ಕುಮಾರಸ್ವಾಮಿಗೆ ಮತಿಭ್ರಮಣೆ ಆಗಿರಬೇಕು: ಬಿಜೆಪಿ ಬಿಟ್ಟು ಬರಲು 15 ಶಾಸಕರು ಸಿದ್ಧ ಎಂದ ಎಚ್​ಡಿಕೆಗೆ ರೇಣುಕಾಚಾರ್ಯ ​ತಿರುಗೇಟು

ಎಚ್ಡಿಕೆಗೆ ಎಲ್ಲೋ ಬುದ್ಧಿ ಭ್ರಮಣೆ ಆಗಿದೆ ಅನಿಸುತ್ತದೆ.‌ ಹಾಗಾಗಿ ಇಂಥ ಹೇಳಿಕೆ ಕೊಡುತ್ತಿದ್ದಾರೆ. ಬಿಜೆಪಿಯ ಶಾಸಕರೆಲ್ಲ ಶಿಸ್ತಿನ ಸಿಪಾಯಿಗಳು. ನಾವೆಲ್ಲ ಸಿಂಹದ ಮರಿಗಳಿದ್ದಂತೆ. ಜೆಡಿಎಸ್ ಮುಳುಗಿ ಹೋಗುತ್ತಿರೋ ಹಡಗು. ಆ ಪಕ್ಷಕ್ಕೆ ಯಾರಾದರೂ ಹೋಗ್ತಾರಾ? ಅಂತಾ ಪ್ರಶ್ನಿಸಿದರು

G Hareeshkumar | news18-kannada
Updated:January 6, 2020, 5:39 PM IST
ಕುಮಾರಸ್ವಾಮಿಗೆ ಮತಿಭ್ರಮಣೆ ಆಗಿರಬೇಕು: ಬಿಜೆಪಿ ಬಿಟ್ಟು ಬರಲು 15 ಶಾಸಕರು ಸಿದ್ಧ ಎಂದ ಎಚ್​ಡಿಕೆಗೆ ರೇಣುಕಾಚಾರ್ಯ ​ತಿರುಗೇಟು
ಎಂ.ಪಿ.ರೇಣುಕಾಚಾರ್ಯ-ಸಿಎಂ ಕುಮಾರಸ್ವಾಮಿ
  • Share this:
ಧಾರವಾಡ(ಜ.06): ಕುಮಾರಸ್ವಾಮಿ ಅವರು ಹಿಂದೆ ಯಡಿಯೂರಪ್ಪರಿಂದಲೇ 20 ತಿಂಗಳ ಅಧಿಕಾರ ಅನುಭವಿಸಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ಹೊರಗಿಡಬೇಕು ಅಂತಾ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದರು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ. 

ಬಿಜೆಪಿ ಬಿಟ್ಟು ಬರಲು 15 ಬಿಜೆಪಿ ಶಾಸಕರು ತಯಾರಿದ್ದಾರೆಂಬ ಎಚ್.ಡಿ‌‌.ಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಎಚ್ಡಿಕೆಗೆ ಎಲ್ಲೋ ಬುದ್ಧಿ ಭ್ರಮಣೆ ಆಗಿದೆ ಅನಿಸುತ್ತದೆ.‌ ಹಾಗಾಗಿ ಇಂಥ ಹೇಳಿಕೆ ಕೊಡುತ್ತಿದ್ದಾರೆ. ಬಿಜೆಪಿಯ ಶಾಸಕರೆಲ್ಲ ಶಿಸ್ತಿನ ಸಿಪಾಯಿಗಳು. ನಾವೆಲ್ಲ ಸಿಂಹದ ಮರಿಗಳಿದ್ದಂತೆ. ಜೆಡಿಎಸ್ ಮುಳುಗಿ ಹೋಗುತ್ತಿರೋ ಹಡಗು. ಆ ಪಕ್ಷಕ್ಕೆ ಯಾರಾದರೂ ಹೋಗ್ತಾರಾ? ಅಂತಾ ಪ್ರಶ್ನಿಸಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನೇನು ಮಾತನಾಡುವುದಿಲ್ಲ, ಆದರೆ ಬಿಜೆಪಿಗೆ ಯಾರೆಲ್ಲ ಬಂದಿದ್ದಾರೆಯೋ ಪಕ್ಷ ಅವರನ್ನು ಗೌರವಿಸುತ್ತದೆ ಎಂದರು.

ಬಿಜೆಪಿಯಲ್ಲಿ ನಿಮ್ಮ ಶಕ್ತಿ ಕುಂದುತ್ತಿದೆಯಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ರೇಣುಕಾಚಾರ್ಯ ಅಂದ್ರೆ ರೇಣುಕಾಚಾರ್ಯ. ಆನೆ ನಡೆದಿದ್ದೇ ದಾರಿ. ನಮ್ಮ ಕ್ಷೇತ್ರದ ಜನ ಹೀಗೆ ಇರು ಅಂದಿದ್ದಾರೆ. ನಾನು ಹಾಗೆಯೇ ಇರುತ್ತೇನೆ. ನಾನು ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುವೆ. ಮಾತನಾಡುವುದರಿಂದ ಪಕ್ಷಕ್ಕೆ ಮುಜುಗರ ಆಗಬಾರದು ಎಂದು ತಿಳಿಸಿದರು.

ಇದನ್ನೂ ಓದಿ : ಸಂಕ್ರಾಂತಿ ಬಳಿಕ ಸಚಿವ ಸಂಪುಟ ವಿಸ್ತರಣೆ; ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ

ಡಿಸಿಎಂ ಅನ್ನೋ ಸಹಿ ಸಂಗ್ರಹ ವಿಚಾರವಾಗಿ ಮಾತನಾಡಿದ ಅವರು, ನಾನು ಮಾತಾಡಿದರೆ ಮಾತಾಡಿದರು ಅಂತೀರಿ, ಬಿಟ್ಟರೆ ಮಾತಾಡಲಿಲ್ಲ ಅಂತೀರಿ. ಮಾಧ್ಯಮದವರಿಗೆ ಪ್ರಶ್ನಿಸಿದ ಶಾಸಕ ನಾನು ಎಲ್ಲಿ ಏನನ್ನು ಹೇಳಬೇಕೋ ಹೇಳುತ್ತೇನೆ. ಪಕ್ಷಕ್ಕೆ ಮುಜುಗರ ಆಗದಂತೆ ಮಾತಾಡುತ್ತೇನೆ ಎಂದು ತಿಳಿಸಿದರು.

 (ವರದಿ : ಮಂಜು ಯಡಳ್ಳಿ)
First published:January 6, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ