ಇಂದಿನಿಂದ ಸಿಎಂ ಮೊದಲ ಜನತಾ ದರ್ಶನ; ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿಶೇಷ ಸೌಲಭ್ಯ

news18
Updated:September 1, 2018, 11:35 AM IST
ಇಂದಿನಿಂದ ಸಿಎಂ ಮೊದಲ ಜನತಾ ದರ್ಶನ; ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿಶೇಷ ಸೌಲಭ್ಯ
news18
Updated: September 1, 2018, 11:35 AM IST
ಜನರ್ದನಾ ಹೆಬ್ಬಾರ್​, ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.1): ಸಿಎಂ ಕುಮಾರಸ್ವಾಮಿ ಅವರ ಇಂದಿನಿಂದ ಅಧಿಕೃತ ಜನತಾ ದರ್ಶನ  ಇಂದಿನಿಂದ ಆರಂಭವಾಗಲಿದ್ದು, ಇದಕ್ಕಾಗಿ ರಾಜ್ಯದ ವಿವಿಧ ಮೂಲೆಗಳಿಂದ ಜನರು ಆಗಮಿಸಿದ್ದಾರೆ.

ಈವರೆಗೆ ಜನತಾ ದರ್ಶನಕ್ಕೆ ಇಲ್ಲಿಯವರೆಗೆ ಅಧಿಕೃತ ದಿನ, ಸ್ಥಳ ನಿಗದಿಯಾಗದ ಹಿನ್ನಲೆ ಜನರು ತಮ್ಮ ಸಮಸ್ಯೆ ಹೇಳಲು ವಿಧಾನಸೌಧ, ಗೃಹ ಕಚೇರಿ ಸೇರಿದಂತೆ ಅವರ ಜೆ.ಪಿನಗರ ನಿವಾಸದಲ್ಲಿ ಯಾವಾಗಲು ಸಾರ್ವಜನಿಕರು ಆಗಮಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಸಿಎಂ ಎಚ್​ಡಿಕೆ ಶನಿವಾರದಂದು ಮಾತ್ರ ಜನತಾ ದರ್ಶನ ಮಾಡುವುದಾಗಿ ಘೋಷಣೆ ಮಾಡಿದ್ದರು.

ಇಂದು ಅವರ ಮೊದಲ ಅಧಿಕೃತ ಜನತಾ ದರ್ಶನ ಸಿಎಂ ಗೃಹ ಕಚೇರಿಯಲ್ಲಿ ನಡೆಯುತ್ತಿದ್ದು, ಸಿಎಂ ಮುಂದೆ ಅಹವಾಲು ಹೇಳಿಕೊಳ್ಳಲು ಜನಸಾಗರವೇ ಹರಿದು ಬಂದಿದೆ. ಬೆಳಗ್ಗೆ 11ರಿಂದ ಸಂಜೆ 4.30ರವರೆಗೆ ಗೃಹಕಚೇರಿ ಕೃಷ್ಣಾದಲ್ಲಿ ಜನತಾದರ್ಶನ ನಡೆಯಲಿದ್ದು,  ಕುಮಾರಸ್ವಾಮಿ ಜನರಿಂದ ಅಹವಾಲು ಸ್ವೀಕರಿಸಲಿದ್ದಾರೆ.

ಜನತಾ ದರ್ಶನಕ್ಕೆ ವಿಶೇಷ ವ್ಯವಸ್ಥೆ:

ದೂರದೂರುಗಳಿಂದ ಬೆಳ್ಳಂಬೆಳಗ್ಗೆಯೇ ಸಿಎಂ ಮುಂದೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಬಿಸಿಲು, ಮಳೆಯಿಂದ ರಕ್ಷಿಸಲು ಅವರಿಗೆ ಪೆಂಡಾಲ್​ ಹಾಕಿ, ಕುಳಿತು ಕೊಳ್ಳಲು ಕುರ್ಚಿಯ ವ್ಯವಸ್ಥೆ ಮಾಡಲಾಗಿದೆ. ಉಪಹಾರಕ್ಕಾಗಿ ಬಿಸ್ಕೆಟ್​, ಬನ್​ ವ್ಯವಸ್ಥೆಯನ್ನು ಮಾಡಲಾಗಿದೆ.

ಜನತಾ ದರ್ಶನದಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್​ ಭದ್ರತೆಯನ್ನು ಕೂಡ ನೇಮಿಸಲಾಗಿದೆ. ವಿಶೇಷ ಚೇತನರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಸಿಎಂ ವಿಶೇಷಚೇತನರ ಬಳಿಯೇ  ಹೋಗಿ ಸಮಸ್ಯೆ ಆಲಿಸಲಿದ್ದಾರೆ. ಉಳಿದವರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು ಅವರು ಸಾಲಿನಲ್ಲಿ ಬಂದು ಸಿಎಂ ಮುಂದೆ ಸಮಸ್ಯೆ ಹೇಳಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ
Loading...

 
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ