ಆಪರೇಷನ್​​ ಕಮಲದ ಭೀತಿ: ಶತ್ರು ಸಂಹಾರಕ್ಕೆ ಸಿಎಂ ತಾಯಿ ಶಾರದೆ ಮೊರೆ, ವಿಶೇಷ ಪೂಜೆ!

ಬಿಎಸ್​ವೈ ಕೇರಳಕ್ಕೆ ಭೇಟಿ ನೀಡಿ ವಾಪಸ್ಸು ಬಂದ ಮೇಲೆ ದೋಸ್ತಿ ಸರ್ಕಾರದ ಮೇಲೆ ಪ್ರಭಾವ ಬೀಳುತ್ತೆ ಅಂತಾ ಹೇಳಲಾಗುತ್ತಿದೆ. ಮಾಟ ಮಂತ್ರ ಅನ್ನೋ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ಇದೆಲ್ಲಾ ಬೆಳವಣಿಗೆ ಆದ ಬೆನ್ನಲ್ಲೇ ರೇವಣ್ಣ ಉಸ್ತುವಾರಿಯಲ್ಲಿ ಶ್ರತು ನಾಶ ಯಾಗ ನಡೆಯುತ್ತಿದ್ದು, ಏಟಿಗೆ ಎದುರೇಟು ಅನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

Ganesh Nachikethu
Updated:December 6, 2018, 10:49 PM IST
ಆಪರೇಷನ್​​ ಕಮಲದ ಭೀತಿ: ಶತ್ರು ಸಂಹಾರಕ್ಕೆ ಸಿಎಂ ತಾಯಿ ಶಾರದೆ ಮೊರೆ, ವಿಶೇಷ ಪೂಜೆ!
ಎಚ್​​ಡಿ ರೇವಣ್ಣ, ಎಚ್​ಡಿಕೆ
Ganesh Nachikethu
Updated: December 6, 2018, 10:49 PM IST
ವೀರೇಶ್ ಜಿ ಹೊಸೂರ್

ಚಿಕ್ಕಮಗಳೂರು(ಡಿ.06): ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಕೂತುಹಲಕಾರಿ ಬೆಳವಣಿಗೆಗಳು ಗರಿಗೆದರುತ್ತಿದೆ. ಹೇಗಾದರೂ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಬೇಕು ಎಂದು ಬಿಜೆಪಿಯವರು ತಂತ್ರ ಹೂಡುತ್ತಿದ್ದಾರೆ. ಇತ್ತ ದೋಸ್ತಿ ಸರ್ಕಾರದವೂ ಪ್ರತಿತಂತ್ರ ಹೂಡುತ್ತಿದ್ದಾರೆ. ಇದರ ಮಧ್ಯೆ ಇಷ್ಟೂ ದಿವಸ ಮಾತಿನ ಚಾಟಿ ಬೀಸುತ್ತಿದ್ದ ರಾಜ್ಯದ ನಾಯಕರು ಇದೀಗ ಟೆಂಪಲ್ ರನ್ ಮಾಡುವ ಮೂಲಕ ಮತ್ತಷ್ಟೂ ಕುತೂಹಲಕ್ಕೆ ಕಾರಣವಾಗಿದ್ದಾರೆ ಎನ್ನಲಾಗಿದೆ.

ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಎಂಟು ತಿಂಗಳಾದರೂ ಆಂತರಿಕ ಕಿತ್ತಾಟದ ಕಾರಂದಿಂದಲೇ ಯಾವುದೇ ರೀತಿಯ ಅಭಿವೃದ್ದಿಯಾಗಿಲ್ಲ ಎಂದು ಬಿಜೆಪಿ ಆರೋಪ ಮಾಡುತ್ತಲೇ ಬಂದಿದೆ. ಅಲ್ಲದೇ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನ ತಮ್ಮ ಪಕ್ಷಕ್ಕೆ ಸೆಳೆಯಲು ಆಪರೇಷನ್ ಕಮಲಕ್ಕೆ ಯತ್ನಿಸುತ್ತಲೇ ಇದೆ.  ಹೀಗಾಗಿ ಮೈತ್ರಿ ಸರ್ಕಾರಕ್ಕೆ ಆಪರೇಷನ್​​ ಕಮಲ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಈ ಮಧ್ಯೆ ತಮ್ಮ ಶಾಸಕರನ್ನು ಉಳಿಸಿಕೊಳ್ಳಲು ಕಾಂಗ್ರೆಸ್​-ಜೆಡಿಎಸ್​ನ ರಾಜ್ಯ ನಾಯಕರು ನಾನಾ ಕಸರತ್ತು ನಡೆಸುತ್ತಿದ್ದಾರೆ. ಯಾವುದೇ ಸಮಸ್ಯೆ ಇಲ್ಲದಂತೆ ವರ್ತಿಸುತ್ತಿದ್ಧಾರೆ. ಜೊತೆಗೆ ಸಿಎಂ ಕುಮಾರಸ್ವಾಮಿಯವರಿಗೆ ಸಂಪುಟ ಕಸರತ್ತು, ಆಪರೇಷನ್ ಕಮಲದ ಭೀತಿ, ಚಳಿಗಾಲದ ಅಧಿವೇಶನ ಎಲ್ಲವೂ ಮತ್ತಷ್ಟೂ ತಲೆ ನೋವು ತಂದಿಟ್ಟಿದೆ.

ಇದನ್ನೂ ಓದಿ: ತನಗೆ ಅಂಟಿರುವ ‘ಪರಾರಿ’ ಪಟ್ಟ ಕಳಚುವಂತೆ ಸುಪ್ರೀಂ ಕೋರ್ಟ್​ಗೆ ವಿಜಯ್ ಮಲ್ಯ ಮನವಿ

ಈ ಉದ್ದೇಶದಿಂದಲೇ ಮಾನಸಿಕ ಚೈತನ್ಯ ಹಾಗೂ ತಮ್ಮ ಬಗ್ಗೆ ಅಸಡ್ಡೆಯಿಂದ ಮಾತನಾಡುವ ಶತ್ರುಗಳ ಸಂಹಾರಕ್ಕಾಗಿ ತಾಯಿ ಶಾರದೆ ಮೊರೆ ಸಿಎಂ ಹೋಗಿರೋದು ಸಾಕಷ್ಟೂ ಕುತೂಹಲ ಮೂಡಿಸಿದೆ. ಹೌದು ಆಧ್ಯಾತ್ಮಿಕದಲ್ಲಿ ಸಹೋದರ ಹೆಚ್.ಡಿ ರೇವಣ್ಣ ಅವರ ಬಳಿ ಸಿಎಂ ಕುಮಾರಸ್ವಾಮಿ ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಆಗುತ್ತಿರುವ ಬೆಳವಣಿಗೆ ಕುರಿತು ತಮ್ಮ ನೋವನ್ನ ಹಂಚಿಕೊಂಡಿದ್ದಾರೆ.

ನಂತರ ಕೂಡಲೇ ಎಚ್ಚೆತ್ತ ಸಹೋದರ ರೇವಣ ಶತ್ರು ನಾಶ ಹಾಗೂ ಆರೋಗ್ಯ ವೃದ್ಧಿಗಾಗಿ ಕಳೆದ 22 ದಿನಗಳ ಹಿಂದೆಯೇ ಶೃಂಗೇರಿಯ ಸನ್ನಿದ್ದಾನದಲ್ಲಿ ಯಾಗ ಪ್ರಾರಂಭಿಸಿದ್ದಾರೆ. ಸದ್ಯ ಈ ಯಾಗ ಮುಗಿಯುವ ಹಂತಕ್ಕೆ ತಲುಪಿದ್ದು, ನಾಳೆ ಬೆಳಿಗ್ಗೆ 6 ಗಂಟೆ ವೇಳೆಯಲ್ಲಿ ನಡೆಯುವ ಯಾಗದ ಪೂರ್ಣಾಹುತಿ ಪೂಜೆಯಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭಾಗಿಯಾಗಲ್ಲಿದ್ದಾರೆ. ಇನ್ನು ಇಂದು ಸಂಜೆಯೇ ವಿಶೇಷ ಹೆಲಿಕಾಪ್ಟರ್ ಮೂಲಕ ಶೃಂಗೇರಿ ತಲುಪಿರುವ ಸಿಎಂ ಶೃಂಗೆರಿಯಲ್ಲೇ ವಾಸ್ತವ್ಯ ಮಾಡಿದ್ದಾರೆ.
Loading...

ಇನ್ನು ನಾಳೆಯ ಯಾಗದ ಪೂರ್ಣಾಹುತಿಯಲ್ಲಿ 30 ಕ್ಕೂ ಹೆಚ್ಚು ಪುರೋಹಿತರು ಭಾಗಿಯಾಗಲಿದ್ದಾರೆ. ದೇವೇಗೌಡರ ಕುಟುಂಬದ ಏಳಿಗೆಗಾಗಿ ಪ್ರಾರ್ಥನೆ ಮಾಡಲಿದ್ದಾರೆ. ಇದರ ಮಧ್ಯೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಕೇರಳದ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಮತ್ತಷ್ಟೂ ಕುತೂಹಲ ಮೂಡಿಸಿದ್ದಾರೆ.

ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗೆ ಚೆನ್ನೈನಲ್ಲಿ ಚಿಕಿತ್ಸೆ? ಆತಂಕದಲ್ಲಿ ಭಕ್ತರು

ಬಿಎಸ್​ವೈ ಕೇರಳಕ್ಕೆ ಭೇಟಿ ನೀಡಿ ವಾಪಸ್ಸು ಬಂದ ಮೇಲೆ ದೋಸ್ತಿ ಸರ್ಕಾರದ ಮೇಲೆ ಪ್ರಭಾವ ಬೀಳುತ್ತೆ ಅಂತಾ ಹೇಳಲಾಗುತ್ತಿದೆ. ಮಾಟ ಮಂತ್ರ ಅನ್ನೋ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ಇದೆಲ್ಲಾ ಬೆಳವಣಿಗೆ ಆದ ಬೆನ್ನಲ್ಲೇ ರೇವಣ್ಣ ಉಸ್ತುವಾರಿಯಲ್ಲಿ ಶ್ರತು ನಾಶ ಯಾಗ ನಡೆಯುತ್ತಿದ್ದು, ಏಟಿಗೆ ಎದುರೇಟು ಅನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಈ ಕುರಿತು ಹಾಸನದಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ರೇವಣ್ಣ ನಮಗೆ ತಾಯಿ ಶಾರದೆಯ ಆಶೀರ್ವಾದ ಇರೋವರೆಗೂ ಯಾರೇನು ಮಾಡಲು ಸಾಧ್ಯವಿಲ್ಲ. ಯಡಿಯೂರಪ್ಪನವರು ಮಾಟ ಮಂತ್ರ ಮಾಡಿಸಿದ್ರೆ ಅವರಿಗೆ ಉಲ್ಟಾ ಆಗುತ್ತೆ ಬಿಡಿ ಎಂದಿದ್ದಾರೆ. ಒಟ್ಟಾರೆ ನಿಯೋಜಿತ ಸಿಎಂ ಆದಾಗ ಒಮ್ಮೆ, ಸಿಎಂ ಆದಮೇಲೆ ಎರಡು ಬಾರಿ ಒಟ್ಟು ಮೂರು ಬಾರಿ ಸಿಎಂ ಕುಮಾರಸ್ವಾಮಿ ಶೃಂಗೇರಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

---------------
ಮಾಲ್ಡೀವ್ಸ್​ನಲ್ಲಿ ರಾಗಿಣಿ: ತುಪ್ಪದ ಹುಡುಗಿ ಜತೆಗಿರುವ ಆತ ಯಾರು..?
First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...