ನೆರೆ ಪ್ರದೇಶಕ್ಕೆ ಕಂದಾಯ ಸಚಿವರ ಭೇಟಿ ಕಾಟಾಚಾರದ ಪ್ರವಾಸ: ಎಚ್​ಡಿ ಕುಮಾರಸ್ವಾಮಿ ಟೀಕೆ

ಸತತ ನೆರೆಯಿಂದ ಸಂತ್ರಸ್ಥರು ಕಂಗೆಟ್ಟಿದ್ದಾರೆ. ಸರ್ಕಾರ ಯುದ್ದೋಪಾದಿಯಲ್ಲಿ  ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಶೀಘ್ರದಲ್ಲೇ ಒಂದು ಪತ್ರ ಬರೆಯುತ್ತೇನೆ

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

  • Share this:
ಬೆಂಗಳೂರು (ಅ.16): ರಾಜ್ಯದಲ್ಲಿ ಮೂರನೇ ಹಂತದ ನೆರೆಹಾವಳಿ ಇದ್ದರೂ ಈ ಬಗ್ಗೆ ಪ್ರಧಾನ ಮಂತ್ರಿ ಮೋದಿಗಳು ನಿರ್ಲಕ್ಷ್ಯ ತೋರಿದ್ದಾರೆ. ನೆರೆಯ ತೆಲಂಗಾಣ, ಮಹಾರಾಷ್ಟ್ರದ ಪ್ರವಾಹಕ್ಕೆ ಸ್ಪಂದಿಸುವ ಪ್ರಧಾನಿಗಳಿಗೆ ನಮ್ಮ ರಾಜ್ಯದ ಉತ್ತರ ಕರ್ನಾಟಕ ಕಾಣಿಸುತ್ತಿಲ್ಲ. ರಾಜ್ಯದಲ್ಲಿ ನೆರೆಯಿಂದ ಇಷ್ಟೊಂದು ಅನಾಹುತ ಆಗಿದೆ. ಆದರೂ ಕೂಡ ಪ್ರಧಾನಿಗಳು ಸೌಜನ್ಯಕ್ಕೂ ರಾಜ್ಯದ ಸಿಎಂ ಜೊತೆ ಏನು ಅಂತಾ ಮಾತಾಡಿಲ್ಲ. ಇದು ಕನ್ನಡಿಗರಿಗೆ ಮಾಡಿರುವ ಅವಮಾನ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ  ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. 

ಮುಂದುವರೆದು ಮಾತನಾಡಿದ ಅವರು, ರಾಜ್ಯದಿಂದ 25 ಬಿಜೆಪಿ ಸಂಸದರನ್ನು ಸಂಸತ್ತಿಗೆ ಆಯ್ಕೆ ಮಾಡಿಕಳುಹಿಸಲಾಗಿದೆ. ಇದರಿಂದ ರಾಜ್ಯವೇ ನಮ್ಮ ಕೈಯಲ್ಲಿದೆ ಎಂದು ಕೊಂಡಿದ್ದರು. ಆದರೆ, ಇವರ ಪರಿಸ್ಥಿತಿ ಯಾವ ಮಟ್ಟದಲ್ಲಿ ಇದೆ. ಪ್ರಧಾನಿಗಳು ಅವರನ್ನು ಯಾವ ರೀತಿ ಇಟ್ಟಿದ್ದಾರೆ ಎಂಬುದನ್ನು ನೋಡಿದರೆ ಇವರು ನಿಜವಾಗಿಯೂ ನಾವು ಸಂಸತ್ ಸದಸ್ಯರಾ ಎಂಬುದನ್ನು ಅವರೇ ಯೋಚನೆ ಮಾಡಬೇಕಾಗಿದೆ ಎಂದು ಬಿಜೆಪಿ ಸಂಸದರಿಗೆ ಕುಟುಕಿದರು.

ಇಂದು ಪ್ರವಾಹ ಪೀಡಿತ ಕಲಬುರ್ಗಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕಂದಾಯ ಸಚಿವ ಆರ್​ ಅಶೋಕ್​ ಪ್ರವಾಸ ವಿಚಾರ ಟೀಕಿಸಿದ ಅವರು, ಇದೊಂದು ಕಾಟಾಚಾರದ ಪ್ರವಾಸ ಎಂದಿದ್ದಾರೆ.

ನೆರೆಯಿಂದ ಕಲ್ಯಾಣ ಕರ್ನಾಟಕದ ಜನರು ತತ್ತರಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಜನರು ಪ್ರವಾಹಕ್ಕೆ ನಲುಗಿದ್ದಾರೆ. ಕಂದಾಯ ಸಚಿವರು ಇಂದು ಭೇಟಿ ನೀಡಿದ್ದಾರೆ. ಇವತ್ತು ಅವರನ್ನು ಬಿಟ್ಟು ಬೇರೆ ಯಾವುದೇ ಸಚಿವರು ಸಂತ್ರಸ್ಥರ ಸಮಸ್ಯೆ ಕೇಳಿಲ್ಲ. ನೆರೆ ಹಾವಳಿಯಿಂದ ಕಂಗೆಟ್ಟಿರುವ ರೈತರಿಗೆ, ಸರ್ಕಾರ ಆತ್ಮಸ್ಥೈರ್ಯ ತುಂಬದೆ ಇರುವುದು ರಾಜ್ಯದ ದುರ್ದೈವ ಎಂದರು.

ಇದನ್ನು ಓದಿ: ಪ್ರವಾಹ ತುರ್ತು ಪರಿಹಾರ ಕಾರ್ಯಕ್ಕೆ 85 ಕೋಟಿ ರೂ ಬಿಡುಗಡೆ; ಸಂತ್ರಸ್ತರ ಅಗತ್ಯ ಸೇವೆಗೆ ಸಿಎಂ ಸೂಚನೆ

ಸತತ ನೆರೆಯಿಂದ ಸಂತ್ರಸ್ಥರು ಕಂಗೆಟ್ಟಿದ್ದಾರೆ. ಸರ್ಕಾರ ಯುದ್ದೋಪಾದಿಯಲ್ಲಿ  ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಶೀಘ್ರದಲ್ಲೇ ಒಂದು ಪತ್ರ ಬರೆಯುತ್ತೇನೆ ಎಂದರು.

ಇನ್ನು ಮೈಸೂರಿನಲ್ಲಿ ಮಾತನಾಡಿರುವ ಮುಖ್ಯಮಂತ್ರಿಗಳು , ಪ್ರವಾಹ ಪೀಡಿತ ಪ್ರದೇಶಗಳಿಗೆ ಎರಡು ಮೂರು ದಿನಗಳ ಕಾಲ ನಾನು ಪ್ರವಾಸ ಕೈಗೊಳ್ಳುತ್ತೇನೆ. ಅಲ್ಲಿನ ಪರಿಸ್ಥಿತಿ ಕುರಿತು ಈಗಾಗಲೇ ಅಲ್ಲಿನ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ‌ ಮಾಹಿತಿ ಪಡೆದಿದ್ದೇನೆ. ನಮ್ಮ ಸಚಿವರು ಹೋಗಿದ್ದಾರೆ.  ಇನ್ನು ಕೆಲವರು ಹೋಗುತ್ತಾರೆ. ಜನರ ಜೊತೆ ಸರ್ಕಾರ ಇದೆ. ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುತ್ತೇವೆ. ಹಣದ ಕೊರತೆ ಇಲ್ಲ,ನೆರೆ ಸಂತ್ರಸ್ತರ ಜೊತೆ ನಾವಿದ್ದೇವೆ ಎಂದು ಭರವಸೆ ನೀಡಿದರು.
Published by:Seema R
First published: