GST ವಿಚಾರದಲ್ಲಿ ಯಾಮಾರಿದ್ದೇವೆ; ಈಗ ಭಿಕ್ಷೆಪಾತ್ರೆ ಹಿಡಿದು ನಿಲ್ಲುವ ಸ್ಥಿತಿ ಬಂದಿದೆ: HD Kumarswamy

ಜಿಎಸ್​ಟಿ ವಿಚಾರದಲ್ಲಿ ರಾಜ್ಯ ಸರ್ಕಾರಗಳು ಹಗ್ಗ ಮತ್ತು ಕುತ್ತಿಗೆ ಎರಡನ್ನೂ ಕೇಂದ್ರಕ್ಕೆ ಕೊಟ್ಟಿದ್ದೇವೆ ಎಂದು ನಾನು ಅಂದೇ ಹೇಳಿದೆ. ಅವರು ಯಾವಾಗ ಬೇಕಾದ್ರೂ ನೇಣುಗಂಬಕ್ಕೆ ಏರಿಸಬಹುದು.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

 • Share this:
  ನಾವು ಜಿಎಸ್ ಟಿ (GST) ವಿಚಾರದಲ್ಲಿ ಯಾಮಾರಿದ್ದೇವೆ. ಕುತ್ತಿಗೆ, ಹಗ್ಗ ಎರಡನ್ನೂ ಕೇಂದ್ರಕ್ಕೆ ಕೊಟ್ಟಿದ್ದೇವೆ. ಅವರು ಯಾವಾಗ ಬೇಕಾದರು ನೇಣು ಹಾಕಬಹುದು ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumarswamy) ತಿಳಿಸಿದರು. ಸದನದಲ್ಲಿ ಬಜೆಟ್​​ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಇದನ್ನ ನಾನು 2017ರಲ್ಲೇ ಹೇಳಿದ್ದೆ. ಜಿಎಸ್​ಟಿಯಿಂದ ರಾಜ್ಯಗಳ ಸ್ವಾಯತ್ತತೆಯನ್ನೇ ಕಳೆದು ಕೊಂಡಂತಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದು ಸರಿಯಲ್ಲ. ಆರ್ಥಿಕ ಸರ್ವಾಧಿಕಾರ ಒಕ್ಕೂಟ ವ್ಯವಸ್ಥೆಗೆ (Federal System) ಮಾರಕ ಎಂದು. ಈಗ ಜಿಎಸ್ ಟಿ ವಿಚಾರದಲ್ಲಿ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ನಮ್ಮ ತೆರಿಗೆ (Tax) ಹಣವನ್ನ ಕೇಂದ್ರಕ್ಕೆ ಕಟ್ಟುತ್ತೇವೆ. ಇದರಿಂದ ರಾಜ್ಯಗಳಿಗೆ ಇರುವ ಅವಕಾಶವೂ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  ಭಿಕ್ಷೆಪಾತ್ರೆ ಹಿಡಿದು ನಿಲ್ಲುವ ಸ್ಥಿತಿ ನಿರ್ಮಾಣ
  ಜಿಎಸ್​ಟಿ ವಿಚಾರದಲ್ಲಿ ರಾಜ್ಯ ಸರ್ಕಾರಗಳು ಹಗ್ಗ ಮತ್ತು ಕುತ್ತಿಗೆ ಎರಡನ್ನೂ ಕೇಂದ್ರಕ್ಕೆ ಕೊಟ್ಟಿದ್ದೇವೆ ಎಂದು ನಾನು ಅಂದೇ ಹೇಳಿದೆ. ಅವರು ಯಾವಾಗ ಬೇಕಾದ್ರೂ ನೇಣುಗಂಬಕ್ಕೆ ಏರಿಸಬಹುದು. ಈಗ ಭಿಕ್ಷಾ ಪಾತ್ರ ಹಿಡಿದು ಕೇಂದ್ರದ ಮುಂದೆ ಹಿಡಿಯೋ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ರಾಜ್ಯಕ್ಕೆ ಮುಳುವಾಗಲಿದ್ದು, ಇರುವ ಪವರ್ ಕಡಿಮೆ ಆಗಲಿದೆ ಎಂದು. ಅಂಬೇಡ್ಕರ್ ಹೇಳಿದ್ರು ಕೇಂದ್ರ ರಾಜ್ಯಕ್ಕೆ ಆರ್ಥಿಕ ವಿಕೇಂದ್ರೀ ಕರಣ ಹತ್ತಿಕ್ಕಿ ಸರ್ವಾಧಿಕಾರಿ ಧೋರಣೆಯಾಗಲಿದೆ. ಆರ್ಥಿಕ ಸರ್ವಾಧಿಕಾರ ಒಕ್ಕೂಟ ವ್ಯವಸ್ಥೆಯ ಅಥಃಪತನಕ್ಕೆ ಕಾರಣವಾಗಲಿದೆ, ಹೀಗ ಹಾಗೇ ಎನಿಸುತ್ತಿದೆ ಎಂದರು.

  ಕೇಂದ್ರದಿಂದ ತಾರತಮ್ಯ
  ನಮ್ಮ ರಾಜ್ಯ ಸಂಪದ್ಭರಿತ ರಾಜ್ಯ. ನಮ್ಮ 100 ರೂ ತೆರಿಗೆಗೆ ಕೇಂದ್ರ 40 ರೂ ವಾಪಸ್ ಕೊಡುತ್ತಿದೆ. ಇದರ ಜೊತೆಗೆ ರಾಜಸ್ಥಾನ, ಗುಜರಾತ್ ಗಳಿಗೆ ಹೆಚ್ಚುವ ಅನುದಾನ ಕೊಡ್ತಿದೆ. ಯುಪಿಗೆ 100 ರೂಗೆ 256 ರೂ, ಬಿಹಾರ ಕ್ಕೆ 298 ರೂಕೇಂದ್ರ ಕೊಡುತ್ತಿದೆ. ಕೇಂದ್ರ ಹೀಗೆ ತಾರತಮ್ಯ ಮಾಡುತ್ತಿದೆ. ಅಲ್ಲಿನ ಜನಸಂಖ್ಯೆ, ಕೊರತೆ ಬಜೆಟ್, ತಲಾದಾಯ ಹಿನ್ನೆಲೆಯಲ್ಲಿ ಹೆಚ್ಚು ಸಹಾಯಧನ, ಅನುದಾನ ಕೊಡುತ್ತಿದೆ. ಆ ರಾಜ್ಯಗಳನ್ನು ಮೇಲೆತ್ತಲು ಸಂದ್ಭರಿತ, ಉತ್ತಮ ಮಾರ್ಕ್ಸ್ ಪಡೆದ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ನಮ್ಮ ರಾಜ್ಯ, ರಾಜ್ಯದ ಜನ ಪ್ರಾಮಾಣಿಕವಾಗಿ ತೆರಿಗೆ ಕಟ್ಟಿದ್ದೇ ತಪ್ಪಾಯ್ತೇನೋ ಎಂಬ ಭಾವನೆ ಮೂಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಬೇರೆ ರಾಜ್ಯಗಳಿಗೆ ಹೆಚ್ಚು ಅನುದಾನ, ನಮ್ಮ ರಾಜ್ಯಕ್ಕೆ ಕಮ್ಮಿ ಅನುದಾನ ಕೊಡುತ್ತಿರುವುದು ಯಾಕೆ ಎಂದು ನಮಗೆ ಅರ್ಥ ಆಗುತ್ತಿಲ್ಲ ಎಂದು ಕೇಂದ್ರದ ಧೋರಣೆ ಖಂಡಿಸಿದರು.

  ಇದನ್ನು ಓದಿ: Mysuru: ಬಿಟ್ ಹೋಗಬೇಡ, ನನ್ನನ್ನ ಬಿಟ್ ಹೋಗಬೇಡ: ಕಣ್ಮುಂದೆ ಪತ್ನಿಯನ್ನ ಕರ್ಕೊಂಡು ಹೋದ್ರು: ಬಿಕ್ಕಿ ಬಿಕ್ಕಿ ಅತ್ತ ಪತಿ

  ಬಜೆಟ್ ಕುರಿತ ಚರ್ಚೆಗಿಂತಲೂ ಹೆಚ್ಚು ಸಿದ್ದರಾಮಯ್ಯ ಬಗ್ಗೆನೇ ಪ್ರಸ್ತಾಪ
  ಇನ್ನು ತಮ್ಮ ಭಾಷಣದ ವೇಳೆ ಸಿದ್ದರಾಮಯ್ಯ ಭಾಷಣವನ್ನು ಪ್ರಸ್ತಾಪಿಸಿದ್ದಕ್ಕೆ ಕಾಂಗ್ರೆಸ್​ ನಾಯಕ ಯುಟಿ ಖಾದರ್ ಆಕ್ಷೇಪ ವ್ಯಕ್ತಪಡಿಸಿದರು. ನೀವು ಬಜೆಟ್ ಮೇಲೆ ಚರ್ಚೆ ಮಾಡ್ತಿದ್ದೀರೋ, ಅಥವಾ ಸಿದ್ದರಾಮಯ್ಯ ಬಗ್ಗೆ ಮಾತಾಡುತ್ತಿದ್ದೀರ ಎಂದರು ಈ ವೇಳೆ ಉತ್ತರಿಸಿದ ಎಚ್​ಡಿಕೆ ನಿನ್ನೆ ಅವರು ಸದನದಲ್ಲಿ ಮಾತಾಡಿದ್ದು, ಬಜೆಟ್​ ಮೇಲಿನ ಭಾಷಣ ಅಲ್ಲ, ಪೊಲಿಟಿಕಲ್​ ಭಾಷಣೆ ಎಂದರು. ಇದರಿಂದ ಕಾಂಗ್ರೆಸ್​ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಮಾತಿನ ಜಟಾಪಟಿಗೆ ಕಾರಣವಾಗಿ ಸದನದಲ್ಲಿ ಉಂಟಾದ ಗದ್ದಲ ಉಂಟಾಯಿತು.

  ಇದನ್ನು ಓದಿ: : ಪೊಲೀಸಪ್ಪನ Bikeನ್ನೇ ಎಗರಿಸಿದ ಐನಾತಿ ಕಳ್ಳ: ನಮ್ಮ ಮೆಟ್ರೋ ಎಂಡಿ ಹೆಸರಿನಲ್ಲಿ ವಂಚನೆ; ಹುಡುಗಿ ವಿಚಾರಕ್ಕೆ ಕೊಲೆ

  ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಮಧ್ಯ ಪ್ರವೇಶಿಸಿ, ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದಂತವರು, ಬಜೆಟ್ ಕೂಡ ಮಂಡಿಸಿದವರು. ಅವರಿಗೆ ಬಜೆಟ್ ಬಗ್ಗೆ ಚೆನ್ನಾಗಿ ಗೊತ್ತಿದೆ. ಬಜೆಟ್ ಬಗ್ಗೆ ಸಿದ್ದರಾಮಯ್ಯ ಎತ್ತಿದ್ದ ವಿಷಯ ಗಳ ಬಗ್ಗೆ ಹೆಚ್ಡಿಕೆ ಪ್ರಶ್ನೆ ಮಾಡಿದ್ದಾರೆ. ಅದು ಬಿಟ್ಟು ಅವರು ಏನು ಸಿದ್ದರಾಮಯ್ಯ ಬಗ್ಗೆ ಟೀಕೆ ಮಾಡಿಲ್ಲ. ಈ ಬಜೆಟ್ ಸಾರ್ಥಕತೆ ಆಗಬೇಕಾದ್ರೆ ಎಲ್ಲರೂ ಕೂಡ ಮುಕ್ತವಾಗಿ ಚರ್ಚೆ ಆಗಬೇಕು.ಹೀಗಾಗಿ ಅವರಿಗೆ ಬಜೆಟ್ ಮೇಲೆ ಮಾತಾಡಲು ಬಿಡಿ ಎಂದ ಸದನಕ್ಕೆ ತಿಳಿಸಿದರು.
  Published by:Seema R
  First published: