• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ರಾಜ್ಯದಲ್ಲಿ ಚುನಾವಣೆಗಳು ನಡೆಯುತ್ತಿದ್ದು, ಸಾಮಾಜಿಕ ಅಂತರ ಎಲ್ಲಿದೆ : ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನೆ

ರಾಜ್ಯದಲ್ಲಿ ಚುನಾವಣೆಗಳು ನಡೆಯುತ್ತಿದ್ದು, ಸಾಮಾಜಿಕ ಅಂತರ ಎಲ್ಲಿದೆ : ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನೆ

ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ

ದಿನದಿಂದ ದಿನಕ್ಕೆ ಕೊರೋನಾ ಕೇಸ್ ಗಳು ಹೆಚ್ಚುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ಬೆಡ್ ಗಳು ಸಿಗದೆ ಸಮಸ್ಯೆ ಎದುರಿಸುತ್ತಿದ್ದಾರೆ

  • Share this:

ರಾಮನಗರ (ಏ. 12) : ಕೊರೋನಾ ಇದ್ದರೂ ರಾಜ್ಯದಲ್ಲಿ ಚುನಾವಣೆಗಳು ನಡೆಯುತ್ತಿವೆ. ಹೀಗಾದರೆ ಕೊರೋನಾ ತಡೆಯಲು ಹೇಗೆ ಸಾಧ್ಯ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.  ನಗರಸಭೆ ಚುನಾವಣೆ ಹಿನ್ನೆಲೆ ಯ ಬಿಡದಿಯ ತೋಟದ ಮನೆಯಲ್ಲಿರಾಮನಗರ - ಚನ್ನಪಟ್ಟಣದ ಆಕಾಂಕ್ಷಿಗಳ ಸಭೆ ನಡೆಸಿದ ಅವರು,  ಈಗ ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿವೆ. ನಗರಸಭೆ ಚುನಾವಣೆಗಳು ನಡೆಯುತ್ತಿವೆ. ಜೊತೆಗೆ ರಾಜಕೀಯ ಪಕ್ಷಗಳ ಸಭೆಗಳೂ ನಡೆಯುತ್ತಿವೆ‌. ಆದರೆ ಇಲ್ಲಿ ಸಾಮಾಜಿಕ ಅಂತರ ಎಲ್ಲಿದೆ.  ದಿನದಿಂದ ದಿನಕ್ಕೆ ಕೊರೋನಾ ಕೇಸ್ ಗಳು ಹೆಚ್ಚುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು  ಬೆಡ್ ಗಳು ಸಿಗದೆ  ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಇನ್ನು ಸಾರಿಗೆ ನೌಕರರ ವಿಚಾರವಾಗಿ ಸರ್ಕಾರ ಎಡವಿದೆ. ಜನರಿಗೆ ಉಚಿತ ಪಾಸ್ ಗಳನ್ನ ನೀಡಿದ್ದಾರೆ. ಆದರೆ ಅದರ ಹಣವನ್ನ ಯಾರು ಕೊಡುತ್ತಾರೆ. ಸರ್ಕಾರಕ್ಕೆ ಹಣ ಸಂಗ್ರಹ ಎಲ್ಲಿಂದ ಆಗಲಿದೆ ಎಂದು ಪ್ರಶ್ನಿಸಿದರು.


ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ವಿರುದ್ಧ ವಾಗ್ದಾಳಿ ನಡೆಸಿ, ನನ್ನ ಕಷ್ಟ ನನಗೆ ಗೊತ್ತಿದೆ. 15 ವರ್ಷದಿಂದ ಪಕ್ಷ ಹೇಗೆ ಬೆಳೆಸಿದ್ದೇನೆ ಎಂದು ನನಗೆ ತಿಳಿದಿದೆ. ಒಂದು ಪ್ರಾದೇಶಿಕ ಪಕ್ಷ ಬೆಳೆಸುವುದು ಅಷ್ಟು ಸುಲಭವಲ್ಲ , ಹಾಗಾಗಿ ಆ ಅಲ್ಲಾಗೆ ಎಲ್ಲವನ್ನು ಬಿಟ್ಟಿದ್ದೇನೆ. ಅಲ್ಲಾ ಅವನನ್ನ ಸರ್ವನಾಶ ಮಾಡ್ತಾನಾ, ನನ್ನನ್ನು ಮಾಡ್ತಾನಾ ನೋಡೋಣ.  ಮೂರು ಬಸ್ ಗೆ ಒಂದು ನಂಬರ್ ಹಾಕಿಕೊಂಡು ಓಡಿಸುತ್ತಿದ್ದ ಅವನು‌. ಅಂತಹವನು ಇವತ್ತು ಎಂ.ಎಲ್.ಎ ಆಗಿದ್ದಾನೆ. ಹುಟ್ಟಿದಾಗಿನಿಂದ ದಾನ ಧರ್ಮ ಮಾಡಿಕೊಂಡು ಬಂದಿದ್ದಾನಂತೆ.ನಾನು ನೋಡಿದ್ದೇನೆ ಅವನ ದಾನ ಧರ್ಮನ್ನು. ಆದರೆ ಅವನ ಬಗ್ಗೆ ಮಾತನಾಡಿದರೆ ಕೊಚ್ಚೆಗೆ  ಕಲ್ಲು ಎಸೆದಾಗೆ ಎಂದು ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದರು.


ಇದನ್ನು ಓದಿ: ಬೆಳಗಾವಿ ಉಪಚುನಾವಣೆ ಮಹಾಭಾರತದಂತೆ; ದ್ರೋಣಾಚಾರ್ಯ ಹಾಗೂ ಅರ್ಜುನನ ಮಧ್ಯೆ ಯುದ್ದ: ಬಾಲಚಂದ್ರ ಜಾರಕಿಹೊಳಿ


ಇನ್ನು ನಾನು ಸಿದ್ದರಾಮಯ್ಯನವರ ಕ್ಷೇತ್ರಕ್ಕೆ ಕಳುಹಿಸಿ ಕೊಡುತ್ತೇನೆ‌. ಕಾಂಗ್ರೆಸ್ ನವರಿಗೆ ಬಸ್ ಮಾಡಿ ಕೊಡ್ತೇನೆ. ಹೋಗಿ ನೋಡಿ ಬರಲಿ. ರಾಮನಗರದ ಬಗ್ಗೆ ಮಾತನಾಡುವವರು ಒಮ್ಮೆ ಹೋಗಿ ನೋಡಲಿ‌ ಎಂದು ಸವಾಲ್​ ಹಾಕಿದರು. ಇನ್ನು ಬಸವಕಲ್ಯಾಣ ಈಗ ಯಾವ ಸ್ಥಿತಿಯಲ್ಲಿದೆ ಎಂದು ನೋಡಲಿ. ರಾಮನಗರದ ಅಭಿವೃದ್ಧಿ ಬಗ್ಗೆ ಈಗಿನ ಕಾಂಗ್ರೆಸ್ ಮುಖಂಡ ಸಿಂಧ್ಯಾರವರೇ ಹೇಳಿದ್ದಾರೆ. ಈ ಹಿಂದೆ ರಾಮನಗರದ ಅಭಿವೃದ್ಧಿ ಬಗ್ಗೆ ಬಸವಕಲ್ಯಾಣದಲ್ಲಿ ಹೇಳಿದ್ದರು ಎಂದು ತಿಳಿಸಿದರು.


ರಾಮನಗರ - ಚನ್ನಪಟ್ಟಣ ನಗರಸಭೆ ವಿಚಾರವಾಗಿ ಎಲ್ಲಾ ತೀರ್ಮಾನ ಆಗಿದೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಈ ಬಾರಿ ಎರಡೂ ಕಡೆಗಳಲ್ಲಿ ಜೆಡಿಎಸ್ ಪಕ್ಷ ಜಯಭೇರಿ ಬಾರಿಸಲಿದೆ ಎಂದರು.

Published by:Seema R
First published: