ಸರ್ಕಾರ ಪಾಪರ್ ಆಗಿದ್ರೆ, ನಾನೇ ಸಂಬಳ ನೀಡ್ತೀನಿ: ಸ್ನಾತಕೋತ್ತರ ಪದವಿಗಾಗಿ HD Revanna ಏಕಾಂಗಿ ಪ್ರತಿಭಟನೆ

ಕಾಮಗಾರಿಗಳು ನಿಂತುಕೊಳ್ಳಲಿ. ಆದ್ರೆ ಬಡವರು ಓದೋ ಕಾಲೇಜು ಯಾಕೆ ನಿಲ್ಲಿಸಬೇಕು. ಸರ್ಕಾರ ಮೂಲಭೂತ ಸೌಕರ್ಯಗಳ ಕೊಡದೇ ಹೋದ್ರು ನಾವು ಕಾಲೇಜುಗಳ ಅಭಿವೃದ್ಧಿ ಮಾಡಿದ್ದೇವೆ. ಬಡವರ ಮಕ್ಕಳು ಓದೋ ಕಾಲೇಜಿಗೆ ಯಾಕೆ ರಾಜಕೀಯ ಮಾಡಬೇಕು ಎಂದು ಆಕ್ರೋಶ ಹೊರ ಹಾಕಿದರು.

ಹೆಚ್ ಡಿ ರೇವಣ್ಣ

ಹೆಚ್ ಡಿ ರೇವಣ್ಣ

  • Share this:
ಸರ್ಕಾರದ ತಾರತಮ್ಯ ನೀತಿ ಖಂಡಿಸಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ (Former Minister HD Revanna) ಏಕಾಂಗಿಯಾಗಿ ಪ್ರತಿಭಟನೆ (Protest) ನಡೆಸಿದರು. ಹೆಚ್.ಡಿ.ರೇವಣ್ಣ ಅವರನ್ನು ಫೋನ್ ಮೇಲೆ ಸಂಪರ್ಕಿಸಿದ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಪ್ರತಿಭಟನೆ ಕೈ ಬಿಡುವಂತೆ ಹೇಳಿದರು. ನಂತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಹೆಚ್.ಡಿ.ರೇವಣ್ಣ ಪ್ರತಿಭಟನೆಯಿಂದ ಹಿಂದೆ ಸರಿದರು. ಹೊಳೆ ನರಸೀಪುರ (Hole Narasipura) ಕ್ಷೇತ್ರದಲ್ಲಿ ಸ್ನಾತಕೋತ್ತರ ಕೋರ್ಸ್ ಗಳ (Post Graduate Cource) ಬೇಕು ಎಂದು ರೇವಣ್ಣ ಅವರು ಪ್ರತಿಭಟನೆ ಮಾಡಿದ್ದರು. ಇಂದು ಬೆಳಗ್ಗೆಯೇ ಗೃಹ ಕಚೇರಿಯಲ್ಲಿ ರೇವಣ್ಣ ಅವರು ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆ ಕೈ ಬಿಟ್ಟ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ.ರೇವಣ್ಣ, ಕುಮಾರಸ್ವಾಮಿ (Former CM HD Kumaraswamy) ಅವರಿದ್ದ ಕಾಲದಲ್ಲಿ ಹೊಳೆನರಸೀಪುರ ಕಾಲೇಜಿಗೆ ಎರಡು ಸ್ನಾತಕೋತ್ತರ ಕೋರ್ಸ್ ( M.Sc ಫುಡ್ ಆ್ಯಂಡ್ ನ್ಯೂಟ್ರಿಷನ್, M.Sc ಸೈಕಾಲಜಿ) ಗೆ ಅನುಮತಿ ಕೊಡಲಾಗಿತ್ತು. ಮೈಸೂರು ವಿವಿಯಿಂದ (Mysore University) ಅನುಮತಿ ಕೊಡಲಾಗಿತ್ತು. ಆದ್ರೆ ಉನ್ನತ ಶಿಕ್ಷಣ ಸಚಿವರಾದ ಸಿ.ಎನ್.ಅಶ್ವಥ್ ನಾರಾಯಣ್ (CN Ashwath Narayan) ಇದನ್ನ ರದ್ದು ಮಾಡಿದ್ದಾರೆ. ನಮಗೆ ಕೊಟ್ಟ ಎಲ್ಲಾ ಅನುದಾನ ಬಿಜೆಪಿ ಸರ್ಕಾರ ತಡೆ ಹಿಡಿದಿದೆ ಎಂದು ಆರೋಪಿಸಿದರು.

ಇದನ್ನೂ ಓದಿ:  Yadagiri: ಹಣ ನೀಡದೇ ಸ್ನೇಹಿತನಿಂದ ಮೋಸ; ಗೆಳೆಯನ ಮೋಸದಾಟಕ್ಕೆ ಪ್ರಾಣಬಿಟ್ಟ ಗೆಳೆಯ!

ಓದುವ ಕಾಲೇಜಿಗೆ ಯಾಕೆ ರಾಜಕೀಯ ಮಾಡೋದು?

ಕಾಮಗಾರಿಗಳು ನಿಂತುಕೊಳ್ಳಲಿ. ಆದ್ರೆ ಬಡವರು ಓದೋ ಕಾಲೇಜು ಯಾಕೆ ನಿಲ್ಲಿಸಬೇಕು. ಸರ್ಕಾರ ಮೂಲಭೂತ ಸೌಕರ್ಯಗಳ ಕೊಡದೇ ಹೋದ್ರು ನಾವು ಕಾಲೇಜುಗಳ ಅಭಿವೃದ್ಧಿ ಮಾಡಿದ್ದೇವೆ. ಬಡವರ ಮಕ್ಕಳು ಓದೋ ಕಾಲೇಜಿಗೆ ಯಾಕೆ ರಾಜಕೀಯ ಮಾಡಬೇಕು ಎಂದು ಆಕ್ರೋಶ ಹೊರ ಹಾಕಿದರು.

ನಾನೇ ಸಂಬಳ ಕೊಡ್ತೀನಿ

ಉದ್ದೇಶ ಪೂರ್ವಕವಾಗಿ ನೀಡಿರುವ ಅನುಮತಿಯನ್ನು ಸಚಿವರು ತಿರಸ್ಕಾರ ಮಾಡಿದ್ದಾರೆ. ನಮ್ಮ ‌ಮಕ್ಕಳು ಈ ಕಾಲೇಜಿನಲ್ಲಿ ಓದೋದಿಲ್ಲ. ಸರ್ಕಾರ ಪಾಪರ್ ಬಿದ್ದದ್ದರೆ ನಾನೇ ಟೀಚರ್ ಗೆ ಸಂಬಳ ಕೊಡ್ತೀನಿ. ವಿವಿ‌ ಮತ್ತು  ಪ್ರಧಾನ ಕಾರ್ಯದರ್ಶಿ ಗಳು ಒಪ್ಪಿಗೆ ಕೊಟ್ಟು ಸಚಿವರು ಯಾಕೆ ಅನುಮತಿ ಕೊಟ್ಟಿಲ್ಲ ಎಂದು ಪ್ರಶ್ನೆ ಮಾಡಿದರು.

ಖಾಸಗೀ ಕಾಲೇಜಿಗೆ ಅನುಮತಿ ಕೊಡಲು ಆಗುತ್ತೆ. ಆದ್ರೆ ಬಡವರ ಮಕ್ಕಳ ಕಾಲೇಜಿಗೆ ಯಾಕೆ ಕೊಡಲು ಆಗ್ತಿಲ್ಲ. ನಾನೇ ಶಿಕ್ಷಕರಿಗೆ ಸಂಬಳ ಕೊಡುತ್ತೇನೆ. ಕೆಲವರಿಗೆ 300-400 ಕೋಟಿ ನಿಯಮ ಮೀರಿ ಕೊಟ್ಟಿದ್ದಾರೆ ನಾನು ಮಾತಾಡಿದ್ರೆ ಎಲ್ಲೋ ಹೋಗುತ್ತೆ ಎಂದು ಗಂಭೀರ ಆರೋಪ ಮಾಡಿದರು.

ಕಾನೂನು ಬಾಹಿರವಾಗಿ ಹಣ ಎಲ್ಲಿಟ್ಟಿದ್ದಾರೆ ಅಂತ ಗೊತ್ತು!

ಸಿಎಂ ಬೊಮ್ಮಾಯಿ ಅವರು ಶುಕ್ರವಾರ ಸಮಸ್ಯೆ ಸರಿ ಮಾಡೋದಾಗಿ ಹೇಳಿದ್ದಾರೆ. ಸಿಎಂ ಸಮಸ್ಯೆ ಪರಿಹಾರ ಮಾಡುವ ಭರವಸೆ ಇದೆ. ಸರಕಾರಕ್ಕೆ ಸಂಬಳ ಕೊಡಲು ಸಾಧ್ಯವೇ ಇಲ್ಲ ಅಂದ್ರೆ ನನ್ನ ಸ್ವಂತ ಹಣದಲ್ಲಿ ಸಂಬಳ ಕೊಡ್ತೀವಿ. ಬಡವರ ಮಕ್ಕಳು ಓದಲಿ ಬಿಡಿ. ಕಾನೂನು ಬಾಹಿರವಾಗಿ ಹಣ ಎಲ್ಲಿ ಕೊಟ್ಟಿದ್ದಾರೆ ಅಂತ ಗೊತ್ತಿದೆ. ಆದರೆ ನಾನು ಅ ಬಗ್ಗೆ ಮಾತಾಡಲ್ಲ. ನಮ್ಮ ಭಾಗಕ್ಕೆ ಅ ಕೋರ್ಸ್ ಗೆ ಅನುಮತಿ ಕೊಡಬೇಕು ಎಂದು ರೇವಣ್ಣ ಆಗ್ರಹಿಸಿದರು.

ಇದನ್ನೂ ಓದಿ:  Mandya: ಇನಿಯನ ಜೊತೆ ಸೇರಿ ಕಿರುಕುಳ: ಮಗನನ್ನ ಸೊಂಟಕ್ಕೆ ಕಟ್ಕೊಂಡು ತೊರೆಗೆ ಜಿಗಿದ ಗಂಡ

ಸಿಎಂ ದೂರವಾಣಿ ಕರೆ ಮಾಡಿ ಶುಕ್ರವಾರ ಸಮಸ್ಯೆ ಪರಿಹಾರ ಮಾಡೋದಾಗಿ ಹೇಳಿದ್ದಾರೆ. ಅದಕ್ಕೆ ಇವತ್ತು ವಾಪಸ್ ಹೋಗ್ತಿದ್ದೇನೆ. ಸಿಎಂ ಮೇಲೆ ನನಗೆ ನಂಬಿಕೆ ಇದೆ ಎಂದರು. ಜನವರಿ 14ರಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ, ಮಂಗಳವಾರ ಪ್ರತಿಭಟನೆ ನಡೆಸೋದಾಗಿ ಹೇಳಿದ್ದರು.
Published by:Mahmadrafik K
First published: