HDK ಭಾಗವಹಿಸಿದ್ದ ವೇದಿಕೆ ಮೇಲೆ HD Revanna ಫುಲ್ ಕಾಮಿಡಿ

ಗುರುವಾರ ನಡೆದ ಕಾರ್ಯಕ್ರಮದಲ್ಲಿ ರೇವಣ್ಣ ಅವರು ಜನರತ್ತ ಮೂರು ನಿಂಬೆಹಣ್ಣು ಎಸೆದರು.  ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಅವರು ಸಹ ಉಪಸ್ಥಿತರಿದ್ದರು.

ಹೆಚ್ ಡಿ ರೇವಣ್ಣ

ಹೆಚ್ ಡಿ ರೇವಣ್ಣ

  • Share this:
ಹಾಸನ  ಜಿಲ್ಲೆ ಅರಸೀಕೆರೆ ತಾಲೂಕಿನ ನಾಗರಹಳ್ಳಿ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ (Former Minister HD Revanna) ಅವರು ನಗೆ ಚಟಾಕಿ ಹಾರಿಸುವ ಮೂಲಕ ಎಲ್ಲರನ್ನು ನಗೆಗಡಿಲಿನಲ್ಲಿ ತೇಲಿಸಿದರು. ರೇವಣ್ಣ ಅವರು ಅಂದರೆ ಕೈಯಲ್ಲಿ ನಿಂಬೆಹಣ್ಣು (Lemon) ಇರುತ್ತೆ. ಅದು ಅವರ ನಂಬಿಕೆ. ಹೆಚ್.ಡಿ.ರೇವಣ್ಣ ಅವರ ಕೈಯಲ್ಲಿರುವ ನಿಂಬೆ ಹಣ್ಣಿನ ಬಗ್ಗೆ ಹಲವರು ಹಾಸ್ಯ ಮಾಡುತ್ತಿರುತ್ತಾರೆ. ಆದರೂ ರೇವಣ್ಣ ಅವರು ಎಲ್ಲವನ್ನೂ ನಗುತ್ತಲೇ ಸ್ವೀಕರಿಸಿ ತಿರುಗೇಟು ಸಹ ನೀಡುತ್ತಿರುತ್ತಾರೆ. ಗುರುವಾರ ನಡೆದ ಕಾರ್ಯಕ್ರಮದಲ್ಲಿ ರೇವಣ್ಣ ಅವರು ಜನರತ್ತ ಮೂರು ನಿಂಬೆಹಣ್ಣು ಎಸೆದರು.  ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಅವರು ಸಹ ಉಪಸ್ಥಿತರಿದ್ದರು.

ದೇವಾಲಯ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ರೇವಣ್ಣ ಅವರನ್ನು ಗ್ರಾಮಸ್ಥರು ನಿಂಬೆ ಹಣ್ಣು ನೀಡಿ ಸ್ವಾಗತಿಸಿಕೊಂಡಿದ್ರು. ನಂತರ ವೇದಿಕೆ ಮೇಲೆಯೇ ರೇವಣ್ಣ ಅವರು ನಿಂಬೆ ಹಣ್ಣು ಇರಿಸಿದ್ದರು. ಈ ವೇಳೆ ಪಕ್ಕದಲ್ಲಿಯೇ ಕುಳಿತಿದ್ದ ಶಾಸಕ ಶಿವಲಿಂಗೇಗೌಡರು, ನೆರೆದಿದ್ದ ಜನರಿಗೆ ನಿಂಬೆಹಣ್ಣು ನೀಡುವಂತೆ ತಮಾಷೆಯಾಗಿ ಒತ್ತಾಯ ಮಾಡಿದರು.

ಶಿವಲಿಂಗೇಗೌಡರು ಹೇಳುತ್ತಿದ್ದಂತೆ ರೇವಣ್ಣ ಅವರು ತಮಾಷೆಯಾಗಿ ಜನರತ್ತ ಮೂರು ನಿಂಬೆ ಹಣ್ಣು ಉರುಳಿ ಬಿಟ್ಟರು. ಅಭಿಮಾನಿಗಳು ರೇವಣ್ಣ ಅವರು ನೀಡಿದ ನಿಂಬೆಹಣ್ಣು ಆಯ್ದುಕೊಂಡರು.

ಇದನ್ನೂ ಓದಿ:  Whatsapp Status ಹಾಕೋ ಮುನ್ನ ನೂರು ಬಾರಿ ಯೋಚಿಸಿ; ಇಲ್ಲಾಂದ್ರೆ ಬೀಳುತ್ತೆ ರೌಡಿಶೀಟರ್ ಕೇಸ್

ಖಾಸಗಿ ಶಾಲೆಗಳಲ್ಲಿ ಗಲಾಟೆ ನಡೆಯುತ್ತಿದೆಯಾ?

ಈ ವೇಳೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ನನಗೆ ಜನ್ಮ ಕೊಟ್ಟ ಜಿಲ್ಲೆ ಹಾಸನ, ರಾಜಕೀಯ ಜನ್ಮ ಕೊಟ್ಟ ಜಿಲ್ಲೆ ರಾಮನಗರ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಂದು ಯಾವ ಟಿವಿ ಹಾಕಿದ್ರು ಹಿಜಬ್-ಕೇಸರಿ ಶಾಲು ವಿವಾದ ಸುದ್ದಿ ನೋಡುತ್ತಿದ್ದೇವೆ. ಅದನ್ನು ಹಾಕಿಸಿದವರು ಯಾರು, ಇದು ಕೇವಲ ಸರ್ಕಾರಿ ಶಾಲೆಗಳಲ್ಲಿ ಮಾತ್ರ ನಡೆಯುತ್ತಿದೆ. ಆದ್ರೆ ಖಾಸಗಿ ಶಾಲೆಗಳಲ್ಲಿ ನಡೆಯುತ್ತಿದೆಯಾ ಎಂದು ಪ್ರಶ್ನೆ ಮಾಡಿದರು.

ಖಾಸಗಿ ಶಾಲೆಗೆ ಹೋಗುವವರು ನಮ್ಮಂತವರ ಮಕ್ಕಳು, ಸಚಿವರು, ಶಾಸಕರ ಮಕ್ಕಳು. ಸರ್ಕಾರಿ ಶಾಲೆಗೆ ಹೋಗುವವರು ಒಂದೊಂದು ರೂಪಾಯಿಗೂ ಕಷ್ಟಪಟ್ಟು ದುಡಿಯುವ ಬಡವರ ಮಕ್ಕಳು. ನಾಳೆ ಬೆಳಗ್ಗೆ ಹೆಚ್ಚು ಕಡಿಮೆ ಆದರೆ ಪ್ರಾಣ ಕಳ್ಕಳೋರು ಬಡವರ ಮಕ್ಕಳು.

ನಾಳೆ ಬಡವರ ಮಕ್ಕಳು ಕೋರ್ಟಿಗೆ ಅಲೆದಾಡಬೇಕು

ನಮ್ಮಂತ ನಾಯಕರು, ಮಂತ್ರಿಗಳ ಮಕ್ಕಳಿಗೆ ಹಿಜಬ್-ಕೇಸರಿ ಶಾಲು ಹಾಕಿ ಕಳುಹಿಸಿದ್ದಾರೆ. ಶಾಲೆಗೆ ಹೋಗುತ್ತಿರುವವರು ಬಡವರ ಮಕ್ಕಳು. ಗಲಾಟೆ, ಕಲ್ಲು ತೂರಾಟ ದೃಶ್ಯ ಪೊಲೀಸರು ವಿಡಿಯೋ ಮಾಡುತ್ತಾರೆ.  ಟಿವಿಯಲ್ಲಿ ಅವರ ಮುಖಗಳನ್ನು ನೋಡಿರ್ತಾರೆ. ವಿಡಿಯೋದಲ್ಲಿರುವ ಮಕ್ಕಳ ಮೇಲೆ ಪೊಲೀಸರು ಕೇಸ್ ಹಾಕುತ್ತಾರೆ. ನಾಳೆ ಬಡವರ ಮಕ್ಕಳು ಹತ್ತಾರು ವರ್ಷ ಕೋರ್ಟ್‌ ಗೆ ಅಲಿಬೇಕು. ಕುವೆಂಪು ಅವರು ಹೇಳಿರುವಂತೆ ಸರ್ವ ಜನಾಂಗದ ಶಾಂತಿಯ ತೋಟದ ರೀತಿ ಬದುಕಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡರು.

ಇದನ್ನೂ ಓದಿ:  Lovers Suicide: ಇನ್ಮುಂದೆ ಇಬ್ಬರು ಸೇರಲೇಬಾರದು ಅಂದ್ರು.. ಜೊತೆಯಾಗಿ ಸಾವಿನ ಮನೆ ಸೇರಿದ ಪ್ರೇಮಿಗಳು!

ಧರ್ಮದ ಹೆಸರಿನಲ್ಲಿ ಅಧಿಕಾರ ಹಿಡಿಯುವ ಯತ್ನ

ನಾವೆಲ್ಲಾ ಹಿಂದೂ ಸಂಸ್ಕೃತಿಯಲ್ಲಿ ಹುಟ್ಟಿರೋದು, ದಿನ ಬೆಳಗ್ಗೆ ಎದ್ದರೆ ದೇವರಿಗೆ ಕೈಮುಗಿದು ನಮ್ಮ ಕೈಯಲ್ಲಿ ನಾಲ್ಕು ಒಳ್ಳೆಯ ಕೆಲಸ ಮಾಡಿಸು ಅಂತಾ ಪ್ರಾರ್ಥನೆ ಮಾಡುತ್ತೇವೆ. ಆದರೆ ಧರ್ಮದ ಹೆಸರಲ್ಲಿ ಹೊಡೆದಾಡಿಸಿ ಅಧಿಕಾರ ಹಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಬೆಳಗಾದರೆ ಯುವಕರನ್ನ ಎತ್ತಿಕಟ್ಟಿ ಗಲಾಟೆ ಮಾಡಿಸುತ್ತಿದ್ದಾರೆ.  ಕಲ್ಲು ತೂರಾಟದಲ್ಲಿ ವಿದ್ಯಾರ್ಥಿಗಳ ತಲೆಗೆ ಪೆಟ್ಟು ಆಗಿದೆ. ವಿದ್ಯಾರ್ಥಿಗಳು ಮತ್ತು ಯುವಕರಿಗೆ ಬದುಕು ಮುಖ್ಯ. ಇದಕ್ಕೆಲ್ಲಾ ಕಿವಿಗೊಡದೆ ವಿದ್ಯಾಭ್ಯಾಸದ ಕಡೆ ಗಮನಕೊಡಿ ಎಂದು ಮನವಿ ಮಾಡಿಕೊಂಡರು.

ಸದ್ಯ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠ (Karnataka highcourt) ವಿಚಾರಣೆ ಆಲಿಸಿ ಮೌಖಿಕ ಸೂಚನೆ ನೀಡಿದೆ.  ಮುಂದಿನ ವಿಚಾರಣೆಯನ್ನು ಸೋಮವಾರ ಫೆ.14ಕ್ಕೆ ಮುಂದೂಡಲಾಗಿದ್ದು, ಅಲ್ಲಿಯವರೆಗೆ ಧಾರ್ಮಿಕ ಗುರುತು ಬಳಸಬಾರದು (ಹಿಜಾಬ್​, ಕೇಸರಿ ಶಾಲು ) ಎಂದು ಸೂಚಿಸಿದ್ದಾರೆ.
Published by:Mahmadrafik K
First published: