ಮಂಡ್ಯ (ಜು.31): ನಾಗಮಂಗಲ ಕ್ಷೇತ್ರದಲ್ಲಿ ಜೆಡಿಎಸ್ ಬೃಹತ್ ಸಮಾವೇಶ (JDS Mega Convention ) ನಡೆಸಿದೆ. ವಿಧಾನಸಭೆ ಚುನಾವಣೆ (Assembly Election) ಹತ್ತಿರ ಬರುತ್ತಿದ್ದಂತೆ ಜೆಡಿಎಸ್ ಪಕ್ಷ ಸಂಘಟನೆ ಕಾರ್ಯವನ್ನು ಚುರುಕುಗೊಳಿಸಿದೆ. ಮತ್ತೆ ಭದ್ರಕೋಟೆಯಲ್ಲಿ ಹಿಡಿತ ಸಾಧಿಸಲು ಕಾರ್ಯತಂತ್ರ ರೂಪಿಸುತ್ತಿದ್ದು, ಬೃಹತ್ ಸಮಾವೇಶದ ಮೂಲಕ ಕಾರ್ಯಕರ್ತರನ್ನು ಸೆಳೆಯಲು ಮುಂದಾಗಿದೆ. ಸಮಾವೇಶದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಭಾಷಣ ಮಾಡಿದ್ರು. ಈ ಭಾಷಣವನ್ನು ಹೆಚ್.ಡಿ ರೇವಣ್ಣ (H.D Revanna) ಅವರು ಮನೆಯಲ್ಲಿಯೇ ವೀಕ್ಷಣೆ ಮಾಡಿದ್ದಾರೆ. ಮನೆಯಲ್ಲಿ ಕುಳಿತು ದೇವೇಗೌಡರು (Deve Gowda) ಭಾಷಣ ಆಲಿಸಿದ ದೃಶ್ಯವನ್ನು ಸಮಾವೇಶದ ವೇದಿಕೆಯಲ್ಲಿ ಕಂಡು ಶಾಸಕ ಹೆಚ್.ಡಿ ರೇವಣ್ಣ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಕಾರ್ಯಕ್ರಮಕ್ಕೆ ತಂದೆ ಬರಲಾಗಲಿಲ್ಲ ಎಂದು ರೇವಣ್ಣ ಭಾವುಕರಾದ್ರು.
ಮಂಡ್ಯಗೆ HDK ಅಪಾರ ಕೊಡುಗೆ ನೀಡಿದ್ದಾರೆ
ಕಾರ್ಯಕ್ರಮದಲ್ಲಿ ಮಾತಾಡಿದ ಮಾಜಿ ಸಚಿವ ಹೆಚ್.ಡಿ ರೇವಣ್ಣ, ಮಂಡ್ಯ ಜಿಲ್ಲೆಗೆ ಹೆಚ್. ಡಿ ಕುಮಾರಸ್ವಾಮಿ ಅವರು ಅಪಾರ ಕೊಡುಗೆ ನೀಡಿದ್ದಾರೆ. 2004ರಿಂದ 2008ರ ವರೆಗೆ ಅತಿ ಹೆಚ್ಚು ಪವರ್ ಸ್ಟೇಷನ್ ಕೊಟ್ಟಿದ್ದು ಹೆಚ್.ಡಿ ಕುಮಾರಸ್ವಾಮಿ, ಇಂಧನ ಇಲಾಖೆಗೆ ಇವತ್ತು 29 ಸಾವಿರ ಕೋಟಿ ನಷ್ಟ ಎದುರಿಸುತ್ತಿದೆ. ಮೊದಲು ಇಂಧನ ಇಲಾಖೆ ಕೆಲಸಕ್ಕೆ ಮಂಗಳೂರಿಗೆ ಹೋಗ್ಬೇಕಿತ್ತು. ಚೆಸ್ಕಾಂ ಅಂತಾ ಮೈಸೂರಿನಲ್ಲೇ ಕೆಲಸ ಆಗುವಂತೆ ಮಾಡಿದ್ದು ನಾವು. ಜಿಲ್ಲೆಯ ರಸ್ತೆ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದೆವು.
ಬಿಜೆಪಿಯಲ್ಲಿ ಭ್ರಷ್ಟಚಾರ ತುಂಬಿದೆ
ಮಂಡ್ಯದವರೇ ಸಿಎಂ ಇದ್ದರೂ ಯಾವುದೇ ಬಿಡಿಗಾಸು ಕೊಡಲಿಲ್ಲ. ಮಂಡ್ಯಕ್ಕೆ ಕೊಟ್ಟ ಅನುದಾನ ತಡೆ ಹಿಡಿದಿದ್ದು ಯಡಿಯೂರಪ್ಪ, ಭ್ರಷ್ಟಾಚಾರದಲ್ಲಿ ತುಂಬಿ ತುಳುಕುತ್ತಿರುವ ಸರ್ಕಾರ ಬಿಜೆಪಿಯದ್ದು ಎಂದು ರೇವಣ್ಣ ಕಿಡಿಕಾರಿದ್ರು. ರಾಜ್ಯಕ್ಕೆ ಕಾಂಗ್ರೆಸ್ ಕೊಡುಗೆಯನ್ನು ಏನು ಅಂತಾ ಹೇಳಲಿ. 60 ವರ್ಷದಲ್ಲಿ ಕಾಂಗ್ರೆಸ್ಸಿನ ಸಾಧನೆ ಏನು ಇಲ್ಲ.
ಇದನ್ನೂ ಓದಿ: Independence Day 2022: ಪ್ರತಿಯೊಂದು ಮನೆ ಮೇಲೆ ಹಾರಲಿ ತ್ರಿವರ್ಣ ಧ್ವಜ; ಎಲ್ಲೆಲ್ಲೂ ಹರಡಲಿ ಅಮೃತ ಮಹೋತ್ಸವದ ಸಂಭ್ರಮ
ಕುಮಾರಸ್ವಾಮಿ ಅವರಿಗೆ 5 ವರ್ಷದ ಅಧಿಕಾರ ಕೊಡಿ
ದೇವೇಗೌಡರು ನೀರಾವರಿ ಯೋಜನೆ ಕೊಟ್ಟರು. ಆದಿಚುಂಚನಗಿರಿ ಮಾರ್ಗದ ರೈಲ್ವೇ ಯೋಜನೆ ಕೊಟ್ಟಿದ್ದು ದೇವೇಗೌಡರು, ದೇವೇಗೌಡರಿಗೆ ಹಾಸನ ಜಿಲ್ಲೆ ಒಂದು ಕಣ್ಣಾದರೆ, ಮಂಡ್ಯ ಜಿಲ್ಲೆ ಮತ್ತೊಂದು ಕಣ್ಣು. ಕುಮಾರಸ್ವಾಮಿ ಅವರಿಗೆ 5 ವರ್ಷದ ಆಡಳಿತ ನಡೆಸಲು ಅಧಿಕಾರ ಕೊಡಿ. ರಾಜ್ಯದ ಎಲ್ಲಾ ನೀರಾವರಿ ಯೋಜನೆ ಜಾರಿಗೆ ತರ್ತೇವೆ ಎಂದು ಸೋಮನಹಳ್ಳಿಯಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶದಲ್ಲಿ ರೇವಣ್ಣ ಭರವಸೆಯ ಭಾಷಣ ಮಾಡಿದ್ರು.
ಚಲುವರಾಯಸ್ವಾಮಿ ವಿರುದ್ಧ ಸುರೇಶ್ ಗೌಡ ವಾಗ್ದಾಳಿ
ಹೆಚ್ಡಿಕೆ ಸಿಎಂ ಆಗಬೇಕು ಅಂತ ಜಿಲ್ಲೆಯ 7ಕ್ಕೆ 7 ಸ್ಥಾನ ಗೆಲ್ಲಿಸಿದ್ರಿ. ನನ್ನನ್ನು ಸಹ 46 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ರಿ.ನಾನು ಈ ಹಿಂದೆ ಕಾಂಗ್ರೆಸ್ಸಿನಲ್ಲಿದ್ದವನು. ಅಲ್ಲಿಯ ಸ್ಥಿತಿ, ಇಲ್ಲಿಯ ಸ್ಥಿತಿ ಏನು ಅನ್ನೋದನ್ನ ತಿಳಿದವನು ನಾನು. ಜೆಡಿಎಸ್ ಅಧಿಕಾರಾವಧಿಯಲ್ಲಿ ಸಾಕಷ್ಟು ಅನುದಾನ ಸಿಕ್ಕಿದೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಲು ನಿಮ್ಮ ಹೋರಾಟ ಸಫಲ ಆಗಲಿದೆ. ಯಾವತ್ತೂ ಅದಕ್ಕೆ ಕುಂದು ಬಾರದ ರೀತಿ ನಡೆದುಕೊಳ್ಳಲ್ಲ. 1999ರಲ್ಲಿ ಗೆದ್ದಿದ್ದ ಮಹಾನುಭಾವರು ಏನು ಮಾಡಿದ್ರು? ಪರೋಕ್ಷವಾಗಿ ಚಲುವರಾಯಸ್ವಾಮಿ ವಿರುದ್ಧ ಸುರೇಶ್ ಗೌಡ ವಾಗ್ದಾಳಿ ನಡೆಸಿದ್ರು.
ಅವರಿಗೆ ತಕ್ಕ ಉತ್ತರ ಕೊಡ್ತೀನಿ
ವಿರೋಧಿಗಳು ಏನೇ ಟೀಕೆ ಟಿಪ್ಪಣಿ ಮಾಡಲಿ. ಕೆಲಸದ ಮೂಲಕವೇ ನಾನು ಉತ್ತರ ಕೊಡ್ತೇನೆ ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಉತ್ತರ ಕೊಡ್ತೀನಿ. ನಾಗಮಂಗಲದಲ್ಲಿ ನಿಲ್ಲಲೋ, ಮಂಡ್ಯದಲ್ಲಿ ನಿಲ್ಲಲೋ ಅಂತಿದ್ದಾರೆ. ಅವನಾದರೂ ಬರಲಿ, ಅವರ ಮಗನೋ, ಅಣ್ಣನ ಮಗನೋ ಬರಲಿ. ನನ್ನ ಜೊತೆ ನೀವೆಲ್ಲರೂ ಇದ್ದೀರಿ. ನಿಮ್ಮ ಆಶೀರ್ವಾದ ನನಗೆ ಇದ್ದರೆ ಸಾಕು. ಎಲ್ಲವನ್ನೂ ಎದುರಿಸಲು ಸಿದ್ಧನಿದ್ದೇನೆ.
ಇದನ್ನೂ ಓದಿ: Siddaramotsava: ಮುಂದಿನ ಸಿಎಂ ಸಿದ್ದರಾಮಯ್ಯ; ಡಿಕೆಶಿಗೆ ಬ್ಯಾನರ್ ಮೂಲಕ ಟಕ್ಕರ್ ಕೊಟ್ಟ ಸಿದ್ದು ಬೆಂಬಲಿಗರು
ಹಿಂದೆಲ್ಲಾ ಹೇಗೆಲ್ಲಾ ದೊಂಬಿ ಗಲಾಟೆ ಮಾಡಿಸಿದ್ರು ಅಂತಾ ಗೊತ್ತಿದೆ. ಕುತಂತ್ರದಿಂದ ರಾಜಕಾರಣ ಮಾಡಲು ಪ್ರಯತ್ನ ಮಾಡ್ತಾರೆ. ನಮ್ಮ ಪಕ್ಷ ಸದೃಢವಾಗಿದೆ. ಅದ್ಯಾವುದಕ್ಕೂ ನಾವು ಆಸ್ಪದ ಕೊಡೋದಿಲ್ಲ ಎಂದು ಚಲುವರಾಯಸ್ವಾಮಿ ವಿರುದ್ಧ ಸುರೇಶ್ ಗೌಡ ಆಕ್ರೋಶ ಹೊರಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ