ಸಿದ್ದರಾಮಯ್ಯ ಹೊರಗಿಟ್ಟು ಮೈತ್ರಿಕೂಟ ರಚಿಸಲು ಎಚ್​​ಡಿಕೆ- ಡಿಕೆಶಿ ಭೇಟಿಯಾಗಿದ್ದಾರೆ ; ಮಹೇಶ್ ಟೆಂಗಿನಕಾಯಿ

ಕಾಗವಾಡದಲ್ಲಿ ಆರಂಭದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದವು. ಈಗ ಅದೆಲ್ಲವನ್ನು ಬಗೆಹರಿಸಲಾಗಿದೆ. ಶೇ. 90 ರಷ್ಟು ಕಾರ್ಯಕರ್ತರು ಬಿಜೆಪಿಯಲ್ಲೇ ಉಳಿದಿದ್ದಾರೆ. ಶೇ. 8 ರಿಂದ 10 ರಷ್ಟು ಕಾರ್ಯಕರ್ತರು ಮಾತ್ರ ಕಾಂಗ್ರೆಸ್​ ಅಭ್ಯರ್ಥಿ ರಾಜು ಕಾಗೆ ಜೊತೆ ಪಕ್ಷ ಬಿಟ್ಟು ಹೋಗಿದ್ದಾರೆ

news18-kannada
Updated:December 3, 2019, 7:49 PM IST
ಸಿದ್ದರಾಮಯ್ಯ ಹೊರಗಿಟ್ಟು ಮೈತ್ರಿಕೂಟ ರಚಿಸಲು ಎಚ್​​ಡಿಕೆ- ಡಿಕೆಶಿ ಭೇಟಿಯಾಗಿದ್ದಾರೆ ; ಮಹೇಶ್ ಟೆಂಗಿನಕಾಯಿ
ಮಹೇಶ್​ ಟೆಂಗಿನಕಾಯಿ
  • Share this:
ಬೆಳಗಾವಿ(ಡಿ.03) : ಸಿದ್ದರಾಮಯ್ಯ ಅವರನ್ನು ಹೊರಗಿಟ್ಟು ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಲು ಹೊರಟಿದ್ದಾರೆ. ಆ ಕಾರಣಕ್ಕಾಗಿಯೇ ಡಿಕೆಶಿ ಹಾಗೂ ಎಚ್​​ಡಿಕೆ ನಿನ್ನೆ ಭೇಟಿಯಾಗಿದ್ದು,  ಅದು ಆಕಸ್ಮಿಕ ಭೇಟಿಯೋ ಪೂರ್ವ ವ್ಯವಸ್ಥಿತ ಭೇಟಿಯೋ ಅವರೇ ಹೇಳಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ. 

ಅಥಣಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಯಾವುದೇ ಅಂಕಿ ಅಂಶಗಳಿಲ್ಲದೇ ಉಡಾಫೆಯಾಗಿ ಮಾತನಾಡುತ್ತಿದ್ದಾರೆ. ಕಾಗವಾಡದಲ್ಲಿ ಆರಂಭದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದವು. ಈಗ ಅದೆಲ್ಲವನ್ನು ಬಗೆಹರಿಸಲಾಗಿದೆ. ಶೇ. 90 ರಷ್ಟು ಕಾರ್ಯಕರ್ತರು ಬಿಜೆಪಿಯಲ್ಲೇ ಉಳಿದಿದ್ದಾರೆ. ಶೇ. 8 ರಿಂದ 10 ರಷ್ಟು ಕಾರ್ಯಕರ್ತರು ಮಾತ್ರ ಕಾಂಗ್ರೆಸ್​ ಅಭ್ಯರ್ಥಿ ರಾಜು ಕಾಗೆ ಜೊತೆ ಪಕ್ಷ ಬಿಟ್ಟು ಹೋಗಿದ್ದಾರೆ ಎಂದರು.

ಹಿರೇಕೆರೂರು, ರಾಣೆಬೆನ್ನೂರುಗಳಿಯೂ ಬಿಜೆಪಿ ಗೆಲ್ಲಲಿದೆ. ಅಥಣಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಪಾಟಾಕಿ ಠುಸ್ ಆಗಿದೆ. ಅಥಣಿಯಲ್ಲಿ ಲಕ್ಷ್ಮಣ ಸವದಿ ಮತ್ತು ಮಹೇಶ್ ಕುಮಟಳ್ಳಿ ರಾಮ-ಲಕ್ಷ್ಮಣರಂತೆ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

ಅಥಣಿ, ಕಾಗವಾಡ, ಗೋಕಾಕ್ ಮೂರೂ ಕಡೆ ಸೇರಿದಂತೆ ಎಲ್ಲ 15 ಮತಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿ 25 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ಅನರ್ಹ ಶಾಸಕರು ರಾಜ್ಯದ ಮತದಾರರನ್ನು ಮುಂಬೈನಲ್ಲಿ ಮಾರಾಟ ಮಾಡಿದ್ದಾರೆ; ಮಾಜಿ ಸಚಿವ ಎಂ ಬಿ ಪಾಟೀಲ್

ಅಥಣಿ ಮತ್ತು ಕಾಗವಾಡ ಮತಕ್ಷೇತ್ರಗಳಲ್ಲಿ ಸಿಎಂ ಬಿ.‌ಎಸ್. ಯಡಿಯೂರಪ್ಪ, ಡಿಸಿಎಂ ಲಕ್ಷ್ನಣ ಸವದಿ, ಗೋವಿಂದ ಕಾರಜೋಳ, ಸಚಿವರಾದ ಜಗದೀಶ್ ಶೆಟ್ಟರ್, ಕೆ.‌ಎಸ್. ಈಶ್ವರಪ್ಪ, ಸಿ. ಸಿ. ಪಾಟೀಲ್, ಶಶಿಕಲಾ ಜೊಲ್ಲೆ ಸೇರಿದಂತೆ ಬಿಜೆಪಿ ನಾಯಕರು ಅಥಣಿಯಲ್ಲಿ ಭರ್ಜರಿ ಪ್ರಚಾರ ನಡೆಸಿದರು.
 
First published:December 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ