ಹುಬ್ಬಳ್ಳಿ (ಡಿ.09): ಜೆಡಿಎಸ್ ಆರಂಭಿಸಿರೋ ಪಂಚರತ್ನ ಯಾತ್ರೆಯ ನೆಪ ಹೇಳಿರೋ ಮಾಜಿ ಸಿಎಂ ಎಚ್.ಡಿ ಕುಮಾಸ್ವಾಮಿ (H D Kumaraswamy) ಬೆಳಗಾವಿಯಲ್ಲಿ ನಡೆಯಲಿರೋ ಚಳಿಗಾಲದ ಅಧಿವೇಶನದಲ್ಲಿ (Winter Session) ಭಾಗಿಯಾಗುತ್ತಿಲ್ಲ ಅಂತ ಹೇಳಿದ್ದಾರೆ. ಹುಬ್ಬಳ್ಳಿ (Hubballi) ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಾನು ಈ ಬಾರಿ ಚಳಿಗಾಲ ಅಧಿವೇಶನದಲ್ಲಿ ಭಾಗಿಯಾಗಲ್ಲ. ಪಂಚರತ್ನ ಯಾತ್ರೆಗೆ ಸಮಯ ನಿಗದಿಯಾಗಿದೆ (Time Fix). ಹಾಗಾಗಿ ನಾನು ಅಧಿವೇಶನದಲ್ಲಿ ಭಾಗವಹಿಸುತ್ತಿಲ್ಲ. ನಮ್ಮ ಉಪಸ್ಥಿತಿಯಲ್ಲಿ ಬಂಡೆಪ್ಪ ಕಾಶಂಪೂರ ಸಮಸ್ಯೆ (Problem) ಬಗ್ಗೆ ಮಾತಾಡ್ತಾರೆ ಎಂದರು.
ಸಿಹಿ ಸುದ್ದಿ, ಹುಳಿ ಸುದ್ದಿ
ಸರ್ಕಾರ ಕೇವಲ ಘೋಷಣೆಗೆ ಸೀಮಿತವಾಗಿದೆ. ಬರೀ ಸಿಹಿ ಸುದ್ದಿ, ಹುಳಿ ಸುದ್ದಿ ಅಂತಾರೆ. ಬರೀ ದೊಡ್ಡ ಘೋಷಣೆ ಮಾಡೋದು ಇವರ ಕೆಲಸ. ಪಂಚ ರತ್ನಕ್ಕೆ ಹೋದ ಕಡೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಜನವರಿ 3ರಿಂದ ಬೀದರ್ ಭಾಗದಿಂದ ಕಾರ್ಯಕ್ರಮ ಮತ್ತೆ ಆರಂಭವಾಗುತ್ತೆ. ಫೆಬ್ರವರಿ ತಿಂಗಳಲ್ಲಿ ಬೆಳಗಾವಿ ಭಾಗದಲ್ಲಿ ಪಂಚರತ್ನ ಕಾರ್ಯಕ್ರಮ ಆರಂಭವಾಗಲಿದೆ. ಬಿಜೆಪಿ ಸರ್ಕಾರ ಯಾವ ಕಾರ್ಯಕ್ರಮ ಆಗಿಲ್ಲ ಎಂದು ಎಚ್ಡಿಕೆ ಹೇಳಿದ್ದಾರೆ.
ಬಿಜೆಪಿ ನಾಯಕರು ವಿಷಯ ಡೈವರ್ಟ್ ಮಾಡ್ತಿದ್ದಾರೆ
ಬೆಳಗಾವಿ ಗಡಿ ವಿವಾದ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಎರಡು ರಾಜ್ಯದ ಬಿಜೆಪಿ ನಾಯಕರು ವಿಷಯ ಡೈವರ್ಟ್ ಮಾಡ್ತಿದ್ದಾರೆ. ಕರ್ನಾಟಕ ಬಿಜೆಪಿ, ಮಹಾರಾಷ್ಟ್ರ ಬಿಜೆಪಿ ನಾಯಕರು ವಿಷಯ ಡೈವರ್ಟ್ ಮಾಡ್ತಿದ್ದಾರೆ. ಗಡಿ ವಿವಾದ ಮುಗಿದು ಹೋದ ಅಧ್ಯಾಯ ಎಂದರು.
ಬಿಜೆಪಿ ನಾಯಕರಿಗೆ ಅಭಿವೃದ್ದಿ ವಿಷಯ ಇಲ್ಲ, ಒಬ್ಬರು ಅತ್ತ ಹಾಗೆ ಮಾಡ್ತಾರೆ, ಮತ್ತೊಬ್ಬರು ಹೊಡದಂಗೆ ಮಾಡ್ತಾರೆ. ನಾವು ಈ ಬಾರಿ 123 ರಿಂದ 130 ಸೀಟ್ ಗೆಲ್ತೀವಿ. ರಾಜ್ಯದ ಯಾವ ಪಕ್ಷದ ನಾಯಕರು ನನ್ನ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿದ್ರು.
ಸಿದ್ದರಾಮಯ್ಯ ಬಸ್ ಯಾತ್ರೆ
ಸಿದ್ದರಾಮಯ್ಯ ಬಸ್ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ಧರಾಮಯ್ಯ ಎಲ್ಲಿಂದಲೋ ಸ್ಟಾರ್ಟ್ ಮಾಡಲಿ. ಅದು ಅವರ ಅವರ ಪಕ್ಷದ ವಿಚಾರ ನಾನು ಯಾಕೆ ಚರ್ಚೆ ಮಾಡಲಿ ಎಂದು ಕುಮಾರಸ್ವಾಮಿ ಟಾಂಗ್ ನೀಡಿದರು.
ಕೆಸಿಆರ್ ನಮಗೆ ಬೆಂಬಲ ಕೊಡ್ತಿದಾರೆ. ಕುಮಾರಸ್ವಾಮಿ ಸಿಎಮ್ ಆಗಲು ಗಡಿ ಭಾಗದಲ್ಲಿ ನಮಗೆ ಸಪೋರ್ಟ್ ಮಾಡ್ತಿದಾರೆ. ಅವರ ಪಕ್ಷದ ಶಾಸಕರು ನಮಗೆ ಬೆಂಬಲ ಕೊಡ್ತೀನಿ ಎಂದಿದ್ದಾರೆ. ಆದರೆ ಜನಾರ್ಧನ ರೆಡ್ಡಿ ಮಾತುಕತೆ ಆಗಿಲ್ಲ. ಯಾರ ಜೊತೆ ಹೊಂದಾಣಿಕೆ ಪ್ರಶ್ನೆ ಇಲ್ಲ. ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು ಅನ್ನೋ ಗುರಿ ಇದೆ. ಗುಜರಾತ್ ಮಾಡೆಲ್ ಇಲ್ಲಿ ವರ್ಕೌಟ್ ಆಗಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಸಾಮಾಗ್ರಿ ಬಿಲ್ ಬಿಡುಗಡೆಗೆ ಆಗ್ರಹ
ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಸಾಮಾಗ್ರಿ ಬಿಲ್ ಬಿಡುಗಡೆ ಮಾಡಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ಆರೋಪಿಸಿದೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಮಹಾ ಒಕ್ಕೂಟದ ಉಪಾಧ್ಯಕ್ಷ ಗುರುನಾಥಗೌಡ ಮತ್ತು ಸದಸ್ಯರು, ರಾಜ್ಯ ಸರ್ಕಾರದ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: MES Mahamelava: ಮತ್ತೆ MES ಕಿರಿಕ್; ಬೆಳಗಾವಿ ಚಳಿಗಾಲದ ಅಧಿವೇಶನ v/s ಮಹಾಮೇಳಾವ್
ಧಾರವಾಡ ಜಿಲ್ಲೆಯ 144 ಗ್ರಾಮ ಪಂಚಾಯಿತಿಗಳಿಗೂ ಸಾಮಾಗ್ರಿ ಬಿಲ್ ಬಿಡುಗಡೆಯಾಗಿಲ್ಲ. ಸಿಎಂ ತವರು ಜಿಲ್ಲೆಯಾದ್ರೂ ಹಣ ಬಿಡುಗಡೆಯಾಗಿಲ್ಲ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ 200 ಸಾಮಾಗ್ರಿ ಬಿಲ್ ಬಾಕಿ ಇದೆ. ಸರ್ಕಾರದಿಂದ ಒಂದೊಂದು ಪಂಚಾಯತಿಗೆ 70 - 80 ಲಕ್ಷ ಕಾಮಗಾರಿ ಬಿಲ್ ಬಾಕಿ ಇದೆ. ಸರ್ಕಾರ ಬಿಲ್ ಕ್ಲಿಯರ್ ಮಾಡ್ತಿಲ್ಲ. ಕೂಡಲೇ ಸಾಮಾಗ್ರಿ ಬಾಕಿ ಬಿಲ್ ಬಿಡುಗಡೆ ಮಾಡಬೇಕು. ಆರು ತಿಂಗಳಿಂದ ಬಾಕಿ ಉಳಿಸಿಕೊಂಡಿರೊ ಗ್ರಾ.ಪಂ. ನೌಕರರ ವೇತನ ಬಿಡುಗಡೆಗಡೆ ಮಾಡಬೇಕು. ಗ್ರಾ.ಪಂ. ಸದಸ್ಯರ ಗೌರವ ಧನ ಹೆಚ್ಚಿಸಲು ಆಗ್ರಹಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ