• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Elections: ಶೆಟ್ಟರ್ ಜೊತೆ ಕಾಣಿಸಿಕೊಂಡ ಕಾರ್ಪೊರೇಟರ್ ಅರೆಸ್ಟ್, ಮಾಜಿ ಸಿಎಂ ಆಕ್ರೋಶ!

Karnataka Elections: ಶೆಟ್ಟರ್ ಜೊತೆ ಕಾಣಿಸಿಕೊಂಡ ಕಾರ್ಪೊರೇಟರ್ ಅರೆಸ್ಟ್, ಮಾಜಿ ಸಿಎಂ ಆಕ್ರೋಶ!

ಜಗದೀಶ್ ಶೆಟ್ಟರ್, ಮಾಜಿ ಸಿಎಂ

ಜಗದೀಶ್ ಶೆಟ್ಟರ್, ಮಾಜಿ ಸಿಎಂ

ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಶೆಟ್ಟರ್ ಜೊತೆ ಕಾಣಿಸಿಕೊಂಡರೆಂದು ಕಾರ್ಪೊರೇಟರ್​ನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರೋ ಮಾಜಿ ಸಿಎಂ, ಇದು ಬಹಳ ದಿನ ನಡೆಯಲ್ಲ ಎಂದು ಕಿಡಿಕಾರಿದ್ದಾರೆ.

  • Share this:

ಹುಬ್ಬಳ್ಳಿ(ಮಾ.22): ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಕಾಂಗ್ರೆಸ್ ಸೇರ್ಪಡೆಗೊಂಡ ನಂತರ ಅವರ ಜೊತೆ ಗುರುತಿಸಿಕೊಂಡವರೂ ಟಾರ್ಗೆಟ್ ಆಗಲಾರಂಭಿಸಿದ್ದಾರೆ. ನಾಮಪತ್ರ (Nomination) ಸಲ್ಲಿಕೆ ಸಂದರ್ಭದಲ್ಲಿ ಶೆಟ್ಟರ್ ಜೊತೆ ಗುರುತಿಸಿಕೊಂಡಿದ್ದ ಪಕ್ಷೇತರ ಕಾರ್ಪೊರೇಟರ್ ಚೇತನ್ ಹಿರೇಕೆರೂರನನ್ನು ಪೊಲೀಸರು ಬಂಧಿಸಿದ್ದಾರೆ. ಗೂಂಡಾ ಕಾಯ್ದೆಯಡಿ ಬಂಧಿಸಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿದ್ದು, ಯಾರೇ ಶೆಟ್ಟರ್ ಪರವಾಗಿ ನಿಂತ್ರೂ ಇದೇ ಗತಿ ಎಂದು ಪರೋಕ್ಷ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಇದಕ್ಕೆ ಜಗದೀಶ್ ಶೆಟ್ಟರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಗೂಂಡಾ ಕಾಯ್ದೆ ಅಡಿ ಬಂಧಿತನಾದ ಚೇತನ ಹಿರೇಕೆರೂರ್ ಮನೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭೇಟಿ ನೀಡಿದರು. ಹುಬ್ಬಳ್ಳಿಯ ಕೋಟೆಲಿಂಗೇಶ್ವರ ನಗರದಲ್ಲಿರೋ ಚೇತನ್ ಮನೆಗೆ ಭೇಟಿ ನೀಡಿದ ಶೆಟ್ಟರ್, ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿದರು. ಗುಂಡಾ ಕಾಯ್ದೆ ಅಡಿ ನಿನ್ನೆ ಚೇತನ್ ನನ್ನು ಬಂಧಿಸಲಾಗಿದೆ. ಜಗದೀಶ್ ಶೆಟ್ಟರ್ ನಾಮಪತ್ರ ಸಲ್ಲಿಕೆಯಲ್ಲಿ ಚೇತನ್ ಭಾಗಿಯಾಗಿದ್ದ. ಎರಡು ದಿನಗಳ ಹಿಂದೆ ನಾಮಪತ್ರ ಸಲ್ಲಿಕೆ ನಡೆದಿತ್ತು.


ಇದನ್ನೂ ಓದಿ: Ramadan: ಶನಿವಾರ ಬೆಂಗಳೂರಲ್ಲಿ ರಂಜಾನ್ ಸಂಭ್ರಮ, ಮೈಸೂರು ರಸ್ತೆಯಲ್ಲಿ ಸಂಚಾರ ಬದಲಾವಣೆ


ಈ ವೇಳೆ ಚೇತನ ಹಿರೇಕೆರೂರ್ ಶೆಟ್ಟರ್ ಪಕ್ಕವೇ ಇದ್ದ. ಇದರ ಬೆನ್ನಹಿಂದೆಯೇ ಪೊಲೀಸರು ಚೇತನ್ ಗೆ ನೋಟೀಸ್ ನೀಡಿದ್ದರು. ನಂತರ ಗುಂಡಾ ಕಾಯ್ದೆ ಅಡಿ ಚೇತನ್ ನನ್ನು ಪೊಲೀಸರು ಬಂಧಿಸಿದ್ದರು. ತಮ್ಮ ಆಪ್ತ ಚೇತನ ಬಂಧನವಾಗುತ್ತಲೇ ಚೇತನ ಮನೆಗೆ ಶೆಟ್ಟರ್ ಭೇಟಿ ನೀಡಿದ್ದಾರೆ. ಕುಟುಂಬಸ್ಥರೊಂದಿಗೆ ಚರ್ಚಿಸಿದ ಮಾಜಿ ಸಿಎಮ್ ಶೆಟ್ಟರ್ ಧೈರ್ಯ ತುಂಬಿದ್ದಾರೆ.


ಚೇತನ್ ಹಿರೇಕೆರೂರ್


ವಕೀಲರ ಸಭೆಯಲ್ಲಿಯೂ ಶೆಟ್ಟರ್ ಆಕ್ರೋಶ


ಮಾಜಿ ಸಿಎಂ ಜಗದೀಶ್ ಶೆಟ್ಟರ್ ಚುನಾವಣಾ ಪ್ರಚಾರ ಬಿರುಸುಗೊಳಿಸಿದ್ದಾರೆ. ಹುಬ್ಬಳ್ಳಿಯ ವಕೀಲರ ಸಂಘದ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಶೆಟ್ಟರ್, ಬಂಧನಕ್ಕೊಳಗಾಗಿರೋ ಪಾಲಿಕೆ ಸದಸ್ಯ ಚೇತನ ಹಿರೇಕೆರೂರ್ ಪರ ಬ್ಯಾಟಿಂಗ್ ನಡೆಸಿದರು. ಚೇತನ ಹಿರೇಕೆರೂರ್ ಗೆ ಒಳ್ಳೆ ನಾಗರಿಕನಾಗಿ ಬದುಕು ಎಂದಿದ್ದೆ. ಐದಾರು ತಿಂಗಳಿಂದ ಅವನು ಗುಂಡಾಗಿರಿ ಎಲ್ಲವನ್ನು ಬಿಟ್ಟಿದ್ದ. ಮೊದಲು ಚೇತನ ಎಲ್ಲಾ ಮಾಡ್ತಿದ್ದ. ಇತ್ತೀಚೆಗೆ ಅವನ ಮೇಲೆ ಯಾವದೇ ಕೇಸ್ ಇರಲಿಲ್ಲ, ರಾಜಕೀಯ ಗುಂಡಾಗಿರಿ ಎಲ್ಲ ಬಿಟ್ಟಿದ್ದ. ನಾನೇನು ಅವನನ್ನು ಕರೆದಿರಲಿಲ್ಲ. ಅವನೇ ನಾಮಪತ್ರ ಸಲ್ಲಿಸೋ ಮೆರವಣಿಗೆಯಲ್ಲಿ ಬಂದಿದ್ದ. ಮರುದಿನ ಆತನನ್ನು ಗುಂಡಾ ಕಾಯ್ದೆ ಅಡಿ ಅರೆಸ್ಟ್ ಮಾಡ್ತಾರೆ.


ಶೆಟ್ಟರ್ ಎಲ್ಲಿ ಗೆಲ್ತಾರೆ ಎಂದು ಅರೆಸ್ಟ್ ಮಾಡಿಸಿದ್ದಾರೆ. ಈ ಧಮನಕಾರಿ ನೀತಿ ನಡೆಯೋದಿಲ್ಲ. ಅರೆಸ್ಟ್ ಮಾಡೋ ಹಾಗಿದ್ರೆ, ಆರು ತಿಂಗಳ ಮೊದಲೇ ಮಾಡಬೇಕಿತ್ತು. ಇದಕ್ಕೆಲ್ಲ ಕಾರಣ ಸಂಸದರು, ಪರೋಕ್ಷವಾಗಿ ಜೋಶಿ ವಿರುದ್ದ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು. ಇದು ಒಳ್ಳೆದಲ್ಲ, ರಾಜಕೀಯ ಮಾಡೋಣ. ಅಧಿಕಾರ, ಸರ್ಕಾರ ಇರಬಹುದು, ಆದ್ರೆ ಹೀಗೆ ಮಾಡೋದು ಒಳ್ಳೆದಲ್ಲ. ಗುಂಡಾ ಕಾಯ್ದೆ ಹಾಕಿರೋದನ್ನ ನಾನು ಪ್ರಶ್ನೆ ಮಾಡ್ತೀನಿ.


ಇದನ್ನೂ ಓದಿ: Karnataka Elections 2023: 'ಬಿಜೆಪಿಯಲ್ಲಿ ನಾನು ಯಾರಿಗೂ ಪ್ರತಿಸ್ಪರ್ಧಿಯಲ್ಲ!' ಸಿಎಂ ಹುದ್ದೆ ಆಕಾಂಕ್ಷಿ ಸುದ್ದಿಗೆ ಬಿಎಲ್ ಸಂತೋಷ್ ಸ್ಪಷ್ಟನೆ


ನಾಲ್ಕೈದು ಜನ ರೌಡಿಗಳಿಗೆ ಟಿಕೆಟ್ ಕೊಟ್ಟಿದೀರಿ. ರೌಡಿಗಳ ಬಗ್ಗೆ ಬಿಜೆಪಿಗೆ ಮಾತಾಡೋಕೆ ನೈತಿಕತೆ ಇಲ್. ಮೋದಿ ಮಂಡ್ಯಕ್ಕೆ ಬಂದಾಗ ಫೈಟರ್ ರವಿಗೆ ಕೈ ಮುಗಿದಿದ್ದಾರೆ. ಇಲ್ಲಿ ಅರೆಸ್ಡ್ ಮಾಡಸ್ತೀರಾ ಎಂದು ಜೋಶಿ ವಿರುದ್ಧ ಗರಂ ಆದರು. ಇದರಿಂದ ನನಗೆ ವೇದನೆ ಆಗ್ತಿದೆ. ನಾನು ನನ್ನ ಜೀವನದಲ್ಲಿ ಗುಂಡಾಗಿರಿಗೆ ಸಪೋರ್ಟ್ ಮಾಡಿಲ್ಲ. ನಾನು ಆರು ಬಾರಿ ಬಿಜೆಪಿ ಶಾಸಕನಾಗಿ ಗೆದ್ದಿದ್ದೇನೆ. ಈ ಬಾರಿ ಕಾಂಗ್ರೆಸ್ ನಿಂದ ಗೆಲ್ಲಬೇಕು ಎಂದು ಹಣೆಬರಹದಲ್ಲಿ ಬರದಿರಬಹುದು. ಇದು ಅಗ್ನಿ ಪರೀಕ್ಷೆ ಕಾಲ, ನಾವೆಲ್ಲ ಎದುರಿಸೋಣ ಎಂದು ವಕೀಲರ ಸಂಘದ ಸಭೆಯಲ್ಲಿ ಜಗದೀಶ ಶೆಟ್ಟರ್ ತಿಳಿಸಿದರು.


ಕೊನೆ ಘಳಿಗೆವರೆಗೂ ಟನ್ಶನ್.. ಟೆನ್ಶನ್..


ನಾಮಪತ್ರ ಪರಿಶೀಲನೆ ವೇಳೆಯಲ್ಲಿ ಹುಬ್ಬಳ್ಳಿ – ಧಾರವಾಡ ಪೂರ್ವ ಕ್ಷೇತ್ರದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಢವ.. ಢವ.. ಶುರವಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಮತ್ತು ಬಿಜೆಪಿ ಅಭ್ಯರ್ಥಿ ನಾಮಿನೇಷನ್ ಪೆಂಡಿಂಗ್ ಇಟ್ಟಿದ್ದೇ ಇದಕ್ಕೆ ಕಾರಣವಾಗಿತ್ತು. ಬಿಜೆಪಿ ಅಭ್ಯರ್ಥಿ ಕ್ರಾಂತಿ ಕಿರಣ್ ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಆರೋಪ ಕೇಳಿ ಬಂದಿತ್ತು. ಕ್ರಾಂತಿ ಕಿರಣ್ ಸಲ್ಲಿಸಿರೊ ಎಸ್.ಸಿ. ಸರ್ಟಿಫಿಕೇಟ್ ಫೇಕ್ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿತ್ತು.
ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಅಬ್ಬಯ್ಯ ನಾಮಪತ್ರದ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿತ್ತು. ಲೋಕಾಯುಕ್ತ ಕೇಸ್ ಬಗ್ಗೆ ಅಫಿಡವಿಟ್ ನಲ್ಲಿ ಮಾಹಿತಿ ನೀಡಿಲ್ಲ ಎಂದು ಆಕ್ಷೇಪಿಸಲಾಗಿತ್ತು. ಹೀಗಾಗಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ ಚುನಾವಣಾಧಿಕಾರಿಗಳು, ಅಲ್ಲಿಂದ ಸ್ಪಷ್ಟನೆ ಬಂದ ನಂತರ ಇಬ್ಬರ ನಾಮಪತ್ರಗಳನ್ನು ಅಂಗೀಕರಿಸಿದ್ದಾರೆ. ಚುನಾವಣಾ ಆಯೋಗದ ಸೂಚನೆ ಯಂತೆ ಅಂಗೀಕರಿಸಲಾಗಿದ್ದು, ಇಬ್ಬರೂ ಅಭ್ಯರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

First published: