Seema.RSeema.R
|
news18-kannada Updated:March 11, 2020, 6:01 PM IST
ಡಿಕೆ ಶಿವಕುಮಾರ್-ಎಚ್ಡಿ ಕುಮಾರಸ್ವಾಮಿ
ಬೆಂಗಳೂರು (ಮಾ.11): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ಡಿಕೆ ಶಿವಕುಮಾರ್ ಅವರಿಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಶುಭ ಕೋರಿದ್ದಾರೆ.
ಟ್ವೀಟ್ ಮೂಲಕ ಹಾರೈಸಿರುವ ಅವರು, ಕನಕಪುರ ಶಾಸಕರಿಗೆ ಅಭಿನಂದನೆ ತಿಳಿಸಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಿ.ಕೆ.ಶಿವಕುಮಾರ್ ರವರಿಗೆ ಅಭಿನಂದನೆಗಳು.
ಎಚ್ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ನಡೆಸುವಲ್ಲಿ ಡಿಕೆ ಶಿವಕುಮಾರ್ ಪಾತ್ರ ಮಹತ್ವವಾಗಿದ್ದು, ಇದಾದ ಬಳಿಕ ಇವರ ನಡುವಿನ ಸ್ನೇಹ ಕೂಡ ಗಟ್ಟಿಯಾಗಿತ್ತು. ಲೋಕಸಭಾ ಚುನಾವಣೆಯಲ್ಲಿಯೂ ಮಂಡ್ಯ ಚುನಾವಣಾ ಕಣದಿಂದ ಕಾಂಗ್ರೆಸ್ ನಾಯಕರು ಅಂತರ ಕಾಯ್ದಕೊಂಡರೂ ಡಿಕೆ ಶಿವಕುಮಾರ್ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿ ಮತಯಾಚಿಸಿದ್ದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಕೆಶಿ ತಿಹಾರ್ ಜೈಲು ಸೇರಿದಾಗಲೂ ಎಚ್ಡಿಕೆ ಜೈಲಿಗೆ ತೆರಳಿ, ಡಿಕೆಶಿ ಸಾಂತ್ವನ ಹೇಳಿ ಬಂದಿದ್ದರು. ಆ ಬಳಿಕ ಜೈಲಿನಿಂದ ಬಿಡುಗಡೆಯಾಗಿ ಬಂದಾಗಲೂ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಡಿಕೆಶಿಯನ್ನು ಸ್ವಾಗತಿಸಿ, ಕುಶಲೋಪರಿ ವಿಚಾರಿಸಿದ್ದರು.
ಇದನ್ನು ಓದಿ: ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರುವುದು ಆಶ್ಚರ್ಯ ತಂದಿದೆ; ಸಚಿವ ಈಶ್ವರಪ್ಪ
ಒಂದು ಕಾಲದಲ್ಲಿ ಹಾವು-ಮುಂಗುಸಿಯಂತಿದ್ದ ಇವರ ಸ್ನೇಹ ಸಮ್ಮಿಶ್ರ ಸರ್ಕಾರ ರಚನೆ ನಂತರ ಗಟ್ಟಿಯಾಗಿತ್ತು. ಡಿಕೆ ಶಿವಕುಮಾರ್ ಅಧ್ಯಕ್ಷರಾಗುತ್ತಿದ್ದಂತೆ ರಾಮನಗರದಲ್ಲಿ ಕುಮಾರಸ್ವಾಮಿ ಬೆಂಬಲಿಗರು ಕೂಡ ಹರ್ಷ ವ್ಯಕ್ತಪಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
First published:
March 11, 2020, 6:01 PM IST