ಜಿಲ್ಲೆಗೆ ತಾರತಮ್ಯ: ಮಂಗಳವಾರ ಸಿಎಂ ಮನೆ ಮುಂದೆ HD Revanna ಧರಣಿ

ಈ ರಾಜ್ಯದಲ್ಲಿ ಶಿಕ್ಷಣ ಇಲಾಖೆ ಖಾಸಗಿಯವರ ಹಿಡಿತದಲ್ಲಿದೆ. ಸರ್ಕಾರ ಖಾಸಗಿಯವರ ಗುಲಾಮರಂತೆ ವರ್ತಿಸುತ್ತಿದೆ. ಸರ್ಕಾರಕ್ಕೆ ನಾಚಿಕೆಯಾಗಬೇಕು,

ಹೆಚ್ ಡಿ ರೇವಣ್ಣ

ಹೆಚ್ ಡಿ ರೇವಣ್ಣ

 • Share this:
  ಹಾಸನ (ಜ. 14): ಸರ್ಕಾರ ಶಿಕ್ಷಣ ಇಲಾಖೆಯಲ್ಲಿ ರಾಜಕೀಯ ಮಾಡುತ್ತಿದೆ. ಬಿಜೆಪಿ ಸರ್ಕಾರದ (BJP Govt) ಈ ತಾರತಮ್ಯ ಖಂಡಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆ ಮುಂದೆ ಧರಣಿ ನಡೆಸುತ್ತೇನೆ ಎಂದು ಜೆಡಿಎಸ್​ ಶಾಸಕ ಎಚ್​ಡಿ ರೇವಣ್ಣ (HD Revanna) ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಳೆ ನರಸೀಪುರ ಮಹಿಳಾ ಕಾಲೇಜಿನಲ್ಲಿ ಎಂ.ಎಸ್ಸಿ. ಫುಡ್ ಅಂಡ್ ನ್ಯೂರ್ಟಿಷಿಯನ್ ಕೋರ್ಸ್ ಪದವಿ ತೆರೆಯಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಎಂಎಸ್​ಸಿ ಪದವಿ ಮಂಜೂರಾತಿ ಶಿಕ್ಷಣ ಇಲಾಖೆ ಕಾರ್ಯದರ್ಶಿ ಒಪ್ಪಿಗೆ ನೀಡಿದ್ದಾರೆ. ಆದರೆ, ಕಾಲೇಜಿನಲ್ಲಿ ಕೋರ್ಸ್​ ಆರಂಭಿಸಲು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅಡ್ಡಗಾಲು ಹಾಕುತ್ತಿದ್ದಾರೆ. ಸರ್ಕಾರದ ಈ ಧೋರಣೆ ವಿರೋಧಿಸಿ ಮುಖ್ಯಮಂತ್ರಿಗಳ ಮನೆ ಮುಂದೆ ಮಂಗಳವಾರ ಪ್ರತಿಭಟನೆ ನಡೆಸುತ್ತೇನೆ ಎಂದಿದ್ದಾರೆ.

  ನನ್ನ ಪ್ರಾಣ ಹೋದರೂ ಪ್ರತಿಭಟನೆ

  ನನ್ನ ಜನರಿಗೆ ಅನ್ಯಾಯವಾದರೆ ಸುಮ್ಮನೆ ಕೂರಲ್ಲ. ಕರೆದರೆ ನಮ್ಮ ಶಾಸಕರು ಬರುತ್ತಾರೆ, ಆದರೆ ಕೊರೋನಾ ಇದೆ ಎಂದು ನಾನು ಏಕಾಂಗಿ ಪ್ರತಿಭಟನೆಗೆ ಮುಂದಾಗಿದ್ದೇನೆ. ಒಬ್ಬನೇ ಮಂಗಳವಾರ 11 ಗಂಟೆಗೆ ಸಿಎಂ ಮನೆ ಎದುರು ಧರಣಿ ನಡೆಸುತ್ತೇನೆ. ನನ್ನ ಪ್ರಾಣ ಹೋದರು ಸರಿ ನಾನು ಹೋರಾಡುತ್ತೇನೆ. ನನ್ನನ್ನು ಪೊಲೀಸರು ಬಂಧಿಸುತ್ತಾರೋ ಬಂಧಿಸಲಿ.

  ಖಾಸಗಿಯವರ ಗುಲಾಮರಂತೆ ವರ್ತನೆ

  ಈ ರಾಜ್ಯದಲ್ಲಿ ಶಿಕ್ಷಣ ಇಲಾಖೆ ಖಾಸಗಿಯವರ ಹಿಡಿತದಲ್ಲಿದೆ. ಸರ್ಕಾರ ಖಾಸಗಿಯವರ ಗುಲಾಮರಂತೆ ವರ್ತಿಸುತ್ತಿದೆ. ಸರ್ಕಾರಕ್ಕೆ ನಾಚಿಕೆಯಾಗಬೇಕು, ಬಡವರ ಮಕ್ಕಳ‌ ವಿದ್ಯಾಭ್ಯಾಸದ‌ ಮೇಲೆ ಕಲ್ಲು ಹಾಕುತ್ತಿದ್ದಾರೆ. ಇಂತಹ ಕೀಳುಮಟ್ಟದ ರಾಜಕೀಯ ಮಾಡಬಾರದು. ಮಾನ ಮರ್ಯಾದೆ ಇದೆಯಾ ಇವರಿಗೆ ಎಂದು ವಾಗ್ದಾಳಿ ನಡೆಸಿದರು
  ಜಿಲ್ಲೆಗೆ ಅನ್ಯಾಯ ಆದಾಗ ನೀವು ಎದ್ದೇಳಬೇಕು ಎಂದು ನಾನು ಜೆಡಿಎಸ್​ ವರಿಷ್ಠ ದೇವೇಗೌಡ ಅವರಿಗೆ ಕೋರುತ್ತೆನೆ. ಜನರು ನಿಮಗೆ ಅಧಿಕಾರ ನೀಡಿದಾರೆ, ಹಾಗಾಗಿ ನೀವು ಜನರ ಪರವಾಗಿ ಸಿಡಿದೇಳಬೇಕು ಎಂದು ಮನವಿ ಮಾಡಿದರು.

  ಇದನ್ನು ಓದಿ: ಗಂಡನ ಡಾಬಾಗೆ ಬೆಂಕಿ ಹಚ್ಚಲು ಸುಪಾರಿ ನೀಡಿ ಅಮಾಯಕ ಜೀವ ಬಲಿ ಪಡೆದ ಪತ್ನಿ

  ಶಿಕ್ಷಣ ಸಚಿವರಿಗೆ ನಾಚಿಕೆ ಆಗಬೇಕು

  ರಾಜ್ಯ ಲೂಟಿಕೋರರ ಕೈ ಸೇರಿದೆ. ಇವರನ್ನು ಶಿಕ್ಷಣ ಸಚಿವರು ಎನ್ನೋದಕ್ಕೆ ನಾಚಿಕೆ ಆಗಬೇಕು. ಮುಂದಿನ ಚುನಾವಣೆಯಲ್ಲಿ ಏನಾಗುತ್ತದೆ ಎಂಬುದು ತಿಳಿಯಲಿದೆ. ನಾನು ಕೂಡ ಅಲ್ಲಿಯವರೆಗೂ ಇರುತ್ತೇನೆ. ಇಂತಹ ಶಿಕ್ಷಣ ಸಚಿವರಿಂದ ಸರ್ಕಾರ ಕ್ಕೂ ಕೆಟ್ಟ ಹೆಸರು ಬರುತ್ತಿದೆ ಎಂದು ಕಿಡಿಕಾರಿದರು.

  ಇದನ್ನು ಓದಿ: ಜ.31ರಿಂದ Budget Session ಆರಂಭ; ಫೆ. 1ಕ್ಕೆ ಬಜೆಟ್​ ಮಂಡನೆ

  ಈಗಾಗಲೇ ಶಿಕ್ಷಣ ಇಲಾಖೆ ಖಾಸಗಿಯವರ ಕೈಲಿ ಸೇರಿಹೋಗಿದೆ. ಮುಖ್ಯ ಮಂತ್ರಿಗಳು ಇಂತಹವರನ್ನ ಜೊತೆಯಲ್ಲಿ ಇಟ್ಟುಕೊಳ್ಳಬಾರದು ಎಂದು ಇದೇ ವೇಳೆ ಕಿವಿ ಮಾತು ಹೇಳಿದರು.

  ಯಡಿಯೂರಪ್ಪನ ಬಂಡಾವಳ ಬಿಚ್ಚಿಡುತ್ತೇನೆ

  ಕಾಂಗ್ರೆಸ್​, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷ ಗಳು ಜೆಡಿಎಸ್ ಮುಗಿದು ಹೋಗಿದೆ ಎಂದು ತಿಳಿದಿದ್ದಾರೆ. ಆದರೆ, ನಮ್ಮ ಹೋರಾಟ ನಿರಂತರ. ನಾವು ಎರಡೂ ಪಕ್ಷಗಳ ವಿರುದ್ಧ ಹೋರಾಟ ಮಾಡುತ್ತೇವೆ. ಸರ್ಕಾರದ ಬಳಿ ಹಣವಿಲ್ಲ ಎಂದರೇ ನಾನು ನನ್ನ ಸಂಬಳದಲ್ಲಿ ಕಾಲೇಜಿಗೆ ಮೂಲಭೂತ ಸೌಕರ್ಯ ಮಾಡಿಕೊಡುತ್ತೇನೆ. ಕ್ಷೇತ್ರದಲ್ಲಿ ಒಂದು ಕಾಲೇಜು ಮಾಡಲು ಹೋದರೆ ಅದಕ್ಕೂ ವಿರೋಧ ಮಾಡುತ್ತಾರೆ ಎಂದು ಗುಡುಗಿದ ರೇವಣ್ಣ ಶೀಘ್ರದಲ್ಲೇ ಯಡಿಯೂರಪ್ಪ ಅವರ ಬಂಡವಾಳ ಬಿಚ್ಚಿ ಇಡುವ ಕಾಲ ಬರಲಿದೆ ಎಂದು ಎಚ್ಚರಿಕೆ ನೀಡಿದರು
  Published by:Seema R
  First published: