ಮುಂದಿನ ಚುನಾವಣೆಯಲ್ಲಿ ಯಾರ ಹಂಗಿಲ್ಲದೆ ಸರ್ಕಾರ ರಚನೆ; ಎಚ್​ಡಿ ಕುಮಾರಸ್ವಾಮಿ ವಿಶ್ವಾಸ

ಪಕ್ಷ ಸಂಘಟನೆ ನಿರಂತರ ಪ್ರಕ್ರಿಯೆಯಾಗಿದ್ದು, ಈ ಬಗ್ಗೆ ಕಾರ್ಯರೂಪಿಸುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ ಯಾರ ಮೈತ್ರಿ ಇಲ್ಲದೇ ನಮ್ಮ ಪಕ್ಷ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಎಚ್​.ಡಿ. ಕುಮಾರಸ್ವಾಮಿ

ಎಚ್​.ಡಿ. ಕುಮಾರಸ್ವಾಮಿ

  • Share this:
ರಾಮನಗರ (ಫೆ.29): ಮುಂಬರುವ ಚುನಾವಣೆಯಲ್ಲಿ ಹೊಸ ತಂತ್ರ ರೂಪಿಸುತ್ತಿದ್ದು, ಯಾರ ಹಂಗಿಲ್ಲದೇ ಸ್ವತಂತ್ರ  ಸರ್ಕಾರವನ್ನು ಅಧಿಕಾರಕ್ಕೆ ತರಲು ಯೋಜನೆ ರೂಪಿಸುತ್ತಿದ್ದೇವೆ ಎಂದು ಎಚ್​ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. 

ನಗರದಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಗೆಲುವಿನ  ವೇದಿಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಬಗ್ಗೆ  ಸುಳಿವು ನೀಡಿದರು. ಇನ್ನು ಈ ಗೆಲುವಿಗಾಗಿ ಚುನಾವಣಾ ಚಾಣಾಕ್ಯ ಪ್ರಶಾಂತ್​ ಕಿಶೋರ್​ ಸಂಪರ್ಕ ಮಾಡಿದ್ದು, ಅವರು ಸಲಹೆಗಳನ್ನು ನೀಡಿದ್ದಾರೆ. ಈ ಕುರಿತು ಅವರೊಂದಿಗೆ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಸದ್ಯದಲ್ಲಿಯೇ ಮಾಹಿತಿ ನೀಡುತ್ತೇವೆ ಎಂದರು.

ಪಕ್ಷ ಸಂಘಟನೆ ನಿರಂತರ ಪ್ರಕ್ರಿಯೆಯಾಗಿದ್ದು, ಈ ಬಗ್ಗೆ ಕಾರ್ಯರೂಪಿಸುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ ಯಾರ ಮೈತ್ರಿ ಇಲ್ಲದೇ ನಮ್ಮ ಪಕ್ಷ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ಎಎಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಪ್ರಶಾಂತ್​ ಕಿಶೋರ್​ ಬಳಿ ಈಗಾಗಲೇ ಎಚ್​ಡಿ ಕುಮಾರಸ್ವಾಮಿ, ಪಕ್ಷವನ್ನು ಸಬಲಗೊಳಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ.

 

ಇದೇ ವೇಳೆ ಮಹದಾಯಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಹಲವು ವರ್ಷಗಳಿಂದ ನಮ್ಮ ಹಕ್ಕಿಗಾಗಿ ಹೋರಾಟ ಮಾಡಿದ್ದೇವೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಮುಂದಿನ ಪ್ರಕ್ರಿಯೆಗಳನ್ನ ಸರ್ಕಾರ ಮಾಡಬೇಕಿದೆ. ಜೊತೆಗೆ ಮೇಕೆದಾಟು ಯೋಜನೆ ಸಹ ಆಗಬೇಕು. ನಾನು ಸಹ ಕೇಂದ್ರದ ನೀರಾವರಿ ಸಚಿವರನ್ನ ಭೇಟಿ ಮಾಡಿದ್ದೇನೆ. ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ಕೂಡ ಮಾಡಿದ್ದೇನೆ. ಕೇಂದ್ರ ಸರ್ಕಾರ ಕೂಡ ಸಕರಾತ್ಮಕವಾಗಿ ಸ್ಪಂದಿಸಿದೆ. ಇವತ್ತಲ್ಲ ನಾಳೆ ಮೇಕೆದಾಟು ಯೋಜನೆ ಆಗಲೇಬೇಕು ಎಂದು ಒತ್ತಾಯಿಸಿದರು.

ಇದನ್ನು ಓದಿ: ನಿಖಿಲ್ ರಾಜಕೀಯ ಅಖಾಡ ಮಂಡ್ಯದಿಂದ ರಾಮನಗರಕ್ಕೆ ಶಿಫ್ಟ್? ಹೆಚ್​ಡಿಕೆ ಮಗನ ವಿವಾಹ ಮಹೋತ್ಸವ ಒಂದು ನೆಪವೇ?

ಜೆಡಿಎಸ್​ ಕಾರ್ಯಕರ್ತರೇ ಬಿಜೆಪಿ ಟಾರ್ಗೆಟ್​​

ಮಂಡ್ಯದಲ್ಲಿ ಜೆಡಿಎಸ್​ ಮುಖಂಡನ ಕಲ್ಲು ಕ್ವಾರೆಗೆ ತಡೆ ನೀಡುವ ಮೂಲಕ  ಅಧಿಕಾರಿಗಳನ್ನ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಈಗಿನ ಬಿಜೆಪಿ ಸರ್ಕಾರದಲ್ಲಿ ಜೆಡಿಎಸ್ ಕಾರ್ಯಕರ್ತರು ಟಾರ್ಗೆಟ್ ಆಗುತ್ತಿದ್ದಾರೆ. ಮಂಡ್ಯ ಜಿಲ್ಲಾಧಿಕಾರಿ ನಡವಳಿಕೆ ಬಗ್ಗೆ ಸರ್ಕಾರದ ಗಮನಸೆಳೆದಿದ್ದೇನೆ. ಕೋರ್ಟ್ ಆದೇಶಗಳನ್ನು ಅವರು ಧಿಕ್ಕರಿಸಿದ್ದಾರೆ. ಈ ಅಧಿಕಾರಿಗಳು ಕಾನೂನಿನ ಪ್ರಕಾರ ಕೆಲಸ ಮಾಡಲು ಇದ್ದಾರಾ
ಅಥವಾ ಜನಪ್ರತಿನಿಧಿಗಳು ಹೇಳಿದ ಕೆಲಸ ಮಾಡಲು ಇದ್ದಾರಾ ಎಂಬ ಬಗ್ಗೆ ಅನುಮಾನ ಮೂಡುತ್ತಿದೆ.  ಮಂಡ್ಯ ಜಿಲ್ಲಾಧಿಕಾರಿ  ಮಂತ್ರಿ ಮನೆಯ ಜವಾನರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

(ವರದಿ: ಎಟಿ ವೆಂಕಟೇಶ್​​)
First published: