ವೈದ್ಯರ ಸಲಹೆ ಮೇರೆಗೆ ಎಚ್​ಡಿ ಕುಮಾರಸ್ವಾಮಿ 10 ದಿನ ವಿಶ್ರಾಂತಿ

ರಕ್ತದಲ್ಲಿ ಸೋಂಕು ಉಂಟಾಗಿರುವುದು ಪರೀಕ್ಷಾ ವರದಿಗಳಿಂದ ಗೊತ್ತಾಗಿದೆ. ಇದೇ ಹಿನ್ನೆಲೆಯಲ್ಲಿ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. 2009ರಲ್ಲಿ ಉತ್ತರ ಕರ್ನಾಟಕ ಪ್ರವಾಹ ಪೀಡಿತರ ಪರಿವೀಕ್ಷಣೆಗೆ ಹೋಗಿದ್ದಾಗ ಇದೇ ರೀತಿ ಅವರಿಗೆ ಸೋಂಕು ಉಂಟಾಗಿತ್ತು.

HR Ramesh | news18-kannada
Updated:December 5, 2019, 3:30 PM IST
ವೈದ್ಯರ ಸಲಹೆ ಮೇರೆಗೆ ಎಚ್​ಡಿ ಕುಮಾರಸ್ವಾಮಿ 10 ದಿನ ವಿಶ್ರಾಂತಿ
ಎಚ್​.ಡಿ. ಕುಮಾರಸ್ವಾಮಿ
  • Share this:
ಬೆಂಗಳೂರು: ಉಪಚುನಾವಣೆ ಪ್ರಚಾರದ ವೇಳೆ ಮಾಜಿ‌ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಬಳಲಿದ್ದು, ವೈದ್ಯರ ಸೂಚನೆ ಮೇರೆಗೆ ಅವರು 10 ದಿನಗಳ ವಿಶ್ರಾಂತಿ ಪಡೆಯಲಿದ್ದಾರೆ.

ಈ ಅವಧಿಯಲ್ಲಿ ಯಾವುದೇ ಪ್ರವಾಸ, ರಾಜಕೀಯ ನಾಯಕರು, ಸಾರ್ವಜನಿಕರ ಭೇಟಿ ಮಾಡದೇ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸೂಚಿಸಿರುವ ಹಿನ್ನೆಲೆಯಲ್ಲಿ ಎಚ್​ಡಿಕೆ ಸಾರ್ವಜನಿಕರ ಭೇಟಿಗೆ ಲಭ್ಯವಿರುವುದಿಲ್ಲ. ಬಳಲಿಕೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರನ್ನು ಬುಧವಾರ ಹಲವು ವೈದ್ಯಕೀಯ ತಪಾಸಣೆ ಮಾಡಲಾಗಿತ್ತು. ರಕ್ತದಲ್ಲಿ ಸೋಂಕು ಉಂಟಾಗಿರುವುದು ಪರೀಕ್ಷಾ ವರದಿಗಳಿಂದ ಗೊತ್ತಾಗಿದೆ. ಇದೇ ಹಿನ್ನೆಲೆಯಲ್ಲಿ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. 2009ರಲ್ಲಿ ಉತ್ತರ ಕರ್ನಾಟಕ ಪ್ರವಾಹ ಪೀಡಿತರ ಪರಿವೀಕ್ಷಣೆಗೆ ಹೋಗಿದ್ದಾಗ ಇದೇ ರೀತಿ ಅವರಿಗೆ ಸೋಂಕು ಉಂಟಾಗಿತ್ತು.

ಆರೋಗ್ಯ ಸುಧಾರಣೆಗಾಗಿ ಯಾರೂ ಕೂಡ ಎಚ್​ಡಿಕೆ ಭೇಟಿಗೆ ಮುಂದಾಗಬಾರದು ಎಂದು ಕುಟುಂಬ ಸದಸ್ಯರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಇದನ್ನು ಓದಿ: ಅವನ್ಯಾರೋ ರಮೇಶ, ಬಾಯಿಗೆ ಬಂದಂಗೆ ಮಾತನಾಡ್ತಾನೆ: ಜಾರಕಿಹೊಳಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ
First published:December 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ