ ಮತ್ತು ವಿದ್ಯಾರ್ಥಿಗಳು ಆನ್‌ಲೈನ್ ತರಗತಿಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಎಲ್ಲಾರಿಗೂ ತಿಳಿದಿದೆ. ಆದರೆ ಇದರಿಂದ ಮಕ್ಕಳಲ್ಲಿ ಉಂಟಾಗುವ ಸಮಸ್ಯೆಗಳನ್ನು ಕೂಡ ನಾವು ಪರಿಶೀಲಿಸಬೇಕು. ಸಾಂಕ್ರಾಮಿಕ ಸಮಯದಲ್ಲಿ, ಶಿಕ್ಷಣ ಕ್ಷೇತ್ರವು ಬದಲಾಗಿದೆ. ಈ ರೂಪಾಂತರದಿಂದ ಮಕ್ಕಳಿಗೆ ಪ್ರಯೋಜನಗಳು ಆಗಿವೆ. ಜೊತೆಗೆ ನ್ಯೂನತೆಗಳು ಸಹ ಕಂಡುಬಂದಿವೆ ಮತ್ತು ಈ ನ್ಯೂನತೆಗಳು ಇಂದು ಚರ್ಚೆಗೆ ಕಾರಣವಾಗಿವೆ. ಐಎಎನ್‌ಎಸ್ ಪ್ರಕಾರ, ಸ್ಪ್ರಿಂಗ್ ಡೇಲ್ ಕಾಲೇಜಿನ (ಲಕ್ನೋ) ವಿದ್ಯಾರ್ಥಿಗಳು "ಸಾಂಕ್ರಾಮಿಕ ಸಮಯದಲ್ಲಿ ಕಲಿಕೆ ಮತ್ತು ಯೋಗಕ್ಷೇಮದ ಮೇಲೆ ಆನ್‌ಲೈನ್ ಬೋಧನೆಯ ಪರಿಣಾಮ" ಎಂಬ ಶೀರ್ಷಿಕೆಯ ಅಧ್ಯಯನವನ್ನು ನಡೆಸಿದರು.


  ಸಂಶೋಧನೆಯ ಫಲಿತಾಂಶಗಳ ಪ್ರಕಾರ, ಆನ್‌ಲೈನ್ ಕೋರ್ಸ್‌ಗಳನ್ನು ತೆಗೆದುಕೊಂಡ ವಿದ್ಯಾರ್ಥಿಗಳು (4 ರಿಂದ 12 ನೇ ತರಗತಿವರೆಗೆ) ಸಾಂಕ್ರಾಮಿಕ ಸಮಯದಲ್ಲಿ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದರು. ವಿವಿಧ ಶಾಲೆಗಳ 154 ಶಿಕ್ಷಕರು, 1,000 ಪೋಷಕರು ಮತ್ತು 3,300 ವಿದ್ಯಾರ್ಥಿಗಳು ಸೇರಿದಂತೆ 4454 ಅಭ್ಯರ್ಥಿಗಳ ಮೇಲೆ ಈ ಅಧ್ಯಯನ ನಡೆಸಲಾಯಿತು.


  ಆನ್‌ಲೈನ್ ತರಗತಿಗಳಿಂದಾಗಿ ಶೇಕಡಾ 55ರಷ್ಟು ವಿದ್ಯಾರ್ಥಿಗಳು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಅಧ್ಯಯನದ ಫಲಿತಾಂಶಗಳಿಂದ ತಿಳಿದುಬಂದಿದೆ. ಅಧ್ಯಯನದ ಫಲಿತಾಂಶಗಳಲ್ಲಿ, ಈ ಕೆಳಗೆ ಸೂಚಿಸಿರುವ ಸಮಸ್ಯೆಗಳನ್ನು ಹೈಲೈಟ್ ಮಾಡಲಾಗಿದೆ:
  • ಸುಮಾರು 45 ರಿಂದ 47 ರಷ್ಟು ವಿದ್ಯಾರ್ಥಿಗಳು ಅಸಮರ್ಥತೆ ಮತ್ತು ಶಿಕ್ಷಕರೊಂದಿಗಿನ ಸಂವಹನದ ಕೊರತೆಯನ್ನು ಅನುಭವಿಸಿದ್ದಾರೆ. ಇದು ಮಕ್ಕಳ ಮನಸ್ಸಿನ ಮೇಲೆ ಭಾರಿ ಪರಿಣಾಮ ಬೀರುತ್ತಿದೆ.

  • ದೀರ್ಘಾವಧಿಯ ಆನ್‌ಲೈನ್‌ ಕ್ಲಾಸ್‌ಗಳಿಂದ ಮಕ್ಕಳು ಹೆಚ್ಚಿನ ಸಮಯವನ್ನು ಲ್ಯಾಪ್‌ಟಾಪ್‌ ಅಥವಾ ಮೋಬೈಲ್‌ ಪರದೆಯ ಮುಂದೆ ಕಳೆಯುತ್ತಿದ್ದಾರೆ ಇದರಿಂದಾಗಿ ತಲೆನೋವು, ಕಣ್ಣಿನ ತೊಂದರೆಗಳು, ಆಯಾಸ, ಬೊಜ್ಜು, ಕಿರಿಕಿರಿ ಮತ್ತು ಆಲಸ್ಯದಂತಹ ಪ್ರತಿಕೂಲ ದೈಹಿಕ ಲಕ್ಷಣಗಳನ್ನು ಸುಮಾರು 54 ರಿಂದ 58 ರಷ್ಟು ವಿದ್ಯಾರ್ಥಿಗಳು ಅನುಭವಿಸಿದ್ದಾರೆ.

  • ಶೇಕಡಾ 66ರಷ್ಟು ವಿದ್ಯಾರ್ಥಿಗಳು ತಾಂತ್ರಿಕ ಸಮಸ್ಯೆಗಳಿಂದ, ನೆಟ್‌ವರ್ಕ್‌ ಕವರೇಜ್‌ ಸಮಸ್ಯೆಯಿಂದ ಆನ್‌ಲೈನ್‌ ಕ್ಲಾಸ್‌ ಕಡೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ.

  • ಶೇ. 22.7ರಷ್ಟು ವಿದ್ಯಾರ್ಥಿಗಳು ನಿದ್ರಾಹೀನತೆಯ ಸಮಸ್ಯೆಗಳನ್ನು ಅನಭವಿಸುತ್ತಿದ್ದಾರೆ ಎಂದು ಅಧ್ಯಯನ ವದರಿ ಮಾಡಿದೆ.

  • ಆನ್‌ಲೈನ್‌ ಕ್ಲಾಸ್‌ನಿಂದ ಮಕ್ಕಳು ಒತ್ತಡಕ್ಕೆ ಬಲಿಯಾಗುತ್ತಿದ್ದಾರೆ. ಏಕೆಂದರೆ ಕೋವಿಡ್‌ನಿಂದ ಮಕ್ಕಳು ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅವರ ಆಟ ಬಂದ್‌ ಆಗಿದೆ ಮತ್ತು ಗೆಳೆಯ/ಗೆಳತಿಯರನ್ನು ಭೇಟಿ ಮಾಡಲು ಆಗುತ್ತಿಲ್ಲ. ಈ ಕಾರಣಗಳಿಂದ ಶೇಕಡಾ 50 ರಷ್ಟು ವಿದ್ಯಾರ್ಥಿಗಳು ಒತ್ತಡ ಅನುಭವಿಸುತ್ತಿದ್ದಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.  ಇನ್ನು, ಕೇವಲ ಮಕ್ಕಳು ಮಾತ್ರವಲ್ಲದೆ ಶಿಕ್ಷಕರು, ಪೋಷಕರು ಸಹ ಒತ್ತಡದಿಂದ ಬಳಲುತ್ತಿದ್ದಾರೆ ಎಂಬುದು ಸಹ ಈ ಅಧ್ಯಯನದಿಂದ ತಿಳಿದುಬಂದಿದೆ. ಒಟ್ಟಾರೆ ಕೊರೊನಾ ಸಾಂಕ್ರಾಮಿಕ ಹಲವರ ಬದುಕನ್ನು ಬದಲಾಗಿಸಿದ್ದು, ಆತಂಕ ಹೆಚ್ಚಿಸಿದ್ದು ಸುಳ್ಳಲ್ಲ.
  First published: