ಅನರ್ಹರು ಸೋಲುವ ಭಯದಿಂದ ನಾಮಪತ್ರ ಹಿಂಪಡೆಯುವಂತೆ ಸ್ವಾಮೀಜಿ ಮೇಲೆ ಒತ್ತಡ ಹಾಕಿದ್ದಾರೆ; ಕುಮಾರಸ್ವಾಮಿ

ಪಕ್ಷಾಂತರ ನಿಷೇಧ ಕಾನೂನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಕ್ತಿಯಿಲ್ಲದಂತಾಗಿದೆ. ಪಕ್ಷದಿಂದ ಪಕ್ಷಕ್ಕೆ ಹಾರುವ ಕೆಟ್ಟ ಸಂಸ್ಕೃತಿ ಆರಂಭವಾಗಿದೆ. ಗೆದ್ದ ಪಕ್ಷಕ್ಕೆ ರಾಜೀನಾಮೆ ನೀಡಿ ಬೇರೆ ಪಕ್ಷಕ್ಕೆ ಹೋಗುತ್ತಾರೆ. ಇದಕ್ಕೆ ಅಂತ್ಯ ಕಾಣಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

Seema.R | news18-kannada
Updated:November 20, 2019, 1:39 PM IST
ಅನರ್ಹರು ಸೋಲುವ ಭಯದಿಂದ ನಾಮಪತ್ರ ಹಿಂಪಡೆಯುವಂತೆ ಸ್ವಾಮೀಜಿ ಮೇಲೆ ಒತ್ತಡ ಹಾಕಿದ್ದಾರೆ; ಕುಮಾರಸ್ವಾಮಿ
ಮಾಜಿ ಸಿಎಂ ಕುಮಾರಸ್ವಾಮಿ
  • Share this:
ಕೊಡಗು (ನ.20): ಹಿರೇಕೆರೂರಿನಲ್ಲಿ ಅನರ್ಹ ಶಾಸಕರಿಗೆ ಸೋಲಿನ ಭಯವಾಗಿದೆ. ಇದೇ ಹಿನ್ನೆಲೆ ಶಿವಾಚಾರ್ಯ ಸ್ವಾಮೀಜಿಗಳನ್ನು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಒತ್ತಡ ಹೇರಲಾಯಿತು. ಈ ಒತ್ತಡದಿಂದ ಅವರು ನಾಮಪತ್ರ ಹಿಂಪಡೆದಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು. 

ಇಲ್ಲಿನ  ಸೋಮವಾರಪೇಟೆ ತಾಲ್ಲೂಕಿನ ಗುಡ್ಡೆಹೊಸೂರಿನಲ್ಲಿ ಮಾತನಾಡಿದ ಅವರು, 15 ಕ್ಷೇತ್ರಗಳಲ್ಲಿಯೂ ನಾವು ಸಮರ್ಥ ಅಭ್ಯರ್ಥಿಗಳನ್ನು ನಿಲ್ಲಿಸಿದ್ದೇವೆ, ಎಲ್ಲೂ ಕೈ ಚೆಲ್ಲುವ ಮಾತಿಲ್ಲ, ಎರಡು ರಾಷ್ಟ್ರೀಯ ಪಕ್ಷಗಳಿಗಿಂದ ಹೆಚ್ಚು ಸ್ಥಾನಗಳನ್ನು ಜೆಡಿಎಸ್​ ಗೆಲ್ಲಲ್ಲಿಗೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷಾಂತರ ನಿಷೇಧ ಕಾನೂನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಕ್ತಿಯಿಲ್ಲದಂತಾಗಿದೆ. ಪಕ್ಷದಿಂದ ಪಕ್ಷಕ್ಕೆ ಹಾರುವ ಕೆಟ್ಟ ಸಂಸ್ಕೃತಿ ಆರಂಭವಾಗಿದೆ. ಗೆದ್ದ ಪಕ್ಷಕ್ಕೆ ರಾಜೀನಾಮೆ ನೀಡಿ ಬೇರೆ ಪಕ್ಷಕ್ಕೆ ಹೋಗುತ್ತಾರೆ. ಇದಕ್ಕೆ ಅಂತ್ಯ ಕಾಣಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

17 ಶಾಸಕರಿಗೆ ನಾವು ಅನರ್ಹ ಶಾಸಕರ ಪಟ್ಟ ಕಟ್ಟಿದ್ದಲ್ಲ. ಆಮಿಷಕ್ಕೆ ಒಳಗಾಗಿ ಅವರಾಗಿಯೇ ಈ ಪಟ್ಟ ಪಡೆದಿದ್ದರು. ಅವರಿಗೆ ತಕ್ಕ ಪಾಠವಾಗಬೇಕು ಎಂದರೆ  15 ಕ್ಷೇತ್ರದಲ್ಲೂ ಅವರನ್ನು ಸೋಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಬಿಜೆಪಿಗೆ ಸುಮಲತಾ, ಜಿಟಿ ದೇವೇಗೌಡ ಬೆಂಬಲಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಅವರು ಯಾರನ್ನ ಬೇಕಾದರೂ ಬೆಂಬಲಿಸಲು ಮುಕ್ತರು. ನಾನು ಸಿಎಂ ಆಗಿದ್ದಾಗ ರೈತರ ಸಾಲಮನ್ನಾ ಮಾಡಿದ್ದೇನೆ. ಕೊಟ್ಟ ಮಾತಿನಂತೆ ರೈತರ ಸಾಲಮನ್ನಾ ಮಾಡಿದ್ದೇನೆ. ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೂ ಚಾಲನೆ ನೀಡಿದ್ದೇನೆ. ಅವುಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದರು.

ಇದನ್ನು ಓದಿ: ಕಾಂಗ್ರೆಸ್ ಪಕ್ಷ ಯಾರನ್ನು ಯಾವತ್ತು ಏಕಾಂಗಿ ಮಾಡಲ್ಲ ಸಿಎಂ ಬಿಎಸ್​​ವೈಗೆ ಸಿದ್ದರಾಮಯ್ಯ ತಿರುಗೇಟು

ಯಡಿಯೂರಪ್ಪ ಅವರು ನಮಗೆ ಯಾರ ಬೆಂಬಲವೂ ಬೇಕಾಗಿಲ್ಲ ಎಂದಿದ್ದಾರೆ. ಚುನಾವಣೆ ಬಳಿಕ ಏನಾಗಲಿದೆ  ಎಂದು ಗೊತ್ತಾಗಲಿದೆ. 2008 ರಲ್ಲಿ ಮುಂದಿನ 10 ವರ್ಷ ನಾನೆ ಸಿಎಂ ಎಂದಿದ್ದರು. ಆದರೆ ನಂತರದ ಚುನಾವಣೆಯಲ್ಲಿ ಏನಾಯಿತು ಎಂದು ಬಿಎಸ್ ವೈಗೆ ಟಾಂಗ್ ನೀಡಿದರು.
First published:November 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading