ರಾಜಕೀಯ ಅಂದ್ರೆ ಕಾವಿ ಧರಿಸಿ ಗಡ್ಡ ಬಿಟ್ಟು ಶೋಕಿ ಮಾಡೋದಲ್ಲ; ಶ್ರೀರಾಮುಲು ವಿರುದ್ಧ ಎಚ್​ಡಿಕೆ ವಾಗ್ದಾಳಿ

ನಿಮ್ಮ ಸಮುದಾಯದ ಮಹಿಳೆಯರಿಗೆ ಅನ್ಯಾಯವಾಗಿದೆ. ಈ ರೀತಿ ಅನ್ಯಾಯವಾದಾಗ ನೀವು, ಸಿಎಂ ಎಲ್ಲಿದ್ದೀರಾ? ಈಗ ನಮ್ಮ ಕುಟುಂಬದ ಕಣ್ಣೀರಿನ ಬಗ್ಗೆ ಮಾತನಾಡುತ್ತೀರಾ. ನಾವು ನಿಮ್ಮಂತೆ ಅಲ್ಲ. ನಮಗೆ ಬಡವರ ಕಷ್ಟ ನೋಡಿದರೆ ಕಣ್ಣೀರು ಬರುತ್ತದೆ ಎಂದರು.

Seema.R | news18-kannada
Updated:November 29, 2019, 5:16 PM IST
ರಾಜಕೀಯ ಅಂದ್ರೆ ಕಾವಿ ಧರಿಸಿ ಗಡ್ಡ ಬಿಟ್ಟು ಶೋಕಿ ಮಾಡೋದಲ್ಲ; ಶ್ರೀರಾಮುಲು ವಿರುದ್ಧ ಎಚ್​ಡಿಕೆ ವಾಗ್ದಾಳಿ
ಶ್ರೀರಾಮುಲು ಮತ್ತು ಹೆಚ್​.ಡಿ. ಕುಮಾರಸ್ವಾಮಿ.
  • Share this:
ಬೆಂಗಳೂರು (ನ.29): ರಾಜಕೀಯ ಎಂದರೆ ಕೇವಲ ಗಡ್ಡ ಬಿಟ್ಟು ಶೋಕಿ ಮಾಡುವುದಲ್ಲ ಎಂದು ಸಚಿವ ಶ್ರೀರಾಮುಲು ವಿರುದ್ಧ ಎಚ್​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. 

ಯಶವಂತಪುರದಲ್ಲಿ ಪ್ರಚಾರ ನಡೆಸಿದ ಅವರು, ಈ ದೇಶದ ಮಣ್ಣನ್ನು ವಿದೇಶಕ್ಕೆ ಮಾರುತ್ತಿದ್ದೀರಿ. ಈಗ ನನ್ನ ಬಗ್ಗೆ ಮಾತನಾಡುತ್ತಿದ್ದೀರಾ. ನನ್ನ ಬಗ್ಗೆ ಮಾತನಾಡುವ ನೈತಿಕತೆ ಏನಿದೆ ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಸಮುದಾಯದ ಮಹಿಳೆಯರಿಗೆ ಅನ್ಯಾಯವಾಗಿದೆ. ಈ ರೀತಿ ಅನ್ಯಾಯವಾದಾಗ ನೀವು, ಸಿಎಂ ಎಲ್ಲಿದ್ದೀರಾ? ಈಗ ನಮ್ಮ ಕುಟುಂಬದ ಕಣ್ಣೀರಿನ ಬಗ್ಗೆ ಮಾತನಾಡುತ್ತೀರಾ. ನಾವು ನಿಮ್ಮಂತೆ ಅಲ್ಲ. ನಮಗೆ ಬಡವರ ಕಷ್ಟ ನೋಡಿದರೆ ಕಣ್ಣೀರು ಬರುತ್ತದೆ ಎಂದರು.

ಕಾಂಗ್ರೆಸ್, ಜೆಡಿಎಸ್​ ಶಾಸಕರನ್ನು ಯಡಿಯೂರಪ್ಪ ಖರೀದಿಸಿದ ಸರ್ಕಾರ ಬೀಳಿಸಿದರು. ಅವರ ರೀತಿ ಖರೀದಿಸುವ ತಾಕತ್ತು ನನಗಿರಲಿಲ್ಲ. ಬಿಜೆಪಿ ಶಾಸಕರನ್ನು ಖರೀದಿಸುವ ತಾಕತ್ತಿರಲಿಲ್ಲ. ಒಂದು ವೇಳೆ ನಾನು ಖರೀದಿಸಿದರೆ ಏನು ಮಾಡ್ತಿದ್ರಿ ಎಂದು ಪ್ರಶ್ನಿಸಿದರು.

ಇದನ್ನು ಓದಿ: ಕಾಮಾಟಿಪುರ ಬಳಿಕ ಕೆಆರ್​ ಪೇಟೆಯನ್ನು ಸ್ಲಂಗೆ ಹೋಲಿಸಿದ ಡಿಸಿ ತಮ್ಮಣ್ಣ

ರಾಜ್ಯದ ಜನರಿಗೆ ಬಿಎಸ್​​ವೈ ಕಾಮಧೇನು ಅಲ್ಲ. 17 ಲೂಟಿಕೋರರಿಗೆ ಬಿಎಸ್​ವೈ ಕಾಮಧೇನು ಎನ್ನುತ್ತಾರೆ. ಅವರೆಲ್ಲರೂ ಸೋಲುವುದು ಖಚಿತ. ಡಿ.9ರ ನಂತರ ರಾಜಕೀಯ ಧ್ರುವೀಕರಣ ಮಾತ್ರವಲ್ಲ. ರಾಜಕೀಯ ಶುದ್ಧೀಕರಣವಾಗುತ್ತದೆ.
First published: November 29, 2019, 5:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading