23ರ ನಂತರ ಅನಂತ್ ಎಲ್ಲಿದ್ದೀಯಪ್ಪಾ ಎನ್ನಬೇಕಾಗುತ್ತದೆ: ಕುಮಟಾದಲ್ಲಿ ಸಿಎಂ ಕುಮಾರಸ್ವಾಮಿ ಟೀಕೆ

ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳ ಪೈಕಿ ಬಹುಪಾಲು ಸ್ಥಾನಗಳು ಮೈತ್ರಿ ಪಕ್ಷಗಳ ಪಾಲಾಗಲಿವೆ ಎಂದು ಸಿಎಂ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

G Hareeshkumar | news18
Updated:April 18, 2019, 3:44 PM IST
23ರ ನಂತರ ಅನಂತ್ ಎಲ್ಲಿದ್ದೀಯಪ್ಪಾ ಎನ್ನಬೇಕಾಗುತ್ತದೆ: ಕುಮಟಾದಲ್ಲಿ ಸಿಎಂ ಕುಮಾರಸ್ವಾಮಿ ಟೀಕೆ
ಸಿಎಂ ಕುಮಾರಸ್ವಾಮಿ
G Hareeshkumar | news18
Updated: April 18, 2019, 3:44 PM IST
ಕಾರವಾರ(ಏ. 18): ಉತ್ತರ ಕನ್ನಡ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಗೆಲ್ಲಲಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಎಲ್ಲಿದ್ದೀಯಪ್ಪಾ ಆನಂದ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಗುತ್ತಿರುವ ಟ್ರೋಲ್ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, 23ರ ನಂತರ ಎಲ್ಲಿದ್ದೀಯಪ್ಪ ಅನಂತಕುಮಾರ್ ಎನ್ನಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.

ಕುಮಟಾದಲ್ಲಿ ಆನಂದ್ ಅಸ್ನೋಟಿಕರ್ ಪರವಾಗಿ ಪ್ರಚಾರ ಮಾಡುತ್ತಿದ್ದ ಹೆಚ್​ಡಿಕೆ, ಮೊದಲ ಹಂತದಲ್ಲಿ ಚುನಾವಣೆ ನಡೆಯುವ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುತ್ತಾರೆಂದು ಭವಿಷ್ಯ ನುಡಿದರು.

ತಮ್ಮ ಪುತ್ರ ನಿಖಿಲ್ ಅವರ ವಿರುದ್ಧ ನಡೆಯುತ್ತಿರುವ ಟ್ರೋಲ್ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ತಮ್ಮ ಮಗ ಈ ಚುನಾವಣೆಯಲ್ಲಿ ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸುತ್ತಾನೆ. ಚುನಾವಣೆ ಮುಗಿದ ಬಳಿಕ ಇವರೆಲ್ಲಾ ಎಲ್ಲಿರುತ್ತಾರೋ ಗೊತ್ತಿಲ್ಲ ಎಂದು ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡರು.

ಮಾಧ್ಯಮಗಳಲ್ಲಿ ಕೇವಲ ಮಂಡ್ಯ ಮತ್ತು ಸುಮಲತಾ ಅವರನ್ನು ಮಾತ್ರ ತೋರಿಸಲಾಗುತ್ತಿದೆ. ಇದರಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಧ್ಯಮಗಳಲ್ಲಿ ಸ್ಥಾನ ಸಿಗದೇ ಕಳೆದುಹೋಗಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯ ಮಾಡಿದರು.

ಇದನ್ನೂ ಓದಿ : ಉತ್ತರ ಕನ್ನಡದಲ್ಲಿ ಹೆಗಡೆ ಸೋಲಿಸಲು ಹಿಂದುತ್ವ ಮಂತ್ರ ಜಪಿಸುತ್ತಿರುವ ಜೆಡಿಎಸ್ ಅಭ್ಯರ್ಥಿ

ನರೇಂದ್ರ ಮೋದಿ ಅವರನ್ನು ನೋಡಿ ಮತ ಹಾಕಿ ಎಂದು ಬಿಜೆಪಿ ಅಭ್ಯರ್ಥಿಗಳು ಮಾಡಿಕೊಳ್ಳುತ್ತಿರುವ ಮನವಿಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಬಿಜೆಪಿಯವರು ಮೋದಿ ಫೋಟೋ ಇಟ್ಟುಕೊಂಡೇ ಮತ ಕೇಳಲು ಹೋಗಬೇಕು. ಕಳೆದೆರಡು ತಿಂಗಳಿಂದ ಮೋದಿ ಅವರನ್ನೇ ಬಿಜೆಪಿಯವರು ಮೆರೆಸುತ್ತಿದ್ದಾರೆ. ಆದರೆ, ಚುನಾವಣೆಯಲ್ಲಿ ಜನರು ಇವರಿಗೆ ಪಾಠ ಕಲಿಸುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು.
Loading...

ಇದಕ್ಕೂ ಮುನ್ನ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಅವರ ಪರ ಪ್ರಚಾರಕ್ಕೆ ಕುಮಟಾದ ಕೊಂಕಣ ಮೈದಾನಕ್ಕೆ ಸಿಎಂ ಅವರು ಹೆಲಿಕಾಪ್ಟರ್​ನಿಂದ ಆಗಮಿಸಿ ಬಂದಿಳಿದರು. ಈ ವೇಳೆ, ಹೆಲಿಕಾಪ್ಟರ್​ನಲ್ಲಿಟ್ಟ ಬ್ಯಾಗನ್ನು ಸಿಬ್ಬಂದಿಯವರು ಪರಿಶೀಲಿಸಿದರು. 
First published:April 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ