HOME » NEWS » State » HD KUMARSWAMY REACTION ON SIT PROBE ON RAMESH JARKIHOLI CD CASE PMTV SESR

HD Kumarswamy: ಏನು ಅವರದ್ದು ಸಿಡಿ ಇದ್ಯಾಂತ? ಹಳ್ಳಿಹಕ್ಕಿಗೆ ಕುಟುಕಿದ ಕುಮಾರಸ್ವಾಮಿ

ಆ ಯತ್ನಾಳ್ ಹೇಳುತ್ತಾರೆ ಇನ್ನು 26 ಜನರ ಸಿಡಿ ಇದೆ ಅಂತ, ಸಿಡಿ ಪ್ರಕರಣದಲ್ಲಿ ರಾಜ್ಯದಲ್ಲಿ ಇನ್ನು ಏನೇನು ನೋಡಬೇಕೋ ನಾವು ಎಂದು ಬೇಸರ ವ್ಯಕ್ತಪಡಿಸಿದರು.

news18-kannada
Updated:March 11, 2021, 5:28 PM IST
HD Kumarswamy: ಏನು ಅವರದ್ದು ಸಿಡಿ ಇದ್ಯಾಂತ? ಹಳ್ಳಿಹಕ್ಕಿಗೆ ಕುಟುಕಿದ ಕುಮಾರಸ್ವಾಮಿ
ಎಚ್​ಡಿ ಕುಮಾರಸ್ವಾಮಿ
  • Share this:
ಮೈಸೂರು (ಮಾ. 11):  ರಮೇಶ್ ಜಾರಕಿಹೊಳಿ ಸಿಡಿ  ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ಸಿಡಿ ವಿಚಾರವಾಗಿ ರಾಜಕೀಯ ನಾಯಕರು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಇದೇ ವೇಳೆ ಸಿಡಿ ವಿಚಾರವಾಗಿ ಎಂಎಲ್​ಸಿ ವಿಶ್ವನಾಥ್​ ವಿರುದ್ಧ ವ್ಯಂಗ್ಯವಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ  ಏನು ಅವರದ್ದು ಸಿಡಿ ಇದ್ಯಾ ಎಂದು ಪ್ರಶ್ನಿಸಿದ್ದಾರೆ. ಯಾರ್ಯಾರ ಸಿಡಿ ಇದೇಯೋ ಇಲ್ವೋ ನನಗೇನು ಗೊತ್ತು, ಆ ಯತ್ನಾಳ್ ಹೇಳುತ್ತಾರೆ ಇನ್ನು 26 ಜನರ ಸಿಡಿ ಇದೆ ಅಂತ, ಸಿಡಿ ಪ್ರಕರಣದಲ್ಲಿ ರಾಜ್ಯದಲ್ಲಿ ಇನ್ನು ಏನೇನು ನೋಡಬೇಕೋ ನಾವು ಎಂದು ಬೇಸರ ವ್ಯಕ್ತಪಡಿಸಿದರು. ಇನ್ನು ಆರು ಸಚಿವ ಮಹಾನುಭಾವರು ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ನೋಡಿ ನಮಗೆ ಆಶ್ಚರ್ಯವಾಯಿತು. ಸಚಿವರಾದವರು ಕೊರ್ಟ್‌ನಲ್ಲಿ ನಮ್ಮ ತೇಜೋವಧೆ ಮಾಡುವಂತಹ ಅಪಪ್ರಚಾರಗಳಿಗೆ ಅವಕಾಶ ಕೊಡಬೇಡಿ ಎಂದು ಕೇಳಿಕೊಳ್ಳಬಹುದಿತ್ತು, ಆದರೆ, ನಮಗೆ ಸಂಬಂಧಪಟ್ಟ ಸಿಡಿ ವಿಚಾರ ಪ್ರಸಾರ ಮಾಡಬಾರದು ಎಂದು ಕೋರಿದ್ದಾರೆ. ಈ ವಿಚಾರವನ್ನು ವಕೀಲರಿಂದ ಕೇಳಿ ಆಶ್ವರ್ಯವಾಯ್ತು. ಹಾಗಾದ್ರೆ ಇವರ ಸಿಡಿ ಇದೆ ಅಂತ ಆಯ್ತು ಅಲ್ಲವೇ?. ಆರು ಸಚಿವರು ತಮಗೆ ರಕ್ಷಣೆ ನೀಡುವಂತೆ ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ, .ಸಚಿವರಾಗಿದ್ದುಕೊಂಡು ತಮಗೆ ತಾವೇ ರಕ್ಷಣೆ ಮಾಡಿಕೊಳ್ಳಲಾರದವರು ರಾಜ್ಯದ ಜನರನ್ನು ಹೇಗೆ ರಕ್ಷಣೆ ಮಾಡ್ತಾರೆ ಎಂದು ಪ್ರಶ್ನಿಸಿದರು

ಸಿಡಿ ರಾಜಕಾರಣ ಮಾಡಬೇಡಿ

ಇಂತಹ ಅದೇಷ್ಟೋ ಸಿಡಿ ಪ್ರಕರಣಗಳು ನಮ್ಮ ಕುಟುಂಬಕ್ಕೆ ಬಂದಿವೆ. ಇಂತಹ ಪ್ರಕರಣ ತಂದವರಿಗೆ ಬುದ್ದಿ ಹೇಳಿ ಕಳುಹಿಸಿದ್ದೇವೆ.‌ ನಾವು ನೇರವಾಗಿ ಯದ್ದ ಮಾಡಬೇಕು. ಇಂತಹ ಪ್ರಕರಣಗಳನ್ನ ಮುಂದಿಟ್ಟುಕೊಂಡು ರಾಜಕಾರಣ ಮಾಡಬಾರದು. ಅದರಿಂದ ಜನರಿಗೆ ಏನು ಸಂದೇಶ ಕೊಡಲು ಸಾಧ್ಯ? ರಮೇಶ್‌ ಜಾರಕಿಹೊಳಿಯವರಿಗೆ ಈಗ ಮನವರಿಕೆ ಆಗಿರಬಹುದು ಕುಮಾರಸ್ವಾಮಿ ಇದಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲವೇನೋ ಅಂತ ರಿಯಲೈಸ್ ಆಗಿರಬೇಕು ಎಂದು ಹೇಳಿದರು.

ಎಸ್​ಐಟಿ ತನಿಖೆ ತಿಪ್ಪೆ ಸಾರಿಸುವ ಕೆಲಸ

ಸಿಡಿ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ  ನೀಡಿರುವುದು ತಿಪ್ಪೆತಾರಿಸುವ ತನಿಖೆ ಆಗಲಿದೆ. ಯಾರ ಮೇಲೆ ತನಿಖೆ ಮಾಡುತ್ತಾರೆ ಹೇಳಿ ಎಂದು ಕೇಳಿದರು. ಸ್ವಾತಂತ್ರ್ಯದ ನಂತರ ಯಾರಿಗೆ ಶಿಕ್ಷೆಯಾಗಿದೆ ಇಂಥಹ ತನಿಖಾ ಸಂಸ್ಥೆಗಳಿಂದ. ಹಾಗೇನಾದರೂ ಶಿಕ್ಷೆ ಆಗಿದ್ರೆ ಅದು ಅಮಾಯಕರಿಗೆ ಆಗಿದೆ ಅಷ್ಟೆ. ಸಿಡಿ ವಿಚಾರದಲ್ಲಿ ಕೈ ವಾಡ ವಿಚಾರವಾಗಿ ಅವರು ಕಾಂಗ್ರೆಸ್ ‌ನಲ್ಲೇ ಇದ್ದವರಲ್ಲವೇ. ಆ ಪಕ್ಷದಿಂದ ಅವರು ಹೊರಗೆ ಬಂದಿದ್ದಾರೆ. ಇದನ್ನ ಯಾರು ಸಿಡಿ ಮಾಡಿದ್ದಾರೆಂದು ಹೇಳಿದ್ದಾರೋ ಅವರಿಗೆ ಕೇಳಿ, ಅವರಿಗೆ ಆ ಬಗ್ಗೆ ಚೆನ್ನಾಗಿ ಗೊತ್ತಿರಬೇಕು, ನನಗಂತೂ ಈ ಬಗ್ಗೆ ಮಾಹಿತಿ ಇಲ್ಲ ಎಂದು ಎಸ್‌.ಟಿ.ಸೋಮಶೇಖರ್ ಹೇಳಿಕೆಗೆ ಹೆಚ್ಡಿಕೆ ವ್ಯಂಗ್ಯವಾಡಿದರು.

ಇದನ್ನು ಓದಿ: ಇಡಿ ಹೆಸರಿನಲ್ಲಿ ಬ್ಯಾಂಕ್​ಗೆ ನಕಲಿ ನೋಟಿಸ್: ಪಾಲಿಸಿದಾರರಿಗೆ ವಂಚಿಸಿ ಲಕ್ಷಾಂತರ ರೂ ವಂಚಿಸಿದ ಆರೋಪಿ ಬಂಧನ

ಇದೆ ವೇಳೆ ಮಧು ಬಂಗಾರಪ್ಪ ಸಿದ್ದರಾಮಯ್ಯನವರ ಭೇಟಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ವಿಶೇಷ ಏನಿಲ್ಲ, ಹಲವಾರು ರಾಜಕಾರಣಿಗಳು ಭೇಟಿ‌ ಮಾಡ್ತಾರೆ. ಅದೆಲ್ಲ ಅಳಸಲು ಕಥೆ, ಹಳೆ ಕಥೆ ಆಗಿದೆ.‌ ಈಗ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಬೆಳವಣಿಗೆ ಇದು. ಈ ಡೆವಲಪ್ಮೆಂಟ್ ಬಗ್ಗೆ ಹೆಚ್ಚು ಮಹತ್ವ ಕೊಡುವ ಅಗತ್ಯ ಇಲ್ಲ. ಜೆಡಿಎಸ್ ಹುಟ್ಟಿದಾಗಿನಿಂದ ಅದರಲ್ಲು ದೇವೇಗೌಡರಿಗೆ ಬೆನ್ನಿಗೆ ಚಾಕು ಹಾಕೋದು ಆಗೋಗಿದೆ. ಯಾರನ್ನ ನಂಬಿರುತ್ತಾರೋ ಅವರೇ ಕುತ್ತಿಗೆ ಕೂಯ್ಯತ್ತಾರೆ. ಯಾರು ಹೊರಗೆ ಹೋಗ್ತಾರೆ ಅವರಿಗೆ ಬಾಗಿಲು ತೆರೆದಿದೆ ಅವರು ಎಲ್ಲಿಗೆ ಹೋಗಬೇಕು ಹೋಗಬಹುದು.ಪಕ್ಷದಿಂದ ಎಲ್ಲ ಪಡೆದು ಹೋಗುವಾಗ ಏನಾದರು ಹೇಳಿ ಹೋಗ್ತಾರೆ, ಹೋದವರು ಹೋಗಿ ಹೊಸಬರು ಬರುತ್ತಾನೆ ಇರುತ್ತಾರೆ. ಈಗ ಎಷ್ಟು ಜನ ಹೋದರು ನೋಡಿ, ಈ ಪಕ್ಷ ಮುಳುಗಲ್ಲ, ಜೀವಂತವಾಗಿದೆ. ಅದಕ್ಕೆ ನಾವು ನಿಷ್ಠೆ ಇಲ್ಲದವರಿಗೆ ಇನ್ಮುಂದೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಅವರನ್ನ ನಾವು ಪಕ್ಷದಿಂದ ದೂರ ಇಡ್ತಿವಿ. ತಾತ್ಕಾಲಿಕವಾಗಿ ತೆಗೆದುಕೊಂಡ ನಿರ್ಧಾರದಿಂದ ಈ ರೀತಿ ಸಮಸ್ಯೆ ಆಗಿದೆ ನಾವು ಇಂತವರ ವಿರುದ್ಧ ಕ್ರಮ ಕೈಗೊಂಡರೇ ಅವರಿಗೆ ಅದು ಸುಲಭವಾಗುತ್ತೆ ಮೊದಲು ಅದು ಜನತೆಗೆ ಅರ್ಥ ಆಗಬೇಕು. ಚಾಕು ಹಾಕಿ ಹೋದವರಿಗೆ ಜನರೇ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.
Published by: Seema R
First published: March 11, 2021, 5:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories