ಮಾಧುಸ್ವಾಮಿ ನಡುವಳಿಕೆ​​ ರೌಡಿಸಂನಂತಿದೆ, ಇನ್ನಾದರೂ ಬದಲಾಯಿಸಿಕೊಳ್ಳಬೇಕು; ಕುಮಾರಸ್ವಾಮಿ ಕಿವಿಮಾತು

ಈಗ ಆಗಿರುವ ಆಚಾತುರ್ಯದಿಂದ ಎಚ್ಚೆತ್ತು ಇನ್ನಾದರೂ ಮಾಧುಸ್ವಾಮಿ ಎಚ್ಚೆತ್ತುಕೊಳ್ಳಬೇಕು. ಅವರ ಈ ನಡವಳಿಕೆ ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರು ಅದು ಅವರನ್ನು ಮಾತ್ರವಲ್ಲ ಬಿಜೆಪಿಯನ್ನು ನಾಶಮಾಡುತ್ತದೆ ಎಂದು ಎಚ್ಚರಿಸಿದ್ದಾರೆ. 

news18-kannada
Updated:November 21, 2019, 2:40 PM IST
ಮಾಧುಸ್ವಾಮಿ ನಡುವಳಿಕೆ​​ ರೌಡಿಸಂನಂತಿದೆ, ಇನ್ನಾದರೂ ಬದಲಾಯಿಸಿಕೊಳ್ಳಬೇಕು; ಕುಮಾರಸ್ವಾಮಿ ಕಿವಿಮಾತು
ಹೆಚ್​.ಡಿ. ಕುಮಾರಸ್ವಾಮಿ
  • Share this:
ಬೆಂಗಳೂರು (ನ.21): ಮಾಧುಸ್ವಾಮಿ ಉದ್ಧಟತನ ಎಲ್ಲರೂ ನೋಡಿದ್ದಾರೆ. ಅವರ ನಡವಳಿಕೆ ವಿಧಾನಸಭೆಯಲ್ಲಿಯೂ ನೋಡಿದ್ದೇವೆ. ಮಾಧುಸ್ವಾಮಿಯವರ ಬಾಡಿ ಲಾಂಗ್ವೇಜ್ ನೋಡಬೇಕು. ಒಂದು ರೀತಿ ರೌಡಿಜಂನ ನಾಯಕತ್ವ ರೀತಿ ಇದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದ್ದಾರೆ. 

ಹುಣಸೂರಿನ ದೊಡ್ಡ ಹೆಜ್ಜೂರಿನಲ್ಲಿ ಮಾತನಾಡಿದ ಅವರು, ಮಾಧುಸ್ವಾಮಿ ಮುಂಚಿನಿಂದಲೂ ಹಾಗೇಯೇ. ಅವರು ಮಂತ್ರಿ ಆದ ಮೇಲೂ ಅದು ಕಡಿಮೆಯಾಗಿಲ್ಲ. ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅವರಿಗೆ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಅನ್ನೋ ಪಾಠ ಮಾಡಬೇಕು ಎಂದರು.

ಈಗ ಆಗಿರುವ ಆಚಾತುರ್ಯದಿಂದ ಎಚ್ಚೆತ್ತು ಇನ್ನಾದರೂ ಮಾಧುಸ್ವಾಮಿ ಎಚ್ಚೆತ್ತುಕೊಳ್ಳಬೇಕು. ಅವರ ಈ ನಡವಳಿಕೆ ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರು ಅದು ಅವರನ್ನು ಮಾತ್ರವಲ್ಲ ಬಿಜೆಪಿಯನ್ನು ನಾಶಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.

ಬಿಜೆಪಿಯಿಂದ ರಾಜಕೀಯಕ್ಕೆ ಧರ್ಮಗುರುಗಳ ಬಳಕೆ ಮಾಡಿ ನಮ್ಮ ಕೆಲ ಅಭ್ಯರ್ಥಿಗಳ ಮೇಲೆ ಒತ್ತಡ ಹೇರಿದ್ದಾರೆ. ಒತ್ತಡ, ಹಲವು ಆಮಿಷಗಳನ್ನೂ ಬಿಜೆಪಿ ಒಡ್ಡಿ ನಾಮಪತ್ರ ಹಿಂಪಡೆಯುವಂತೆ ತಿಳಿಸಿದ್ದಾರೆ. ಆದರೆ ನಾಮಪತ್ರವನ್ನು ಹಿಂಪಡೆಯಬೇಡಿ ಎಂದು ಕೇಳಿದ್ದೇನೆ. ಇನ್ನು 2 ಗಂಟೆ ಬಾಕಿ ಇದೆ ಏನಾಗುತ್ತದೆ ನೋಡೋಣ ಎಂದರು.

 

ಅನರ್ಹ ಶಾಸಕರ ವಿರುದ್ಧ ಎಲ್ಲೆಡೆ ದೊಡ್ಡ ಆಕ್ರೋಶ ಎದ್ದಿದೆ. 15 ಅನರ್ಹ ಶಾಸಕರನ್ನೂ ಸೋಲಿಸಲು ಹೋರಾಟ ಮಾಡಲಾಗಿದೆ.

ಇದನ್ನು ಓದಿ: ಕುರುಬ ಸಮುದಾಯದ ಆಕ್ರೋಶ: ಕಾಗಿನೆಲೆ ಸ್ವಾಮೀಜಿ ಜೊತೆ ಸಂಧಾನಕ್ಕೆ ಮುಂದಾದ ಸಚಿವ ಮಾಧುಸ್ವಾಮಿ 

ಸಿದ್ದರಾಮಯ್ಯ ಜಿಟಿಡಿ ಬೆಂಬಲ ಪಡೆವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆ ಎಂದ ಮೇಲೆ ಎಲ್ಲರದ್ದೂ ತಂತ್ರ ಇರುತ್ತದೆ. ತಂತ್ರ ಮಾಡಿ ಒಬ್ಬೊಬ್ಬರ ಬೆಂಬಲ ಕೋರುತ್ತಾರೆ. ಹಾಗೇ ಸಿದ್ದರಾಮಯ್ಯ ಬೆಂಬಲ ಕೇಳಿರಬಹುದು. ನಾನು ಈಗ ಜಿಟಿಡಿ ಜೊತೆ ಮಾತನಾಡುವ ಪರಿಸ್ಥಿತಿಯಲ್ಲಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲಿಸಿದರೆ ಸ್ವಾಗತ ಎಂದರು.

ಪ್ರಚಾರಕ್ಕೆ ತೆರಳುವ ಮುನ್ನ ಅವರು ಚಿಕಿತ್ಸೆ ಪಡೆಯುತ್ತಿರುವ ತನ್ವೀರ್​ ಸೇಠ್​ ಭೇಟಿ ಮಾಡಿ ಮಾತನಾಡಿದರು. ತನ್ವೀರ್ ಸೇಠ್ ಸದ್ಯ ಆರೋಗ್ಯವಾಗಿದ್ದಾರೆ. ತನ್ವೀರ್ ಸೇಠ್ ಜೀವಕ್ಕೆ ಯಾವ ಅಪಾಯವಿಲ್ಲ. ವೈದ್ಯರ ಸಹಾಯದಿಂದ ಪುನರ್ಜನ್ಮ ಪಡೆದಿದ್ದಾರೆ. ಇಂದು ವಾರ್ಡ್​​ಗೆ ಶಿಫ್ಟ್ ಆಗುತ್ತಾರೆ. ಅವರ ಒಳ್ಳೆಯತನ ಅವರನ್ನು ಕಾಪಾಡಿದೆ. ರಾಜ್ಯ ಸರ್ಕಾರ ಸೂಕ್ತ ತನಿಖೆ ಮಾಡುತ್ತಿದ್ದಾರೆ. ಮೂಲ ಯಾರಿದ್ದಾರೆಂದು ಕಂಡುಹಿಡಿಯಬೇಕಿದೆ ಎಂದು ಆಗ್ರಹಿಸಿದರು.
First published:November 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading