HOME » NEWS » State » HEALTH DEPARTMENT GIVEN COVID 19 VACCINE TO KODAGU ADIVASI PEOPLE RSK LG

Corona Vaccine: ಗಿಡಮೂಲಿಕೆಗಳೇ ಕೊರೋನಾಗೆ ಮದ್ದು ಎನ್ನುತ್ತಿದ್ದ ಆದಿವಾಸಿಗಳಿಗೆ ಲಸಿಕೆ ನೀಡಿದ ಆರೋಗ್ಯ ಇಲಾಖೆ

ಹಾಡಿಯಲ್ಲಿ ಕೆಲ ಜನರಿಗೂ ಸೋಂಕು ಬಂದ ಮೇಲೆ ಲಸಿಕೆ ಹಾಕಿಸಿಕೊಳ್ಳುವುದು ಮುಖ್ಯ ಎಂದೆನಿಸಿ ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದಾಗಿದ್ದೇವೆ ಎಂದು ಹಾಡಿಯ ರಾಜ ಹೇಳಿದರು.

news18-kannada
Updated:June 13, 2021, 9:25 AM IST
Corona Vaccine: ಗಿಡಮೂಲಿಕೆಗಳೇ ಕೊರೋನಾಗೆ ಮದ್ದು ಎನ್ನುತ್ತಿದ್ದ ಆದಿವಾಸಿಗಳಿಗೆ ಲಸಿಕೆ ನೀಡಿದ ಆರೋಗ್ಯ ಇಲಾಖೆ
ಹಾಡಿ ಜನರಿಗೆ ಕೊರೋನಾ ಲಸಿಕೆ ನೀಡುತ್ತಿರುವ ಸಿಬ್ಬಂದಿ
  • Share this:
ಕೊಡಗು(ಜೂ.13): ‘ಕಾಡಿನ ಅಜ್ಜಯ್ಯನೇ ನಮ್ಮ ದೇವರು, ಅಲ್ಲಿ ಸಿಗುವ ಸೊಪ್ಪು, ಗಿಡಮೂಲಿಕೆಗಳೇ ಕೊರೋನಾಗೆ ಮದ್ದು’ ಎಂದು ಹೇಳಿ ವ್ಯಾಕ್ಸಿನ್  ತಿರಸ್ಕರಿಸುತ್ತಿದ್ದ ಆದಿವಾಸಿಗಳ ಮನವೊಲಿಸಿ ಕೊನೆಗೂ ಅವರಿಗೆ ಲಸಿಕೆ ಹಾಕಲಾಗಿದೆ. ಹೌದು, ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಸಾಕಷ್ಟು ಆದಿವಾಸಿ ಹಾಡಿಗಳಲ್ಲಿ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ತೀವ್ರ ಭಯಪಡುತ್ತಿದ್ದರು. ಹೀಗಾಗಿಯೇ ಹಾಡಿಯ ಜನರಿಗೆ ವ್ಯಾಕ್ಸಿನ್ ಹಾಕಲು ಎಷ್ಟೇ ಬಾರಿ ಹಾಡಿಗಳಿಗೆ ತೆರಳಿದ್ದರೂ ಸಾಧ್ಯವಾಗದೇ ಅಧಿಕಾರಿಗಳು ವಾಪಸ್ ಆಗಿದ್ದರು. ಆದರೆ ಶನಿವಾರ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿಯ ದಿಡ್ಡಳ್ಳಿ ಮತ್ತು ತಟ್ಟಳ್ಳಿ ಹಾಡಿಗಳಿಗೆ ತೆರಳಿದ ಶಾಸಕ ಕೆ.ಜಿ. ಬೋಪಯ್ಯ, ತಹಶೀಲ್ದಾರ್ ಯೋಗಾನಂದ, ಐಟಿಡಿಪಿ ಅಧಿಕಾರಿ ಶಿವಕುಮಾರ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿ ಗೋಪಿನಾಥ್ ನೇತೃತ್ವದ ತಂಡ ಆದಿವಾಸಿ ಜನರನ್ನು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮನವೊಲಿಸುವಲ್ಲಿ ಯಶಸ್ವಿಯಾಗಿದೆ.

ಹಾಡಿಯ ಪ್ರತೀ ಮನೆ ಮನೆಗೂ ತೆರಳಿದ ಶಾಸಕರು ಮತ್ತು ಅಧಿಕಾರಿಗಳ ತಂಡ ತಾವೆಲ್ಲರೂ ವ್ಯಾಕ್ಸಿನ್ ಹಾಕಿಸಿಕೊಂಡಿದ್ದೇವೆ. ಯಾವುದೇ ತೊಂದರೆ ಆಗಿಲ್ಲ. ಜೊತೆಗೆ ಇದರಿಂದ ಕೊರೊನಾ ಬಂದರೂ ಸಾವಿನಿಂದ ಬಚಾವ್ ಆಗಲು ಅವಕಾಶವಿದೆ ಎಂದು ತಿಳಿ ಹೇಳಿದರು. ಇದರಿಂದ ಕೊನೆಗೂ ಅಧಿಕರಿಗಳ ಮಾತು ಆಲಿಸಿದ ಆದಿವಾಸಿಗಳು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಸಿದ್ಧರಾದರು. ದಿಡ್ಡಳ್ಳಿಯಲ್ಲಿ ಗಿರಿಜನ ಆಶ್ರಮ ಶಾಲೆಯಲ್ಲೇ ವ್ಯಾಕ್ಸಿನ್ ಹಾಕಲು ಸಿದ್ಧತೆ ಮಾಡಿಕೊಂಡಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಆದಿವಾಸಿಗಳಿಗೆ ಸ್ಥಳದಲ್ಲಿಯೇ ವ್ಯಾಕ್ಸಿನ್ ಹಾಕಿದರು.

ಇದನ್ನೂ ಓದಿ:Mandya Crime News: ಅಣ್ಣನ ಕೈಲಿ ಮನೆ ಕೆಲಸ ಮಾಡಿಸುತ್ತಾಳೆಂದು ಗರ್ಭಿಣಿ ಅತ್ತಿಗೆ ಕೊಂದು ನೇಣಿಗೆ ಶರಣಾದ ನಾದಿನಿ

ಈ ಸಂದರ್ಭ ಮಾತನಾಡಿದ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹಲವು ಬಾರಿ ವ್ಯಾಕ್ಸಿನ್ ಹಾಕಲು ಪ್ರಯತ್ನಿಸಿದ್ದೆವು. ಆದರೆ ಸಾಧ್ಯವಾಗಿರಲಿಲ್ಲ. ಆದಿವಾಸಿಗಳು ಪಟ್ಟಣದ ಪ್ರದೇಶಗಳಿಗೆ ಹೋಗಿ ಲಸಿಕೆ ಪಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಹಾಡಿಗಳಿಗೆ ಬಂದು ವ್ಯಾಕ್ಸಿನ್ ಹಾಕಲಾಗುತ್ತಿದೆ. ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ಹಾಕಲಾಗುತ್ತಿದೆ. 255 ಕ್ಕೂ ಹೆಚ್ಚು ಜನರು ವ್ಯಾಕ್ಸಿನ್ ಪಡೆದುಕೊಳ್ಳಲು ಮುಂದೆ ಬಂದಿದ್ದಾರೆ. ಇನ್ನೂ ಎಲ್ಲಾ ಹಾಡಿಗಳಲ್ಲೂ ವ್ಯಾಕ್ಸಿನ್ ವಿತರಣೆ ಮಾಡಲು ಮನವೊಲಿಸುತ್ತೇವೆ. ಜೊತೆಗೆ ಜೂನ್ 21 ಕ್ಕೆ ಲಾಕ್ ಡೌನ್ ಮುಗಿಯುವಷ್ಟರಲ್ಲಿ ತಮ್ಮ ಕ್ಷೇತ್ರದಲ್ಲಿ ಒಂದೂ ಕೋವಿಡ್ ಪ್ರಕರಣ ಇಲ್ಲದಂತೆ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಇನ್ನೂ ಲಸಿಕೆ ಪಡೆದ ಆದಿವಾಸಿಗಳು ಮಾತಾನಾಡಿ, ಲಸಿಕೆಯಿಂದ ಅನೇಕ ಲಾಭಗಳ ಬಗ್ಗೆ ಶಾಸಕರು ಅಧಿಕಾರಿಗಳು ನಮಗೆ ತಿಳುವಳಿಕೆ ಹೇಳಿದ ಮೇಲೆ ನಾವು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದಾಗಿದ್ದೇವೆ. ಹಾಡಿಯಲ್ಲಿ ಇರುವ ನಾವುಗಳು ಗೆಡ್ಡೆ, ಗೆಣಸು ಮತ್ತು ಗಾಂಧರಿ ಮೆಣಸು ಬಳಸಿ ಜೊತೆಗೆ ಕಾಡಿನಲ್ಲಿ ಸಿಗುವ ಔಷಧಿಗುಣವುಳ್ಳ ಗಿಡಗಳಿಂದ ಮದ್ದು ಮಾಡಿಕೊಳ್ಳುತ್ತಿದ್ದೆವು. ಹಾಡಿಯಲ್ಲಿ ಕೆಲ ಜನರಿಗೂ ಸೋಂಕು ಬಂದ ಮೇಲೆ ಲಸಿಕೆ ಹಾಕಿಸಿಕೊಳ್ಳುವುದು ಮುಖ್ಯ ಎಂದೆನಿಸಿ ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದಾಗಿದ್ದೇವೆ ಎಂದು ಹಾಡಿಯ ರಾಜ ಹೇಳಿದರು.

ಇದನ್ನೂ ಓದಿ:Bengaluru Crime: ಹೆಚ್ಚಿನ ಬಡ್ಡಿ ಆಸೆಯಿಂದ ಹಣ ಹೂಡಿಕೆ ಮಾಡಿದ್ರೆ ಪಂಗನಾಮ; ಚೀನಿ ಆ್ಯಪ್​ಗಳಿವೆ ಎಚ್ಚರಿಕೆ..!
Youtube Video
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by: Latha CG
First published: June 13, 2021, 9:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories