ಮೈತ್ರಿ ಮುಂದುವರೆಸುವುದು ಕಾಂಗ್ರೆಸ್​ಗೆ ಬಿಟ್ಟ ವಿಚಾರ; ಎಚ್​ಡಿ ಕುಮಾರಸ್ವಾಮಿ

ದೋಸ್ತಿ ಮುಂದುವರೆಸುವ ಬಗ್ಗೆ ಕಾಂಗ್ರೆಸ್​​ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಗೊತ್ತಿಲ್ಲ. ಆದರೆ, ಈ ವಿಚಾರದಲ್ಲಿ ಅವರು ಸ್ವತಂತ್ರರು.  ಈ ಕ್ಷಣದವರೆಗೂ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಇದೆ.

Seema.R | news18
Updated:July 24, 2019, 3:55 PM IST
ಮೈತ್ರಿ ಮುಂದುವರೆಸುವುದು ಕಾಂಗ್ರೆಸ್​ಗೆ ಬಿಟ್ಟ ವಿಚಾರ; ಎಚ್​ಡಿ ಕುಮಾರಸ್ವಾಮಿ
ಎಚ್​.ಡಿ. ಕುಮಾರಸ್ವಾಮಿ.
  • News18
  • Last Updated: July 24, 2019, 3:55 PM IST
  • Share this:
ಬೆಂಗಳೂರು (ಜು.24): 14 ತಿಂಗಳ ಕಾಲ ಮೈತ್ರಿ ಆಡಳಿತ ನಡೆಸಿದ್ದೇವೆ. ಈಗ ಸರ್ಕಾರ ಬಿದ್ದಿದೆ. ಮುಂದಿನ ದಿನಗಳಲ್ಲಿ  ಈ ಮೈತ್ರಿ ಮುಂದುವರೆಸುವುದಾ ಬೇಡವಾ ಎಂಬ ಬಗ್ಗೆ ಅಂತಿಮ ನಿರ್ಧಾರ ನಡೆಸಿಲ್ಲ. ಈ ಬಗ್ಗೆ ಕಾದು ನೋಡೋಣ ಎಂದು ಎಚ್​ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಜೆಡಿಎಸ್​ ಶಾಸಕಾಂಗ ಸಭೆ ಬಳಿಕ ಮಾತನಾಡಿದ ಅವರು, ಸರ್ಕಾರ ಬಿದ್ದಿದೆ. ಆದರೆ ಪಕ್ಷವಲ್ಲ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯತ್ತ ಗಮನಹರಿಸುತ್ತೇವೆ. ಪಕ್ಷ ಸಂಘಟನೆ ದೃಷ್ಟಿಯಿಂದ ಸಭೆ ನಡೆಸಿದ್ದೇವೆ. ಇಂದಿನ ಸಭೆಗೂ ಮೈತ್ರಿ ವಿಚಾರಕ್ಕೂ ಸಂಬಂಧವಿಲ್ಲ ಸ್ಪಷ್ಟಪಡಿಸಿದರು.

ದೋಸ್ತಿ ಮುಂದುವರೆಸುವ ಬಗ್ಗೆ ಕಾಂಗ್ರೆಸ್​​ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಗೊತ್ತಿಲ್ಲ. ಆದರೆ, ಈ ವಿಚಾರದಲ್ಲಿ ಅವರು ಸ್ವತಂತ್ರರು.  ಈ ಕ್ಷಣದವರೆಗೂ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಇದೆ. ಇದು ಮುಂದುವೆರಯುವ ಬಗ್ಗೆ ಮುಂದೆ ಎಲ್ಲವೂ ಚರ್ಚೆಯಾಗುತ್ತದೆ. ಈ ಬಗ್ಗೆ  ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಇದನ್ನು ಓದಿ: ರಣರಂಗವಾಯ್ತು ಹಾಸನದ ಗಾರ್ಮೆಂಟ್ಸ್​​ ಕಾರ್ಮಿಕರ ಪ್ರತಿಭಟನೆ; ನೌಕರರ ಮೇಲೆ ಲಾಠಿ ಚಾರ್ಜ್

ಇವತ್ತು ನಮ್ಮ ಸರ್ಕಾರ ಇಲ್ಲ. ಆದರೆ, ಪಕ್ಷ ಇದೆ. ಪಕ್ಷ ಸಂಘಟನೆ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. 14 ತಿಂಗಳ ಕಾಲ ಮೈತ್ರಿ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ಈ ಕಾರ್ಯಕ್ರಮಗಳ ಆಧಾರದ ಮೇಲೆ ಪಕ್ಷ ಸಂಘಟನೆ ಮಾಡಲಾಗುವುದು. ನಾಯಕರ ಸೂಚನೆಯಂತೆ ಎಲ್ಲಾ ಕ್ಷೇತ್ರಗಳಲ್ಲೂ  ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.

ವಿಪ್​ ನೀಡಿದರೂ ಸದನಕ್ಕೆ ಗೈರಾದ ಮಹಾಲಕ್ಷ್ಮೀ ಕ್ಷೇತ್ರದ ಶಾಸಕ ಗೋಪಾಲಯ್ಯ, ಹುಣಸೂರು ಕ್ಷೇತ್ರ ಶಾಸಕ ಎಚ್​ ವಿಶ್ವನಾಥ್​, ಕೆಆರ್​ ಪೇಟೆ ಶಾಸಕ ನಾರಾಯಣ ಗೌಡ  ವಿರುದ್ದ ಅನರ್ಹತೆಗಾಗಿ ಈಗಾಗಲೇ ಸಭಾಧ್ಯಕ್ಷರಿಗೆ ದೂರು ನೀಡಿದ್ದು, ಅವರ ತೀರ್ಪಿಗಾಗಿ ಕಾಯುತ್ತಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.

First published:July 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ