HOME » NEWS » State » HD KUMARSWAMUY SAYS THOSE WHO KILLED GANDIKI WILL THEY LEAVE ME SESR

ಗಾಂಧೀಜಿಯವರನ್ನೇ ಕೊಂದವರು, ಮಾಜಿ ಸಿಎಂ ಆದ ನನ್ನ ಬಿಡ್ತಾರಾ?; ಕುಮಾರಸ್ವಾಮಿ

ನಾಜಿ‌ ಸಂಘಟನೆಗೂ, ಆರ್.ಎಸ್.ಎಸ್ ಗೂ ವ್ಯತ್ಯಾಸವಿಲ್ಲ. ಗಾಂಧಿಯನ್ನೇ ಕೊಂದವರು ಇವರು. ನನ್ನನ್ನು ಮುಟ್ಟೋಕು ಇವರಿಂದ ಆಗುವುದಿಲ್ಲ. ಮುಟ್ಟಿದರೆ ಪರಿಣಾಮ ಏನಾಗಲಿದೆ ಎಂದು ಊಹಿಸಲು ಸಾಧ್ಯವಿಲ್ಲ ಎಂದು ಇದೇ ವೇಳೆ ಎಚ್ಚರಿಸಿದರು. 

news18-kannada
Updated:January 25, 2020, 4:56 PM IST
ಗಾಂಧೀಜಿಯವರನ್ನೇ ಕೊಂದವರು, ಮಾಜಿ ಸಿಎಂ ಆದ ನನ್ನ ಬಿಡ್ತಾರಾ?; ಕುಮಾರಸ್ವಾಮಿ
ಕುಮಾರಸ್ವಾಮಿ
  • Share this:
ಬೆಂಗಳೂರು (ಜ.25): ದೇಶದ ಸ್ವಾತಂತ್ರ್ಯಕ್ಕಾಗಿ  ಹೋರಾಡಿದ ಮಹಾತ್ಮ ಗಾಂಧಿಜೀಯನ್ನೇ  ಕೊಂದಿದ್ದವರು. ಇನ್ನು ಮಾಜಿ ಸಿಎಂ ಆದ ನನ್ನನ್ನು ಬಿಡ್ತಾರಾ ಎಂದು ಜೆಡಿಎಸ್​ ನಾಯಕ ಕುಮಾರಸ್ಚಾಮಿ ಪ್ರಶ್ನಿಸಿದ್ದಾರೆ. 

ತಮಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವ ಕುರಿತು ಮಾತನಾಡಿದ ಅವರು,ಆರ್​​ಎಸ್​ಎಸ್​, ಹಿಂದೂ ಸಂಘಟನೆಗಳಿಂದಲೇ ತಮಗೆ ಬೆದರಿಕೆ ಕರೆಗಳು ಬರುತ್ತಿದ್ದು, ಇಂತಹ ಬೆದರಿಕೆಗಳಿಗೆ ಬಗ್ಗುವವನಲ್ಲ. ನನ್ನ ಮೇಲೆ ದೌರ್ಜನ್ಯ ನಡೆದರೆ ಭಸ್ಮ ಆಗುತ್ತಾರೆ. ನನ್ನ ಬೆದರಿಸಿ ಏನೂ ಮಾಡಲಾಗಲ್ಲ ಎಂದು ಅಬ್ಬರಿಸಿದ್ದಾರೆ.

ಕೆಲ ಕೈಲಾಗದವರು ಪತ್ರ ಬರೆದು ಬೆದರಿಕೆ ಒಡ್ಡುತ್ತಾರೆ. ನಾನು ಇಂತಹ ಬೆದರಿಕೆಗಳಿಗೆ ಬಗ್ಗುವವನಲ್ಲ. ನಾನು ದೇವರನ್ನು ನಂಬಿ‌ ಬದುಕಿದವನು. ದೇವರು ನಮ್ಮ‌ ಆಯುಷ್ಯ ನಿರ್ಧಾರ ಮಾಡಿರುತ್ತಾನೆ. ನನ್ನನ್ನು ಮುಟ್ಟೋಕು ಇವರಿಂದ ಆಗುವುದಿಲ್ಲ. ನಾನು ಜನರ ಮಧ್ಯೆ ಇರುವವರನು. ಭದ್ರತೆ ದೂರವಿಟ್ಟು ಜನರ ಬಳಿ ಹೋಗಿ ಅವರ ಸಮಸ್ಯೆ ಆಲಿಸುತ್ತೇನೆ ನನಗೆ ಏನು ಆಗುವುದಿಲ್ಲ ಎಂದರು. ನಾಜಿ‌ ಸಂಘಟನೆಗೂ, ಆರ್.ಎಸ್.ಎಸ್ ಗೂ ವ್ಯತ್ಯಾಸವಿಲ್ಲ. ಗಾಂಧಿಯನ್ನೇ ಕೊಂದವರು ಇವರು. ನನ್ನನ್ನು ಮುಟ್ಟೋಕು ಇವರಿಂದ ಆಗುವುದಿಲ್ಲ. ಮುಟ್ಟಿದರೆ ಪರಿಣಾಮ ಏನಾಗಲಿದೆ ಎಂದು ಊಹಿಸಲು ಸಾಧ್ಯವಿಲ್ಲ ಎಂದು ಇದೇ ವೇಳೆ ಎಚ್ಚರಿಸಿದರು.

ಮಂಗಳೂರು ಬಾಂಬ್​ ಸ್ಪೋಟದ ಕುರಿತು ಒಬ್ಬೊಬ್ಬರು ಒಂದು ಹೇಳಿಕೆ ನೀಡುತ್ತಾರೆ. ಆ ಘಟನೆ ಬಗ್ಗೆ ನನಗೆ ಅನುಮಾನ ಇದೆ. ಘಟನೆ ಕುರಿತು ಸಂಪೂರ್ಣ ಮಾಹಿತಿಯೊಂದಿಗೆ  ಸದನದಲ್ಲಿ ಎಲ್ಲವನ್ನೂ ಮಂಡಿಸುತ್ತೇನೆ ಎಂದರು.

ರಾಜಕೀಯವಾಗಿ ಬಿಜೆಪಿ ನನ್ನನ್ನು ಎದುರಿಸಲು ಆಗುತ್ತಿಲ್ಲ. ಹೀಗಾಗಿ‌ ಇಂತಹ ಗೊಡ್ಡು ಬೆದರಿಕೆ ಒಡ್ಡುತ್ತಿದೆ. ನಾನು ನಿರಂತರವಾಗಿ ಹೋರಾಟ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಮಂಗಳೂರು ಘಟನೆ ಕುರಿತು ಯಡಿಯೂರಪ್ಪ ಉತ್ತರ ಕೊಡಲ್ಲ. ಅವರಿಂದ  ಕೊಡಲು ಸಾಧ್ಯವಿಲ್ಲ ಎಂದರು.

ಇದನ್ನು ಓದಿ:  ಸದ್ಯಕ್ಕಿಲ್ಲ ರಾಜ್ಯ ಸಚಿವ ಸಂಪುಟ ವಿಸ್ತರಣೆ; ಇನ್ನೂ ಮೂರು ದಿನ ಸಿಎಂ ಬಿಎಸ್​ವೈಗೆ ಬಿಡುವಿಲ್ಲದಷ್ಟು ಪ್ರವಾಸ

 ಇದೇ ಸಂದರ್ಭದಲ್ಲಿ ಮಧು ಬಂಗಾರಪ್ಪ, ರಮೇಶ್ ಬಾಬು ಜೆಡಿಎಸ್ ತೊರೆಯುವ ವಿಚಾರ ಕುರಿತು ಮಾತನಾಡಿದ ಅವರು, ಬರುವವರು ಬರುತ್ತಾರೆ, ಹೋಗುವವರು ಹೋಗುತ್ತಾರೆ. ಬಂದು ಹೋಗುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಎಷ್ಟು ಬಾರಿ ಕರೆದು ಮಾತನಾಡಲಿ. ಹಲವಾರು ಬಾರಿ ಕರೆದು ಮಾತನಾಡಿದ್ದೇನೆ. ದೊಡ್ಡ ಪಕ್ಷಕ್ಕೆ ಸೇರಿ ಏನೋ ಸಾಧನೆ ಮಾಡುತ್ತೇನೆಂಬ ಭ್ರಮೆ ಇದೆ ಎಂದರು.
Youtube Video
First published: January 25, 2020, 3:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories