ಯಾವ ಸರ್ಕಾರ ಇದ್ರೂ ಹೆಚ್.ಡಿ. ರೇವಣ್ಣ ಕೆಲಸ ಆಗುತ್ತೆ ಎಂಬ ಮಾತು ಮತ್ತೊಮ್ಮೆ ನಿಜವಾಯ್ತು

ಹಾಸನ ಇಂಜಿನಿಯರಿಂಗ್ ಕಾಲೇಜಿನಲ್ಲಿ 175 ವಿದ್ಯಾರ್ಥಿಗಳು ಮಾತ್ರ ವ್ಯಾಸಂಗ ಮಾಡುತ್ತಿದ್ದಾರೆ. ಹೀಗಾಗಿ ಕಾಲೇಜು ಮುಚ್ಚಲು ಉನ್ನತ ಶಿಕ್ಷಣ ಇಲಾಖೆ ಪ್ರಯತ್ನಿಸುತ್ತಿದೆ. ಈ ಸಂಬಂಧ ಮಾಜಿ ಪ್ರಧಾನಿ ದೇವೇಗೌಡರು ಸಹ ಸಿಎಂಗೆ ಪತ್ರ ಬರೆದು ಕಾಲೇಜು ಮುಚ್ಚದಂತೆ ಒತ್ತಾಯಿಸಿದ್ದಾರೆ. ಆದರೆ, ಸರ್ಕಾರ ಇದಕ್ಕೆ ಪ್ರತಿಕ್ರಿಯಿಸಿರಲಿಲ್ಲ.

 ಮಾಜಿ ಸಚಿವ ಹೆಚ್​ ಡಿ ರೇವಣ್ಣ ಹಾಗೂ ಸಿಎಂ ಯಡಿಯೂರಪ್ಪ

ಮಾಜಿ ಸಚಿವ ಹೆಚ್​ ಡಿ ರೇವಣ್ಣ ಹಾಗೂ ಸಿಎಂ ಯಡಿಯೂರಪ್ಪ

 • Share this:
  ಬೆಂಗಳೂರು (ಫೆಬ್ರವರಿ. 20); ಮುಚ್ಚುವ ಹಂತದಲ್ಲಿದ್ದ ಹಾಸನ ಇಂಜಿನಿಯರಿಂಗ್ ಕಾಲೇಜ್ ಅನ್ನು ಮುಚ್ಚುವುದಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪಷ್ಟನೆ ನೀಡಿರುವ ಬೆನ್ನಿಗೆ ಯಾವುದೇ ಸರ್ಕಾರವಿರಲಿ, ಯಾರೇ ಮುಖ್ಯಮಂತ್ರಿ ಇರಲಿ ಹೆಚ್.ಡಿ.ರೇವಣ್ಣ ಬೇಡಿಕೆ ಇಟ್ರೆ ಸ್ಥಳದಲ್ಲೇ ಪಾಸ್ ಅನ್ನೋ ಮಾತು ಮತ್ತೊಮ್ಮೆ ನಿಜವಾಗಿದೆ.

  ಹಾಸನ ಇಂಜಿನಿಯರಿಂಗ್ ಕಾಲೇಜಿನಲ್ಲಿ 175 ವಿದ್ಯಾರ್ಥಿಗಳು ಮಾತ್ರ ವ್ಯಾಸಂಗ ಮಾಡುತ್ತಿದ್ದಾರೆ. ಹೀಗಾಗಿ ಕಾಲೇಜು ಮುಚ್ಚಲು ಉನ್ನತ ಶಿಕ್ಷಣ ಇಲಾಖೆ ಪ್ರಯತ್ನಿಸುತ್ತಿದೆ. ಈ ಸಂಬಂಧ ಮಾಜಿ ಪ್ರಧಾನಿ ದೇವೇಗೌಡರು ಸಹ ಸಿಎಂಗೆ ಪತ್ರ ಬರೆದು ಕಾಲೇಜು ಮುಚ್ಚದಂತೆ ಒತ್ತಾಯಿಸಿದ್ದಾರೆ. ಆದರೆ, ಸರ್ಕಾರ ಇದಕ್ಕೆ ಪ್ರತಿಕ್ರಿಯಿಸಿರಲಿಲ್ಲ.

  ಆದರೆ, ಇಂದು ರೇವಣ್ಣ ಈ ಕುರಿತು ಖುದ್ದು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸ್ಪಂದಿಸಿ ಹೇಳಿಕೆ ನೀಡಿರುವ ಸಿಎಂ ಯಡಿಯೂರಪ್ಪ,

  "ಯಾವುದೇ ಕಾರಣಕ್ಕೂ ಹಾಸನ ಎಂಜಿನಿಯರಿಂಗ್ ಕಾಲೇಜು ಮುಚ್ಚುವುದಿಲ್ಲ ಎಂದು ಭರವಸೆ ನೀಡಿದರು. ಈ ಸಂಬಂಧ ದೇವೇಗೌಡರಿಗೂ ಲಿಖಿತ ಉತ್ತರ ನೀಡುವುದಾಗಿಯೂ ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲದೆ ರೇವಣ್ಣನವರ ಯಾವ ಕೆಲಸವಾದರೂ ಸರಿಯೇ ತಾವು ಮಾಡಿಕೊಡುವುದಾಗಿಯೂ" ಆಶ್ವಾಸನೆ ನೀಡಿದ್ದಾರೆ.

  ಅಲ್ಲಿಗೆ ಸಿಎಂ ಯಾರೇ ಇರಲಿ, ಸರ್ಕಾರ ಯಾರದ್ದೇ ಇರಲಿ ಹಾಸನದ ಕೆಲಸಗಳಿಗೆ ಮಾತ್ರ ಯಾವುದೇ ಅಡೆತಡೆಗಳು ಇಲ್ಲ ಎನ್ನುತ್ತಿವೆ ರಾಜ್ಯ ರಾಜಕೀಯ ವಠಾರ.

  ಇದನ್ನೂ ಓದಿ : 25 ಸಂಸದರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಎಂದಾದರು ಧ್ವನಿ ಎತ್ತಿದ್ದಾರಾ?; ಸಿದ್ದರಾಮಯ್ಯ ಕಿಡಿ
  First published: