• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬಿಜೆಪಿ ಉಪಾಧ್ಯಕ್ಷ ಆಗಲು ಆತ ಅನ್​ಫಿಟ್​; ಲಿಂಬಾವಳಿ ವಿರುದ್ಧ ಏಕವಚನದಲ್ಲಿ ಹರಿಹಾಯ್ದ ರೇವಣ್ಣ

ಬಿಜೆಪಿ ಉಪಾಧ್ಯಕ್ಷ ಆಗಲು ಆತ ಅನ್​ಫಿಟ್​; ಲಿಂಬಾವಳಿ ವಿರುದ್ಧ ಏಕವಚನದಲ್ಲಿ ಹರಿಹಾಯ್ದ ರೇವಣ್ಣ

ಮಾಜಿ ಸಚಿವ ಹೆಚ್. ಡಿ. ರೇವಣ್ಣ.

ಮಾಜಿ ಸಚಿವ ಹೆಚ್. ಡಿ. ರೇವಣ್ಣ.

ನಮ್ಮ ಪಕ್ಷ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಈ ರೀತಿ ಸುಳ್ಳು ಸದ್ದಿ ಹಬ್ಬಿಸುತ್ತಿರುವ ವಿರುದ್ಧ ಬಿಜೆಪಿ ವರಿಷ್ಠರು ಕ್ರಮ ಕೈಗೊಳ್ಳಬೇಕು

  • Share this:

ಹಾಸನ (ಡಿ. 21): ಜೆಡಿಎಸ್​ ಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸುವ ಕುರಿತು ಸುದ್ದಿ ಸಿಕ್ಕಿದೆ ಎಂಬ ಬಿಜೆಪಿ ನಾಯಕ ಅರವಿಂದ್​ ಲಿಂಬಾವಳಿ ಹೇಳಿಕೆ ವಿರುದ್ಧ ಜೆಡಿಎಸ್​ ನಾಯಕ ಎಚ್​ ಡಿ ರೇವಣ್ಣ ಹರಿಹಾಯ್ದಿದ್ದಾರೆ. ಬಿಜೆಪಿ ಉಪಾಧ್ಯಕ್ಷರಾಗಿ ಅರವಿಂದ್​ ಲಿಂಬಾವಳಿ ಈ ರೀತಿ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ. ಜೆಡಿಎಸ್​ ಮುಗಿಸಬೇಕು ಎಂದು ಕಾಂಗ್ರೆಸ್​ ಮತ್ತು ಬಿಜೆಪಿ ಈ ರೀತಿ ಅಪಪ್ರಚಾರ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಜೆಡಿಎಸ್​ ಪಕ್ಷನ್ನು ಬಿಜೆಪಿ ಜೊತೆ ವಿಲೀನಗೊಳಿಸುವುದಿಲ್ಲ. ಈ ಬಗ್ಗೆ ಈಗಾಗಲೇ ನಾನು, ದೇವೇಗೌಡರು ಹಾಗೂ ಕುಮಾರಸ್ವಾಮಿ ಮಾತನಾಡಿದ್ದೇವೆ. ಯಾವುದೇ ಕಾರಣಕ್ಕೂ ನಮ್ಮ ಪಕ್ಷ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಈ ರೀತಿ ಸುಳ್ಳು ಸದ್ದಿ ಹಬ್ಬಿಸುತ್ತಿರುವ ವಿರುದ್ಧ ಬಿಜೆಪಿ ವರಿಷ್ಠರು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಇದೇ ವೇಳೆ ಲಿಂಬಾvಳಿ ವಿರುದ್ಧ ಏಕ ವಚನದಲ್ಲಿ ಹರಿಹಾಯ್ದ ಮಾಜಿ ಸಚಿವರು, ಅವನು ಬಿಜೆಪಿ ಉಪಾಧ್ಯಕ್ಷನಾಗಲು ಅನ್​ಫಿಟ್​ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಪಕ್ಷವೊಂದು ಈ ರೀತಿ ಅಪಪ್ರಚಾರ ನಡೆಸುತ್ತಿರುವುದು ಶೋಭೆ ತರುವುದಿಲ್ಲ. ಗ್ರಾಮ ಪಂಚಾಯತಿ ಚುನಾವಣೆ ಸಮಯದಲ್ಲಿ ಈ ರೀತಿಯ ಅಪಪ್ರಚಾರ ನಡೆಸುವುದು ಸರಿಯಲ್ಲ ಎಂದರು.


ಯಾವಾಗಲೂ ದೇವೇಗೌಡರ ಕಟುಂಬ ಯಾವುದೇ ಸರ್ಕಾರ ಬಂದರೂ ಕಿರುಕುಳ ನೀಡುತ್ತಾರೆ ಎಂದು ಆರೋಪಿಸುತ್ತಾರೆ. ಇದೇ ಕಾರಣಕ್ಕೆ ಸರ್ಕಾರಕ್ಕೆ ಯಾಕೆ ತೊಂದರೆ ಕೊಡುವುದು ಎಂದು ಸುಮ್ಮನಿದ್ದೇವೆ. ಹಾಗೇಂದ ಮಾತ್ರಕ್ಕೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದು ಅರ್ಥವಲ್ಲ. 2023 ಕ್ಕೆ ನಾವು ಏನು ಎಂದು ತೋರಿಸುತ್ತೇವೆ. ನಾವು ಹೆದರಿಕೊಂಡು ಎಲ್ಲಿಯೂ ಓಡಿಹೋಗೊಲ್ಲ. ನಮ್ಮ ಕಾರ್ಯಕರ್ತರು ಇನ್ನೂ ರಾಜ್ಯದಲ್ಲಿದ್ದಾರೆ ಎಂದರು.


ದ್ವೇಷ ರಾಜಕಾರಣ ಬಿಡಿ:


ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 16 ತಿಂಗಳು ಕಳೆದಿದೆ. ಈ ಸರ್ಕಾರ ಬಂದ ಮೇಲೆ ಹಾಸನ ಜಿಲ್ಲೆಯ ಎಲ್ಲಾ ಕಾಮಗಾರಿಗಳನ್ನ ತಡೆ ಹಿಡಿದಿದ್ದಾರೆ.  ಹಾಸನದ ಕೆಲಸಗಳು ಸ್ಥಗಿತಗೊಂಡಿವೆ. ಪ್ರತಿಯೊಂದಕ್ಕೂ ಪರ್ಸೆಂಟೇಜ್ ಕೇಳುತ್ತಿದ್ದಾರೆ. ಕೊನೆಗಾಲದಲ್ಲಿ ದ್ವೇಪ ರಾಜಕಾರಣ ಬಿಟ್ಟು ಕೆಲಸ ಮಾಡಿ ಎಂದರು.


ಇದನ್ನು ಓದಿ: ಚಾಮುಂಡೇಶ್ವರಿಯಲ್ಲಿ ಯಾವುದೇ ಒಳ ಒಪ್ಪಂದವಾಗಿಲ್ಲ- ಸಿದ್ದರಾಮಯ್ಯ ಮನಸ್ಸಿನ ನೋವು ಹೇಳಿದ್ದಾರಷ್ಟೆ : ಶಾಸಕ ಜಿ ಟಿ ದೇವೇಗೌಡ


ಹೋಗುವವರು ಹೋಗಲಿ:


ಗುಬ್ಬಿ ಶಾಸಕ ಶ್ರೀನಿವಾಸ್​ ಬಿಜೆಪಿ ಸೇರಲು ತೆರೆಮರೆ ಪ್ರಯತ್ನ ನಡೆಸಿದ್ದಾರೆ ಎಂಬ ಹೇಳಿಕೆಗೆ ಉತ್ತರಿಸಿದ ಅವರು, ಹೋಗುವ ಶಾಸಕರು ಹೋಗಲಿ. ಅವರನ್ನು ನಾನಾಗಲಿ, ಕುಮಾರಸ್ವಾಮಿಯಾಗಲಿ ಹಿಡಿದುಕೊಂಡಿಲ್ಲ. ಅವರಿಗೆ ಅನುಕೂಲವಿರುವ ಕಡೆ ಹೋಗಲಿ. ನಮ್ಮ ತಕರಾರಿಲ್ಲ. ಶಾಸಕರು ಹೋದ ಮಾತ್ರಕ್ಕೆ ಪಕ್ಷವೇ ವಿಲೀನವಾಗುವುದಿಲ್ಲ. ಕುಮಾರಸ್ವಾಮಿ ಎಲ್ಲೂ ಹೋಗಲ್ಲ ಎಂದು ಮತ್ತೊಮ್ಮೆ ತಿಳಿಸಿದರು.


ಸಿದ್ದರಾಮಯ್ಯ ಬಗ್ಗೆ ಮಾತನಾಡುವುದಿಲ್ಲ


ಈಗಾಗಲೇ ಸಿದ್ದರಾಮಯ್ಯ ಜೆಡಿಎಸ್​ ಅನ್ನು ಬಿಜೆಪಿ ಬಿ ಟೀಮ್​ ಎಂದು ಹೇಳಿದೆ ಎಂಬ ವಿಚಾರ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಬಿ ಟೀಮ್, ಎ ಟೀಮ್ ಯಾವುದೂ ಇಲ್ಲ ಸಿದ್ದರಾಮಯ್ಯರ ಬಗ್ಗೆ ನನಗೆ ಗೌರವ ಇದೆ. ಸಿದ್ದರಾಮಯ್ಯರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.

Published by:Seema R
First published: