ಓದಿದ್ದು ಇಂಜಿನಿಯರಿಂಗ್ - ಮಾಡೋದು ಸೋಡಾ ಮಾರುವ ಕೆಲಸ - ಈತನ ದಿನದ ಗಳಿಕೆ ಎಷ್ಟು ಗೊತ್ತಾ..?

ಶಿವಮೊಗ್ಗ ನಗರದ ಡಿವಿಎಸ್ ಕಾಲೇಜ್ ಸರ್ಕಲ್ ನಲ್ಲಿರುವ ಈ ತಳ್ಳುವ ಸೋಡಾ ಅಂಗಡಿಯನ್ನು 45 ವರ್ಷಗಳಿಂದ ರೋಹಿತ್ ನ ತಂದೆ ಜಯಣ್ಣ ನಡೆಸಿಕೊಂಡು ಬರುತ್ತಿದ್ದಾರೆ. ಇದರಲ್ಲಿಯೇ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾನೆ

ಲೋಹಿತ್​

ಲೋಹಿತ್​

  • Share this:
ಶಿವಮೊಗ್ಗ(ಫೆ.13) : ಈತ ಓದಿದ್ದು ಇಂಜಿನಿಯರಿಂಗ್ ಪದವಿ. ಮಾಡುತ್ತಿರುವ ಕೆಲಸಕ್ಕೂ ಇವರ ಪದವಿಗೂ ಸಂಬಂಧವೇ ಇಲ್ಲ. ಕೈ ತುಂಬಾ ಸಂಬಳ ಸಿಗುವಂತ ಕಂಪನಿಗಳಲ್ಲಿ ಕೆಲಸದ ಆಫರ್ ಗಳು ಬಂದರೂ,  ಅದ್ಯಾಕೋ ಆ ಯುವಕನ ಆಲೋಚನೆ ಬದಲಾಗಿ ಹೋಗಿತ್ತು. ನಾನ್ಯಾಕೆ ಇನ್ನೊಬ್ಬರ ಕೈಯಲ್ಲಿ ದುಡಿಯಬೇಕು. ನಾನೇ ಸ್ವಂತ ಉದ್ಯೋಗ ಮಾಡಿಕೊಂಡು ಜೀವನ ನಿರ್ವಹಿಸಬೇಕೆಂದು ಆತ  ನಿರ್ಧಾರ ಮಾಡಿದ್ದ. ಈಗ ಪ್ರತಿ ತಿಂಗಳ 50 ಸಾವಿರಕ್ಕೂ ಹೆಚ್ಚಿನ ಹಣ ಸಂಪಾದನೆ ಮಾಡುತ್ತಿದ್ದಾನೆ.

ಈ ಯುವಕನ ಹೆಸರು ರೋಹಿತ್. ಕುಟುಂಬದಲ್ಲಿ ಬಡತನವಿದ್ದರೂ ರೋಹಿತ್ ವಿದ್ಯಾಭ್ಯಾಸಕ್ಕೆ ಆದು ಆಡಚಣೆ ಆಗಲೇ ಇಲ್ಲ. ಕಷ್ಟುಪಟ್ಟು ವ್ಯಾಸಂಗ ಮಾಡಿದ ಇತ 2015 ರಲ್ಲಿ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಪ್ರಥಮ ದರ್ಜೆಯಲ್ಲಿ ಇಂಜಿನಿಯರಿಂಗ್ ಪದವಿ ಗಳಿಸಿದರು. ಪದವಿ ನಂತರ ಆ ಕಂಪನಿ ಈ ಕಂಪನಿ ಅಲೆಯದೇ ಸ್ವಯಂ ಉದ್ಯೋಗದ ಕಡೆಗೆ ಮುಖ ಮಾಡಿದ್ದಾನೆ. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ನಲ್ಲಿ ಇಂಜಿನಿಯರ್ ಪದವಿ ಗಳಿಸಿರುವ ಇವರಿಗೆ ಬೆಂಗಳೂರಿನಲ್ಲಿ ಅನೇಕ ಕಂಪನಿಗಳಲ್ಲಿ ಕೆಲಸ ಅರಸಿ ಬಂದಿದ್ದವು. ಅದರೆ, ಅವೆಲ್ಲವನ್ನು ಬಿಟ್ಟು ಇವರು ಆಯ್ಕೆ ಮಾಡಿಕೊಂಡ ಕೆಲಸ ನಿಜಕ್ಕೂ ಎಲ್ಲರಿಗೂ ಅಚ್ಚರಿ ತರಿಸುತ್ತದೆ.

ಶಿವಮೊಗ್ಗ ನಗರದ ಫುತ್ ಬಾತ್ ನಲ್ಲಿ ಸೋಡಾ ಹಾಕುವ ಕೆಲಸವನ್ನು ರೋಹಿತ್ ಮಾಡುತ್ತಿದ್ದಾನೆ. ತಂದೆ ನಡೆಸಿಕೊಂಡು ಬರುತ್ತಿದ್ದ ತಳ್ಳುವ ಗಾಡಿಯಲ್ಲಿ ಸೋಡಾ ವ್ಯಾಪಾರವನ್ನು ಈಗ ರೋಹಿತ್ ನಿರ್ವಹಿಸುತ್ತಿದ್ದಾನೆ. ಈ ಸೋಡಾ ಅಂಗಡಿ ಶಿವಮೊಗ್ಗ ನಗರದಲ್ಲೇ ಬಾರೀ ಫೇಮಸ್. ಶಿವಮೊಗ್ಗ ನಗರದ ಡಿವಿಎಸ್ ಕಾಲೇಜ್ ಸರ್ಕಲ್ ನಲ್ಲಿರುವ ಈ ತಳ್ಳುವ ಸೋಡಾ ಅಂಗಡಿಯನ್ನು 45 ವರ್ಷಗಳಿಂದ ರೋಹಿತ್ ನ ತಂದೆ ಜಯಣ್ಣ ನಡೆಸಿಕೊಂಡು ಬರುತ್ತಿದ್ದಾರೆ. ಇದರಲ್ಲಿಯೇ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾನೆ.

ಇದನ್ನೂ ಓದಿ : ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ 17-18ನೇ ಶತಮಾನದ ರಾಕೆಟ್​ಗಳು ಕರುನಾಡಿನಲ್ಲಿ ಎಲ್ಲಿವೆ ಗೊತ್ತಾ?

ನಗರದ ಬಹುಪಾಲು ಮಂದಿಗೆ ಗಾಂಧಿ ಪಾರ್ಕ್ ನ ಬಳಿಯಿರುವ ಈ ಸೋಡಾ ಅಂಗಡಿ, ಅತ್ಯಂತ ಚಿರಪರಿಚಿತ. ಈಗ ರೋಹಿತ್ ನಡೆಸಿಕೊಂಡು ಹೋಗುತ್ತಿದ್ದಾರೆ. ರೋಹಿತ್ ನೀಡುವ ರುಚಿಕಟ್ಟಾದ ಸೋಡಾಕ್ಕೆ ಜನ ಫಿದಾ ಆಗಿದ್ದಾರೆ. ಅಂಗಡಿ ನೋಡುವುದಕ್ಕೆ ಚಿಕ್ಕದಾದರೂ ಇಲ್ಲಿಗೆ ಬರುವ ಗ್ರಾಹಕರ ಸಂಖ್ಯೆ ದೊಡ್ಡದು. ಮಕ್ಕಳು, ಹಿರಿಯರು, ವಿದ್ಯಾರ್ಥಿಗಳು, ಮಹಿಳೆಯರು ಪ್ರವಾಸಿಗರು, ಹೀಗೆ ಎಲ್ಲಾ ವರ್ಗದ ಜನರು ಪ್ರತಿದಿನ ಇಲ್ಲಿಗೆ ಬಂದು ಸೋಡಾ ಕುಡಿಯುತ್ತಾರೆ. ಒಮ್ಮೆ ಇಲ್ಲಿನ ಸೋಡಾ ಸವಿದವರು ಮತ್ತೆ ಮತ್ತೆ ಇಲ್ಲಿಗೆ ಬರುತ್ತಾರೆ. ತರಹೇವಾರಿ ಸೋಡಾ, ಸೌತೆಕಾಯಿ ರುಚಿ ಸವಿಯಲೆಂದೇ ಪ್ರತಿನಿತ್ಯ ನೂರಾರು ಜನರು ಇಲ್ಲಿಗೆ ಬರುವುದು ವಿಶೇಷವಾಗಿದೆ.

ಪದವಿ ಮಾಡಿದ್ದರೂ, ಯಾವುದೇ ಅಂಜಿಕೆ, ಅಳುಕಿಲ್ಲದೇ, ಸ್ವಾಭಿಮಾನದಿಂದ ರೋಹಿತ್ ಈ ಅಂಗಡಿ ನಡೆಸಿಕೊಂಡು ಹೋಗುತ್ತಿದ್ದಾನೆ. ಇದೇ ಅಂಗಡಿಯಿಂದ ಬಂದ ಆದಾಯದಿಂದ ನಮ್ಮ ಜೀವನ ಸಾಗಿದೆ, ಈ ಕೆಲಸ ಮಾಡಲು ನಮಗೇನು ನಾಚಿಕೆ ಇಲ್ಲ, ಇದು ನಮಗೆ ಹೆಮ್ಮೆ ಎಂದು ರೋಹಿತ್ ಹೇಳುತ್ತಾರೆ.

ಬಹುತೇಕ ಮಲೆನಾಡಿನ ಗ್ರಾಮೀಣ ಪ್ರದೇಶದ ಯುವಕರು  ಕೆಲಸಕ್ಕೆ ಬೇರೇ ಬೇರೆ ದೂರದ ಊರುಗಳಿಗೆ ತೆರಳುತ್ತಿದ್ದಾರೆ. ಈಗಾಗಿ ಮಲೆನಾಡಿನ ಬಹುತೇಕ ಮನೆಗಳು ಈಗ  ವೃದ್ಧಾಶ್ರದಂತಾಗಿವೆ. ತಂದೆ ತಾಯಿಗಳು ಮಾತ್ರ ಹಳ್ಳಿಯಲ್ಲಿ ವಾಸವಾಗಿದ್ದಾರೆ.  ಆದರೆ ರೋಹಿತ್ ಮಾತ್ರ ಎಲ್ಲರಗಿಂತ ಭಿನ್ನವಾಗಿದ್ದಾನೆ. ಹೆತ್ತವರ ಬಿಟ್ಟು ದೂರ ಹೋಗದೇ ಅವರ ಜೊತೆಗೆ ಇರಬೇಕು. ತಂದೆ ಹುಟ್ಟು ಹಾಕಿದ ಸೋಡಾ ಮತ್ತು ಸೌತೇಕಾಯಿ ವ್ಯಾಪಾರವನ್ನೇ ಮುಂದುವರೆಸಿಕೊಂಡು ಹೋಗಬೇಕೆಂದು ರೋಹಿತ್ ಬೆಂಗಳೂರು ಬಿಟ್ಟು ಮರಳಿ ಶಿವಮೊಗ್ಗಕ್ಕೆ ಬಂದಿದ್ದಾನೆ.

ಇದನ್ನೂ ಓದಿ :  ಶಿವಮೊಗ್ಗದಲ್ಲಿ ಈಕೆ ಸತ್ಯ ಹರಿಶ್ಚಂದ್ರೆ ಎಂದೇ ಫೇಮಸ್; ಪುರುಷರಿಗಿಂತಲೂ ಗಟ್ಟಿಗಿತ್ತಿ; ಆದರೆ ಬದುಕು ಕಟ್ಟಿಕೊಳ್ಳಲು ಪರದಾಟ

ಕಳೆದ ಎರಡು ವರ್ಷದಿಂದ ತಂದೆ ಜೊತೆ ಕೈಜೋಡಿಸಿ ಇದೇ ವ್ಯಾಪಾರ ಮುಂದುವರೆಸಿದ್ದಾನೆ.  ಪ್ರತಿನಿತ್ಯ ಮೂರರಿಂದ ನಾಲ್ಕು ಸಾವಿರ ವ್ಯಾಪಾರ ಮಾಡುತ್ತಾನೆ.  ಗ್ರಾಹಕರಿಗೆ ಉತ್ತಮ ಸೇವೆ, ರುಚಿ, ಗುಣಮಟ್ಟದ ಸೋಡಾ ಮತ್ತು ಸೌತೆ ಕಾಯಿ ನೀಡುವ ಮೂಲಕ ರೋಹಿತ್ ಮತ್ತು ಜಯಣ್ಣ, ಎಲ್ಲರ ಪ್ರತಿ ವಿಶ್ವಾಸ ಗಳಿಸಿದ್ದಾರೆ. ಇಂತಹ ಸಣ್ಣ ವ್ಯಾಪಾರದ ಮೂಲಕ ಬದುಕು ಕಟ್ಟಿಕೊಳ್ಳುತ್ತಿರುವ ಮೂಲಕ ನಿಜಕ್ಕೂ ರೋಹಿತ್ ಎಲ್ಲರಿಗೂ ಪ್ರೇರಣೆಯಾಗಿದ್ದಾನೆ.

ಕೆಲಸ ಹುಡಿಕಿಕೊಂಡು ಅಲೆದಾಡಿ ನಿರಾಸೆಯಾಗುವುದಕ್ಕಿಂತ, ಕೈಯಲ್ಲಿ ಇರುವ ಅವಕಾಶಗಳನ್ನು ಬಳಿಸಿಕೊಂಡು,  ಆರ್ಥಿಕವಾಗಿ ಲಾಭ ಗಳಿಸಬಹುದು ಎಂಬುದನ್ನು ತೊರಿಸಿಕೊಟ್ಟಿದ್ದಾನೆ.
First published: