ಇಂದು ಕೆಎಂಎಫ್ ಚುನಾವಣೆ; ಸೋಲಿನ ಭೀತಿಯಿಂದ ಹಿಂದೆ ಸರಿದರಾ ಹೆಚ್​.ಡಿ. ರೇವಣ್ಣ?

KMF Election: ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಚುನಾವಣೆಗೆ ನಿಂತು ಸೋಲುವ ಭಯದಿಂದ ಹೆಚ್​.ಡಿ. ರೇವಣ್ಣ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. 

Sushma Chakre | news18-kannada
Updated:August 31, 2019, 9:47 AM IST
ಇಂದು ಕೆಎಂಎಫ್ ಚುನಾವಣೆ; ಸೋಲಿನ ಭೀತಿಯಿಂದ ಹಿಂದೆ ಸರಿದರಾ ಹೆಚ್​.ಡಿ. ರೇವಣ್ಣ?
ಎಚ್​.ಡಿ. ರೇವಣ್ಣ
  • Share this:
ಬೆಂಗಳೂರು (ಆ. 31): ಕೆಎಂಎಫ್​ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ಅಧ್ಯಕ್ಷಗಾದಿಯ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಹೆಚ್​.ಡಿ. ರೇವಣ್ಣ ನಾಮಪತ್ರ ಸಲ್ಲಿಸದಿರಲು ನಿರ್ಧರಿಸಿದ್ದಾರೆ. 

ಮೈತ್ರಿ ಸರ್ಕಾರ ಪತನದ ನಂತರ ಮಾಜಿ ಸಚಿವ ಹೆಚ್​.ಡಿ. ರೇವಣ್ಣ ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಆದರೆ, ಕಾಂಗ್ರೆಸ್​ನಿಂದ ಭೀಮಾ ನಾಯಕ್ ಕೆಎಂಎಫ್​ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದರಿಂದ ಮೈತ್ರಿ ಪಕ್ಷಗಳ ನಾಯಕರಲ್ಲಿ ಇದೇ ವಿಷಯಕ್ಕಾಗಿ ಕಿತ್ತಾಟ ಶುರುವಾಗಿತ್ತು. ಆದರೆ,  ಇಂದು ನಡೆಯುವ ಕೆಎಂಎಫ್​ ಚುನಾವಣೆಯಲ್ಲಿ ಬಿಜೆಪಿಯಿಂದ ಬಾಲಚಂದ್ರ ಜಾರಕಿಹೊಳಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲು ನಿರ್ಧರಿಸಿರುವುದರಿಂದ ಹೆಚ್​.ಡಿ. ರೇವಣ್ಣ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗುವ ಹಿನ್ನೆಲೆಯಲ್ಲಿ ಚುನಾವಣೆಗೆ ನಿಂತು ಸೋಲುವ ಭಯದಿಂದ ಹೆಚ್​.ಡಿ. ರೇವಣ್ಣ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಈಗಾಗಲೇ 11 ನಿರ್ದೇಶಕರೊಂದಿಗೆ ಚುನಾವಣೆ ಎದುರಿಸಲು ಬಾಲಚಂದ್ರ ಜಾರಕಿಹೊಳಿ ಮುಂದಾಗಿದ್ದಾರೆ. ಇಂದಿನ‌ ಚುನಾವಣೆಯಲ್ಲೂ ಕೂಡ ಬಾಲಚಂದ್ರ ಜಾರಕಿಹೊಳಿಯೇ ಗೆಲ್ಲುವ ಸಾಧ್ಯತೆಯಿದೆ. ಇದೀಗ ಚುನಾವಣೆಯಲ್ಲಿ ಸೋಲುವ ಭಯದಿಂದ ಮೊದಲೇ ಚುನಾವಣಾ ಕಣದಿಂದ ಹೆಚ್​.ಡಿ. ರೇವಣ್ಣ‌ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಇನ್ನು ಝೀರೋ ಟ್ರಾಫಿಕ್ ಸೌಲಭ್ಯವಿಲ್ಲ

ಪೂರ್ವ ನಿಗದಿಯಂತೆ ಜು. 29ರಂದು ಕೆಎಂಎಫ್​ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯಬೇಕಿತ್ತು. ಆದರೆ, ಆ ವೇಳೆಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಚುನಾವಣೆಯನ್ನು ಮುಂದೂಡಿತ್ತು.  ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷದಿಂದ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿತ್ತು. ಹೀಗಾಗಿ, ತಾನೇ ಕೆಎಂಎಫ್​ ಅಧ್ಯಕ್ಷನಾಗಬೇಕೆಂದು ಹೆಚ್.ಡಿ. ರೇವಣ್ಣ ಕೆಎಂಎಫ್​ನ ಕಾಂಗ್ರೆಸ್​ನ ನಾಲ್ವರು ಸದಸ್ಯರನ್ನು ಕರೆದುಕೊಂಡು ಹೋಗಿದ್ದರು.

 ಹೆಚ್​.ಡಿ. ರೇವಣ್ಣ ಕನಸು ಈಡೇರಲಿಲ್ಲ:

ಇಂದಿನ ಚುನಾವಣೆಗೂ ನಾಮಪತ್ರ ಸಲ್ಲಿಕೆ ಮಾಡದೆ ಇರಲು ತೀರ್ಮಾನಿಸಿರುವ ರೇವಣ್ಣ ಬೆಂಗಳೂರಿನ ಕಡೆಯೂ ಬಾರದೆ ತಮ್ಮ ಊರು ಹೊಳೆನರಸೀಪುರದಲ್ಲಿದ್ದಾರೆ. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಬಾರಿ ಲಾಬಿ ನಡೆಸಿದ್ದ ಹೆಚ್​.ಡಿ. ರೇವಣ್ಣ ಕಾಂಗ್ರೆಸ್ ನ ಭೀಮಾನಾಯಕ್ ‌ಕೈಗೆ ಸಿಗದಂತೆ ಕಾಂಗ್ರೆಸ್​ ಪಕ್ಷದ ‌ನಿರ್ದೇಶಕರನ್ನು ಹೈಜಾಕ್ ಮಾಡಿದ್ದರು.ಇಂದು ಬೆಳಗ್ಗೆ ಮತ್ತೆ ಇ.ಡಿ ಅಧಿಕಾರಿಗಳಿಂದ ವಿಚಾರಣೆ; ಏನಾಗಲಿದೆ ಡಿಕೆ ಶಿವಕುಮಾರ್​ಗೆ ಭವಿಷ್ಯ?

ಕೆಎಂಎಫ್​ನಲ್ಲಿ ಒಟ್ಟು 12 ನಿರ್ದೇಶಕರಿದ್ದಾರೆ. ಅದರಲ್ಲಿ 3 ಜೆಡಿಎಸ್​ ಮತ್ತು 8 ಕಾಂಗ್ರೆಸ್​ ನಿರ್ದೇಶಕರು. ಹಾಗೇ, ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಕೂಡ ಓರ್ವ ನಿರ್ದೇಶಕ. ಕಾಂಗ್ರೆಸ್​ನ 4 ನಿರ್ದೇಶಕರನ್ನು ರೇವಣ್ಣ ತನ್ನೆಡೆಗೆ ಎಳೆದುಕೊಂಡಿರುವುದರಿಂದ ಭೀಮಾ ನಾಯಕ್ ಆಕ್ರೋಶಗೊಂಡಿದ್ದರು.  ಇದೀಗ ಮೈತ್ರಿ ಸರ್ಕಾರದ ಸಮಯದಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ಜತೆಗೆ ಗುರುತಿಸಿಕೊಂಡಿರುವ ನಿರ್ದೇಶಕರೂ ಬಾಲಚಂದ್ರ ಜಾರಕಿಹೊಳಿ ಬೆಂಬಲಿಸಲಿದ್ದಾರೆ ಎನ್ನಲಾಗುತ್ತಿದೆ.

ಬಾಲಚಂದ್ರ ಜಾರಕಿಹೊಳಿ ಅವರಿಗೆ ನೂತನ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅವರನ್ನು ಸಮಾಧಾನಪಡಿಸಲು ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದರು. ಇದೀಗ ಬಾಲಚಂದ್ರ ಜಾರಕಿಹೊಳಿಗೆ ಬೆಂಬಲ ನೀಡುತ್ತಿರುವ ಕೆಎಂಎಫ್​ ಸದಸ್ಯರ ಬಲ ಹೆಚ್ಚಾಗಿರುವುದರಿಂದ ಸೋಲಿನ ಭೀತಿಯಲ್ಲಿ ಹೆಚ್​.ಡಿ. ರೇವಣ್ಣ ನಾಮಪತ್ರ ಸಲ್ಲಿಸುತ್ತಿಲ್ಲ ಎನ್ನಲಾಗುತ್ತಿದೆ.

(ವರದಿ: ಕೃಷ್ಣ ಜಿ.ವಿ)

First published:August 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ