ನಿಮ್ಮದೇ ಸರ್ಕಾರ ಇದೆಯಲ್ಲ. ಯಾಕೆ ತನಿಖೆ ಮಾಡುತ್ತಿಲ್ಲ; ಬಿಜೆಪಿ ನಾಯಕರಿಗೆ ಕುಮಾರಸ್ವಾಮಿ ಪ್ರಶ್ನೆ

ಮೈತ್ರಿ ಸರ್ಕಾರ ರಚನೆಯಾದಾಗಿನಿಂದ ಹಬ್ಬಹಬ್ಬಕ್ಕೆ ಡೆಡ್​ಲೈನ್ಸ್ ನೀಡಲಾಗುತ್ತಿದೆ. ಶಾಸಕರು ಖರೀದಿ ವಸ್ತುಗಳು ಅಂತ ಆಗಿಬಿಟ್ಟಿದ್ದಾರೆ. ನಮ್ಮ ಪಕ್ಷದ ಶಾಸಕರ ಮನೆಗೆ ಮಧ್ಯರಾತ್ರಿ ಕರೆ ಮಾಡುತ್ತಾರೆ. ನಾನು ಕರೆ ಮಾಡಿ ಅಂತ ಹೇಳಿದ್ದೇನಾ ಇವರಿಗೆ ಎಂದು ಸಿಎಂ ಪ್ರಶ್ನಿಸಿದರು

Seema.R | news18
Updated:February 12, 2019, 1:39 PM IST
ನಿಮ್ಮದೇ ಸರ್ಕಾರ ಇದೆಯಲ್ಲ. ಯಾಕೆ ತನಿಖೆ ಮಾಡುತ್ತಿಲ್ಲ; ಬಿಜೆಪಿ ನಾಯಕರಿಗೆ ಕುಮಾರಸ್ವಾಮಿ ಪ್ರಶ್ನೆ
ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ
Seema.R | news18
Updated: February 12, 2019, 1:39 PM IST
ಬೆಂಗಳೂರು (ಫೆ.11): ಕುಮಾರಸ್ವಾಮಿ ಕೂಡ 25 ಕೋಟಿ ಡೀಲ್​ ನಡೆಸಿದ್ದಾರೆ. ಈ ಕುರಿತು ಸಿಡಿಯನ್ನು ಸದನಕ್ಕೆ ನೀಡಲಾಗಿದೆ. ಈ ಕುರಿತು ಯಾಕೆ ತನಿಖೆಗೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆಗೆ  ಸಮರ್ಥನೆಗೆ ಮುಂದಾದ ಮುಖ್ಯಮಂತ್ರಿಗಳು, 2014ರಲ್ಲಿ ನಡೆದ ಘಟನೆ ಅದು. ಅದರ ಬಗ್ಗೆಯೂ ತನಿಖೆ ನಡೆಸಲಿ. ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆಯಲ್ಲ.  ಯಾಕೆ ತನಿಖೆ ನಡೆಸಿಲ್ಲ ಎಂದು ಪ್ರಶ್ನಿಸಿದರು.

 

ಸರ್ಕಾರದ ಬಗ್ಗೆ ನಮಗೆ ನಂಬಿಕೆ ಇಲ್ಲಾ ಅಂತಾರೆ. ಆದರೂ ಕೂಡ ನಾನು ಒಂದೂ ಚಕಾರ ಎತ್ತಿಲ್ಲ. ಎರಡೇ ತಿಂಗಳಿಗೆ 150 ಕೋಟಿ ಲೂಟಿ ಮಾಡಿದ್ರು ಅಂತ ಆಪಾದನೆ ಮಾಡಿದರು. ಸಚಿವರಿಗೇ ಕೊಲೆ ಮಾಡಲು ಸುಪಾರಿ ಕೊಟ್ಟರು ಅಂತ ಆಪಾದನೆ ಮಾಡಿದರು. ಆಗಲೂ ನಾನು ಚಕಾರ ಎತ್ತಿರಲಿಲ್ಲ ಎಂದರು.

ಮೈತ್ರಿ ಸರ್ಕಾರ ರಚನೆಯಾದಾಗಿನಿಂದ ಹಬ್ಬಹಬ್ಬಕ್ಕೆ ಡೆಡ್​ಲೈನ್ಸ್ ನೀಡಲಾಗುತ್ತಿದೆ. ಶಾಸಕರು ಖರೀದಿ ವಸ್ತುಗಳು ಅಂತ ಆಗಿಬಿಟ್ಟಿದ್ದಾರೆ. ನಮ್ಮ ಪಕ್ಷದ ಶಾಸಕರ ಮನೆಗೆ ಮಧ್ಯರಾತ್ರಿ ಕರೆ ಮಾಡುತ್ತಾರೆ. ನಾನು ಕರೆ ಮಾಡಿ ಅಂತ ಹೇಳಿದ್ದೇನಾ ಇವರಿಗೆ ಎಂದರು ಕೇಳಿದರು.

ಇದನ್ನು ಓದಿ: ಆಡಿಯೋ ಪ್ರಕರಣ; ಎಸ್​ಐಟಿ ತನಿಖೆ ಬೇಡ, ನಿರ್ಧಾರ ಮರುಪರಿಶೀಲಿಸುವಂತೆ ಸ್ಪೀಕರ್​ಗೆ ಮಾಧುಸ್ವಾಮಿ ಮನವಿ

ಇದು ನಮ್ಮ ಮನೆಯಲ್ಲಿ ನಡೆದ ಘಟನೆಯಲ್ಲ. ನಮ್ಮ ಪಕ್ಷದ ಕಾರ್ಯಕರ್ತರ ಜೊತೆ ನಡೆದ ಘಟನೆ.  ನಮ್ಮ ಪಕ್ಷದವರೇ ರೆಕಾರ್ಡ್​ ಮಾಡಿರುವುದು. ಈ ವಿಷಯ ಚರ್ಚಿಸಲು ನಾನು ಸಿದ್ಧ. ನಿಮ್ಮ ಗೌರವ ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದರು.

ಎಸ್​ಐಟಿ ತನಿಖೆ ಆಗಲಿ ಎಂದು ಎಲ್ಲಾ ಶಾಸಕರು ಒಕ್ಕೊರಲಿನಿಂದ ಎಸ್​ಐಟಿ ತನಿಖೆಗೆ ಒಪ್ಪಿಸುವಂತೆ ಸೂಚನೆ ನೀಡಿದ್ದಾರೆ. ಸ್ಪೀಕರ್​ ಬಗ್ಗೆ ಅಗೌರವಯುತವಾಗಿ ಮಾತನಾಡಿರುವ ಬಗ್ಗೆ ತನಿಖೆ ಆಗಲಿ ಎಂದರು.
Loading...

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ