HOME » NEWS » State » HD KUMARSWAMY CRITICIZE AGAINST CT RAVI IN TWITTER SESR SHTV

ದೊಡ್ಡ ಸ್ಥಾನ ಸಿಕ್ಕಿದಂತೆ ಅಹಂಕಾರ ಬರಬಾರದು; ಸಿಟಿ ರವಿ ವಿರುದ್ಧ ಚಾಟಿ ಬೀಸಿದ ಎಚ್​ಡಿಕೆ

ಸಿ.ಟಿ.ರವಿ ಅವರಿಗೆ ಬಹುಶಃ ತನ್ನದೇ ಪಕ್ಷದಲ್ಲಿ ಹೆಮ್ಮರವಾಗುತ್ತಿರುವ ವಂಶವಾಹಿ ರಾಜಕಾರಣದ ವಿರುದ್ಧ ಕೋಪ ಇರಬೇಕು. ಅದಕ್ಕಾಗಿ ಈ ವಿಚಾರ ಕೆಣಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

news18-kannada
Updated:October 15, 2020, 9:25 PM IST
ದೊಡ್ಡ ಸ್ಥಾನ ಸಿಕ್ಕಿದಂತೆ ಅಹಂಕಾರ ಬರಬಾರದು; ಸಿಟಿ ರವಿ ವಿರುದ್ಧ ಚಾಟಿ ಬೀಸಿದ ಎಚ್​ಡಿಕೆ
ಎಚ್​ಡಿಕೆ- ಸಿಟಿ ರವಿ
  • Share this:
ಬೆಂಗಳೂರು (ಅ. 15): ಮನುಷ್ಯ ದೊಡ್ಡ ಸ್ಥಾನಕ್ಕೆ ಹೋದಂತೆ ಆತನ ಬುದ್ಧಿ ಸಾಮರ್ಥ್ಯ ಹೆಚ್ಚಬೇಕು. ಅದನ್ನು ಬಿಟ್ಟು ಹುದ್ದೆ ಸಿಕ್ಕಿತು ಎಂಬ ಅಹಂಕಾರ ಮೂಡಬಾರದು ಎಂದು ಸಿಟಿ ರವಿ ವಿರುದ್ಧ ಜೆಡಿಎಸ್​ ನಾಯಕ ಎಚ್​ಡಿ ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ. ಕುಟುಂಬ ರಾಜಕಾರಣ ಕುರಿತು ಟೀಕೆ ಮಾಡಿದ ಸಿಟಿ ರವಿ ವಿರುದ್ಧ  ಸರಣಿ ಟ್ವೀಟ್​ ಮೂಲಕ  ಮಾಜಿ ಸಿಎಂ ಕಿಡಿಕಾರಿದ್ದಾರೆ. ಅಲ್ಲದೇ ದೊಡ್ಡ ಹುದ್ದೆ ಸಿಕ್ಕಾಕ್ಷಣ ಮನುಷ್ಯನಿಗೆ ಗರ್ವ ಕೂಡ ಬರತ್ತದೆ ಎಂಬ ರೀತಿ ಸಿಟಿ ರವಿ ಅವರ ಮಾತುಗಳು ಕೇಳಿಬರುತ್ತಿದೆ. ಅವರು ಬಳಸುವ ಭಾಷೆ ಅದನ್ನು ಪ್ರತಿಧ್ವನಿಸುತ್ತಿದೆ ಎಂದಿದ್ದಾರೆ

ಬಿಜೆಪಿ ಪಕ್ಷದಲ್ಲಿನ ಕುಟುಂಬ ರಾಜಕಾರಣವನ್ನು ಉದಾಹರಿಸಿ ಮಾತನಾಡಿರುವ ಅವರು  ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಸ್ಥಾನಕ್ಕೆ ಅಂದಿನ ಬಿಜೆಪಿ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ಪುತ್ರ ರಾತ್ರೋರಾತ್ರಿ ಬಂದು ಕುಳಿತಿದ್ದರು.  ಜಯ್ ಶಾ ಎಷ್ಟು ಸೆಂಚುರಿ, ಎಲ್ಲಿ ಬಾರಿಸಿ ಕುಳಿತರು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ತಮ್ಮ ಪಕ್ಷದಲ್ಲಿಯೇ ಈ ರೀತಿ ಕುಟುಂಬ ರಾಜಕಾರಣ ಇದ್ದು ಬೇರೆಯವರತ್ತ ಬೊಟ್ಟುಮಾಡುತ್ತಿರುವ  ಅವರ ಅಲ್ಪಜ್ಞಾನಕ್ಕೆ ನನಗೆ ಕನಿಕರ ಬರುತ್ತದೆ. ಜಯ್ ಶಾ ಪದವಿ ಕೂಡ ಅವರಪ್ಪನ ಬಳುವಳಿ ಎಂದು ಹೇಳುವ ಧೈರ್ಯ ಕೂಡ ರವಿಗೆ ಇಲ್ಲ ಎಂದು ಕುಟುಕಿದ್ದಾರೆ.


ಸಿ.ಟಿ.ರವಿ ಅವರಿಗೆ ಬಹುಶಃ ತನ್ನದೇ ಪಕ್ಷದಲ್ಲಿ ಹೆಮ್ಮರವಾಗುತ್ತಿರುವ ವಂಶವಾಹಿ ರಾಜಕಾರಣದ ವಿರುದ್ಧ ಕೋಪ ಇರಬೇಕು. ಅದಕ್ಕಾಗಿ ಈ ವಿಚಾರ ಕೆಣಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಿ.ಟಿ.ರವಿಯವರು ಮಂತ್ರಿ ಪದವಿ ಹೋದದ್ದಕ್ಕೆ ಅಥವಾ ಭವಿಷ್ಯದಲ್ಲಿ ವಂಶವಾಹಿ ರಾಜಕಾರಣದಲ್ಲಿ ಬೆಳೆದು, ಪಕ್ಷದಲ್ಲಿ ತನ್ನ ಬುಡಕತ್ತರಿಸುವ ಆತಂಕದಿಂದ ಹಾಗೂ ಬಿಜೆಪಿಯಲ್ಲಿನ ವೈರುದ್ಯಗಳ ಬಗ್ಗೆ ಧ್ವನಿ ಎತ್ತಲು ಧೈರ್ಯ ಇಲ್ಲದೇ ಬೇರೆ ಪಕ್ಷಗಳ ವಂಶವಾಹಿ ಆಡಳಿತದ ಬಗೆಗೆ ಪರೋಕ್ಷವಾಗಿ ಮಾತನಾಡುತ್ತಿದ್ದಾರೆ ಎಂದು ಭಾಸವಾಗುತ್ತಿದೆ ಎಂದು ಟೀಕಿಸಿದ್ದಾರೆ.
Published by: Seema R
First published: October 15, 2020, 9:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories