ಕುಮಾರಸ್ವಾಮಿ-ರೇವಣ್ಣ ಹೊಡೆದಾಡುತ್ತಾರೆ ಎಂದು ಕಾಯುತ್ತಿರುವವರ ಆಸೆ ಈಡೇರಲ್ಲ: ಜಮೀರ್​​ಗೆ Revanna ತಿರುಗೇಟು

hd revanna counter attack on zameer: ಅವರಿಗೆ ನಮ್ಮ‌ ಸುದ್ದಿ ಬೇಡ. ಕುಮಾರಸ್ವಾಮಿ-ರೇವಣ್ಣ ಹೊಡೆದಾಡುತ್ತಾರೆ ಎಂದು ಬಿಜೆಪಿ, ಕಾಂಗ್ರೆಸ್ ಅವರು ಕನಸಲ್ಲಿ ಕಂಡರೂ ಆಗಲ್ಲ. ಉಪ ಮುಖ್ಯಮಂತ್ರಿ ಆಗಬೇಕು ಅಂದ್ರೆ ನಾನು, ಕುಮಾರಸ್ವಾಮಿ ಕುಳಿತು ಮಾತನಾಡುತ್ತೇವೆ. ಕುಮಾರಣ್ಣಂದು ಏನು, ರೇವಣ್ಣಂದು ಏನು ಗೊತ್ತಿದೆ.

ರೇವಣ್ಣ-ಜಮೀರ್​

ರೇವಣ್ಣ-ಜಮೀರ್​

  • Share this:
ಹಾಸನ : ಬಿಜೆಪಿ(BJP)ಯೊಂದಿಗೆ ಜೆಡಿಎಸ್(JDS)​ ಸಮ್ಮಿಶ್ರ ಸರ್ಕಾರದ ನಡೆಸಿದ ಬಳಿಕ ಬಿ.ಎಸ್​.ಯಡಿಯೂರಪ್ಪ(bs yediyurappa)ಗೆ ಅಧಿಕಾರ ಹಸ್ತಾಂತರಿಸಬೇಕಿತ್ತು. ಆದರೆ ಅಧಿಕಾರ ನೀಡಿದರೆ ಸೋದರ ರೇವಣ್ಣ(HD Revanna) ಡಿಸಿಎಂ ಆಗುತ್ತಾರೆ ಎಂಬುವುದನ್ನು ಸಹಿಸದೇ ಎಚ್​.ಡಿ.ಕುಮಾರಸ್ವಾಮಿ(hd kumaraswamy) ಅಧಿಕಾರ ನೀಡಲಿಲ್ಲ ಎಂದು ಇಂದು ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್ ಖಾನ್(zameer ahmed khan)​​ ಆರೋಪಿಸಿದರು. ಈ ಆರೋಪಕ್ಕೆ ಕೂಡಲೇ ಹಾಸನದಲ್ಲಿ ಎಚ್​.ಡಿ.ರೇವಣ್ಣ ತಿರುಗೇಟು ನೀಡಿದರು. ರೇವಣ್ಣ ಉಪಮುಖ್ಯಮಂತ್ರಿ ಆಗೋದನ್ನ ಹೆಚ್‌ಡಿಕೆ ಸಹಿಸಲಿಲ್ಲ‌ ಎಂದು ಜಮೀರ್​ ಹೇಳಿದ್ದಾರೆ. ಅವರಿಗೆ ಒಂದು ಮಾತು ಹೇಳ್ತೀನಿ, ಅವರಿಗೆ ನಮ್ಮ‌ ಸುದ್ದಿ ಬೇಡ. ಕುಮಾರಸ್ವಾಮಿ-ರೇವಣ್ಣ ಹೊಡೆದಾಡುತ್ತಾರೆ ಎಂದು ಬಿಜೆಪಿ, ಕಾಂಗ್ರೆಸ್ ಅವರು ಕನಸಲ್ಲಿ ಕಂಡರೂ ಆಗಲ್ಲ. ಉಪ ಮುಖ್ಯಮಂತ್ರಿ ಆಗಬೇಕು ಅಂದ್ರೆ ನಾನು, ಕುಮಾರಸ್ವಾಮಿ ಕುಳಿತು ಮಾತನಾಡುತ್ತೇವೆ. ಕುಮಾರಣ್ಣಂದು ಏನು, ರೇವಣ್ಣಂದು ಏನು ಗೊತ್ತಿದೆ. ಕಾಲ ಬಂದಾಗ ಕುಮಾರಣ್ಣ ಮಾಡುತ್ತಾನೆ, ಆದರೆ ನನ್ನನ್ನು ಮಾಡೋಕೆ ಬಿಡಲಿಲ್ಲ ಎನ್ನೋದು ಏಕೆ ಎಂದು ಕಿಡಿಕಾರಿದರು.

ಇಬ್ರಾಹಿಂನ ಗೋಳಾಡಿಸಿದರು

ಬಿಜೆಪಿಯವರು ಕಾಂಗ್ರೆಸ್​ನ 17 ಜನರನ್ನು ಕರೆದುಕೊಂಡು ಹೋಗಿ ಸರ್ಕಾರ ಮಾಡಿದರು. ಕುಮಾರಸ್ವಾಮಿ ಮಗ ನಿಖಿಲ್​​​ನನ್ನು, ದೇವೇಗೌಡರನ್ನ ಸೋಲಿಸಿದ್ರು. ಪ್ರಾದೇಶಿಕ ಪಕ್ಷವಾದ ನಾವು ಒಬ್ಬರು ಮುಸ್ಲಿಂ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಿ, ಕೇಂದ್ರದ ಮಂತ್ರಿ ಮಾಡಿದ್ದೇವೆ. ಇವರು ಇಬ್ರಾಹಿಂ ಬಳಿ ಕೆಲಸ ಮಾಡಿಸಿಕೊಂಡು ಈಗ ಎಂಎಲ್‌ಸಿ ಮಾಡಲು ಎಷ್ಟು ಗೋಳು ಹೊಯ್ದುಕೊಂಡಿದ್ದಾರೆ ಗೊತ್ತಾ ಎಂದು ಕಾಂಗ್ರೆಸ್ಸಿಗರ ವಿರುದ್ಧ ರೇವಣ್ಣ ವಾಗ್ದಾಳಿ ನಡೆಸಿದರು.

ಈಗಿರುವ ಕಾಂಗ್ರೆಸ್ ಬೇರೆ

ಕಾಂಗ್ರೆಸ್ ಪಕ್ಷದಲ್ಲಿ 30-40 ಪರ್ಸೆಂಟ್ ಮುಸ್ಲಿಂರಿದ್ದಾರೆ, ಅವರೇ ಕಾಂಗ್ರೆಸ್ ಅವರನ್ನು ನಂಬಲ್ಲ. ಕಾಂಗ್ರೆಸ್ ನ ಯಾರೂ ತೆಗೆಯಬೇಕಿಲ್ಲ, ಕಾಂಗ್ರೆಸ್-ಬಿಜೆಪಿಯದ್ದು ಅಡ್ಜೆಸ್ಟಮೆಂಟ್ ರಾಜಕೀಯ. ರೋಷನ್ ಬೇಗ್ ಅವರನ್ನು ತುಳಿದು ಹಾಕಿದ್ದು ಯಾರು? ದೇವರ ಮುಂದೆ ಬಂದು ಸತ್ಯ ಹೇಳಲಿ ಎಂದು ಸವಾಲೆಸೆದರು. ಕಾಂಗ್ರೆಸ್ ಗೆ ಯಾವ ನೈತಿಕತೆಯಿದೆ, ರಾಜ್ಯದಲ್ಲಿರುವುದು ಬೂಟಾಟಿಕೆ ಕಾಂಗ್ರೆಸ್. ಹೆಣ್ಣುಮಕ್ಕಳಿಗೆ ಮೀಸಲಾತಿ ಕೊಡಲು ತಾಕತ್ ಇದಿಯಾ? ಮಹಾತ್ಮಾಗಾಂಧಿ, ನೆಹರೂ ಕಟ್ಟಿದ ಕಾಂಗ್ರೆಸ್ ಈಗಿಲ್ಲ, ಈಗಿರುವ ಕಾಂಗ್ರೆಸ್ ಬೇರೆ. ಹಿಂದೆ 200-300 ಸೀಟ್ ಕಾಂಗ್ರೆಸ್ ಇತ್ತು , ಈಗ 30-40 ಸೀಟ್ ಕಾಂಗ್ರೆಸ್ ಇದೆ ಎಂದರು.

ಇದನ್ನೂ ಓದಿ: ರೇವಣ್ಣ DCM ಆಗೋದನ್ನು ಸಹಿಸದೇ ಕುಮಾರಸ್ವಾಮಿ ಅವರು BSYಗೆ ಅಧಿಕಾರ ಕೊಡಲಿಲ್ಲ: Zameer ವಾಗ್ದಾಳಿ

ಮುನಿಯಪ್ಪ, ಖರ್ಗೆ ಸೋಲಿನ ಬಗ್ಗೆ ಆತ್ಮಸಾಕ್ಷಿ ಇದೆಯಾ?

ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಅಜಾದ್ ಅವರನ್ನು ಕಿತ್ತು ಹಾಕಿದ್ರು. ಪಕ್ಷಕ್ಕಾಗಿ ದುಡಿದವರನ್ನೇ ಮೂಲೆಗುಂಪು ಮಾಡಿದ್ದಾರೆ. ಮುನಿಯಪ್ಪ, ಖರ್ಗೆ ಅವರನ್ನು ಯಾರೂ ಸೋಲಿಸಿದ್ರು ಆತ್ಮಸಾಕ್ಷಿಯಾಗಿ ಹೇಳಲಿ. ಅದನ್ನು ಹೇಳಲು‌ ಹೋದರೆ ಬೇರೆ ಆಗುತ್ತೆ. ನಿಮಗೆ ತಾಕತ್ತಿದ್ದರೆ ಚುನಾವಣೆ ಮಾಡಿ, ಅಲ್ಪಸಂಖ್ಯಾತರಿಗೆ ಒಳ್ಳೆಯದು ಮಾಡಿದ್ದರೆ ನಿಮಗೆ ಓಟು ಹಾಕ್ತಾರೆ. ಕಾಂಗ್ರೆಸ್ ನವರು ಅಧಿಕಾರಕ್ಕೋಸ್ಕರ ಯಾರ ಮನೆಗೆ ಬೇಕಾದ್ರು ಹೋಗಿ ಕಾಲುಕಟ್ಟುತ್ತಾರೆ. ಪ್ರಾಮಾಣಿಕರನ್ನು ತೆಗೆದರಲ್ಲ ಅದಕ್ಕೆ ದೇವರೇ ಕಾಂಗ್ರೆಸ್ ಗೆ ಶಿಕ್ಷೆ ಕೊಡುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು. ಎರಡು ಪಕ್ಷಗಳು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ತೆಗೆಯಲು ಹೋದರು, ಅವರು ಇಬ್ಬರಿಗೂ ಬಡಿದರು. ಕುಮಾರಸ್ವಾಮಿ ಪರ್ಸೆಂಟೆಜ್ ನವರನ್ನೆಲ್ಲಾ ಹೊರ ಹಾಕಿದ್ದಾರೆ. ಜಮೀನು ಬಿಡದಿ ಬಳಿ ಮಾಡಿಕೊಂಡು ತೋಟದಲ್ಲಿ ಅರಾಮಾಗಿದ್ದಾರೆ ಎಂದು ರೇವಣ್ಣ ಟಾಂಗ್​ ಕೊಟ್ಟರು.

ತಿರುಗೇಟು ನೀಡಿದ ಕುಮಾರಸ್ವಾಮಿ

ಇನ್ನು ಜಮೀರ್​ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಯಾವ ವ್ಯಕ್ತಿಯ ಬಗ್ಗೆಯೂ ಮಾತನಾಡುವ ಅವಶ್ಯಕತೆ ಇಲ್ಲ ಎನ್ನುವ ಮೂಲಕ ಅಸಮಾಧಾನ ಹೊರ ಹಾಕಿದರು. ಮುಸ್ಲಿಂ ವ್ಯಕ್ತಿಯನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಸಮಯ ಬಂದಾಗ ನೋಡೋಣ, ಅವರ ಸಲಹೆಯನ್ನು ಸ್ವೀಕಾರ ಮಾಡೋಣ. ನನಗೆ ಪ್ರಶ್ನೆ ಮಾಡೋವ್ರು, ಅವರವರ ಕ್ಷೇತ್ರಗಳಲ್ಲಿ ಎಷ್ಟು ಜನ ಮುಸ್ಲಿಂರಿಗೆ ಟಿಕೆಟ್ ಕೊಟ್ಟಿದ್ದಾರೆ. ನಮಗೆ ಉಚಿತವಾಗಿ ಸಲಹೆ ನೀಡುವವರು ಆ ಸಲಹೆಯನ್ನು ಪಾಲಿಸಿದ್ದಾರೆ. ಮಹಾನಾಯಕರು ಯಾವ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರನ್ನು ಅಭ್ಯರ್ಥಿ.
Published by:Kavya V
First published: