ಹೂ ಮಾರುತ್ತಿದ್ದ ಪುಟ್ಟ ಬಾಲಕಿಯ ಕಷ್ಟಕ್ಕೆ ಮಿಡಿದ ಎಚ್​ಡಿಕೆ; ವಿದ್ಯಾಭ್ಯಾಸಕ್ಕೆ ನೆರವು ನೀಡುವ ಭರವಸೆ

news18
Updated:August 29, 2018, 3:17 PM IST
ಹೂ ಮಾರುತ್ತಿದ್ದ ಪುಟ್ಟ ಬಾಲಕಿಯ ಕಷ್ಟಕ್ಕೆ ಮಿಡಿದ ಎಚ್​ಡಿಕೆ; ವಿದ್ಯಾಭ್ಯಾಸಕ್ಕೆ ನೆರವು ನೀಡುವ ಭರವಸೆ
news18
Updated: August 29, 2018, 3:17 PM IST
-ರಾಘವೇಂದ್ರ ಗಂಜಾಂ, ನ್ಯೂಸ್​ 18 ಕನ್ನಡ

ಮಂಡ್ಯ,(ಆ.29): ಹೂ ಮಾರುತ್ತಿದ್ದ ಪುಟ್ಟ ಬಾಲಕಿಯ ಕಷ್ಟ ಕಂಡು‌ ಸಿಎಂ ಕುಮಾರಸ್ವಾಮಿ ಹೃದಯ ಮಿಡಿದಿದೆ.

ಕೆ.ಆರ್.ಎಸ್​.ನಿಂದ ರಾಮನಗರಕ್ಕೆ ಹೋಗುವ ಮಾರ್ಗಮಧ್ಯದಲ್ಲಿ  ರಸ್ತೆ ಬದಿ ಹೂ ಮಾರುತ್ತಾ  ನಿಂತಿದ್ದ ಶಾಬಾಬ್ತಾಜ್ ಎಂಬ ಪುಟ್ಟ ಬಾಲಕಿ ಕುಮಾರಸ್ವಾಮಿ ಕಣ್ಣಿಗೆ ಬಿದ್ದಿದ್ದಾಳೆ. ತಕ್ಷಣವೇ ಕಾರು ನಿಲ್ಲಿಸಿದ ಎಚ್​ಡಿಕೆ, ಹೂ ಮಾರುತ್ತಿದ್ದ ಬಾಲಕಿಯನ್ನು ಹತ್ತಿರ ಕರೆದು ಆಕೆಯ ಕಷ್ಟ ಕೇಳಿದ್ದಾರೆ.  ಆ ಪುಟ್ಟ ಬಾಲಕಿ ತನ್ನ ಮನೆಯ ಬಡತನ ಮತ್ತು ಸಂಕಷ್ಟವನ್ನು ಹೇಳಿಕೊಂಡಿದ್ದಾಳೆ. ಜೊತೆಗೆ ಗ್ರಾಮಸ್ಥರು ಸಹ ಆ ಬಾಲಕಿಯ ಕುಟುಂಬದ ಕಡುಬಡತನವನ್ನು ವಿವರಿಸಿದ್ದಾರೆ. ಇದನ್ನು ಕೇಳಿದ ಸಿಎಂ ಕುಮಾರಸ್ವಾಮಿ ಮನಸ್ಸು ಮರಗಿದೆ. ಆಗ ಅಲ್ಲಿದ್ದ ಗ್ರಾಮಸ್ಥರಿಗೆ  ಬಾಲಕಿಯ ತಂದೆ ತಕ್ಷಣವೇ ತನ್ನನ್ನು ಕಾಣುವಂತೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಬಾಲಕಿಯ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಭರವಸೆ ನೀಡಿ ರಾಮನಗರಕ್ಕೆ ತೆರಳಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಬಳಿ ಈ ಘಟನೆ ನಡೆದಿದೆ.

ಸಿಎಂ ಸಹೃದಯ ಕಂಡು ಗ್ರಾಮಸ್ಥರು ಮೂಕವಿಸ್ಮಿತರಾಗಿದ್ದಾರೆ. ಸಿಎಂ ಕುಮಾರಸ್ವಾಮಿ ಸಹಾಯ ಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಸಹ ಕಷ್ಟ ಎಂದು ಬಂದ ಅದೆಷ್ಟೋ ಬಡವರ ಕಣ್ಣೀರು ಒರೆಸಿದ್ದಾರೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...