• Home
  • »
  • News
  • »
  • state
  • »
  • Hubballi: ಚಿನ್ನದ ಆಸೆಗೆ ದೊಡ್ಡಮ್ಮನ ಕಿವಿಯನ್ನೇ ಕತ್ತರಿಸಿದ ಭೂಪ; ಕೊಲೆ ಮಾಡಿ ಬೀಗ ಹಾಕ್ಕೊಂಡು ಎಸ್ಕೇಪ್!

Hubballi: ಚಿನ್ನದ ಆಸೆಗೆ ದೊಡ್ಡಮ್ಮನ ಕಿವಿಯನ್ನೇ ಕತ್ತರಿಸಿದ ಭೂಪ; ಕೊಲೆ ಮಾಡಿ ಬೀಗ ಹಾಕ್ಕೊಂಡು ಎಸ್ಕೇಪ್!

ಮೃತ ಮಹಿಳೆ

ಮೃತ ಮಹಿಳೆ

ಹಣ ಅಂದ್ರೆ ಹೆಣಾನೂ ಬಾಯಿ ಬಿಡುತ್ತೆ ಅನ್ನೋ ಮಾತಿದೆ. ಇಲ್ಲೊಬ್ಬ ಚಿನ್ನದ ಆಸೆಗೆ ದೊಡ್ಡಮ್ಮನ ಕಿವಿ ಕತ್ತರಿಸಿರೋ ಭೂಪ, ನಂತರ ಬೀಗ ಜಡಿದುಕೊಂಡು ಎಸ್ಕೇಪ್ ಆಗಿರೋ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

  • News18 Kannada
  • Last Updated :
  • Karnataka, India
  • Share this:

ಹುಬ್ಬಳ್ಳಿ (ಅ.25): ಚಿನ್ನದ ಆಸೆಗಾಗಿ ದೊಡ್ಡಮ್ಮನ ಕಿವಿ ಕತ್ತರಿಸಿ, ಕೊಂದು ಪರಾರಿಯಾಗಿರೋ ಘಟನೆ ಹುಬ್ಬಳ್ಳಿಯ (Hubballi) ನೇಕಾರ ನಗರದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಕಮಲಮ್ಮ(70) ಎಂದು ಗುರುತಿಸಲಾಗಿದೆ. ಕಮಲಮ್ಮಳ (Kamalamma) ತಂಗಿಯ ಮಗ ಮಾಲತೇಶ್ ಎಂಬಾತನಿಂದ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ. ಮನೆಯಲ್ಲಿ ಮಲಗಿದ್ದಾಗ ಕಿವಿ ಕತ್ತರಿಸಿ ಓಲೆ ಕಿತ್ತುಕೊಂಡು ಮಾಲತೇಶ್ ಎಸ್ಕೇಪ್ (Escape) ಆಗಿದ್ದಾರೆ. ಹೋಗುವ ಮುನ್ನ ಬಾಗಿಲನ್ನು ಹೊರಗಡೆಯಿಂದ ಬೀಗ ಹಾಕಿಕೊಂಡು ಹೋಗಿದ್ದಾನೆ. ಕಿಟಕಿಯಿಂದ ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.


ಮಾಲ್ತೇಶ್ ಆಗಾಗ ದೊಡ್ಡಮ್ಮನ ಮನೆಗೆ ಬರುತ್ತಿದ್ದ. ಅದರಂತೆ 3 ದಿನಗಳ ಹಿಂದೆ ಕಮಲಮ್ಮನ ಮನೆಗೆ ಬಂದಿದ್ದ ಮಾಲ್ತೇಶ್, ಈ ಕೃತ್ಯ ಎಸಗಿದ್ದಾನೆ. ಮನೆಯಲ್ಲಿ ಒಬ್ಬಂಟಿಯಾಗಿ ಇರುತ್ತಿದ್ದ ಕಮಲಮ್ಮಳ ಬಳಿ ಬಂಗಾರ, ಅಲ್ಲ - ಸ್ವಲ್ಪ ಹಣ ಇತ್ತು ಎನ್ನಲಾಗಿದೆ. ಕಿವಿ ಕತ್ತರಿಸುವ ವೇಳೆ ಗೋಡೆಗೂ ರಕ್ತ ಚಿಮ್ಮಿದೆ. ರಕ್ತದ ಮಡುವಿನಲ್ಲಿ ಬಿದ್ದು ಕಮಲಮ್ಮ ಮೃತಪಟ್ಟಿದ್ದಾಳೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.


ಮಾಲ್ತೇಶ್ ಗೂ ನಮಗೂ ಯಾವುದೇ ದ್ವೇಷ ಇರಲಿಲ್ಲ. ಬಂಗಾರ ಕದಿಯೋಕೆ ಹೀಗೆ ಮಾಡಿರಬಹುದೆಂದು ಕಮಲಮ್ಮಳ ಪುತ್ರ ಪ್ರಭಯ್ಯ ಮತ್ತು ಸಂಬಂಧಿಕರು ಆರೋಪಿಸಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ಈ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಮಾಲ್ತೇಶ್ ಕುಡಿತದ ದಾಸನಾಗಿದ್ದ ಎನ್ನಲಾಗಿದೆ. ಮೂರು - ನಾಲ್ಕು ದಿನಗಳ ಹಿಂದೆ ದೊಡ್ಡಮ್ಮನ ಮನೆಯಲ್ಲಿ ಉಳಿದುಕೊಡಿದ್ದ.


ಇದನ್ನೂ ಓದಿ: Autos Confiscated: ಹಬ್ಬದ ದಿನದಲ್ಲಿ ದುಪ್ಪಟ್ಟು ಹಣ ವಸೂಲಿ; ಪೊಲೀಸರಿಂದ 312 ಆಟೋಗಳು ಸೀಜ್, ಡ್ರೈವರ್​ಗಳಿಗೂ ಕೊಟ್ರು ಶಾಕ್!


ಕುಡಿತಕ್ಕೆ ಅಗತ್ಯವಿರೋ ದುಡ್ಡಿಗಾಗಿ ಕಮಲಮ್ಮನ ಕಿವಿಯಲ್ಲಿದ್ದ ಓಲೆ ಕಿತ್ತಕೊಳ್ಳೋಕೆ ಯತ್ನಿಸಿದ್ದಾನೆ. ಓಲೆ ಬೇಗನೇ ಬಾರದೇ ಇದ್ದಾಗ ಕವಿ ಕೊಯ್ದು ಒಡವೆ ಕಿತ್ತುಕೊಂಡಿದ್ದಾನೆ. ನರಳಾಟ ನಡೆಸಿದ್ದ ಕಮಲಮ್ಮನನ್ನು ಕೊಂದು ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದಾನೆ. ಈ ಘಟನೆಯಿಂದಾಗಿ ಯಾರನ್ನು ನಂಬಬೇಕು, ಯಾರನ್ನು ಬಿಡಬೇಕು ಅನ್ನೋ ಅನುಮಾನಗಳು ಮೂಡುವಂತಾಗಿದೆ.


ಹಿಂಬಾಗಿಲಿನಿಂದ ನುಗ್ಗು ಮನೆಗಳ್ಳತನ


ಹಿಂಬಾಗಿಲ ಮೂಲಕ ಪ್ರವೇಶ ಮಾಡಿ ಮನೆಗಳ್ಳತನ ಮಾಡಿರೊ ಘಟನೆ ಹಳೇ ಹುಬ್ಬಳ್ಳಿ ಸಿಮ್ಲಾ ನಗರದಲ್ಲಿ ನಡೆದಿದೆ. ಮನೆಯ ಸೇಫ್ ಲಾಕರ್ ಮುರಿದು 122 ಗ್ರಾಂ ಚಿನ್ನಾಭರಣ ಮತ್ತು 82 ಗ್ರಾಂ ಬೆಳ್ಳಿ ಸಾಮಗ್ರಿ ಕಳುವು ಮಾಡಲಾಗಿದೆ. 4.93 ಲಕ್ಷ ರೂಪಾಯಿ  ಮೌಲ್ಯದ ಆಭರಣ ಕಳುವು ಮಾಡಲಾಗಿದೆ. ವರ್ತಕ ರೋಹಿತ ಅವರಿಗೆ ಸೇರಿದ ಮನೆಯಲ್ಲಿ ಕಳ್ಳತನವಾಗಿದೆ. ರೋಹಿತ್ ಕೆಲಸಕ್ಕೆ ಹೋಗಿದ್ದರೆ, ಪತ್ನಿ ಧಾರವಾಡದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ನೋಡಲು ತೆರಳಿದ್ದರು. ಸಮಯ ನೋಡಿಕೊಂಡು ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಇದನ್ನೂ ಓದಿ:  Shivamogga: ಹಿಂದೂ ಕಾರ್ಯಕರ್ತ ಹರ್ಷ ಸೋದರಿ ಅಶ್ವಿನಿ ವಿರುದ್ಧ FIR ದಾಖಲು 


ಮಕ್ಕಳೊಂದಿಗೆ ಮಹಿಳೆ ನಾಪತ್ತೆ


ಮಕ್ಕಳೊಂದಿಗೆ ಮಹಿಳೆ ನಾಪತ್ತೆಯಾಗಿರೋ ಘಟನೆ ಹಳೇ ಹುಬ್ಬಳ್ಳಿಯ ಹೆಗ್ಗೇರಿ ಭುವನೇಶ್ವರಿ ನಗರದಲ್ಲಿ ನಡೆದಿದೆ. ಗಂಡನೊಂದಿಗೆ ಜಗಳವಾಡಿದ ಮಹಿಳೆ ಮನೆ ಬಿಟ್ಟು ಹೋಗಿದ್ದಾಳೆ. ಹೋಗುವಾಗ ತನ್ನ 6 ವರ್ಷದ ಮಗ ಮತ್ತು 3 ವರ್ಷದ ಮಗಳನ್ನು ಮಹಿಳೆ ಕರೆದೊಯ್ದಿದ್ದಾಳೆ. ಮಹಿಳೆ ಮತ್ತು ಮಕ್ಕಳನ್ನು ಹುಡುಕಿಕೊಡುವಂತೆ ಮನವಿ ಮಾಡಿರೋ ಮಹಿಳೆಯ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಳೇ ಹುಬ್ಬಳ್ಳಿ ಠಾಣೆಯಲ್ಲಿ   ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Published by:ಪಾವನ ಎಚ್ ಎಸ್
First published: