• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • JDS Ticket Crisis: ಗೊಂದಲದ ನಡುವೆಯೂ ಹಾಸನದಲ್ಲಿ ರೇವಣ್ಣ ಪ್ರಚಾರ; ಮುಖಂಡರ ತುರ್ತು ಸಭೆ ಕರೆದ ಎಚ್‌ಡಿ ಕುಮಾರಸ್ವಾಮಿ

JDS Ticket Crisis: ಗೊಂದಲದ ನಡುವೆಯೂ ಹಾಸನದಲ್ಲಿ ರೇವಣ್ಣ ಪ್ರಚಾರ; ಮುಖಂಡರ ತುರ್ತು ಸಭೆ ಕರೆದ ಎಚ್‌ಡಿ ಕುಮಾರಸ್ವಾಮಿ

ಎಚ್‌ಡಿ ಕುಮಾರಸ್ವಾಮಿ

ಎಚ್‌ಡಿ ಕುಮಾರಸ್ವಾಮಿ

ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ಗೊಂದಲದ ನಡುವೆಯೇ ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರು ಇಂದು ಕೂಡ ಹಾಸನದಲ್ಲಿ ಪ್ರಚಾರ ಕಾರ್ಯವನ್ನು ಹಮ್ಮಿಕೊಂಡಿದ್ದಾರೆ. ಶಾಸಕ ಪ್ರೀತಂ ಗೌಡ ಹಾಕಿರುವ ಸವಾಲನ್ನು ಈಗಾಗಲೇ ಸ್ವೀಕರಿಸಿರುವ ಎಚ್‌ಡಿ ರೇವಣ್ಣ ಇಂದು ಹಾಸನ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮತ ಪ್ರಚಾರವನ್ನು ಮುಂದುವರಿಸಿದ್ದಾರೆ.

ಮುಂದೆ ಓದಿ ...
  • Share this:

ಹಾಸನ: ಹಾಸನದಲ್ಲಿ ಜೆಡಿಎಸ್‌ (Hassan JDS Ticket) ಪಕ್ಷದ ಟಿಕೆಟ್ ಹಂಚಿಕೆ ಗೊಂದಲ ಇನ್ನೂ ಬಗೆಹರಿದಿಲ್ಲ. ದಿನೇ ದಿನೇ ಯಾರಿಗೆ ಟಿಕೆಟ್ ನೀಡಬೇಕು ಅನ್ನೋ ಸಮಸ್ಯೆ ವೃದ್ಧಿಯಾಗುತ್ತಲೇ ಇದೆ. ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಗೌಡರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡದೆ ಎಚ್‌ಪಿ ಸ್ವರೂಪ್‌ (HP Swaroop) ಅವರಿಗೆ ಹಾಸನ ಕ್ಷೇತ್ರದ ಟಿಕೆಟ್ ನೀಡಬೇಕು ಎಂದು ವಾದಿಸಿದ್ರೆ, ಅತ್ತ ಶಾಸಕ ಪ್ರೀತಂ ಗೌಡರನ್ನು (Preetham Gowda) ಸೋಲಿಸಲು ಗೌಡರ ಕುಟುಂಬದ ಸದಸ್ಯರೇ ಚುನಾವಣೆಗೆ ನಿಲ್ಲಬೇಕು ಎಂಬುದು ಎಚ್‌ಡಿ ರೇವಣ್ಣ (HD revanna) ಫ್ಯಾಮಿಲಿಯ ಒತ್ತಾಯ.


ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ಗೊಂದಲದ ನಡುವೆಯೇ ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರು ಇಂದು ಕೂಡ ಹಾಸನದಲ್ಲಿ ಪ್ರಚಾರ ಕಾರ್ಯವನ್ನು ಹಮ್ಮಿಕೊಂಡಿದ್ದಾರೆ. ಶಾಸಕ ಪ್ರೀತಂ ಗೌಡ ಹಾಕಿರುವ ಸವಾಲನ್ನು ಈಗಾಗಲೇ ಸ್ವೀಕರಿಸಿರುವ ಎಚ್‌ಡಿ ರೇವಣ್ಣ ಇಂದು ಹಾಸನ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮತ ಪ್ರಚಾರವನ್ನು ಮುಂದುವರಿಸಲಿದ್ದಾರೆ.


ಇದನ್ನೂ ಓದಿ: HD Kumaraswamy:ಭವಾನಿ ರೇವಣ್ಣ ಸ್ಪರ್ಧೆ ಹಾಸನಕ್ಕೆ ಅನಿವಾರ್ಯ ಅಲ್ಲ, ಸೂಕ್ತ ಮಾಜಿ ಸಿಎಂ ಹೆಚ್​​ಡಿಕೆಗೆ ಸೂರಜ್​ ರೇವಣ್ಣ ಟಾಂಗ್​


ಎಚ್‌ಡಿಕೆ ವಿರೋಧದ ಮಧ್ಯೆಯೂ ರೇವಣ್ಣ ಪ್ರಚಾರ


ಎಚ್‌ಡಿ ಕುಮಾರಸ್ವಾಮಿ ವಿರೋಧದ ನಡುವೆಯೂ ಪ್ರಚಾರ ಪ್ರಾರಂಭಿಸಿರೋ ಎಚ್‌ಡಿ ರೇವಣ್ಣ ಮತ್ತು ಕುಟುಂಬ, ಎಚ್‌ಪಿ ಸ್ವರೂಪ್ ಅವರ ಮಿಂಚಿನ ಸಂಚಾರದಿಂದ ಸೃಷ್ಟಿಯಾಗಿರುವ ಗೊಂದಲದ ನಿವಾರಣೆಗೆ ತಂತ್ರ ರೂಪಿಸಿದ್ದು, ರೇವಣ್ಣ ಕುಟುಂಬದಿಂದಲೇ ಈ ಬಾರಿ ಚುನಾವಣೆಗೆ ಅಭ್ಯರ್ಥಿ ನಿಲ್ಲಲಿದ್ದಾರೆ ಎನ್ನುವ ಸಂದೇಶವನ್ನು ಜನರಿಗೆ ತಲುಪಿಸಲು ಪ್ಲಾನ್ ರೂಪಿಸಿದ್ದಾರೆ. ಇದರ ಭಾಗವಾಗಿ ಗ್ರಾಮೀಣ ಭಾಗದ ಜನರನ್ನು ತಲುಪಲು ಮುಂದಾಗಿರುವ ಎಚ್‌ಡಿ ರೇವಣ್ಣ, ನಿನ್ನೆಯಿಂದಲೆ ಭರ್ಜರಿ ಪ್ರಚಾರ ಶುರು ಮಾಡಿದ್ದಾರೆ. ಹೀಗಾಗಿ ಶತಾಯ ಗತಾಯ ಈ ಬಾರಿ ಹಾಸನದ ಟಿಕೆಟ್‌ನ್ನು ಪಡೆಯಲೇ ಬೇಕು ಎಂದು ಪಣ ತೊಟ್ಟಂತಿದೆ.


ಎಚ್‌ಡಿಕೆ ಮಾಸ್ಟರ್‌ಪ್ಲಾನ್‌

ಇನ್ನು ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಉಂಟಾಗಿರುವ ಗೊಂದಲ‌ವನ್ನು ಬಗೆ ಹರಿಸಲು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಈ ಬಗ್ಗೆ ಭಾನುವಾರ ಬೆಂಗಳೂರಿನಲ್ಲಿ ಹಾಸನ ಕ್ಷೇತ್ರದ ಪ್ರಮುಖ ಕಾರ್ಯಕರ್ತರು, ಮುಖಂಡರ ಸಭೆ ಕರೆದಿರುವ ಕುಮಾರಸ್ವಾಮಿ, ಟಿಕೆಟ್ ಹಂಚಿಕೆ ಬಗ್ಗೆ ಅವರಿಂದ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಈ ಸಭೆಯಲ್ಲಿ ಮಾಜಿ ಜಿಪಂ‌ ಸದಸ್ಯರು, ತಾಪಂ ಮಾಜಿ ಸದಸ್ಯರು, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇರುವ ಪ್ರಮುಖರು ಭಾಗಿಯಾಗಲಿದ್ದಾರೆ.


ಎಚ್‌ಡಿ ಕುಮಾರಸ್ವಾಮಿ ಅವರ ಕಚೇರಿಯಿಂದಲೇ ಹಾಸನದ ಪ್ರಮುಖ ಕಾರ್ಯಕರ್ತರಿಗೆ ಸಭೆಗೆ ಹಾಜರಾಗುವಂತೆ ಫೋನ್ ಮೂಲಕ ಆಮಂತ್ರಣ ಹೋಗಿದ್ದು, ಈ ಸಭೆಯಲ್ಲಿ ಸುಮಾರು 300 ಜನ ಪ್ರಮುಖರು ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.


ಇದನ್ನೂ ಓದಿ: HD Revanna: ಹೈವೋಲ್ಟೇಜ್‌ ಕ್ಷೇತ್ರ ಹಾಸನದಿಂದ ಚುನಾವಣೆಗೆ ಸ್ಪರ್ಧಿಸಲು ಎಚ್‌ಡಿ ರೇವಣ್ಣಗೆ ಸಿಕ್ತಾ ಗ್ರೀನ್‌ ಸಿಗ್ನಲ್?


ಬೆಂಗಳೂರಿನಲ್ಲಿ ಮುಖಂಡರ ಸಭೆ


ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆ ಬಳಿಕ ಬೆಂಗಳೂರಿನಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಅಭ್ಯರ್ಥಿ ಯಾರಾದರೆ ಗೆಲುವು ಸುಲಭವಾಗಲಿದೆ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಆ ಬಳಿಕ ಎಲ್ಲರ ಅಭಿಪ್ರಾಯ ಏನಿದೆ ಎಂದು ನೋಡಿಕೊಂಡು ಹಾಸನ ಟಿಕೆಟ್ ಯಾರಿಗೆ ನೀಡಬೇಕು ಎಂಬ ಬಗ್ಗೆ ಕುಮಾರಸ್ವಾಮಿ ತೀರ್ಮಾನ ಮಾಡಲಿದ್ದಾರೆ. ಇನ್ನೊಂದೆಡೆ ಹಾಸನ ಕ್ಷೇತ್ರದ ಬಗ್ಗೆ ಗೌಪ್ಯ ಸರ್ವೇ ಮಾಡಿಸಿ ವರದಿ ತರಿಸಿಕೊಂಡಿರುವ ಕುಮಾರಸ್ವಾಮಿ ಅವರು, ಆ ವರದಿಯಲ್ಲಿರುವ ಅಂಶಗಳು ಮತ್ತು ಸಭೆಯಲ್ಲಿ ಪ್ರಮುಖ ಮುಖಂಡರ ಅಭಿಪ್ರಾಯವನ್ನು ನೋಡಿಕೊಂಡು ಟಿಕೆಟ್ ತೀರ್ಮಾನ ಮಾಡಲಿದ್ದಾರೆ.




ಇನ್ನು ಹಾಸನದ ಟಿಕೆಟ್‌ ಭವಾನಿ ರೇವಣ್ಣ ಅವರಿಗೆ ನೀಡುವ ಬಗ್ಗೆ ತೀವ್ರ ಅಸಮಾಧಾನ ಹೊಂದಿರುವ ಎಚ್‌ಡಿ ಕುಮಾರಸ್ವಾಮಿ ಸ್ವರೂಪ್ ಬೆನ್ನಿಗೆ ನಿಂತಿದ್ದು, ಈ ಹಿಂದೆಯೇ ಸ್ವರೂಪ್ ಅವರನ್ನು ಜೆಡಿಎಸ್ ಪಕ್ಷದ ಹಾಸನ ಕ್ಷೇತ್ರದ ಅಭ್ಯರ್ಥಿ ಎಂದು ಹೇಳಲಾಗಿತ್ತು. ಈಗಾಗಲೇ ಒಂದು ಸುತ್ತಿನ ಪ್ರಚಾರ ಕಾರ್ಯವನ್ನು ಮುಗಿಸಿರುವ ಸ್ವರೂಪ್, ಟಿಕೆಟ್ ಬಗ್ಗೆ ಕುಮಾರಸ್ವಾಮಿ ಮೇಲೆಯೇ ಪೂರ್ಣ ಭರವಸೆ ಇಟ್ಟಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಏನು ತೀರ್ಮಾನ ಆಗಬಹುದು ಎಂಬುದು ಭಾರೀ ಕುತೂಹಲ ಮೂಡಿಸಿದೆ.

Published by:Avinash K
First published: