ಜೆಡಿಎಸ್ ಪಕ್ಷ ಮುಗಿಸುವುದಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳು ಮುಂದಾಗಿವೆ: ಹೆಚ್ ಡಿ ರೇವಣ್ಣ

ಶಿರಾ ಮತ್ತು ಆರ್​ ಆರ್​​ ​ನಗರದಲ್ಲಿ ಸೋಲಿನ ಬಗ್ಗೆ ಆತ್ಮಾವಲೋಕನ ಸಭೆ ಮಾಡುತ್ತೇವೆ, ನಿನ್ನೆ ನಾನು ಶಿರಾಗೆ ಹೋಗಿ ಬಂದೆ, ಬೇರೆಯವರು ಯಾರಾದರೂ ಆಗಿದ್ದರೇ ಮನೆಯಲ್ಲಿ ಇರುತ್ತಿದ್ದರು

ಮಾಜಿ ಸಚಿವ ಹೆಚ್.ಡಿ. ರೇವಣ್ಣ

ಮಾಜಿ ಸಚಿವ ಹೆಚ್.ಡಿ. ರೇವಣ್ಣ

  • Share this:
ಹಾಸನ(ನವೆಂಬರ್​. 11): ಒಂದು ಉಪ ಚುನಾವಣೆ ಗೆಲ್ಲುವುದಕ್ಕೆ ಸರ್ಕಾರ 900 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ರಾಜ್ಯದ ಸಿಎಂ ಮಗ ಚುನಾವಣೆ ನಡೆಸುವುದರಲ್ಲಿ ಪರಿಣಿತ ಇದ್ದಾರೆ. 2023 ಕ್ಕೆ ಸಿಎಂ ಮಗ ವಿಜಯೇಂದ್ರನಿಗೆ ಸಾರ್ವತ್ರಿಕ ಚುನಾವಣೆ ಉಸ್ತುವಾರಿ ಕೊಡಲಿ. ಮುಂದಿನ ಸಾರ್ವತ್ರಿಕ ಚುನಾವಣೆಗೆ ಈಗಲೇ ಸಿಎಂ ಮಗನಿಂದ ಸಮೀಕ್ಷೆ ಮಾಡಿಸಲಿ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ವ್ಯಂಗ್ಯವಾಡಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಬದಲಾವಣೆ ಮಾಡಿದರೇನು ಬಿಟ್ಟರೇನು ನಮಗೇನು ಯಾರಿದ್ದರೂ ನಾವು ಚುನಾವಣೆ ಮಾಡುತ್ತೇವೆ ಎಂದರು. ಜೆಡಿಎಸ್ ಪಕ್ಷ ಮುಗಿಸಬೇಕು ಅಂತಾ ಎರಡೂ ರಾಷ್ಟ್ರೀಯ ಪಕ್ಷಗಳು ಮುಂದಾಗಿವೆ. ಜೆಡಿಎಸ್ ಮುಗಿಸುವುದೇ ಈ ಎರಡೂ ರಾಷ್ಟ್ರೀಯ ಪಕ್ಷಗಳ ಉದ್ದೇಶ, ಈ‌ ಎರಡೂ ರಾಷ್ಟ್ರೀಯ ಪಕ್ಷಗಳ ಮುಂದೆ ನಾವು 2 ನೇ ಸ್ಥಾನದಲ್ಲಿದ್ದೇವೆ. ಜೆಡಿಎಸ್ ನಲ್ಲಿದ್ದವರನ್ನ ಕರೆದುಕೊಂಡು ಹೋಗಿ ಗೆಲ್ಲುವ ಕುದುರೆಗೆ ಟಿಕೆಟ್ ಕೊಟ್ಟಿದ್ದಾರೆ, ಸೋಲುವುದು ಗೆಲ್ಲುವುದು ಸಾಮಾನ್ಯ ಎಂದು ಹೆಚ್ ಡಿ ರೇವಣ್ಣ ತಿಳಿಸಿದರು.

ಶಿರಾ ಮತ್ತು ಆರ್​ ಆರ್​​ ​ನಗರದಲ್ಲಿ ಸೋಲಿನ ಬಗ್ಗೆ ಆತ್ಮಾವಲೋಕನ ಸಭೆ ಮಾಡುತ್ತೇವೆ, ನಿನ್ನೆ ನಾನು ಶಿರಾಗೆ ಹೋಗಿ ಬಂದೆ, ಬೇರೆಯವರು ಯಾರಾದರೂ ಆಗಿದ್ದರೇ ಮನೆಯಲ್ಲಿ ಇರುತ್ತಿದ್ದರು. ಶಿರಾ ಮತ್ತು ರಾಜ ರಾಜೇಶ್ವರಿ ಕ್ಷೇತ್ರದ ನಮ್ಮ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ, ಎರಡೂ ರಾಷ್ಟ್ರೀಯ ಪಕ್ಷಗಳ ಅಬ್ಬರದ ನಡುವೆ ಜೆಡಿಎಸ್ ಪಕ್ಷಕ್ಕೆ ಮತ ನೀಡಿದ್ದಾರೆ. ಜೆಡಿಎಸ್ ಬಡವರ ಹೃದಯದಲ್ಲಿದೆ ಎಂದು ಹೇಳಿದರು.

1989 ರಲ್ಲಿ ಹಾಸನ ಜಿಲ್ಲೆಯಲ್ಲಿ 8 ರಲ್ಲೂ ಜೆಡಿಎಸ್ ಸೋಲು ಅನುಭವಿಸಿತ್ತು. ನಂತರ ನಾಲ್ಕು ವರ್ಷಗಳ ನಂತರ 118 ಸ್ಥಾನ ಜೆಡಿಎಸ್ ಗೆದ್ದಿತ್ತು. ಇಷ್ಟು ಪಾರದರ್ಶಕ ಚುನಾವಣೆ ನಡೆದಿಲ್ಲ ಎಂದಿದ್ದಾರೆ. ಕೆಲ ಬಿಜೆಪಿ ಮುಖಂಡರು ಚುನಾವಣಾ ಆಯೋಗ ಶಿರಾ ಕ್ಷೇತ್ರಕ್ಕೆ ನೋಡಿ ಬರಲಿ ಏನಾಗಿತ್ತು ಗೊತ್ತಾಗುತ್ತಿತ್ತು, ನವೆಂಬರ್ 1 ರಿಂದ 3 ರವರೆಗೆ ಎಸ್ಪಿ, ಡಿಸಿ, ಚುನಾವಣಾಧಿಕಾರಿಗಳ ಅಧಿಕಾರವನ್ನು ಆರ್ ಎಸ್ ಎಸ್ ಗೆ ನೀಡಲಾಗಿತ್ತು ಎಂದು ಹೆಚ್ ಡಿ ರೇವಣ್ಣ ಎಂದು ಆರೋಪ ಮಾಡಿದರು.

ಇದನ್ನೂ ಓದಿ : ಮಾಜಿ ಸಚಿವ ವಿನಯ್​​​ ಕುಲಕರ್ಣಿ ಬಂಧನ‌ ರಾಜಕೀಯ ಪ್ರೇರಿತ : ವಿಧಾನ​ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿಯವರು 2023 ರ ಚುನಾವಣಾ ಉಸ್ತುವಾರಿಯನ್ನು ವಿಜಯೇಂದ್ರಗೆ ಕೊಡಲಿ. ಚುನಾವಣೆ ನಡೆಸುವದರಲ್ಲಿ ಸಿಎಂ ಮಗ ಚಾಣಾಕ್ಯನಂತೆ ಇದ್ದಾನೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ವ್ಯಂಗ್ಯವಾಡಿದ್ದಾರೆ.

ಎರಡೂ ರಾಷ್ಟ್ರೀಯ ಪಕ್ಷಗಳ ಮೆಟ್ಟಿ ಹೋರಾಟ ಮಾಡುತ್ತಿದ್ದೇವೆ. ಎದೆಗುಂದುವುದಿಲ್ಲ. ನಮಗೂ ಗೆಲ್ಲುವ ಕುದುರೆ ನಿಲ್ಲಿಸಬಹುದಿತ್ತು. ನಮ್ಮ ಕಾರ್ಯಕರ್ತರಿಗೆ ಟಿಕೆಟ್ ಕೊಡುವುದು ಮುಖ್ಯವಾಗಿತ್ತು ಎಂದರು.
Published by:G Hareeshkumar
First published: