ಹಾಸನ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Assembly Elections) ಹಾಸನ (Hassan Constituency) ವಿಧಾನಸಭಾ ಕ್ಷೇತ್ರ ಭಾರೀ ಕುತೂಹಲ ಮೂಡಿಸಿದ್ದು, ಇಡೀ ರಾಜ್ಯದ ಜನರ ಗಮನ ಸೆಳೆದಿದೆ. ಜೆಡಿಎಸ್ ಪಕ್ಷದಿಂದ (JDS Party) ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರೀತಂ ಗೌಡ (Preetham Gowda) ಅವರಿಗೆ ಎದುರಾಳಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಅಧಿಕೃತ ಉತ್ತರ ಸಿಕ್ಕಿಲ್ಲ. ಆದರೆ ಈ ನಡುವೆ ಜಿಲ್ಲಾ ಜೆಡಿಎಸ್ ಘಟಕ ಬಿಡುಗಡೆ ಮಾಡಿರುವ ಪಕ್ಷದ ಕಿರುಹೊತ್ತಿಗೆ ಪುಸ್ತಕದಲ್ಲಿ (Book) ಮಾಜಿ ಸಚಿವ ರೇವಣ್ಣ ಅವರ ಪತ್ನಿ, ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿರುವ ಭವಾನಿ ರೇವಣ್ಣ (Bhavani Revanna) ಫೋಟೋ (Photo) ಕಾಣಿಸಿಕೊಂಡಿದೆ. ಇದರೊಂದಿಗೆ ಭವಾನಿ ರೇವಣ್ಣ ಅವರಿಗೆ ಪಕ್ಷದ ಟಿಕೆಟ್ ಘೋಷಣೆ ಖಚಿತ ಎಂಬ ಮಾತು ಕೇಳಿ ಬಂದಿದೆ. ಆದರೆ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಬಂದಿರುವ ಸ್ವರೂಪ್ (Swaroop ) ಅವರೇ ಟಿಕೆಟ್ ಫೈಟ್ನಿಂದ ದೂರ ಬಂದರ ಎಂಬ ಪ್ರಶ್ನೆಯೂ ಮೂಡುವಂತೆ ಮಾಡಿದೆ.
ಹೌದು, ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಹಿಂದಿರುವ ಕುತೂಹಲಕ್ಕೆ ಇನ್ನೂ ತೆರೆಬಿದ್ದಿಲ್ಲ. ಆದರೆ ಆಗಲೇ ಜೆಡಿಎಸ್ ಕಿರುಹೊತ್ತಿಗೆಯಲ್ಲಿ ಭವಾನಿ ರೇವಣ್ಣ ಫೋಟೋ ಹಾಕಲಾಗಿದ್ದು, ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: Karnataka Elections 2023: ಹಳೆ ಮೈಸೂರು ಭಾಗದಲ್ಲಿ ಹಿಂದೂ ಮತ ಸೆಳೆಯಲು ಅಶ್ವತ್ಥ್ ನಾರಾಯಣ್ ತಂತ್ರಗಾರಿಕೆ
ಜೆಡಿಎಸ್ ಪಕ್ಷದಿಂದ ಜಿಲ್ಲೆಯಲ್ಲಿ ಆಗಿರುವ ಕೆಲಸಗಳ ಬಗ್ಗೆ ಮಾಹಿತಿ ಇರುವ ಕಿರುಹೊತ್ತಿಗೆ ಪುಸ್ತಕ ಬಿಡುಗಡೆ ಮಾಡಲಾಗಿದೆ. 6 ಕ್ಷೇತ್ರಗಳ ಅಭ್ಯರ್ಥಿಗಳ ಜೊತೆಗೆ ಭವಾನಿ ಫೋಟೋ ಕೂಡ ಹಾಕಲಾಗಿದೆ.
ಇದರೊಂದಿಗೆ ಭವಾನಿ ರೇವಣ್ಣ ಅವರಿಗೆ ಹಾಸನ ಟಿಕೆಟ್ ಫಿಕ್ಸ್ ಆಗಿದ್ಯಾ? ಫೋಟೋ ಹಾಕಿಸುವ ಮೂಲಕ ಭವಾನಿಯೇ ಅಭ್ಯರ್ಥಿ ಎನ್ನುವ ಸಂದೇಶವನ್ನು ಹೆಚ್.ಡಿ ರೇವಣ್ಣ ಸಾರಿದ್ರಾ? ಏಕೆಂದರೆ ಹಾಸನ ಜೆಡಿಎಸ್ ಟಿಕೆಟ್‌ಗಾಗಿ ಭವಾನಿ ಹಾಗೂ ಸ್ವರೂಪ್ ನಡುವೆ ಪೈಪೋಟಿ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಭವಾನಿ ಹಾಗೂ ಸ್ವರೂಪ್ ನಡುವಿನ ಭಾರೀ ಪೈಪೋಟಿಯ ನಡುವೆಯೂ ಕಿರುಹೊತ್ತಿಗೆಯಲ್ಲಿ ಭವಾನಿ ಫೋಟೋ ಹಾಕಲಾಗಿದ್ದು, ಹಲವು ಚರ್ಚೆಗೆ ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ