ಮಾಜಿ ಪ್ರಧಾನಿ ದೇವೇಗೌಡರ ಮನೆಯಲ್ಲೇ ಪೋನ್ ಕೆಲಸ ಮಾಡಲ್ಲ, BSNL ಅಧಿಕಾರಿಗಳಿಗೆ ರೇವಣ್ಣ ತರಾಟೆ

50 ಸಾವಿರ, ಒಂದು ಲಕ್ಷ  ಫೋನ್​ ಬಿಲ್​ ಬರುತ್ತಿದೆ. ಎಷ್ಟು ಅಂತ ಬಿಲ್​ ಕಟ್ಟೋದು. ಇಷ್ಟು ಬಿಲ್​ ಕಟ್ಟಿದರೂ ಫೋನ್​ ಕೆಲಸ ಮಾಡುತ್ತಿಲ್ಲ ಅಂದರೆ ನೀವು ಏನು ಮಾಡುತ್ತೀದ್ದೀರಾ

Seema.R | news18
Updated:October 11, 2018, 4:14 PM IST
ಮಾಜಿ ಪ್ರಧಾನಿ ದೇವೇಗೌಡರ ಮನೆಯಲ್ಲೇ ಪೋನ್ ಕೆಲಸ ಮಾಡಲ್ಲ, BSNL ಅಧಿಕಾರಿಗಳಿಗೆ ರೇವಣ್ಣ ತರಾಟೆ
50 ಸಾವಿರ, ಒಂದು ಲಕ್ಷ  ಫೋನ್​ ಬಿಲ್​ ಬರುತ್ತಿದೆ. ಎಷ್ಟು ಅಂತ ಬಿಲ್​ ಕಟ್ಟೋದು. ಇಷ್ಟು ಬಿಲ್​ ಕಟ್ಟಿದರೂ ಫೋನ್​ ಕೆಲಸ ಮಾಡುತ್ತಿಲ್ಲ ಅಂದರೆ ನೀವು ಏನು ಮಾಡುತ್ತೀದ್ದೀರಾ
Seema.R | news18
Updated: October 11, 2018, 4:14 PM IST
ಅಶೋಕ್​, ನ್ಯೂಸ್​ 18 ಕನ್ನಡ

ಹಾಸನ (ಅ.11):  ಮಾಜಿ ಪ್ರಧಾನಿಗಳ ಮನೆಯಲ್ಲಿಯೇ ಪೋನ್​​ ಕಾರ್ಯ ನಿರ್ವಹಿಸುವುದಿಲ್ಲ ಅಂದರೆ ಯಾವ ರೀತಿಯ ಸೇವೆಯನ್ನು ನೀವು ನೀಡುತ್ತಿದ್ದೀರಾ ಎಂದು ಬಿಎಸ್​ಎಲ್​ಎನ್​ ಅಧಿಕಾರಿಗಳನ್ನು ಸಚಿವ ಹೆಚ್​.ಡಿ ರೇವಣ್ಣ ತರಾಟೆಗೆ ತೆಗೆದುಕೊಂಡ ಘಟನೆ ಕೆಡಿಪಿ ಸಭೆಯಲ್ಲಿ ನಡೆದಿದೆ.

ತಮ್ಮ ಎಂದಿನ ಶೈಲಿಯಲ್ಲಿ ಮಾತನ್ನು ಆರಂಭಿಸಿದ ರೇವಣ್ಣ, "ಹೇ ಯಾರ್ರೀ ಅದು, ಬನ್ರೀ ಇಲ್ಲಿ. ನೀವು ಯಾವ ಅಧಿಕಾರಿ," ಎಂದು ಕ್ಲಾಸ್​ ಶುರುಮಾಡಿದರು.

ದೇವೇಗೌಡರ ಮನೆಯಲ್ಲಿ ಫೋನ್​ ಸರಿಯಾಗಿ ಕೆಲಸ ಮಾಡುತ್ತಿಲ್ಲ. 50 ಸಾವಿರ, ಒಂದು ಲಕ್ಷ  ಫೋನ್​ ಬಿಲ್​ ಬರುತ್ತಿದೆ. ಎಷ್ಟು ಅಂತ ಬಿಲ್​ ಕಟ್ಟೋದು. ಇಷ್ಟು ಬಿಲ್​ ಕಟ್ಟಿದರೂ ಫೋನ್​ ಕೆಲಸ ಮಾಡುತ್ತಿಲ್ಲ ಅಂದರೆ ನೀವು ಏನು ಮಾಡುತ್ತೀದ್ದೀರಾ ಎಂದು ಅಧಿಕಾರಿ ಮೇಲೆ ಗರಂ ಆದರು.

ಅಲ್ಲದೇ ಕೆಡಿಪಿ ಸಭೆಗೆ ಎಕ್ಸಿಕ್ಯೂಟಿವ್​ ಎಂಜಿನಿಯರ್​ ಬಾರದ ಹಿನ್ನಲೆಯಲ್ಲಿ ಸಿಟ್ಟಾದ ರೇವಣ್ಣ, ಎಲ್ಲಿ ಹೋದರು ಅವರು? ಸಭೆಗೆ ಯಾಕೆ ಬಂದಿಲ್ಲ. ಇದೆಲ್ಲಾ ನನ್ನ ಹತ್ತಿರ ನಡೆಯೋದಿಲ್ಲ. ಹೀಗೆ ಮುಂದುವರೆದರೆ ನಿಮ್ಮ ಮೇಲೆ ಕ್ರಿಮಿನಲ್​ ಪ್ರಕರಣ ದಾಖಲಿಸುತ್ತೆನೆ ಎಂದು ಎಚ್ಚರಿಕೆ ನೀಡಿದರು.

ಫೋನ್​ ದುರಸ್ಥಿ ಮಾಡದ ನಿಮ್ಮ ಮೇಲೆ ಸರ್ಕಾರದ  ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುತ್ತೇನೆ ಎಂಬ ರೇವಣ್ಣ ಅವರ ಮಾತಿಗೆ ಅಧಿಕಾರಿಗಳು ಗಾಬರಿಗೊಂಡರು. ಬಿಎಸ್​ಎನ್​ಎಲ್​ ಅವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಹಾಗೂ ಶಾಸಕರು ಕೂಡ ಧ್ವನಿಕೂಡಿಸಿದರು.


Loading...

ಕೆಡಿಪಿ ಸಭೆಯಲ್ಲಿ ಎಣ್ಣೆ ಚರ್ಚೆ

ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಾಸಕ ಶಿವಲಿಂಗೇಗೌಡ ರಿಂದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

ಮದ್ಯವನ್ನು ಜನರಿಗೆ ಸಾಲಕೊಟ್ಟು ಕುಡಿಯುವಂತೆ ಮಾರಾಟಗಾರರು ಮಾಡುತ್ತಿದ್ದಾರೆ.   ಸಾಲಮಾಡಿ ಕುಡುಕರು ಕುಡಿದು ಊರು ಬಿಟ್ಟು ಹೋಗುತ್ತಿದ್ದಾರೆ. ಬಳಿಕ ಮಾಲೀಕರು ಅವರ ಹೆಂಡತಿ, ಮಕ್ಕಳನ್ನು ಪೀಡಿಸುತ್ತಾರೆ, ಎಂದು ಶಿವಲಿಂಗೇಗೌಡ ಹೇಳಿದರು.

ಇದನ್ನೂ ಓದಿ: ಅನಿತಾ ಕುಮಾರಸ್ವಾಮಿಗೆ ಸೋಲುವ ಭೀತಿ: ಕಾಂಗ್ರೆಸ್​​​ ಬಂಡಾಯ ಅಭ್ಯರ್ಥಿ ಕಣಕ್ಕೆ..?

ಹಳ್ಳಿಗಳಲ್ಲಿ ಸುಬ್ಬಕ್ಕ, ತಿಮ್ಮಕ್ಕ ಅಂತಾ ಹತ್ತಾರು ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ. ನಕಲಿ ಮದ್ಯ ಮಾರಾಟ ಮಾಡುತ್ತ ಜನರನ್ನು ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್​ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಬೆಳ್ಳಗೆ 7ಕ್ಕೆ ಎಣ್ಣೆ ಅಂಗಡಿ ತೆಗೆಯುತ್ತಾರೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಬಿಜೆಪಿ ಶಾಸಕ ಪ್ರೀತಮ್​ ಗೌಡ ಸಚಿವರಿಗೆ ದೂರು ನೀಡಿದರು.

First published:October 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ