ಬೆಂಗಳೂರು: ಹಾಸನ ಟಿಕೆಟ್ (Hassan Ticket) ಗೊಂದಲ ಜೆಡಿಎಸ್ಗೆ (JDS) ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಟಿಕೆಟ್ ಕಗ್ಗಂಟಿನ ಬೆನ್ನಲ್ಲೇ ದೇವೇಗೌಡರ (Former PM HD Deve gowda) ನಿವಾಸಕ್ಕೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ (Former Minister HD Revanna) ಆಗಮಿಸಿದ್ದರು. ಎರಡನೇ ಪಟ್ಟಿ ಘೋಷಣೆಗೂ ಮುನ್ನ ರೇವಣ್ಣ ಆಗಮಸಿ ಸಭೆ ನಡೆಸಿದ್ದಾರೆ. ಈ ವೇಳೆ ಭವಾನಿಗೆ (Bhavani Revanna) ಟಿಕೆಟ್ ಕೊಡದೇ ಇದ್ದರೂ ಪರವಾಗಿಲ್ಲ. ನನಗೆ ಮಾತ್ರ ಹಾಸನ, ಹೊಳೆನರಸೀಪುರ ಎರಡೂ ಕಡೆ ಟಿಕೆಟ್ ಕೊಡಿ ಅನ್ನೋ ಬೇಡಿಕೆ ಇಟ್ಟದ್ದಾರೆ ಎನ್ನಲಾಗಿದೆ. ಕೊನೆಗೆ ದೇವೇಗೌಡರ ನಿರ್ಧಾರವೇ ಅಂತಿಮ ಎಂದು ರೇವಣ್ಣ ವಾಪಸ್ ತೆರಳಿದ್ದಾರೆ.
ಇನ್ನು, 2018ರಲ್ಲಿ ಕುಮಾರಸ್ವಾಮಿ ರಾಮನಗರ, ಚನ್ನಪಟ್ಟಣ ಸ್ಪರ್ಧಿಸಿದ್ದರು. ಎರಡು ಕಡೆ ಗೆದ್ದ ಬಳಿಕ ರಾಮನಗರ ಕ್ಷೇತ್ರ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟಿದ್ದರು. ಅದೇ ಮಾದರಿಯಲ್ಲಿ ಹಾಸನ, ಹೊಳೆನರಸೀಪುರಕ್ಕೆ ರೇವಣ್ಣ ಅರ್ಜಿ ಹಾಕಿದ್ರಾ ಅನ್ನೋ ಪ್ರಶ್ನೆ ಮೂಡಿದೆ.
ಹೆಚ್ಡಿಕೆ ಸ್ಪಷ್ಟನೆ
ಇದೇ ರೀತಿ ಎರಡೂ ಕ್ಷೇತ್ರಗಳಲ್ಲಿ ಗೆದ್ದ ಬಳಿಕ ಹಾಸನವನ್ನು ಪತ್ನಿ ಭವಾನಿ ರೇವಣ್ಣ ಅವರಿಗೆ ಬಿಟ್ಟುಕೊಡುವ ಯೋಚನೆಯಲ್ಲಿ ರೇವಣ್ಣ ಇದ್ದಾರಂತೆ ಎಂದು ಹೇಳಲಾಗುತ್ತಿದೆ. ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮಾತ್ರ ಕಾರ್ಯಕರ್ತರಿಗೆ ಹಾಸನದ ಟಿಕೆಟ್ ನೀಡಲಾಗುವುದು. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದಿನಿಂದ HDD ಪ್ರಚಾರ
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳು ಗೆಲ್ಲಲೇಬೇಕೆಂಬ ಪಣ ತೊಟ್ಟಿದೆ. ಈ ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರಗಳು ನಡೆಯುತ್ತಿದ್ದು, ಇಂದಿನಿಂದ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು, ರಾಜ್ಯದ ವಿವಿಧೆಡೆ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ.
ಇದನ್ನೂ ಓದಿ: Hassan Ticket Fight: ಸಿಂ‘ಹಾಸನ’ ಕ್ಷೇತ್ರ ಕದನ; ಎಚ್ಡಿಕೆ ಸೈಲೈಂಟ್ ಗೇಮ್ಗೆ ರೇವಣ್ಣ ಪ್ರತ್ಯೇಕ ಪ್ಲ್ಯಾನ್!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ