ಗೀಟು ಎಳೆದಾಗಿದೆ, ವೃತ್ತ ಬರೆದಾಗಿದೆ, ವೃತ್ತದಲ್ಲಿರೋದೆಲ್ಲಾ ಸೂಪರ್​ ಸಿಎಂ ರೇವಣ್ಣಂದೇ..!

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಕಾರಿನಿಂದ ಇಳಿಯುವ ಜಾಗದಲ್ಲೇ ಸಚಿವ ಹೆಚ್ ಡಿ ರೇವಣ್ಣ ಇಳಿಯುತ್ತಾರೆ. ಅಲ್ಲದೇ ಸಿಎಂಗೆ ನಿಗದಿಯಾಗಿರುವ ಪಾರ್ಕಿಂಗ್​ ಜಾಗದಲ್ಲೇ ತಮ್ಮ ಕಾರನ್ನು ಪಾರ್ಕ್​ ಮಾಡಿಸುತ್ತಿದ್ದಾರೆ. ನಿಯಮಾವಳಿಯ ಅನುಸಾರ ಮುಖ್ಯಮಂತ್ರಿಗಳಿಗೆ ಮೀಸಲಿಟ್ಟ ಜಾಗದಲ್ಲಿ ಬೇರೆ ಸಚಿವರ ಕಾರು ನಿಲ್ಲಿಸಲು ಅವಕಾಶವಿಲ್ಲ

news18
Updated:January 10, 2019, 4:04 PM IST
ಗೀಟು ಎಳೆದಾಗಿದೆ, ವೃತ್ತ ಬರೆದಾಗಿದೆ, ವೃತ್ತದಲ್ಲಿರೋದೆಲ್ಲಾ ಸೂಪರ್​ ಸಿಎಂ ರೇವಣ್ಣಂದೇ..!
ಸಚಿವ ಎಚ್.ಡಿ. ರೇವಣ್ಣ
news18
Updated: January 10, 2019, 4:04 PM IST
ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ಮೀಸಲಿಟ್ಟ ಜಾಗದಲ್ಲೇ ಇಳಿಯ ಬೇಕು. ಅವರು ನಿಲ್ಲಿಸಿದ ಕಾರು ಪಕ್ಕದಲ್ಲೇ ತನ್ನ ಕಾರು ಪಾರ್ಕ್ ಮಾಡಬೇಕು
ಇದು ಸಮ್ಮಿಶ್ರ ಸರ್ಕಾರದಲ್ಲಿ ಸೂಪರ್ ಸಿಎಂ ಎಂಬ ಹಣೆಪಟ್ಟಿ ಪಡೆದಿರುವ ಸಚಿವ ರೇವಣ್ಣ ಅವರ ಪಾರ್ಕಿಂಗ್​ ಕಥೆ. ಉಗ್ರಂ ಸಿನೆಮಾದ ಖ್ಯಾತ ಸಂಭಾಷಣೆ, "ಗೀಟು ಎಳೆದಾಗಿದೆ, ವೃತ್ತ ಬರೆದಾಗಿದೆ, ವೃತ್ತದಲ್ಲಿರೋದೆಲ್ಲಾ ನಂದೇ," ಎಂಬುವಂತಿದೆ ರೇವಣ್ಣ ಅವರ ಭರಾಟೆ ಎಂಬ ಮಾತೀಗ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಕೇಳಿ ಬರುತ್ತಿದೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಕಾರಿನಿಂದ ಇಳಿಯುವ ಜಾಗದಲ್ಲೇ ಸಚಿವ ಹೆಚ್ ಡಿ ರೇವಣ್ಣ ಇಳಿಯುತ್ತಾರೆ. ಅಲ್ಲದೇ ಸಿಎಂಗೆ ನಿಗದಿಯಾಗಿರುವ ಪಾರ್ಕಿಂಗ್​ ಜಾಗದಲ್ಲೇ ತಮ್ಮ ಕಾರನ್ನು ಸಚಿವ ಹೆಚ್ ಡಿ ರೇವಣ್ಣ ಪಾರ್ಕ್​ ಮಾಡಿಸುತ್ತಿದ್ದಾರೆ. ನಿಯಮಾವಳಿಯ ಅನುಸಾರ ಮುಖ್ಯಮಂತ್ರಿಗಳಿಗೆ ಮೀಸಲಿಟ್ಟ ಜಾಗದಲ್ಲಿ ಬೇರೆ ಸಚಿವರ ಕಾರು ನಿಲ್ಲಿಸಲು ಅವಕಾಶವಿಲ್ಲ.

ಸಚಿವರು ಬಂದರೆ ಕಚೇರಿ ಒಳಗಿರುವ ಗೇಟ್ ಮುಂದೆ ಇಳಿದು, ಕಚೇರಿ ಒಳಗಡೆ ನಡೆದುಕೊಂಡೇ ಹೋಗಬೇಕು. ಅಲ್ಲದೆ ಸಿಎಂ ಪಾರ್ಕ್ ಮಾಡುವ ಜಾಗದಲ್ಲೂ ಕೂಡ ಅವರು ಕಾರು ಪಾರ್ಕ್ ಮಾಡಲು ಅವಕಾಶ ಇಲ್ಲ. ಆದರೆ ಸಚಿವ ರೇವಣ್ಣ ಬಂದರೆ ಸೀದಾ ಸಿಎಂ ಮೀಸಲಿಟ್ಟ ಜಾಗದಲ್ಲಿ ಕಾರು ನಿಲ್ಲಿಸಿ ಇಳಿಯುತ್ತಾರೆ. ಸಿಎಂ ಕಾರು ನಿಲ್ಲಿಸುವ ಜಾಗದಲ್ಲಿಯೇ ಕಾರು ನಿಲ್ಲಿಸುತ್ತಾರೆ. ಇದರ ಬಗ್ಗೆ ಮುಖ್ಯಮಂತ್ರಿ ಕಚೇರಿ ಸಿಬ್ಬಂದಿ ಹೇಳಲು ಹೆದರುತ್ತಿದ್ದಾರೆ. ಈ ರೀತಿ ಮಾಡುವುದು ತಪ್ಪು ಎಂದು ಹೇಳಿದರೆ ಎಲ್ಲಿ ತಲೆದಂಡವಾಗಿ ಬಿಡುತ್ತದೋ ಎಂಬ ಭಯದಿಂದ ಸಿಬ್ಬಂದಿ ಸುಮ್ಮನಿದ್ದಾರೆ.

ಇದನ್ನೂ ಓದಿ: ನೀರಿಗೆ ಕೀಟನಾಶಕ ಬೆರೆಸಿದ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ

ಉದ್ದೇಶ ಪುರ್ವಕವಾಗಿ ರೇವಣ್ಣ ತಮ್ಮ ಕಾರನ್ನು ಮುಖ್ಯಮಂತ್ರಿಗಳಿಗೆ ನಿಗದಿಯಾದ ಜಾಗದಲ್ಲಿ ನಿಲ್ಲಿಸುತ್ತಿದ್ದಾರೆ ಎಂಬ ಆರೋಪವನ್ನು ಇಲ್ಲಿ ಮಾಡಲಾಗುತ್ತಿಲ್ಲ. ಆದರೆ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ ಎಂಬುದಷ್ಟೇ ಇದರ ತಾತ್ಪರ್ಯ. ಆಗಾಗ ತಮ್ಮದಲ್ಲದ ಇಲಾಖೆಯ ವಿಚಾರಗಳಲ್ಲಿ ಮೂಗುತೂರಿಸಿ ಸುದ್ದಿಯಾಗುವ ರೇವಣ್ಣ, ಸೂಪರ್​ ಸಿಎಂರಂತೆ ವರ್ತಿಸುತ್ತಾರೆ ಎಂಬ ಆರೋಪ, ಆಗಾಗ ಕೇಳಿ ಬರುತ್ತಲೇ ಇದೆ. ಈಗ ಆ ಆರೋಪಗಳ ಪಟ್ಟಿಗೆ ಇದೊಂದು ಹೊಸ ಸೇರ್ಪಡೆ.

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ