ನಿರಂತರ ಚುನಾವಣಾ ಪ್ರಚಾರ ಹಿನ್ನೆಲೆ ಅನಾರೋಗ್ಯಕ್ಕೆ ತುತ್ತಾದ ಎಚ್​ಡಿಕೆ; ಆಸ್ಪತ್ರೆಗೆ ದಾಖಲು

ಬಿಡುವಿಲ್ಲದೆ 15 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ ಹಿನ್ನೆಲೆ ಅವರು ತೀವ್ರ ಜ್ವರ, ಕೆಮ್ಮು, ಆಯಾಸದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದು, ತಪಾಸಣೆಗೆ ಒಳಗಾಗಿದ್ದು, ಅವರಿಗೆ ವಿಶ್ರಾಂತಿ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. 

news18-kannada
Updated:December 4, 2019, 12:31 PM IST
ನಿರಂತರ ಚುನಾವಣಾ ಪ್ರಚಾರ ಹಿನ್ನೆಲೆ ಅನಾರೋಗ್ಯಕ್ಕೆ ತುತ್ತಾದ ಎಚ್​ಡಿಕೆ; ಆಸ್ಪತ್ರೆಗೆ ದಾಖಲು
ಹೆಚ್​.ಡಿ. ಕುಮಾರಸ್ವಾಮಿ
  • Share this:
ಬೆಂಗಳೂರು (ಡಿ.04): ಉಪಚುನಾವಣೆ ಹಿನ್ನೆಲೆ ನಿರಂತರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಮಾಜಿ ಸಿಎಂ ಕುಮಾರಸ್ವಾಮಿ ಅನಾರೋಗ್ಯಕ್ಕೆ ತುತ್ತಾಗಿದ್ದು, ನಗರದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಉಪಚುನಾವಣೆ ಘೋಷಣೆಯಾದಗಿನಿಂದಲೂ ಎಚ್​ ಡಿ ಕುಮಾರಸ್ವಾಮಿ 15 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದರು. ಅನರ್ಹ ಶಾಸಕರು ಹೇಗೆ ಸರ್ಕಾರ ಬೀಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು ಎಂದು ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದನ್ನು ಓದಿ: #RejectDisqualifiedMLAs: ಟ್ವಿಟರ್​ನಲ್ಲಿ ಟ್ರೆಂಡ್​ ಆಯ್ತು ಅನರ್ಹ ಶಾಸಕರ ಸೋಲಿಸಿ ಎಂಬ ಹ್ಯಾಷ್​ಟ್ಯಾಗ್

ಬಿಡುವಿಲ್ಲದೆ 15 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ ಹಿನ್ನೆಲೆ ಅವರು ತೀವ್ರ ಜ್ವರ, ಕೆಮ್ಮು, ಆಯಾಸದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದು, ತಪಾಸಣೆಗೆ ಒಳಗಾಗಿದ್ದು, ಅವರಿಗೆ ವಿಶ್ರಾಂತಿ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
First published: December 4, 2019, 12:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading