ಆ ಮನುಷ್ಯ ಎಷ್ಟು ನೋವು ತಿಂತಾನೆ ಅಂತ ನಂಗೊತ್ತು.. HDK ಬಗ್ಗೆ ಸೋದರ Revanna ಭಾವುಕ ನುಡಿ

ಇವರೆಲ್ಲಾ ಏನೇನ್ ನಡೆಸ್ತಾಯಿದ್ರು ಅನ್ನೋದು ನನಗೆ ಗೊತ್ತೈತೆ. ನಾನು ನೋಡ್ತಿದಿನಿ ಆ‌ ಮನುಷ್ಯ ಎಷ್ಟು ನೋವು ಅನುಭವಿಸುತ್ತಿದ್ದಾನೆ ಎಂದು ಸಹೋದರ ಕುಮಾರಸ್ವಾಮಿ ಬಗ್ಗೆ ಎಚ್.ಡಿ.ರೇವಣ್ಣ ಕನಿಕರ ವ್ಯಕ್ತಪಡಿಸಿದ್ರು. ಎರಡು ಪಕ್ಷದವರು ಬೆಳಗ್ಗೆ ಎದ್ದರೆ ಜೆಡಿಎಸ್ ಭಜನೆ ಮಾಡ್ತಾರೆ ಎಂದು ಕಿಡಿಕಾರಿದರು.

ರೇವಣ್ಣ-ಕುಮಾರಸ್ವಾಮಿ

ರೇವಣ್ಣ-ಕುಮಾರಸ್ವಾಮಿ

  • Share this:
ಹಾಸನ : ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ಎಲ್ಲರಿಗೂ ಟೋಪಿ‌ ಹಾಕ್ತಾನೆ ಎಂಬ ಮಾಗಡಿ ಬಾಲಕೃಷ್ಣ ಹೇಳಿಕೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ (HD Revanna) ತಿರುಗೇಟು ನೀಡಿದರು. 19 ತಿಂಗಳು ಕುಮಾರಣ್ಣನ್ನ ಬೆಳಿಗ್ಗೆ ಎದ್ದರೆ ಜೋಡೆತ್ತು ಅನ್ನೋರು. ಈಗ ಒಂದು ಮೇಕೆದಾಟು (Mekedatu) ಕಡೆಗೆ ಹೋಗೈತೆ, ನಾವೇನು ಮಾಡೋಣ ಸ್ವಾಮಿ. ಪಾಪ ಕುಮಾರಣ್ಣ ಎಲ್ಲರನ್ನೂ ನಂಬ್ತಾನೆ, ಆತನ ಹೃದಯ ಒಂಥಾರ. ನಮ್ಮ ಹತ್ರ ಬಂದ್ರೆ ಯಾವುದೇ ಬರಲಿ ಒದಿತಾವೆ, ಸರಿಯಾಗಿ ಯಾವಕ್ಕೆ ಮೇವು ಹಾಕಬೇಕು. ಕುಮಾರಣ್ಣ ಏನ್ ಮಾಡ್ತಾನೆ ಒದೆಯವ್ಕೂ ಮೇವು ಹಾಕ್ತಾನೆ, ಆಮೇಲೆ ಅವು ಒದಿತಾವೆ. ಬಾಲಕೃಷ್ಣ ಅವರೇ ಸರಿಯಾದ ನಡೆಯಲ್ಲಿ ಇರಬೇಕು, ಕುಮಾರಣ್ಣ ಇಲ್ಲದೆ ಹೋಗಿದ್ದರೆ ಶ್ರೀನಿವಾಸ್ ಗೌಡ ಶಾಸಕ ಆಗುತ್ತಿದ್ದರಾ? ಕಾಂಗ್ರೆಸ್ ನಲ್ಲಿ ಓಡ್ಸಿದ್ರು ಟಿಕೆಟ್ ಕೊಡದೆ, ಕೊನೆಗಳಿಗೆಲಿ ಕುಮಾರಣ್ಣ ಕರೆದು ಟಿಕೆಟ್ ಕೊಟ್ರು. ಹಾಳು ಬಿದ್ದೋಗಲಿ ಟಿಕೆಟ್ ಕೊಡು ಅಂಥಾ ನಾನು, ದೇವೇಗೌಡರು ಹೇಳಿ ಟಿಕೆಟ್ ಕೊಡ್ಸಿದ್ದು.

ಕುಮಾರಸ್ವಾಮಿ ಬಗ್ಗೆ ಎಚ್.ಡಿ.ರೇವಣ್ಣ ಕನಿಕರ

ಪಕ್ಷ ಬಿಟ್ಟು ಹೋಗ್ತಿನಿ ಅಂದ್ರೆ ಹೋಗಲಿ, ಪಕ್ಕದ ಕ್ಷೇತ್ರದಲ್ಲಿ ಏನ್ ಮಾಡಿದ್ರು ಪಕ್ಷಕ್ಕೆ. ಅವನ್ಯಾರೋ ಕಾಂತರಾಜ್ ಅಂಥಾ ಕುಮಾರಣ್ಣ ಇಲ್ಲಾ ಅಂದಿದ್ರೆ ಏನ್ ಆಗದು ಗೊತ್ತಿಲ್ಲ. ಅವರನ್ನೆಲ್ಲಾ ನಾವು ಲೆಕ್ಕಕ್ಕೆ ಇಡ್ತಿವಾ, ಇಂತಹವರು ಹೋಗೋರು ಹೋಗ್ತಲೆ ಇರ್ತಾರೆ. ಕಳೆದ ಬಾರಿ ರಾಜ್ಯಸಭೆ ಎಲೆಕ್ಷನ್ ನಲ್ಲಿ ಗಿರಾಕಿಗಳು ಒಬ್ಬೊಬ್ಬರು ಐದೈದು ಕೋಟಿ ತಗಂಡ್ರು. ಕಾಂಗ್ರೆಸ್ ಗೆ ಹೋದ್ರು, 55 ಸಾವಿರದಲ್ಲಿ ಜನ ಮನೆಗೆ ಕಳುಸ್ಲಿಲ್ವಾ? ಹೋಗದಿದ್ದರೆ ಹೋಗ್ತಾರೆ, ಇವರೆಲ್ಲಾ ಏನೇನ್ ನಡೆಸ್ತಾಯಿದ್ರು ಅನ್ನೋದು ನನಗೆ ಗೊತ್ತೈತೆ. ನಾನು ನೋಡ್ತಿದಿನಿ ಆ‌ ಮನುಷ್ಯ ಎಷ್ಟು ನೋವು ಅನುಭವಿಸುತ್ತಿದ್ದಾನೆ ಎಂದು ಸಹೋದರ ಕುಮಾರಸ್ವಾಮಿ ಬಗ್ಗೆ ಎಚ್.ಡಿ.ರೇವಣ್ಣ ಕನಿಕರ ವ್ಯಕ್ತಪಡಿಸಿದ್ರು. ಎರಡು ಪಕ್ಷದವರು ಬೆಳಗ್ಗೆ ಎದ್ದರೆ ಜೆಡಿಎಸ್ ಭಜನೆ ಮಾಡ್ತಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ದೊಡ್ಡ ದೊಡ್ಡ ಪೋಲಿ ಆಟ ಆಡಿ ಬಂದವನು ನಾನು, Hamsalekha ಮಾತಿನಲ್ಲೇ ತಿವಿದಿದ್ದು ಯಾರಿಗೆ?

ಮೇಕೆದಾಟಿನಿಂದ ಕುರಿ ಒಡೆದುಕೊಂಡು ಬನ್ನಿ

ಮೇಕೆದಾಟು ಯೋಜನೆಗಾಗಿ ಡಿ.ಕೆ.ಶಿವಕುಮಾರ್ ಪಾದಯಾತ್ರೆ ಬಗ್ಗೆ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಮುಖಂಡರು ಯಾವ ಮುಖ ಇಟ್ಕೊಂಡು ರಾಜ್ಯದ ಜನರ ಮತ ಕೇಳ್ತಾರೆ. ನಮಗೇನು ಪ್ರಯೋಜನ ಆಗಲ್ಲ ಅಂಥಾ ಕೃಷ್ಣಾ ಬಿಟ್ಟರು, ಉತ್ತರ ಕರ್ನಾಟಕದವರನ್ನು ಬಿಟ್ಟರು. ಕೃಷ್ಟ ಬಿಟ್ಟು ಮೇಕೆದಾಟು ಇಡ್ಕೊಂಡಿದ್ದಾರೆ. ಮೇಕೆ ಕರೆದುಕೊಂಡು ಬರುತ್ತಾರೋ ನೀರು ತರುತ್ತಾರೋ ಗೊತ್ತಿಲ್ಲ. ಜನ ಇವರಿಗೆ ಐವತ್ತು ಕುರಿ ಕೋಡೋದು ಒಳ್ಳೆಯದು. ಮೇಕೆದಾಟಿನಿಂದ ಕುರಿ ಒಡೆದುಕೊಂಡು ಬನ್ನಿ ಅಂಥಾ ಎಂದು ರೇವಣ್ಣ ವ್ಯಂಗ್ಯವಾಡಿದರು.

ಇಲ್ಲಿಯವರೆಗೂ ಸಾಬ್ರುನ ಇಟ್ಟಕಂಡಿದ್ದರು, ಈಗ ಕ್ರಿಶ್ಚಿಯನ್ಸ್

ಇದು ಚುನಾವಣೆ ಗಿಮಿಕ್, ಹೆಚ್ಚು ದಿನ ಗಿಮಿಕ್ ರಾಜಕಾರಣ ನಡೆಯಲ್ಲ. ಗಿಮಿಕ್ ರಾಜಕಾರಣದ ಬಗ್ಗೆ ಜನತೆಗೆ ಗೊತ್ತು. ಈಗ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ. ಆಗ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದರು, ಈಗ ಪಾದಯಾತ್ರೆ ಮಾಡಿ ಜನರಿಗೆ ಟೋಪಿ ಹಾಕ್ತವ್ರೆ. ಇಲ್ಲಿಯವರೆಗೂ ಸಾಬ್ರುನ ಇಟ್ಟಕಂಡಿದ್ದರು, ಪಾಪ ಅವರನ್ನು ಬಿಟ್ಟು ಈಗ ಕ್ರಿಶ್ಚಿಯನ್ಸ್ ಇಟ್ಕಂಡವ್ರೆ. ಪಾಪ ಆ ಸಮಾಜ ನಡೆದುಕೊಂಡು ಹೋಗುತ್ತಿತ್ತು. ನಾನು ಸಿದ್ದರಾಮಯ್ಯ ಅವರನ್ನು ದೂರಲು ಹೋಗಲ್ಲ, 2006 ರಲ್ಲೇ ಯಾರೋ‌ ಹೇಳಿ ಮತಾಂತರ ನಿಷೇಧ ಕಾಯ್ದೆ ತರ್ಸಿದ್ರು. ಇವರದ್ದು ರಾತ್ರಿ ಅಡ್ಜೆಸ್ಟ್ ಮೆಂಟ್, ಇದು ಬಿಸಿ ಟೀಂ. ಬಿ ಅಂದರೆ ಬಿಜೆಪಿ, ಸಿ ಅಂದರೆ ಕಾಂಗ್ರೆಸ್. 2006ರ ಬಿಲ್ಲನ್ನು ಯಥಾವತ್ತಾಗಿ ತಂದು ಜೋಡ್ಸಿದ್ದಾರೆ ಎಂದು ಆರೋಪಿಸಿದರು.

ಮೇಕೆದಾಟು ಗಿರಾಕಿ ಎಲ್ಲಿ ಹೋಗಿದ್ದರು

ಅವತ್ತು ಸಿದ್ದರಾಮಯ್ಯ ಅವರಿಗೆ ಒತ್ತಡ ಹಾಕಿದವರು ಈಗ ಏನು ಹೇಳ್ತಾರೆ, ಉಸಿರೇ ಇಲ್ಲ. ಸಿದ್ದರಾಮಣ್ಣ ಒಬ್ಬರೆನ್ನೇ ಅಧಿವೇಶನದಲ್ಲಿ ಬಿಟ್ಟು ಎದ್ದರು. ಈ ಮೇಕೆದಾಟು ಗಿರಾಕಿ ಚರ್ಚೆ ನಡೆಯುವಾಗ ಅಲ್ಲಿ ಇಲ್ಲವೇ ಇಲ್ಲಾ ಎಂದು ಡಿಕೆಶಿಗೆ ಮಾತಿನಲ್ಲೇ ತಿವಿದರು. ರಾಜ್ಯದ ಜನತೆ ತಿಳಿದುಕೊಳ್ಳಬೇಕು. ಎಷ್ಟು ದಿನ ಸುಳ್ಳು ಹೇಳ್ತಾರೆ, ಜನ ತಿರುಗಿ ಬೀಳುವ ಕಾಲ ದೂರವಿಲ್ಲ. ರಾಜಕೀಯ ಬೆರೆಸಿಕೊಂಡು ಓಟಿಗೋಸ್ಕರ ಮಾಡಬಾರದು ಎಂದರು.
Published by:Kavya V
First published: