ಹುಬ್ಬಳ್ಳಿ ಮನೆ ಖಾಲಿ ಮಾಡಿದ ಸಿಎಂ ಕುಮಾರಸ್ವಾಮಿ

news18
Updated:September 4, 2018, 7:51 PM IST
ಹುಬ್ಬಳ್ಳಿ ಮನೆ ಖಾಲಿ ಮಾಡಿದ ಸಿಎಂ ಕುಮಾರಸ್ವಾಮಿ
news18
Updated: September 4, 2018, 7:51 PM IST
ಪರಶುರಾಮ್​ ತಹಶೀಲ್ದಾರ್​, ನ್ಯೂಸ್​ 18 ಕನ್ನಡ

ಹುಬ್ಬಳ್ಳಿ (ಸೆ.4): ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಬಲವರ್ಧನೆ ಮಾಡುವ ಉದ್ದೇಶದಿಂದ ಚುನಾವಣೆಗೂ ಮುನ್ನ ವಾಣಿಜ್ಯ ನಗರಿಯಲ್ಲಿ ಮನೆ ಮಾಡಿದ್ದ ಸಿಎಂ ಕುಮಾರಸ್ವಾಮಿ ಈಗ ಸದ್ದಿಲ್ಲದಂತೆ ಆ ಮನೆಯನ್ನು ಖಾಲಿ ಮಾಡಿದ್ದಾರೆ.

ಭೈರಿದೇವರಕೊಪ್ಪದ ಮಾಯಕಾರ ಕಾಲೋನಿಯಲ್ಲಿ 2016ರಲ್ಲಿ ಕುಮಾರಸ್ವಾಮಿ  ಮನೆಯನ್ನು ಬಾಡಿಗೆ ಪಡೆದಿದ್ದರು. ಚುನಾವಣಾ ಪೂರ್ವದಲ್ಲಿ  ಉತ್ತರ ಕರ್ನಾಟಕ ಪ್ರವಾಸ ಕೈಗೊಂಡ ವೇಳೆ ಅನೇಕ ಬಾರಿ ಈ ಮನೆಯಲ್ಲಿ ವಾಸ್ತವ್ಯವನ್ನು ಅವರು ಹೂಡಿದ್ದರು. ಆದರೆ ಅವರು ಮುಖ್ಯಮಂತ್ರಿಯಾದ ಬಳಿಕ ಒಂದು ಬಾರಿಯೂ ಈ ಮನೆಗೆ ಭೇಟಿ ನೀಡಿಲ್ಲ.

ಜೆಡಿಎಸ್​ ಕಚೇರಿ ಜೊತೆಗೆ ವಾಸ್ತವ್ಯಕ್ಕೆ ಈ ಮನೆ ಉಪಯೋಗಿಸುತ್ತಿದ್ದ ಕಾರ್ಯಕರ್ತರು ಈಗ ಅನಿವಾರ್ಯವಾಗಿ ಈ ಮನೆಯನ್ನು ತೊರೆಯಬೇಕಾಗಿದೆ. ಕಾರಣ ಈ ಮನೆ ಮಾಲೀಕ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದಾರೆ, ಮನೆ ಮಾಲೀಕ ಸುರೇಶ ರಾಯರೆಡ್ಡಿ ಮನೆ ಮಾರಾಟಕ್ಕೆ ಮುಂದಾಗಿದ್ದು, ಕಾರ್ಯಕರ್ತರು ಮನೆಯಲ್ಲಿರುವ ವಸ್ತುಗಳನ್ನು ಶಿಫ್ಟ್​ ಮಾಡಿದ್ದಾರೆ.

ಜೆಡಿಎಸ್​ ಪಕ್ಷದ ಬೋರ್ಡ್‌ ಸೇರಿದಂತೆ ಪೀಠೋಪಕರಣಗಳನ್ನು ಬೇರೆಡೆ ಸ್ಥಳಾಂತರಿಸಿದ್ದು,   ನಗರದ ಬೇರೆಡೆ  ಹೊಸ ಮನೆ ಹಾಗೂ ಜೆಡಿಎಸ್ ಕಚೇರಿ ನಿರ್ಮಾಣ ಮಾಡುವ ಉದ್ದೇಶವಿದೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ ತಿಳಿಸಿದ್ದಾರೆ.

ಪ್ರಲ್ಹಾದ್​ ಜೋಶಿ ವಾಗ್ದಾಳಿ: 
Loading...

ಮನೆ ಸ್ಥಳಾಂತರಿಸುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಪ್ರಲ್ಹಾದ್​ ಜೋಶಿ ದೇವೇಗೌಡ ಮತ್ತು ಕುಮಾರಸ್ವಾಮಿಯವರದ್ದು ಒಂದು ನಾಟಕ ಕಂಪನಿ. ಜನರಿಗೆ ಮೋಸಮಾಡಲು ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದರು. ಉತ್ತರ ಕರ್ನಾಟಕಕ್ಕೆ ಅವರು ನಿರಂತರ ಅನ್ಯಾಯ ಮಾಡಿದ್ದಾರೆ. ಇಲ್ಲಿನ ಜನರಿಗೆ ಮುಖ ತೋರಿಸಲು ಆಗದೆ ಹುಬ್ಬಳ್ಳಿಗೆ ಬರುತ್ತಿಲ್ಲ ಎಂದು ವಾಗ್ಧಾಳಿ ನಡೆಸಿದರು.

ಚುನಾವಣಾ ಪೂರ್ವದಲ್ಲಿ ಉತ್ತರ ಕರ್ನಾಟಕ ಭಾಗದ ಜನರಿಗೆ ಹಲವು ಭರವಸೆಗಳನ್ನು ನೀಡಿದ್ದರು. ತಿಂಗಳಲ್ಲಿ ಒಂದು ವಾರ ಹುಬ್ಬಳ್ಳಿಯ ಮನೆಯಲ್ಲಿ ವಾಸ್ತವ್ಯ ಮಾಡುತ್ತೇನೆ. ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದಿದ್ದರು.

ಮುಖ್ಯಮಂತ್ರಿಗಳಾಗಿ ನೂರು ದಿನಗಳು ಕಳೆದರೂ ಎಚ್‌ಡಿಕೆ ಹುಬ್ಬಳ್ಳಿಗೆ ಆಗಮಿಸಿಲ್ಲ. ಉತ್ತರ ಕರ್ನಾಟಕ ಪ್ರವಾಸ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಇದು ಕುಮಾರಸ್ವಾಮಿಯವರ ತಾರತಮ್ಯ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...