ನಮ್ಮ ಪಕ್ಷದಲ್ಲೇ ಚೂರಿಗಳ ಸದ್ದು ಕೇಳಿಸುತ್ತಿದೆ, ಎಚ್​ಡಿಕೆಗೆ ಎಲ್ಲವನ್ನು ಅರಗಿಸಿಕೊಳ್ಳುವ ಶಕ್ತಿ ಇದೆ; ಸಾ.ರಾ.ಮಹೇಶ್

ಕ್ಷೇತ್ರ ಬದಲಾವಣೆ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ಸಾ.ರಾ.ಮಹೇಶ್​ ನಾನು ಕೆ.ಆರ್.ನಗರದಲ್ಲೇ ಚುನಾವಣೆಗೆ ನಿಲ್ಲುವುದು. ನನ್ನ ಕೊನೆ ಉಸಿರಿರೋವರೆಗೂ ಇಲ್ಲೇ ಸ್ಪರ್ಧೆ. ಕೊನೆವರೆಗೂ ನಾನು ಕೈ ಮುಗಿಯುವುದು ಕುಮಾರಣ್ಣಗೆ ಮಾತ್ರ. ನಾನು ಕ್ಷೇತ್ರ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ, ಇಂತಹ ವದಂತಿ ಯಾಕಾಗಿ ಹಬ್ಬಿತ್ತೋ ಗೊತ್ತಿಲ್ಲ, ಎಂದರು.

Latha CG | news18-kannada
Updated:September 13, 2019, 1:27 PM IST
ನಮ್ಮ ಪಕ್ಷದಲ್ಲೇ ಚೂರಿಗಳ ಸದ್ದು ಕೇಳಿಸುತ್ತಿದೆ, ಎಚ್​ಡಿಕೆಗೆ ಎಲ್ಲವನ್ನು ಅರಗಿಸಿಕೊಳ್ಳುವ ಶಕ್ತಿ ಇದೆ; ಸಾ.ರಾ.ಮಹೇಶ್
ಮಾಜಿ ಸಚಿವ ಸಾ.ರಾ. ಮಹೇಶ್​
  • Share this:
ಮೈಸೂರು(ಸೆ.13): ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಇನ್ನಷ್ಟು ಚೂರಿಗಳು ಬರುವುದು ಬಾಕಿ ಇದೆ. ಅಲ್ಲಲ್ಲಿ ಚೂರಿಗಳ ಮಾತುಗಳು ಕೇಳುತ್ತಿವೆ. ಅವೆಲ್ಲವೂ ಶೀಘ್ರದಲ್ಲೇ ಹೊರ ಬರಲಿದೆ. ನಮ್ಮ ಪಕ್ಷದಲ್ಲೇ ಚೂರಿಗಳ ಸದ್ದು ಕೇಳಿಸುತ್ತಿದೆ. ಎಲ್ಲಾ ಚೂರಿಗಳನ್ನು ಅರಗಿಸಿಕೊಳ್ಳುವ ಶಕ್ತಿ ಕುಮಾರಸ್ವಾಮಿ ಅವರಿಗೆ ಇದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.

ಫೋನ್​ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್​ ಪಕ್ಷದ ಮಾಜಿ ಸಚಿವ ಎಸ್​.ಆರ್.ಶ್ರೀನಿವಾಸ್​ , ಒಂದುವೇಳೆ ಹೆಚ್.ಡಿ. ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಮಾಡಿದ್ದರೆ ಅವರನ್ನು ಅರೆಸ್ಟ್​ ಮಾಡಲಿ. ಮಾಡಬಾರದ್ದನ್ನು ಮಾಡಿ ದುಡ್ಡು ಸಂಪಾದಿಸಿದ್ದರೆ ಬಂಧಿಸುವುದರಲ್ಲಿ ತಪ್ಪೇನೂ ಇಲ್ಲ ಎಂದು ಹೇಳಿದ್ದರು.

ಮೈಸೂರಿನಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಆದ ನಂತರ 14 ತಿಂಗಳು ಸಿಎಂ ಉಂಡಷ್ಟು ನೋವು ಯಾರು ಉಣ್ಣಲಿಲ್ಲ. ಬೆಳಗ್ಗೆ ಅಧಿಕಾರಿಗಳ ಸಭೆ ಮಾಡಿದರೆ ಮುಗಿಯಿತು. ನಂತರವೆಲ್ಲಾ ಅಸಮಾಧಾನಗೊಂಡ ಶಾಸಕರ ಸಮಾಧಾನದಲ್ಲೇ ಸಮಯ ಕಳೆಯಬೇಕಿತ್ತು.ಹೆಚ್‌ಡಿಕೆ ಅವರ ಜೊತೆಯಲ್ಲೆ ನಾನು ಇದ್ದ ಕಾರಣ ಅವರ ಉಂಡ ಎಲ್ಲ ನೋವುಗಳು ನನಗೆ ಗೊತ್ತು.ಅಧಿಕಾರ ಹೋದ ನಂತರದಲ್ಲಿ ಮತ್ತೆ ಆ ನೋವು ಮುಂದುವರೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆತ್ಮಾವಲೋಕನ ಮಾಡಿಕೊಳ್ಳಿ

ಅದೃಷ್ಟದಿಂದ ಹೆಚ್‌ಡಿಕೆ ಸಿಎಂ ಆದ್ರು ಎಂಬ ಸಚಿವ ಸೋಮಣ್ಣ ಹೇಳಿಕೆಗೆ ಸಾ.ರಾ.ಮಹೇಶ್ ತಿರುಗೇಟು ನೀಡಿದರು. ಕುಮಾರಣ್ಣ ಅದೃಷ್ಟದಿಂದಾದರೂ ಸಿಎಂ ಆಗಿದ್ದರು. ಆದರೆ ನೀವು ಹೇಗೆ ಸರ್ಕಾರ ಮಾಡಿದ್ರಿ ಎಂಬುದನ್ನು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಿಂತು ಆತ್ಮಾವಲೋಕನ ಮಾಡಿಕೊಳ್ಳಿ. ಬೇರೆ ಯಾರಿಗೂ ಉತ್ತರಿಸೋದು ಬೇಡ ನೀವು ಎಂದು ಚಾಟಿ ಬೀಸಿದರು. ದಸರಾ ಜೊತೆ ವಸತಿ ಕೆಲಸ ಮಾಡಿ ಎಂದು ಕುಮಾರಸ್ವಾಮಿ ಸಲಹೆ ಕೊಟ್ಟಿದ್ದರು. ನೆರೆಯಿಂದ ಸೂರು ಕಳೆದುಕೊಂಡವರಿಗೆ ನೆಲೆಯಾಗಲಿ ಎಂದು ಹೇಳಿದ್ದಾರೆ. ಅದನ್ನು ಬೇರೆ ರೀತಿ ಸೋಮಣ್ಣ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ತಿರುಗೇಟು ನೀಡಿದರು.

ಪ್ರತಿಪಕ್ಷ ನಾಯಕನ ಸ್ಥಾನ ಪಡೆಯಲು ಸಿದ್ದರಾಮಯ್ಯ ರಣತಂತ್ರ; ಒತ್ತಡಕ್ಕೆ ಮಣಿಯುವರಾ ಸೋನಿಯಾ ಗಾಂಧಿ?

ಕ್ಷೇತ್ರ ಬದಲಾವಣೆ ಇಲ್ಲಇನ್ನು, ಕ್ಷೇತ್ರ ಬದಲಾವಣೆ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ಸಾ.ರಾ.ಮಹೇಶ್​ "ನಾನು ಕೆ.ಆರ್.ನಗರದಲ್ಲೇ ಚುನಾವಣೆಗೆ ನಿಲ್ಲುವುದು. ನನ್ನ ಕೊನೆ ಉಸಿರಿರೋವರೆಗೂ ಇಲ್ಲೇ ಸ್ಪರ್ಧೆ. ಕೊನೆವರೆಗೂ ನಾನು ಕೈ ಮುಗಿಯುವುದು ಕುಮಾರಣ್ಣಗೆ ಮಾತ್ರ. ನಾನು ಕ್ಷೇತ್ರ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ, ಇಂತಹ ವದಂತಿ ಯಾಕಾಗಿ ಹಬ್ಬಿತ್ತೋ ಗೊತ್ತಿಲ್ಲ," ಎಂದರು.

ಜಿಟಿಡಿ ನನಗೆ ಬೈಯ್ಯೋದು ಹೊಸದೇನಲ್ಲ

ಜಿ.ಟಿ.ದೇವೇಗೌಡರು ಎಲ್ಲೂ ಹೋಗಲ್ಲ, ನಮ್ಮ ಪಕ್ಷದಲ್ಲೇ ಇರುತ್ತಾರೆ. ಅವರು ನನಗೆ ಬೈಯ್ಯೋದು ಹೊಸದೇನಲ್ಲ. ಎಲ್ಲವನ್ನು ಸರಿಪಡಿಸಿ ವಾಪಸ್ ಕರೆದುಕೊಂಡು ಬರುತ್ತೇವೆ.  ಜಿಟಿಡಿಯವರ ಬಳಿ ನಮ್ಮ ಪಾಲಿಕೆ ಸದಸ್ಯರು ಹೋಗಿದ್ದರು. ಆಗ ಕೆಲ ದಿನ ಜೆಡಿಎಸ್​​ನಿಂದ ತಟಸ್ಥವಾಗಿ ಇರುತ್ತೇನೆ ಎಂದಿದ್ದರು. ಆ ಕಾರಣಕ್ಕೆ ಅವರನ್ನು ನಿನ್ನೆಯ ಸಭೆಗೆ ಕರೆಯಲಿಲ್ಲ
ಜಿಟಿಡಿ ನಮ್ಮ‌ ಜೆಡಿಎಸ್‌ನ ಪಕ್ಷಾತೀತ ನಾಯಕರು, ನಮ್ಮ ಜೊತೆಯಲ್ಲಿಯೇ ಇರುತ್ತಾರೆ ಎಂದರು.

ಅವರಿಗೆ 14 ತಿಂಗಳ ಆಡಳಿತದಲ್ಲಿ ನೋವಾಗಿರಬಹುದು. ನಮಗೂ ನೋವಾಗಿದೆ.  ಅದೆಲ್ಲವನ್ನು ಸಹಿಸಿಕೊಂಡು ನಾವು ನೆಮ್ಮದಿಯಾಗಿ ಇಲ್ಲವೇ ? ಅದೆ  ರೀತಿ ಅವರಿಗೆ ಆದ ನೋವುಗಳನ್ನು ಸರಿಪಡಿಸುತ್ತೇವೆ. ಮುಂದಿನ 21 ತಾರೀಖಿನಂದು ಜೆಡಿಎಸ್ ಗ್ರಾಮೀಣ ಮುಖಂಡರ ಸಭೆ ಕರೆದಿದ್ದೇವೆ. ಆ ಸಭೆಗೆ ಜಿಟಿಡಿಯವರನ್ನು ನಾನೇ ಖುದ್ದು ಹೋಗಿ ಆಹ್ವಾನ ಮಾಡುತ್ತೇನೆ. ಅಂದು ಜಿಟಿಡಿಯವರು ಬ್ಯುಸಿ ಇದ್ದರೆ ಮತ್ತೊಂದು ದಿನಾಂಕವನ್ನು ನಿಗದಿ ಮಾಡುತ್ತೇವೆ ಎಂದರು.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading