HD Revanna: ಸಚಿವ ಸ್ಥಾನ ತಪ್ಪಿಸಲು ಬಿಜೆಪಿಯಲ್ಲಿ ನಮ್ಮ ಮಾತು ಕೇಳುವವರು ಯಾರಿದ್ದಾರೆ?: ರೇವಣ್ಣ

ಶ್ರವಣ ಬೆಳಗೊಳದಲ್ಲಿ ಮುಂದೆ ಸಿಎನ್​ ಬಾಲಕೃಷ್ಣ ಕಣಕ್ಕೆ ಇಳಿಯುತ್ತಾರೆ, ಅವರೇ ನಮ್ಮ ಮುಂದಿನ ಶಾಸಕರು

ರೇವಣ್ಣ

ರೇವಣ್ಣ

 • Share this:
  ಹಾಸನ (ಆ. 6): ಬಿ ಎಸ್​ ಯಡಿಯೂರಪ್ಪ ಆಪ್ತರಾಗಿರುವ ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡಗೆ ಸಚಿವ ಸ್ಥಾನ ಕೈ ತಪ್ಪಲು ಜೆಡಿಎಸ್​ ದಳಪತಿಗಳು ಕಾರಣ ಎಂಬ ಸುದ್ದಿ ದಟ್ಟವಾಗಿತ್ತು. ಈ ಎಲ್ಲಾ ಊಹಾಪೋಹಾಕ್ಕೆ ಖುದ್ದು ಶಾಸಕ ಎಚ್​ಡಿ ರೇವಣ್ಣ ತೆರೆ ಎಳೆದಿದ್ದಾರೆ. ನಾವು ಯಾರಿಗೂ ಸಚಿವ ಸ್ಥಾನ ತಪ್ಪಿಸಿಲ್ಲ.ಯಾರ ಬಗ್ಗೆಯೂ ವೈಯಕ್ತಿಕ ದ್ವೇಷ ಇಲ್ಲ. ಸಚಿವ ಸ್ಥಾನ ತಪ್ಪಿಸಲು ನಮ್ಮ ಮಾತನ್ನು ಬಿಜೆಪಿಯಲ್ಲಿ ಕೇಳುವವರು ಯಾರಿದ್ದಾರೆ ಎಂದು ಪ್ರಶ್ನಿಸಿದರು. ಚನ್ನರಾಯಪಟ್ಟಣ ತಾಲೂಕಿನ ಆಲಗೊಂಡನಹಳ್ಳಿ 57 ಕೋಟಿ ವೆಚ್ಚದ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಜಿಲ್ಲೆಯ ರಸ್ತೆ ಕಾಮಗಾರಿ ಬಗ್ಗೆ ಮಾತನಾಡಲು ದೆಹಲಿಗೆ ಹೋಗಿದ್ದೆವು. ಜೊತೆಗೆ ಯಿದ್ದ ಯೋಜನೆಗಳಿಗೆ ಅನುಮೋದನೆ ಬಿಡುಗಡೆ ಮಾಡುವ ಕುರಿತು  ಮನವಿ ಮಾಡಲು ಬಿಜೆಪಿ ನಾಯಕರ ಭೇಟಿ ಮಾಡಲಾಗಿತ್ತು ಎಂದು ಸ್ಪಷ್ಟಪಡಿಸಿದರು.

  ಸೂರಜ್​ ಅಲ್ಲ ಬಾಲಣ್ಣನೇ ಶಾಸಕ
  ಈಗಾಗಲೇ ಜಿಲ್ಲೆಯಲ್ಲಿ ಸೂರಜ್​ ರೇವಣ್ಣ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶ್ರವಣ ಬೆಳಗೊಳದಿಂದ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ರೇವಣ್ಣ, ಈ ಮಾತನ್ನು ಅಲ್ಲಗಳೆದರು. ಯಾರು ಏನೇನೋ ಮಾತನಾಡುತ್ತಿದ್ದಾರೆ. ಆದರೆ, ಇದು ಯಾವುದು ಸತ್ಯ ಅಲ್ಲ. ಶ್ರವಣ ಬೆಳಗೊಳದಲ್ಲಿ ಮುಂದೆ ಸಿಎನ್​ ಬಾಲಕೃಷ್ಣ ಕಣಕ್ಕೆ ಇಳಿಯುತ್ತಾರೆ, ಅವರೇ ನಮ್ಮ ಮುಂದಿನ ಶಾಸಕರು ಎಂದರು.

  ಬಿಜೆಪಿ ಹಿರಿಯ ನಾಯಕ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿ ವಿಚಾರ ಕುರಿತು ಮಾತನಾಡಿ, ಅವರು ಹಿರಿಯ ರಾಜಕಾರಣಿ, ಅವರ ಬಗ್ಗೆ ಗೌರವ ಇದೆ. ರಾಜ್ಯದ ಹಿತ ದೃಷ್ಟಿಯಿಂದ, ಚಾಮರಾಜನಗರ, ಮೈಸೂರು ಜಿಲ್ಲೆಯ ಹಿತದಿಂದ ಅವರು ಮುಂದುವರೆಯುವುದು ಒಳ್ಳೆಯದು. ಅರೋಗ್ಯ ವಿಚಾರ ಬೇರೆ, ದೇವೇಗೌಡರು 89 ವರ್ಷ ಆದರೂ ಇಲ್ಲವೇ. ಆದ್ದರಿಂದ ಅವರು ರಾಜಕೀಯವಾಗಿ ಮುಂದುವರೆದು ಕೆಲಸ ಮಾಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  ಇದನ್ನು ಓದಿ: ನಾಳೆ ಎಸ್​ಎಸ್ಎಲ್​ಸಿ ಫಲಿತಾಂಶ ಪ್ರಕಟವಾಗುವುದಿಲ್ಲ; ಶಿಕ್ಷಣ ಇಲಾಖೆ

  ಈ ವೇಳೆ ಚನ್ನರಾಯಪಟ್ಟಣ ಹೊರವಲಯದಲ್ಲಿ ಬಡಾವಣೆ ನಿರ್ಮಾಣ ವಿಚಾರ ಕುರಿತು ಕಾರ್ಯಕ್ರಮದಲ್ಲೇ ಪೊಲೀಸರಿಗೆ ತರಾಟೆ ತೆಗೆದುಕೊಂಡ ಅವರು, ಸಿಕ್ಕ ಸಿಕ್ಕ ಕಡೆ ನಿವೇಶನ ಮಾಡಿದ್ರೆ ರಸ್ತೆ ಮಾಡುವವರು ಯಾರು? ಹಳ್ಳಿಯ ಹತ್ತು ಎಕರೆ ಕರಾಬು ಭೂಮಿ ಲಪಟಾಯಿಸಿ ಬಡಾವಣೆ ಮಾಡುತ್ತಾ ಇದ್ದಾರೆ. ಪಂಚಾಯಿತಿ ಕಾರ್ಯದರ್ಶಿ ದೂರು ನೀಡಿದ್ದರೂ ಯಾಕೆ ಕೇಸ್ ಮಾಡಿಲ್ಲ. ನೀವು ಅವರೊಟ್ಟಿಗೆ ಶಾಮೀಲಾಗಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ ರೇವಣ್ಣ,  ಸ್ಥಳದಲ್ಲಿದ್ದ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ವಿರುದ್ಧ ಹರಿಹಾಯ್ದರು. ಅಲ್ಲದೇ ಇಂದು ಸಂಜೆಯೊಳಗೆ ಈ ಸಂಬಂಧ ದೂರು ದಾಖಲಾಗಬೇಕು. ಇಲ್ಲ ಅಂದ್ರೆ ಇಂದು ಸಂಜೆ ಪೊಲೀಸ್ ಠಾಣೆ ಎದುರು ಧರಣಿ ಕೂರುತ್ತೀನಿ ಎಂದು ಎಚ್ಚರಿಸಿದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟು ನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿ ಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: